TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಭಾರತದಲ್ಲಿ ಜಿಪ್ಸಿ ಕಥೆ ಮುಗಿತು- ಇನ್ನೇನಿದ್ರು ಜಿಮ್ನಿ ಹವಾ ಶುರು..!!
ಜಪಾನ್ ಮೂಲದ ಜನಪ್ರಿಯ ವಾಹನ ತಯಾರಿಕ ಸಂಸ್ಥೆಯಾದ ಸುಜುಕಿ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಕಾರು ಮಾದರಿಗಳನ್ನು ಪರಿಚಯಿಸಿ ಯಶಸ್ವಿಯಾಗಿದ್ದು, ಇದೀಗ ಮತ್ತೊಂದು ವಿಶೇಷ ವಿನ್ಯಾಸದ ಜಿಮ್ನಿ ಕಾರನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ.
ಜಾಗತಿಕ ಮಟ್ಟದಲ್ಲಿ ಸುಜುಕಿ ಬ್ರಾಂಡ್ ಬಗ್ಗೆ ತಿಳಿದವರಿಗೆ ಜಿಮ್ನಿ ಎಂಬ ಕ್ರೀಡಾ ಬಳಕೆಯ ಕಾರಿನ ಬಗ್ಗೆ ಚೆನ್ನಾಗಿ ಗೊತ್ತಿರಬಹುದು. ನೂತನ ಬಲೆನೊ ಹಾಗೂ ಇಗ್ನಿಸ್ ತಳಹದಿಯಲ್ಲೇ ನಿರ್ಮಾಣವಾಗಲಿರುವ ಜಿಮ್ನಿ ಕಾರುಗಳು ಭಾರತದಿಂದಲೇ ರಫ್ತಾಗುತ್ತಿವೆ ಎಂಬುದು ಮಗದೊಂದು ಗಮನಾರ್ಹ ಸಂಗತಿ. ಹೀಗಿರುವಾಗ ಈ ಹೊಸ ಕಾರು ದೇಶಿಯ ಗ್ರಾಹಕರನ್ನು ಸೆಳೆಯಲು ತಯಾರಿ ನಡೆಸಿದ್ದು, ಇದೀಗ ಎಲ್ಲರ ಕಣ್ಣು ಜಿಮ್ನಿ ಮೇಲೆಯೇ ನೆಟ್ಟಿದೆ.
ಜಿಮ್ನಿ ಕಾರುಗಳ ಇತಿಹಾಸದತ್ತ ಕಣ್ಣಾಯಿಸಿದಾಗ 1970ರ ಸಾಲಿನಲ್ಲಿ ಮೊದಲ ಹಗುರ ಜೀಪ್ ಮಾದರಿ ಎಲ್‌ಜೆ10 ಮಾರುಕಟ್ಟೆಗೆ ಪರಿಚಯವಾಗಿತ್ತು. ತದನಂತರ ಜಿಮ್ನಿ ಎರಡನೇ ತಲೆಮಾರಿನ ಆವೃತ್ತಿಯಾಗಿರುವ ಜಿಪ್ಸಿ 1981 ರಿಂದ 1998ರ ಅವಧಿಯಲ್ಲಿ ಮಾರಾಟವಾಗಿತ್ತು. ತದನಂತರ ಮೂರನೇ ತಲೆಮಾರಿನ ಆವೃತ್ತಿಯು ಜನಪ್ರಿಯಗೊಂಡು ಇದೀಗ ನಾಲ್ಕನೇ ತಲೆಮಾರಿನ ಜಿಮ್ನಿ ಕಾರುಗಳು ಮಾರಾಟ ಅಣಿಯಾಗುತ್ತಿವೆ.
ಹೀಗೆ ವಿವಿಧ ದೇಶಗಳ ಮಾರುಕಟ್ಟೆ ಬೇರೆ ಬೇರೆ ಹೆಸರಿನೊಂದಿಗೆ ಮಾರಾಟವಾಗುತ್ತಿರುವ ಜಿಮ್ನಿ ಕಾರುಗಳು ಕಾಲ ಕ್ರಮೇಣ ಹಲವಾರು ಬದಲಾಣೆಗಳೊಂದಿಗೆ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡು ಬಂದಿದ್ದು, ಆಪ್ ರೋಡ್ ಪ್ರದರ್ಶನದಲ್ಲಿ ಈ ಕಾರುಗಳ ಗತ್ತು ನೋಡಿದವರಿಗಷ್ಟೇ ಗೊತ್ತು.
4x4 ಡ್ರೈವ್ ಟೆಕ್ನಾಲಜಿ ಅಳವಡಿಕೆ ಹೊಂದಿರುವ ಜಿಮ್ನಿ ಕಾರುಗಳು ಪ್ರಮುಖವಾಗಿ ಎರಡು ವೆರಿಯೆಂಟ್‌ಗಳಲ್ಲಿ ಲಭ್ಯವಾಗಲಿದ್ದು, ಒಂದು ಸ್ಟ್ಯಾಂಡರ್ಡ್ ವರ್ಷನ್ ಮತ್ತು ಟಾಪ್ ಎಂಡ್ ಮಾದರಿಯಾಗಿ ಸಿಯೈರಾ ಎನ್ನುವ ಕಾರು ಮಾದರಿಯು ಸಿದ್ದಗೊಂಡಿದೆ.
ಎಂಜಿನ್ ಸಾಮರ್ಥ್ಯ
660ಸಿಸಿ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಜಿಮ್ನಿ ಕಾರುಗಳು ಟಾಪ್ ಎಂಡ್ ಮಾದರಿಯಲ್ಲಿ 1.5-ಲೀಟರ್(1500 ಸಿಸಿ) ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದ್ದು, ಆರಂಭಿಕ ಮಾದರಿಗಳು 63-ಬಿಎಚ್‌ಪಿ ಉತ್ಪಾದನೆ ಮಾಡಿದಲ್ಲಿ ಟಾಪ್ ಮಾದರಿಯು 100-ಬಿಎಚ್‌ಪಿ ಉತ್ಪಾದನಾ ಗುಣಹೊಂದಿವೆ.
ಇನ್ನು ಭಾರತದಲ್ಲಿ ಬಿಡುಗಡೆಯಾಗಲಿರುವ ಜಿಮ್ನಿ ಕಾರುಗಳು ಬಲೆನೊ ಆರ್‌ಎಸ್ ಕಾರಿನ ಮಾದರಿಯಲ್ಲೇ 1.0-ಲೀಟರ್ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಎಲ್ಲಾ ಮಾದರಿಗಳಲ್ಲೂ 4x4 ಡ್ರೈವ್ ಸಿಸ್ಟಂ ಜೋಡಣೆಯಿರಲಿದೆ.
ಜಿಮ್ನಿ ಕಾರುಗಳು ಮಾರ್ಡನ್ ಲುಕ್‌ನೊಂದಿಗೆ ಸ್ಮಾರ್ಟ್ ಕನೆಕ್ಟಿವಿಗಳ ಸೌಲಭ್ಯವಿದ್ದು, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲರ್, ಪುಶ್ ಬಟನ್ ಸ್ಮಾರ್ಟ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಕ್ರೂಸ್ ಕಂಟ್ರೋಲರ್ ಮತ್ತು ಸ್ಟಿರಿಂಗ್ ಮೌಟೆಂಡ್ ಕಂಟ್ರೋಲ್ ಅಳವಡಿಸಲಾಗಿದೆ.
ಲಭ್ಯವಿರುವ ಬಣ್ಣಗಳು
ಒಟ್ಟು ಎಂಟು ಬಣ್ಣಗಳಲ್ಲಿ ಲಭ್ಯವಿರುವ ಜಿಮ್ನಿ ಕಾರುಗಳು ಐದು ಸಿಂಗಲ್ ಟೊನ್ ಬಣ್ಣವನ್ನು ಪಡೆದಿದ್ದರೆ ಇನ್ನುಳಿದ ಮೂರರಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.
ಸಿಂಗಲ್ ಟೋನ್‌ನಲ್ಲಿ ಜಂಗಲ್ ಗ್ರೀನ್, ಬ್ಲೂರಿಷ್ ಬ್ಲ್ಯಾಕ್ ಪರ್ಲ್ 3, ಮಿಡಿಯಮ್ ಗ್ರೇ, ಸಿಲ್ಕಿ ಸಿಲ್ವರ್ ಮೆಟಾಲಿಕ್ ಮತ್ತು ಸೂಪಿರಿಯರ್ ವೈಟ್ ಬಣ್ಣಗಳಲ್ಲಿ ಲಭ್ಯವಿದ್ದರೆ ಡ್ಯುಯಲ್ ಟೋನ್ ವಿಭಾಗದಲ್ಲಿ ಕೆನೆಟಿಕ್ ಯೆಲ್ಲೋ , ಬ್ರಿಕ್ಸ್ ಬ್ಲ್ಯೂ ಮೆಟಾಲಿಕ್ ಮತ್ತು ಚಿಫಾನ್ ಐವರಿ ಮೆಟಾಲಿಕ್ ಬಣ್ಣಗಳನ್ನು ಹೊಂದಿದೆ.
ಕಾರು ಬಿಡುಗಡೆಯ ದಿನಾಂಕ
ಭಾರತವನ್ನು ಹೊರತುಪಡಿಸಿ ಮುಂದಿನ ತಿಂಗಳು ಜುಲೈ 5ರಂದು ಪ್ರಮುಖ ರಾಷ್ಟ್ರಗಳಲ್ಲಿ ನಾಲ್ಕನೇ ತಲೆಮಾರಿನ ಜಿಮ್ನಿ ಕಾರುಗಳು ಬಿಡುಗಡೆಯಾಗುತ್ತಿದ್ದು, ವರದಿಗಳ ಪ್ರಕಾರ ವರ್ಷಾಂತ್ಯಕ್ಕೆ ಭಾರತದಲ್ಲಿ ಜಿಮ್ನಿ ಕಾರುಗಳು ಬಿಡುಗಡೆಯಾಗುವ ಖಚಿತವಾಗಿದೆ.
ಕಾರಿನ ಬೆಲೆಗಳು (ಅಂದಾಜು)
ಉದ್ದಳತೆಯಲ್ಲಿ ಜಿಪ್ಸಿಗಿಂತಲೂ ಸಣ್ಣದಾಗಿರುವ ಜಿಮ್ನಿ ಕಾರುಗಳು 6 ಲಕ್ಷದಿಂದ 8.50 ಲಕ್ಷದ ತನಕ ಬೆಲೆ ನಿಗದಿಯಾಗುವ ಸಾಧ್ಯತೆಗಳಿದ್ದು, ಇವು ತ್ರಿ ಡೋರ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ.
ಆದ್ರೆ ತ್ರಿ ಡೋರ್ ಕಾರುಗಳಿಗೆ ಭಾರತೀಯ ಗ್ರಾಹಕರು ಅಷ್ಟಾಗಿ ಇಷ್ಟಪಡುದಿಲ್ಲ ಎಂಬ ಕಾರಣಕ್ಕಾಗಿ ಫೈ ಡೋರ್ ವೈಶಿಷ್ಟ್ಯತೆಯ ಕಾರುಗಳನ್ನು ಬಿಡುಗಡೆ ಮಾಡಲಿದ್ದು, ಈ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಮಾರ್ಪಾಡುಗಳನ್ನು ಹೊಂದಲಿದೆ.