ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಸಾಮಾನ್ಯವಾಗಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಟ್ರಾಫಿಕ್ ಪೊಲೀಸರು ಹಿಡಿದು ದಂಡವನು ವಿಧಿಸಿ ಚಲನ್ ನೀಡಿರುವುದನ್ನು ನಾವು ಕಂಡಿದ್ದೇವೆ. ಅದಲ್ಲದೇ ಇ-ಚಲನ್ ಬಂದ ನಂತರ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಮನೆಗೆ ಚಲನ್ ಕಳುಹಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಘಟನೆ ಇವೆಲ್ಲದಕ್ಕಿಂತ ಭಿನ್ನವಾಗಿದೆ.

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಕೆಲ ಬಾರಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಹಾಕಿಲ್ಲ ಅಂತಾ ಸೈಕಲ್ ಸವಾರರನ್ನು ಹಿಡಿದು ದಂಡ ಹಾಕಿರುವುದರ ಬಗ್ಗೆ ಈ ಹಿಂದೆ ನಾವು ನಿಮಗೆ ಮಾಹಿತಿಯನ್ನು ನೀಡಿದ್ದೇವು. ಆದರೆ ಇಲ್ಲಿ ನಡೆದ ಘಟನೆಯೆ ಬೇರೇ, ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ವಿಧಿಸಿರುವ ಘಟನೆ ನಡೆದಿದೆ.

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಹೌದು, ನಾಗ್‍ಪುರ್‍‍ನಲ್ಲಿ ಇಂತಹ ಘಟನೆ ನಡೆದಿದ್ದು, ಕಾರು ಚಾಲನೆ ಮಾಡುತ್ತಿದ್ದ ಬಿಎಸ್‍ಪಿ ಮುಖಂಡರೊಬ್ಬರಿಗೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಇ-ಚಲನ್ ಕಳುಹಿಸಲಾಗಿದೆ.

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಮಹಾರಾಷ್ಟ್ರ ಬಹುಜನ್ ಸಮಾಜ್ ಪಾರ್ಟಿ ಮುಖಂಡರಾದ ಸುರೇಶ್ ಸಖಾರೆ ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ MH 49 AS 7777 ಕಾರಿನ ಮೇಲೆ ಕೇಸ್ ಹಾಕಿರುವ ಪೊಲೀಸರು ಕಾರಿನಲ್ಲಿ ಹೆಲ್ಮೆಟ್ ಹಾಕಿಲ್ಲವೆಂದು ಇ-ಚಲನ್‍ನಲ್ಲಿ ಉಲ್ಲೇಖಿಸಿದ್ದಾರೆ.

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಇದಲ್ಲದೇ ಸೆಕ್ಷನ್ 129 ಮತ್ತು 177 1968 ಮೋಟಾರ್ ವೆಹಿಕಲ್ ಆಕ್ಟ್ ಕಾಯ್ದೆಯ ಪ್ರಕಾರ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ ಕಾರಣ, ತಪ್ಪಿತಸ್ಥರು ರೂ. 500 ದಂಡ ಪಾವತಿಸಬೇಕಾಗಿದ್ದು, ಟ್ರಾಫಿಕ್ ನಿಯಮವನ್ನು ಉಲ್ಲಂಘನೆ ಮಾಡಿದ ಕಾರಿನ ಚಿತ್ರವನ್ನು ಸಹ ಸೆರೆಹಿಡಿಯಲಾಗಿದೆ.

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಇಲ್ಲಿ ಕುತೂಹಲಕಾರಿ ವಿಷಯ ಏನೆಂದರೆ ಸಿಸಿಟಿವಿಯಲ್ಲಿ ಸೆರೆಯಾದ ಚಿತ್ರದಲ್ಲಿ ಇದ್ದದ್ದು ಒಂದು ಕಾರು. ಟ್ರಾಫಿಕ್ ಪೊಲೀಸರು ಕಳುಹಿಸಿದ ಇ-ಚಲನ್‍ನಲ್ಲಿ ಜುಲೈ 1, 2018ರಂದು ಅಗರ್‍‍ಸೇನ್ ಚೌಕ್‍ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ.

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಈ ಘಟನೆಯು ನಡೆದು 5 ತಿಂಗಳ ನಂತರ ಇ-ಚಲನ್ ಅನ್ನು ಕಳುಹಿಸಲಾಗಿದ್ದು, 15 ದಿನಗಳೊಳಗೆ ದಂಡವನ್ನು ನೀಡಬೇಕು ಅಥವಾ ನ್ಯಾಯಾಲಯದಲ್ಲಿ ಆತನ ವಿರುದ್ಧ ದಾಖಲಾದ ಪ್ರಕರಣದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಇದನ್ನು ಕಂಡು ಕೋಪಗೊಂಡ ಬಿಎಸ್‍ಪಿ ಮುಖಂಡ ಸುರೇಶ್ ಸಖಾರೆಯವರು 'ಇಂತಹ ನೋಟಿಸ್‍ಗಳನ್ನು ನನಗೆ ಕಳುಹಿಸಿದ ಹಾಗೆಯೆ ಇನ್ನಿತರರಿಗೆ ಕಳುಹಿಸಿದ್ದು, ಇದು ಸಂಪೂರ್ಣವಾಗಿ ಕಾನೂನು ಬಾಹಿರ ಎಂದು ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.

Source: timesnownews

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಇದು ಸುರೇಶ್ ಸಖಾರೆಯವರಿಗೆ ಕಾರ್ ಡ್ರೈವಿಂಗ್ ವೇಳೆ ಹೆಲ್ಮೆಟ್ ಹಾಕಿಲ್ಲವೆಂದು ಬಂದ ಇ-ಚಲನ್ ವಿಚಾರವಾದರೆ, ಮತ್ತೊಂದು ಕಡೆ ಹೆದ್ದಾರಿಯ ಮೇಲೆ ಸೈಕಲ್‍ನಲ್ಲಿ ಹೋಗುತ್ತಿದ್ದವನನ್ನು ಅಲ್ಲಿದ್ದ ಪೊಲೀಸರು ತಡೆದು ಓವರ್ ಸ್ಪೀಡಿಂಗ್ ಮತ್ತು ಹೆಲ್ಮೆಟ್ ಹಾಕಿಲ್ಲವೆಂದು ದಂಡ ವಿಧಿಸಿದ್ದೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಹೆಲ್ಮೆಟ್ ಇಲ್ಲದೆಯೆ ಸ್ಕೂಟರ್ ಅಥವಾ ಮೋಟಾರ್‍‍ಸೈಕಲ್ ಚಲಾಯಿಸುವುದು ತಪ್ಪೆಂದು ಟ್ರಾಫಿಕ್ ಪೊಲೀಸರು ಹಿಡಿದರೆ ಅದು ಒಂದು ರೀತಿಯ ನ್ಯಾಯ. ಆದ್ರೆ ಸೈಕಲ್‍‍ಗೂ ಕೂಡಾ ಹೆಲ್ಮೆಟ್ ಇಲ್ಲಾ ಅಂತ ಪೊಲೀಸರು ನಿಮ್ಮನ್ನು ಹಿಡಿದರೆ ಅಂತಾ ಪರಿಸ್ಥಿತಿಯನ್ನು ನೀವೇನು ಮಾಡುವಿರಿ.?

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ರಸ್ತೆಯಲ್ಲಿ ಸೈಕಲ್ ಚಲಾಯಿಸಲು ಇಲ್ಲಿ ಡ್ರೈವಿಂಗ್ ಲೈಸನ್ಸ್ ಇರ್ಬೇಕಂತೆ. ದೇಶದಲ್ಲಿನ ಬೇರಾವ ರಾಜ್ಯದಲ್ಲು ಈ ನಿಯಮ ಜಾರಿ ಇಲ್ಲವಾದ್ರು ಕೇರಳದಲ್ಲಿನ ಕಾಸರ್‍‍ಗೋಡ್‍ನಲ್ಲಿ ಈ ನಿಯಮವಿದೆ. ಅಷ್ಟೆ ಅಲ್ಲಾ ಸೈಕಲ್‍‍ನಲ್ಲಿ ಓವರ್‍‍ಸ್ಪೀಡಿಂಗ್ ಮಾಡಿದರೂ ಇಲ್ಲಿ ತಪ್ಪಂತೆ..

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಹೌದು, ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಯಾದ ಉತ್ತರ ಪ್ರದೇಶ ಮೂಲದ ಕಾಸಿಂ‍‍ರವರನ್ನು ಕಂಬಾಲದಲ್ಲಿನ ಹೆದ್ದಾರಿ ಪೊಲೀಸರು ಸೈಕಲ್‍ನಲ್ಲಿ ಹೋಗುತ್ತಿದ್ದಾಗ ಹಿಡಿದು, ಹೆಲ್ಮೆಟ್ ಹಾಗು ಲಸನ್ಸ್ ಇಲ್ಲದಿರುವ ಕಾರಣ ಮತ್ತು ಓವರ್ ಸ್ಪೀಡಿಂಗ್ ಮಾಡಿದ್ದಾರೆಂದು ದಂಡ ವಿಧಿಸಲಾಗಿದೆ.

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಹೆದ್ದಾರಿ ರಸ್ತೆಯ ಮೇಲೆ ಸೈಕಲ್‍ನಲ್ಲಿ ಬರುತ್ತಿದ್ದ ಕಾಸಿಂರನ್ನು ಹಿಡಿದು ಓವರ್ ಸ್ಪೀಡಿಂಗ್ ಮಾಡಿರುವುದಾಗಿ ರೂ.2000 ಸಾವಿರದ ದಂಡವನ್ನು ವಿಧಿಸಿದ್ದಾರೆ. ಪಾಪ ದಿನಕ್ಕೆ ರೂ.400 ಸಂಪಾದಿಸುತ್ತಿದ್ದ ಕಾಸಿಂ ಹತ್ತಿರ ಅಷ್ಟು ದುಡ್ಡು ಹೇಗೆ ಇರುತ್ತೆ.?

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಕಾಸಿಂ ಅವರು ಕೂಲಿ ಕೆಲಸ ಮಾಡಿ ಜೀವನ ಕಳೆಯುತ್ತಿರುವ ವ್ಯಕ್ತಿಯೆಂದು ತಿಳಿದು, ಹಿಂದೆ ನೀಡಿದ ರಶೀದಿಯನ್ನು ರದ್ದುಗೊಳಿಸಿ, ಸೈಕಲ್‍ನ ಚಕ್ರಗಳನ್ನು ಚಪ್ಪಟೆಯಾಗೊಳಿಸಿರುವುದಾಗಿ ಅವರಿಗೆ ರೂ.500 ದಂಡವನ್ನು ವಿಧಿಸಿ ರಸೀದಿಯನ್ನು ನೀಡಿದ್ದಾರೆ ಎನ್ನಲಾಗಿದೆ.

ಆದರೆ ಕಾಸಿಂರಿಗೆ ನೀಡಿದ ರಸೀದಿಯಲ್ಲಿ ಸ್ಥಳಿಯ ಪೊಲೀಸರು ವಾಹನದ ನೋಂದಣಿ ಸಂಖ್ಯೆಯನ್ನು ಉಲ್ಲೇಖಿಸಿದ್ದಾರೆ. ಅಲ್ಲಾ ಸ್ವಾಮಿ ಸೈಕಲ್‍‍ಗೆ ಅದೆಂತಹ ನೋಂದಣಿ ಸಂಖ್ಯೆ.? ಇನ್ನು ಉಲ್ಲೇಖಿಸಲಾಗಿದ್ದ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದರೆ ಅದು ಒಂದು ಹೆಣ್ಣಿನ ಸ್ಕೂಟರ್‍‍ದಂತೆ.!

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಅಕ್ಟೋಬರ್ 3,2018 ರಂದು ಈ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದ್ದು, ಕಾಸಿಂ ಅವರು ನಡೆದ ಘಟನೆಯ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಅಲ್ಲಿನ ಪೊಲೀಸರು ಯಾವ ರೀತಿಯಲ್ಲಿ ತಮ್ಮನ್ನು ದೋಚಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ವಿಡಿಯೋನಲ್ಲಿ ಕಾಸಿಂರವರು "ನಾನು ದಿನನಿತ್ಯ ಅದೇ ದಾರಿಯಲ್ಲಿ ನನ್ನ ಸೈಕಲ್‍ನ ಮೇಲೆ ಪ್ರಯಾಣಿಸುತ್ತೇನೆ ಅದನ್ನು ಪೊಲೀಸರು ಕೂಡಾ ನೋಡಿದ್ದಾರೆ. ಆದರೆ ಇಂದು ನನ್ನನ್ನು ತಡೆದು ಮೊದಲಿಗೆ ರೂ.2000 ದಂಡವನ್ನು ವಿಧಿಸಿ, ನನ್ನನ್ನು ಪರಿಶೀಲಿಸಿದ ನಂತರ ರೂ.2000 ರಸೀದಿಯನ್ನು ರದ್ದು ಮಾಡಿ ಕೊನೆಗೆ ರೂ.500 ದಂಡದ ರಸೀದಿಯನ್ನು ನೀಡಿದ್ದಾರೆ. ಎಂದು ಹೇಳಿಕೊಂಡಿದ್ದಾರೆ.

ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಸಾಮಾಜಿಕ ಜಾಲತಾಣದಲ್ಲಿ ಸಧ್ಯಕ್ಕೆ ಈ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಅಲ್ಲಿನ ಜಿಲಾಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಜಿಲ್ಲಾಧಿಕಾರಿಯ ಮುಖ್ಯಸ್ಥರು ಈ ಘಟನೆಯ ಕುರಿತಾಗಿ ತನಿಖೆಯಾಗಬೇಕೆಂದು ಆದೇಶಿಸಿದ್ದು, ಸ್ಥಳಿಯ ಮಾಧ್ಯಮ ವರದಿಗಳ ಪ್ರಕಾರ ತನಿಖೆಯಲ್ಲಿ ಎಸ್‍ಐ ತಪ್ಪಿತಸ್ಥರನ್ನು ಕಂಡುಹಿಡಿದಿದ್ದಾರೆ ಮತ್ತು ಇಲಾಖೆ ಇಂದ ನೀಡಲಾದ ಕ್ರಮವನ್ನು ಎದುರಿಸಬೇಕಾಗುತ್ತದೆ.

ರಾಯಲ್ ಎನ್‍ಫೀಲ್ಡ್ ಬೈಕ್‍ಗಳಿಗೆ ಟಕ್ಕರ್ ನೀಡಲು ಬಿಡುಗಡೆಗೊಂಡ ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯ ಹೊಸ ಬೈಕ್‍ಗಳ ಚಿತ್ರಗಳು ಇಲ್ಲಿದೆ ನೋಡಿ..

Kannada
English summary
Maharashtra BSP president gets e-challan from traffic police for not wearing helmet while 'driving car'
Story first published: Saturday, November 17, 2018, 10:25 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more