ಬೆಂಗಳೂರಿನಲ್ಲಿ ಇನ್ಮುಂದೆ ಹೊಸ ಕಾರು ಖರೀದಿಸುವುದು ಅಷ್ಟು ಸುಲಭವಲ್ಲ...
ಐಟಿ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಕಿರಿಕಿರಿ ಅತಿ ದೊಡ್ಡ ಸಮಸ್ಯೆಯಾಗಿ ಉಲ್ಬಣಿಸುತ್ತಿದೆ.
ಐಟಿ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಕಿರಿಕಿರಿ ಅತಿ ದೊಡ್ಡ ಸಮಸ್ಯೆಯಾಗಿ ಉಲ್ಬಣಿಸುತ್ತಿದೆ. ಹೀಗಾಗಿ ಬೆಂಗಳೂರು ನಗರ ಪ್ರದೇಶದ ವ್ಯಾಪ್ತಿಯಲ್ಲಿ ನಡೆಯುವ ಕಾರು ಖರೀದಿ ಪ್ರಕ್ರಿಯೆ ಮೇಲೆ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿರುವ ರಾಜ್ಯ ಸರ್ಕಾರವು ಟ್ರಾಫಿಕ್ ಕಿರಿಕಿರಿ ಮತ್ತು ವಾಹನ ದಟ್ಟಣೆ ತಡೆಯಲು ಹೊಸ ಪ್ರಯೋಗ ಜಾರಿಗೆ ಮುಂದಾಗಿದೆ.

ಈ ಹಿಂದೆ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ರಾಜಧಾನಿ ದೆಹಲಿಯಲ್ಲಿ ಜಾರಿಗೆ ತರಲಾಗಿದ್ದ ಸಮ-ಬೆಸ ಸಂಚಾರ ನಿಯಮ ಮಾದರಿಯಲ್ಲೇ ಹೊಸ ಪ್ರಯೋಗಕ್ಕೆ ಮುಂದಾಗಿರುವ ರಾಜ್ಯ ಸರ್ಕಾರವು ಸಹ ಕಾರು ಖರೀದಿಸುವ ಮಾಲೀಕರಿಗೆ ಕೆಲವು ಕಠಿಣ ನಿರ್ಬಂಧಗಳನ್ನು ಹೇರುತ್ತಿದ್ದು, ಇದರಿಂದ ಕಾರು ಮಾರಾಟದ ಮೇಲೆ ಹಿಡಿತ ಸಾಧಿಸುವುದಲ್ಲದೇ ಟ್ರಾಫಿಕ್ ಸಮಸ್ಯೆಯನ್ನು ತಡೆಯಲು ಹೊಸ ಯೋಜನೆಯು ಸಹಕಾರಿಯಾಗಲಿದೆ ಎನ್ನಲಾಗಿದೆ.

ಹೊಸ ಕಾರು ಬೇಕಾದ್ರೆ ಪಾರ್ಕಿಂಗ್ ಸ್ಲಾಟ್ ಬೇಕು
ಹೌದು, ರಾಜ್ಯ ಸಾರಿಗೆ ಇಲಾಖೆಯ ಹೊಸ ಸುತ್ತೊಲೆಯ ಪ್ರಕಾರ ಹೊಸ ಕಾರು ಖರೀದಿಸುವ ಗ್ರಾಹಕರು ಕಡ್ಡಾಯವಾಗಿ ಪಾರ್ಕಿಂಗ್ ಜಾಗ ಹೊಂದಲೇಬೇಕು ಎಂಬ ನಿಯಮವನ್ನು ಜಾರಿಗೆ ಮಾಡಲಾಗುತ್ತಿದ್ದು, ಇದರಿಂದ ಬಹುತೇಕ ಗ್ರಾಹಕರು ಕಾರು ಖರೀದಿಯ ಯೋಜನೆಯನ್ನೇ ಕೈ ಬಿಡಬೇಕಾದ ಪರಿಸ್ಥಿತಿ ಎದುರಾಗಿದೆ.

ಯಾಕೆಂದ್ರೆ ಬಹುತೇಕ ಕಾರು ಮಾಲೀಕರು ಸ್ವಂತ ಜಾಗ ಇಲ್ಲದಿದ್ದರೂ ಸಾರ್ವಜನಿಕ ಜಾಗದಲ್ಲೇ ಪಾರ್ಕಿಂಗ್ ಮಾಡುತ್ತಿರುವುದು ಟ್ರಾಫಿಕ್ ಸಮಸ್ಯೆಗೆ ಮೂಲ ಕಾರಣ ಎನ್ನುವುದು ಸರ್ಕಾರದ ವಾದವಾಗಿದ್ದು, ಹೊಸ ರೂಲ್ಸ್ ಜಾರಿಯಾದ್ರೆ ಕಾರು ಖರೀದಿ ಮಾಡುವುದು ಇನ್ಮುಂದೆ ಅಷ್ಟು ಸುಲಭವಲ್ಲ ಎನ್ನಬಹುದು.

ಪಾರ್ಕಿಂಗ್ ಜಾಗ ತೊರಿಸಿ ಕಾರು ಖರೀದಿಸಿ
ನೀವು ಹೊಸ ಕಾರು ಖರೀದಿಸುವ ಮುನ್ನ ಸಾರಿಗೆ ಇಲಾಖೆಯಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇದ್ದು, ಪಾರ್ಕಿಂಗ್ ಜಾಗವನ್ನು ಪರಿಶೀಲನೆ ಮಾಡಿದ ಮೇಲೆಯೇ ನಿಮಗೆ ಹೊಸ ಕಾರು ಖರೀದಿಗೆ ಅವಕಾಶ ಸಿಗಲಿದೆ.

ಪಾರ್ಕಿಂಗ್ ಜಾಗ ಇಲ್ಲವಾದ್ರೆ ಹೊಸ ಕಾರು ಖರೀದಿಸುವುದು ಸುಲಭವಲ್ಲ ಎನ್ನಲಾಗಿದ್ದು, ಸ್ವಂತ ಬಳಕೆಯ ವಾಹನಗಳಿಂತ ಟೂರಿಸ್ಟ್ ಮತ್ತು ಬಾಡಿಗೆ ವಾಹನಗಳ ಖರೀದಿಸುವ ಗ್ರಾಹಕರಿಗೆ ಹೊಸ ರೂಲ್ಸ್ ಬಿಸಿತುಪ್ಪವಾಗಿ ಪರಿಣಮಿಸಬಹುದು.

ಯಾಕೆಂದ್ರೆ ಬಹುತೇಕ ಟೂರಿಸ್ಟ್ ಮತ್ತು ಕ್ಯಾಬ್ ವಾಹನಗಳು ಸಾರ್ವಜನಿಕ ಪ್ರದೇಶಗಳಲ್ಲಿ ರಸ್ತೆ ಬದಿ ಪಾರ್ಕಿಂಗ್ ಮಾಡುವುದನ್ನು ನಾವೇಲ್ಲಾ ನೋಡಿದ್ದಿವೆ. ಹೀಗಿರುವಾಗ ಪಾರ್ಕಿಂಗ್ ಸ್ಲಾಟ್ ತೋರಿಸಿ ಕಾರು ಖರೀದಿ ಮಾಡಿ ಅಂದ್ರೆ ಅದು ಬಹುತೇಕರಿಗೆ ಸಾಧ್ಯವಾಗದ ಕೆಲಸ ಎಂದು ಹೇಳಬಹುದು.

ಈ ಬಗ್ಗೆ ಮಾತನಾಡಿರುವ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆಗೆ ಹೊಸ ಕಾನೂನುಗಳು ಅಗತ್ಯತೆ ಇದ್ದು, ಪಾರ್ಕಿಂಗ್ ಜಾಗ ಇಲ್ಲದೇ ಕಾರು ಖರೀದಿಸಲು ಮಾಲೀಕರಿಗೆ ಹೊಸ ನಿರ್ಬಂಧ ಹಾಕುವ ಅನಿವಾರ್ಯತೆ ಇದೆ' ಎಂದಿದ್ದಾರೆ.

ಹೊಸ ನಿಯಮವನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸುವ ಮುನ್ನ ತಂತ್ರಜ್ಞರ ಸಮಿತಿಯೊಂದಿಗೆ ಮತ್ತಷ್ಟು ಸಲಹೆ ಪಡೆದ ನಂತರವೇ ಹೊಸ ನಿಯಮವನ್ನು ಜಾರಿಗೊಳಿಸಲಿದ್ದು, ಒಟ್ಟಿನಲ್ಲಿ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿರುವ ಬೆಂಗಳೂರಿನ ಜನತೆ ಇದರಿಂದ ಕೊಂಚ ರಿಲೀಫ್ ಸಿಗುವುದು ಮಾತ್ರ ಸತ್ಯ.

ಹಾಗಾಂತ ಹೊಸ ಕಾಯ್ದೆಯಿಂದ ಎಲ್ಲವೂ ಸರಿಯಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲದ್ದರೂ ಕೆಲ ಮಟ್ಟಿಗೆ ಈ ಯೋಜನೆ ಯಶಸ್ವಿಯಾಗಬಹುದಾದರೂ ಪಾರ್ಕಿಂಗ್ ಸ್ಲಾಟ್ ಇಲ್ಲದೇ ಕಾರು ಖರೀದಿ ಸಾಧ್ಯವೇ ಇಲ್ಲ ಎನ್ನುವುದಾದರೇ ಕಾರು ಉತ್ಪಾದನಾ ಸಂಸ್ಥೆಗಳಿಗೂ ದೊಡ್ಡ ಮಟ್ಟದ ಹೊಡೆತ ಬೀಳಲಿದೆ ಎನ್ನಬಹುದು.

ಅಂಕಿ ಅಂಶಗಳ ಪ್ರಕಾರ ಬೆಂಗಳೂರು ಒಂದರಲ್ಲೇ ಪ್ರತಿದಿನ ಸಾವಿರಾರು ಹೊಸ ಕಾರುಗಳು ಮಾರಾಟವಾಗುತ್ತಿದ್ದು, ಇವುಗಳಲ್ಲಿ ಶೇ.60ರಷ್ಟು ಹೊಸ ಕಾರುಗಳು ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುತ್ತಿರುವುದು ವಾಸ್ತವಾಂಶ.

ಒಟ್ಟಿನಲ್ಲಿ ರಾಜ್ಯ ಸರ್ಕಾರವು ಜಾರಿಮಾಡಲು ಹೊರಟಿರುವ ಹೊಸ ಕಾಯ್ದೆಯು ಕೆಲವರಿಗೆ ಕಠಿಣ ಎನ್ನಿಸಿದರೂ ಟ್ರಾಫಿಕ್ ಸಮಸ್ಯೆ ತಡೆಯಲು ಕೆಲವು ಕಠಿಣ ಕ್ರಮಗಳನ್ನು ಜಾರಿಗೊಳಿಸುವುದು ಅನಿವಾರ್ಯತೆಯಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ರೀತಿಯ ಯಶಸ್ವಿಯಾಗುತ್ತೆ ಅನ್ನೋದನ್ನು ಕಾಯ್ದುನೋಡಬೇಕಿದೆ.
Source:news18.com

ರಾಜ್ಯ ಸರ್ಕಾರವು ಜಾರಿ ತರಲು ಹೊರಟಿರುವ ಹೊಸ ಕಾಯ್ದೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಮಕ್ತವಾಗಿ ಹಂಚಿಕೊಳ್ಳಿ....
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಡ್ರೈವಿಂಗ್ ವೇಳೆ ನಿದ್ರಿಸುವಿರಾ? ಕಾದಿದೆ ಅಪಾಯ ಹುಷಾರ್..!!
ಸಚಿವ ಜಮೀರ್ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?
ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍ಗಳನ್ನಾಗಿ ಪರಿವರ್ತಿಸಿದ ರೈತರು..!!
ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!


Click it and Unblock the Notifications