ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

By Praveen Sannamani

ಜನಸೇವೆ ಮಾಡುವ ಮಂತ್ರಿ ಮಹೋದಯರಿಗೆ ಜನಪರ ಕಾಳಜಿಗಿಂತ ಸರ್ಕಾರದಿಂದ ಸಿಗುವ ಸೌಲತ್ತಗಳನ್ನು ಹೇಗೆಲ್ಲಾ ಬಳಕೆ ಮಾಡಿಕೊಳ್ಳಬೇಕೆಂದು ಪ್ಲ್ಯಾನ್ ಮಾಡುವವರೇ ಹೆಚ್ಚು. ಇದಕ್ಕೆ ಸ್ಪಪ್ಟ ಉದಾಹರಣೆ ಅಂದ್ರೆ ಹೊಸದಾಗಿ ಮುಂತ್ರಿ ಸ್ಥಾನ ವಹಿಸಿಕೊಂಡಿರುವ ಜಮೀರ್ ಅಹ್ಮದ್ ಖಾನ್ ಅಂದ್ರೆ ತಪ್ಪಾಗುವುದಿಲ್ಲ.

ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

ಸಚಿವರಾಗಿ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಆಯಾ ರಾಜ್ಯ ಸರ್ಕಾರಗಳು ಕೆಲವು ಸೌಲತ್ತುಗಳನ್ನು ನೀಡಿ ಉತ್ತಮ ಆಡಳಿತಕ್ಕೆ ಅನುಕೂಲ ಮಾಡಿಕೊಡುವುದು ವಾಡಿಕೆ. ಅಂತೆಯೇ ಕರ್ನಾಟಕ ಸರ್ಕಾರವು ಸಹ ಸಚಿವ ಜಮೀರ್ ಅಹ್ಮದ್ ಖಾನ್‌ಗೆ ಓಡಾಡೋದಕ್ಕೆ ಅಂತಾ ಉತ್ತಮ ಗುಣಮಟ್ಟದ ಟೊಯೊಟಾ ಇನೋವಾ ಕಾರುನ್ನು ನೀಡಿದೆ. ಆದ್ರೆ ಸಚಿವ ಜಮೀರ್‌ ಅವರಿಗೆ ಮಾತ್ರ ಲಗ್ಷುರಿ ಫಾರ್ಚೂನರ್ ಕಾರೇ ಬೇಕು ಅಂತಾ ಪಟ್ಟು ಹಿಡಿದ್ದಾರೆ.

ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

ಮಾಜಿ ಸಿಎಂ ಬಳಿಸಿದ್ದ ಫಾರ್ಚೂನರ್

ರಾಜ್ಯ ಸರ್ಕಾರವು ನೂತನ ಆಯ್ಕೆಯಾಗುವ ಮುಖ್ಯಮಂತ್ರಿಗಳಿಗಾಗಿ ಅತ್ಯುತ್ತಮ ಗುಣಮಟ್ಟದ ಟೊಯೊಟಾ ಫಾರ್ಚೂನರ್ ಒದಗಿಸುತ್ತೆ. ಅಂತೆಯೇ ಕಳೆದ ಬಾರಿ ಅಧಿಕಾರದಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರ ಬಳಕೆ ಮಾಡುತ್ತಿದ್ದ ಕಾರಿನ ಮೇಲೆ ಸಚಿವ ಜಮೀರ್ ಕಣ್ಣಹಾಕಿದ್ದಾರೆ.

ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

ಸದ್ಯ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಆ ಫಾರ್ಚೂನರ್ ಕಾರನ್ನು ಬಳಕೆ ಮಾಡಬೇಕಿತ್ತು. ಆದ್ರೆ ತಮ್ಮ ವೈಯಕ್ತಿಕ ಕಾರಣಗಳಿಂದ ಫಾರ್ಚೂನರ್ ಬಿಟ್ಟು ರೇಂಜ್ ರೋವರ್ ವೋಗ್ ಕಾರಿನ್ನೇ ಬಳಕೆ ಮಾಡುತ್ತಿದ್ದು, ಖಾಲಿ ಬಿದ್ದಿರುವ ಫಾರ್ಚೂನರ್ ಕಾರನ್ನು ತಮಗೆ ಕೋಡಿ ಅನ್ನುವುದು ಹೊಸ ಸಚಿವರ ಅಂಬೋಣ.

ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

ನಿಯಮಾವಳಿ ಪ್ರಕಾರ ಸಚಿವ ಸ್ಥಾನದಲ್ಲಿರುವ ಜನಪ್ರತಿನಿಧಿಗಳಿಗೆ ಇನೋವಾ ಎಂಪಿವಿ ಕಾರುಗಳನ್ನು ಒದಗಿಸಲು ಮಾತ್ರ ಅವಕಾಶವಿದ್ದು, ಒಂದು ವೇಳೆ ಹೆಚ್ಚಿನ ಭದ್ರತೆ ಮತ್ತು ಸುರಕ್ಷತೆಯನ್ನು ಬಯಸಿದ್ದಲ್ಲಿ ಅವರ ಸ್ವಂತ ಖರ್ಚಿನಲ್ಲಿ ಬೇಕಾದ ಕಾರು ಮಾದರಿಯನ್ನು ಖರೀದಿ ಮಾಡಬಹುದು.

ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

ಆದ್ರೆ ಸಚಿವ ಜಮೀರ್ ಅಹ್ಮದ್ ಖಾನ್ ಬೇಡಿಕೆ ಅಸಲಿಯತ್ತು ಏನು ಅಂದ್ರೆ ತಮ್ಮ ನೆಚ್ಚಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸಿದ್ದ ಕಾರನ್ನು ನಮಗೆ ನೀಡಿದ್ರೆ ಜನ ನಮ್ಮನ್ನು ಬೇಗ ಗುರುತಿಸುತ್ತಾರೆ. ಅದೇ ಇನೋವಾದಲ್ಲಿ ಓಡಾದಿದ್ರೆ ಜನ ನಮ್ಮನ್ನು ಗುರುತಿಸೋದು ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

ಅರೇ.. ಜನರು ಸಚಿವರನ್ನು ಗುರುತಿಸುವುದು ಅವರ ಬಳಿ ಇರುವ ಕಾರು, ಬೆಂಗಾವಲು ಪಡೆಯಿಂದ ಅಲ್ಲಾ, ಅಧಿಕಾರದಲ್ಲಿದ್ದಾಗ ಜನಪರ ಸೇವೆಗಳನ್ನು ಮಾಡಿದಾಗ ಮಾತ್ರ ತಮ್ಮನ್ನು ಜನ ಗುರುತಿಸುತ್ತಾರೆ ಅಂತಾ ಸಚಿವ ಜಮೀರ್ ಅಹ್ಮದ್ ಖಾನ್‌ಗೆ ಇನ್ನು ಗೊತ್ತಾಗಿಲ್ಲ ಅಂತಾ ಕಾಣುತ್ತೆ.

ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

ಒಟ್ಟಿನಲ್ಲಿ ಸಮ್ಮಿಶ್ರ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ರೈತರ ಪರ ಯೋಜನೆಗಳನ್ನು ಜಾರಿ ಮಾಡಲು ವಿವಿಧ ಹಂತಗಳಲ್ಲಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಲಾಗುತ್ತಿದ್ದ, ಇದ್ದ ಸೌಲಭ್ಯಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡು ಜನಸೇವೆ ಮಾಡಬೇಕಾದ ಸಚಿವ ಜಮೀರ್ ಅಹ್ಮದ್ ಮಾತ್ರ ಫಾರ್ಚೂನರ್ ಕಾರನ್ನು ಹೇಗಾದ್ರೂ ಮಾಡಿ ತಮ್ಮದಾಗಿಸಿಕೊಳ್ಳಬೇಕೆಂದು ಓಡಾಡುತ್ತಿದ್ದಾರೆ.

ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಮಾಡಿದಾಗ ನಾನು ಕೇಳಿದ್ದರಲ್ಲಿ ತಪ್ಪೇನು ಇಲ್ಲ ಎಂದು ಸಮರ್ಥಿಸಿಕೊಳ್ಳುವ ಜಮೀರ್ ಅವರು ರಾಜ್ಯದಲ್ಲಿ ಓಡಾಡಿ ಕೆಲಸ ಮಾಡಲು ಫಾರ್ಚೂನರ್ ಅಗತ್ಯವಿದೆ. ಜೊತೆಗೆ ಕುಮಾರಸ್ವಾಮಿಯವರ ಈಗಾಗಲೇ ಜನಪ್ರಿಯತೆ ಗಳಿಸಿದ್ದು, ನಾವು ಕೂಡಾ ಸಚಿವರು ಅಂತಾ ಗುರುತಿಸಿಕೊಳ್ಳೋಕೆ ಒಂದು ಅತ್ಯುತ್ತಮ ಎಸ್‌ಯುವಿ ಬೇಕೆಂದಿದ್ದಾರೆ.

ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

ಇಷ್ಟೆಲ್ಲಾ ಆದ್ರೂ ಜಮೀರ್ ಅಹ್ಮದ್ ಖಾನ್ ಬೇಡಿಕೆ ಬಗ್ಗೆ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜನಪರ ಸೇವೆಗೆ ಯಾವ ಮಾದರಿಯ ಕಾರು ಆದ್ರೆ ಏನೆಂದು ಪರೋಕ್ಷವಾಗಿಯೇ ಟಾಂಗ್ ಕೊಟ್ಟಿದ್ದು, ಇನ್ನಾದ್ರೂ ಸಚಿವ ಜಮೀರ್ ಅಹ್ಮದ್ ಅವರು ಫಾರ್ಚೂನರ್ ಕಾರಿನ ಚಿಂತೆ ಬಿಟ್ಟು ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವುದು ಒಳಿತು.

ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

ಇನೋವಾಗಿಂತ ಫಾರ್ಚೂನರ್‌ಗೆ ಹೆಚ್ಚು ಬೇಡಿಕೆ

ಹೌದು, ಸುರಕ್ಷೆತೆ ಮತ್ತು ಭದ್ರತೆ ದೃಷ್ಠಿಯಿಂದ ನೋಡಿದ್ದಲ್ಲಿ ಇನೋವಾ ಕ್ರಿಸ್ಟಾ ಕಾರುಗಳಿಂತಲೂ ಫಾರ್ಚೂನರ್ ಕಾರುಗಳು ಉತ್ತಮವಾಗಿದ್ದು, ಬೆಲೆಗಳು ಕೂಡಾ ದುಬಾರಿ ಎನ್ನಿಸುತ್ತವೆ. ಎಕ್ಸ್‌ಶೋರಂ ಪ್ರಕಾರ ಇನೋವಾ ಕಾರುಗಳು ರೂ. 16 ಲಕ್ಷದಿಂದ ರೂ.19 ಲಕ್ಷ ಬೆಲೆ ಹೊಂದಿದ್ದರೆ ಅದೇ ಫಾರ್ಚೂನರ್ ಕಾರುಗಳು ಎಕ್ಸ್‌ಶೋರಂ ಪ್ರಕಾರ ರೂ.35 ಲಕ್ಷದಿಂದ ರೂ. 42 ಲಕ್ಷ ಬೆಲೆ ಹೊಂದಿದೆ. ಹೀಗಿರುವಾಗ ಸರ್ಕಾರಕ್ಕೆ ಭಾರೀ ಪ್ರಮಾಣದ ಆರ್ಥಿಕ ಬೀಳದೆ ಇರುತ್ತಾ ಹೇಳಿ...

ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

ಹಾಗೆಂದ ಮಾತ್ರಕ್ಕೆ ಇನೋವಾ ಕಾರುಗಳನ್ನೆ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂಬ ಯಾವುದೇ ನಿಯಮವಿಲ್ಲ. ಭದ್ರತೆಯ ಅವಶ್ಯಕತೆಯಿದ್ದಲ್ಲಿ ಸ್ವಂತ ಹಣ ಹಾಕಿ ಬೇಕಾದ ಕಾರನ್ನು ಆಯ್ಕೆ ಮಾಡುವ ಅವಕಾಶ ಇದ್ದಾಗಿಯೂ ಸಚಿವ ಜಮೀರ್ ಅಹ್ಮದ್ ಖಾನ್ ಬೇಡಿಕೆ ಮಾತ್ರ ಅರ್ಥವಾಗದು.

ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

ಕೆಲವರ ಪ್ರಕಾರ ಲಕ್ಕಿ ಕಾರು ಎಂದೇ ಬಿಂಬಿಸಲಾಗಿರುವ ಮಾಜಿ ಸಿಎಂ ಬಳಕೆಯ ಫಾರ್ಚೂನರ್ ಕಾರು ತಮಗೆ ಅದೃಷ್ಟ ತಂದುಕೊಡುತ್ತೆ ಎನ್ನುವ ಭಾವನೆ ಸಚಿವ ಜಮೀರ್ ಅವರ ಮನಸ್ಸಿನಲ್ಲಿದ್ದು, ರಾಜ್ಯ ಸರ್ಕಾರವು ಅಂತಿಮವಾಗಿ ಈ ವಿಚಾರದಲ್ಲಿ ಯಾವ ನಿರ್ಧಾರಕ್ಕೆ ಕೈಗೊಳ್ಳುತ್ತೆ ಎನ್ನುವುದನ್ನು ಕಾಯ್ದುನೋಡಬೇಕಿದೆ.

ಸಚಿವ ಜಮೀರ್‌ ಅಹ್ಮದ್ ಫಾರ್ಚೂನರ್ ಕಾರಿಗಾಗಿ ಪಟ್ಟು ಹಿಡಿದಿದ್ದು ಯಾಕೆ?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!

ನಡುರಸ್ತೆಯಲ್ಲೇ ಗನ್ ಹಿಡಿದು ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಲೇಡಿ...

ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲಿವೆ ಟೊಯೊಟಾ ಹೊಸ ಎಸ್‌ಯುವಿ ಕಾರುಗಳು

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

ಭಾರತದಲ್ಲಿ ಜಿಪ್ಸಿ ಕಥೆ ಮುಗಿತು- ಇನ್ನೇನಿದ್ರು ಜಿಮ್ನಿ ಹವಾ ಶುರು..!!

Most Read Articles

Kannada
Read more on toyota fortuner
English summary
Karnataka Minister Zameer Ahmed: "Can't Travel In Innova, Need Fortuner".
Story first published: Friday, June 22, 2018, 19:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X