ಬೇಸಿಗೆಯಲ್ಲಿ ನಿಮ್ಮ ವಾಹನಗಳ ರಕ್ಷಣೆ ಹೇಗೆ? ಇಲ್ಲಿದೆ ಸರಳ ಉಪಾಯ....
ಹೆಚ್ಚುತ್ತಿರುವ ಹೆಚ್ಚಿದ ಬಿಸಿಲ ಧಗೆಯಲ್ಲಿ ವಾಹನಗಳನ್ನು ಸೂಕ್ತ ರೀತಿಯಲ್ಲಿ ರಕ್ಷಣೆ ಮಾಡುವುದು ಕೊಂಚ ಕಷ್ಟ ಸಾಧ್ಯ ಅಂದ್ರೆ ತಪ್ಪಾಗಲಾರದು.
ಹೆಚ್ಚುತ್ತಿರುವ ಹೆಚ್ಚಿದ ಬಿಸಿಲ ಧಗೆಯಲ್ಲಿ ವಾಹನಗಳನ್ನು ಸೂಕ್ತ ರೀತಿಯಲ್ಲಿ ರಕ್ಷಣೆ ಮಾಡುವುದು ಕೊಂಚ ಕಷ್ಟ ಸಾಧ್ಯ ಅಂದ್ರೆ ತಪ್ಪಾಗಲಾರದು. ಯಾಕೆಂದ್ರೆ ಬೆಸಿಗೆಯಲ್ಲಿ ನಿಮ್ಮ ವಾಹನಗಳು ಬಿಸಿಲ ಝಳ ಮತ್ತು ಧೂಳಿನ ಪರಿಣಾಮ ಹೆಚ್ಚಿನ ವಾಹನಗಳು ತಮ್ಮ ನೈಜ ಬಣ್ಣವನ್ನು ಕಳೆದುಕೊಳ್ಳುತ್ತವೆ. ಹೀಗಾಗಿ ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ಬೇಸಿಗೆಯಲ್ಲಿ ವಾಹನಗಳನ್ನು ಹೇಗೆ ರಕ್ಷಣೆ ಮಾಡಬೇಕು ಎಂಬ ಸಲಹೆ ನೀಡುತ್ತಿದೆ.

ಪೆಯಿಂಟ್
ಬೇಸಿಗೆಯ ಬಿಸಿಲಿಗೆ ಮನುಷ್ಯನ ಬಣ್ಣವೇ ಮಾಸಿ ಹೋಗುತ್ತೆ ಇನ್ನು ವಾಹನ ಪರಿಸ್ಥಿತಿ ಸೂರ್ಯನ ಬಿಸಿಲಿಗೆ ನಿಮ್ಮ ಕಾರಿನ ಬಣ್ಣ ಮಾಸುವುದು ಸಹಜ. ಹೀಗಾಗಿ ಸೂರ್ಯನ ಶಾಖದಿಂದ ನಿಮ್ಮ ಕಾರುಗಳು ಮತ್ತು ಬೈಕ್ ಪೆಯಿಂಟ್ ಹಾಳಾಗುತ್ತದೆ. ಆದ್ದರಿಂದ ನಿಮ್ಮ ಕಾರನ್ನು ನೆರಳಿರುವ ಪ್ರದೇಶಗಳಲ್ಲಿ ನಿಲ್ಲಿಸುವುದು ಉತ್ತಮ.

ಕಾರಿನ ಇಂಟಿರಿಯರ್
ಅತಿಯಾದ ಬಿಸಿಲು ಕಾರಿನ ಪೆಯಿಂಟ್ ಮಾತ್ರವಲ್ಲ, ಕಾರಿನ ಒಳಭಾಗಗಳಿಗೂ ಅಪಾಯ. ಅದರಲ್ಲಿಯು ನಿಮ್ಮ ಕಾರುಗಳು ಲೆದರ್ ಅಥವಾ ಬ್ಲಾಕ್ ಸೀಟ್‍ಗಳನ್ನು ಹೊಂದಿದ್ದರೆ ಅವು ಬೇಗನೆ ಬಿಸಿಯಾಗುತ್ತವೆ.

ಹೀಗಾಗಿ ಕಾರನ್ನು ಬಿಸಿಲಿನಲ್ಲಿ ನಿಲ್ಲಿಸಿದಲ್ಲಿ ಕಾರಿನ ಒಳಗೆ ಕೂರುವ ಮುನ್ನ ಸ್ವಲ್ಪ ಸಮಯದ ಮಟ್ಟಿಗೆ ಕಾರಿನ ಬಾಗಿಲುಗಳನ್ನು ತೆರೆಯಿರಿ. ಯಾಕೆಂದ್ರೆ ಬಿಸಿಲಿನ ಕಾರಣದಿಂದಾಗಿ ನಿಮ್ಮ ಕಾರಿನ ಒಳಭಾಗವು ಹೆಚ್ಚು ಬಿಸಿಯಾಗುವುದಲ್ಲದೇ ಕೆಲವೊಮ್ಮೆ ಉಸಿರಾಡುವುದಕ್ಕೂ ತೊಂದರೆಯಾಗಬಹುದು.

ಕಾರಿನ ಗ್ಲಾಸ್
ನಿಮಗಿದು ಗೊತ್ತಾ? ಬಿಸಿಲಿಗೆ ನಿಮ್ಮ ಕಾರಿನ ಗಾಜುಗಳನ್ನು ಬಿರುಕುಗೊಳಿಸಬಲ್ಲ ಶಕ್ತಿಯಿದೆ. ಆದ್ದರಿಂದ ನೀವು ನಿಮ್ಮ ಕಾರನ್ನು ಬಿಸಿಲಿನಲ್ಲಿ ಪಾರ್ಕ್ ಮಾಡಿದ್ದಲ್ಲಿ ಕಾರ್ ಕವರ್ ನಿಂದ ರಕ್ಷಣೆ ಮಾಡಿ. ಇಲ್ಲದಿದ್ದಲ್ಲಿ ಇದಕ್ಕಾಗಿ ನೀವು ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ.

ಕಾರಿನ ಟೈರ್
ನಿಮ್ಮ ಕಾರಿನ ಟೈರ್‍ಗಳು ಹಳೆಯದೇ? ಹಾಗಾದ್ರೆ ಹೆಚ್ಚಿನ ಬಿಸಿಲ ತಾಪಮಾನದ ಸಂದರ್ಭದಲ್ಲಿ ದೂರದ ಪ್ರಯಾಣಕ್ಕೂ ಮುನ್ನ ನಿಮ್ಮ ಕಾರಿನ ಟೈರ್‍ಗಳನ್ನು ಬದಲಾಯಿಸಿಕೊಳ್ಳಿ. ಇದಕ್ಕೆ ಕಾರಣ ಬಿಸಿಲಿನಿಂದ ಟೈರ್‍ಗಳ ಮೇಲ್ಪದರವು ಕರಗಬಹುದಾದ ಸಾಧ್ಯತೆಗಳಿದ್ದು, ಪಂಚರ್ ಕೂಡಾ ಆಗಬಹುದು. ಆದ್ದರಿಂದ ಬಿಸಿಲಿನಲ್ಲಿ ಕಾರಿನಲ್ಲಿ ಹೋಗುವ ಮುನ್ನ ನಿಮ್ಮ ಕಾರಿನ ಟೈರ್ ಗುಣಮಟ್ಟವನ್ನು ಪರಿಶೀಲಿಸಿದರೆ ಒಳ್ಳೆಯದು.

ಕೂಲಂಟ್
ಬಿಸಿಲಿನಲ್ಲಿ ನಿಮ್ಮ ದೇಹಕ್ಕೆ ತಂಪಾದ ಪಾನಿಯಗಳು ಎಷ್ಟು ಅಗತ್ಯವೋ ಕಾರುಗಳಿಗೆ ಕೂಲಂಟ್‍ಗಳು ಅಷ್ಟೆ ಅಗತ್ಯ. ಏಕೆಂದರೆ ಅವುಗಳನ್ನು ಅಗಾಗ ಬದಲಾಯಿಸದಿದ್ದರೆ ಅವುಗಳು ನಿಮ್ಮ ಕಾರಿನ ಎಂಜಿನ್ ಅನ್ನು ಹಾಳುಮಾಡಬಹುದು.

ಎಂಜಿನ್ ಆಯಿಲ್
ನಿಮ್ಮ ಕಾರನ್ನು ಸರ್ವಿಸ್ ಮಾಡಿಸಿದ್ದೀರಾ? ಕಾರಣ, ಬಿಸಿಲಿಗೆ ನಿಮ್ಮ ಕಾರಿನಲ್ಲಿರುವ ಆಯಿಲ್ ಗಟ್ಟಿಗಟ್ಟುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದ್ದರಿಂದ ಆಗಾಗ ನಿಮ್ಮ ಕಾರಿನ ಆಯಿಲ್ ಅನ್ನು ಬದಲಾಯಿಸುತ್ತಿದ್ದಲಿ ನಿಮ್ಮ ಕಾರಿನ್ ಎಂಜಿನ್‍ನ ಗುಣಮಟ್ಟವು ಹೆಚ್ಚು ಕಾಲ ಬಾಳಿಕೆ ಬರಲಿದೆ.
MOST READ: ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಏರ್ ಕಂಡಿಷನರ್
ಬಿಸಿಲಿಗೆ ಕಾರಿನಲ್ಲಿ ಪ್ರಯಾಣಿಸುವಾಗ ಎಸಿ ಉಪಯೋಗ ಮಾಡಿದ್ರೆ ಮಾತ್ರ ಸಾಲದು. ಅವುಗಳನ್ನು ಆಗಾಗ ನಿಮ್ಮ ಕಾರಿನ ಅಧಿಕೃತ ಸರ್ವಿಸ್ ಸೆಂಟರ್‍ಗಳಲ್ಲಿ ಪರಿಶೀಲಿಸಿ. ಕಾರು ಆನ್ ಮಾಡುವ ಸಂದರ್ಭದಲ್ಲಿ ನಿಮ್ಮ ಕಾರಿನ ಎಸಿ ಆಫ್ ಇರಲಿ.

ಬ್ಯಾಟರಿ
ನಿಮ್ಮ ಕಾರ್ ಬ್ಯಾಟರಿಯ ಗುಣಮಟ್ಟವನ್ನು ಆಗಾಗ ಪರೀಶಿಲಿಸುತ್ತಿರಿ. ಯಾಕೆಂದ್ರೆ ಬಿಸಿಲಿಗೆ ಪ್ರಯಾಣಿಸುವಾಗ ನಾವು ಎಸಿಯನ್ನು ಹೆಚ್ಚು ಬಳಸುವುದು ಸಹಜ. ಅದರಿಂದ ನಿಮ್ಮ ಕಾರಿನ ಬ್ಯಾಟರಿಯೊಳಗಿನ ಆ್ಯಸಿಡ್ ಕಡಿಮೆಗೊಳ್ಳುತಾ ಹೋಗುತ್ತದೆ. ಒಮ್ಮೆ ಅದು ಪೂರ್ಣವಾಗಿ ಕಡಿಮೆಯಾದಲ್ಲಿ ನಿಮ್ಮ ಕಾರಿನ ಬ್ಯಾಟರಿಗೆ ಅಪಾಯ ತಪ್ಪಿದಲ್ಲ.
MOST READ: ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು


Click it and Unblock the Notifications








