ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ದೇಶದಲ್ಲಿ ಕೆಲ ದಿನಗಳಿಂದ ಕಡಿಮೆಯಾಗುತ್ತಿರುವ ಇಂಧನಗಳ ಬೆಲೆಯಿಂದಾಗಿ ಜನಸಾಮಾನ್ಯರು ನಿಟ್ಟುಸಿರು ಬಿಡುತ್ತಿದ್ದಾರೆ. ಹೌದು ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದಲ್ಲಿನ ಹಲವರು ಪ್ರಮುಖ ನಗರಗಳಲ್ಲಿ ರೂ.93 ದಾಟಿತ್ತು, ಆದರೆ ಇಂದು (04-12-2018) ನಮ್ಮ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ರೂ.72.49ಕ್ಕೆ ಮಾರಾಟವಾಗುತ್ತಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ಹೌದು, ಸುಮಾರು 50 ದಿನಗಳಿಂದಾ ಇಂಧನ ಬೆಲೆಯಲ್ಲಿ ಕಡಿತವನ್ನು ಕಂಡು ನಿಜವಾಗಿಯು ಜನಸಾಮಾನ್ಯರು ಸಂತೋಷ ಪಡುತ್ತಿದ್ದಾರೆ. ನಿಜಕ್ಕು ಕೇಂದ್ರ ಸರ್ಕಾರ ಇನ್ನಿತರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಕಾರಣ ಬೆಲೆ ಕಡಿಮೆ ಆಗುತ್ತಿದೆ ಎಂದು ತಿಳಿದಿದ್ದರು, ಇನ್ನು ಕೆಲವರು ಕೆಂದ್ರ ಸರ್ಕಾರವನ್ನು ದೂಶಿಸುತ್ತಾ, ಎದೆಲ್ಲಾ ಮುಂದಿನ ವರ್ಷ ನಡೆಯಲಿರುವ ಎಲೆಕ್ಷನ್ ಗಿಮಿಕ್ ಎಂದು ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

90ರು.ಗಳಿಗೂ ಹೆಚ್ಚಾಗಿದ್ದ ಪೆಟ್ರೋಲ್ ಬೆಲೆ ಇದೀಗ 70 ರು.ಗಳ ಆಸು ಪಾಸಿಗೆ ತಲುಪಿದೆ. ಇದರಿಂದ ಪ್ರತೀ ಲೀಟರ್ ಪೆಟ್ರೋಲ್ ಮೇಲೆ 20 ರು.ಗಳಷ್ಟು ಇಳಿಕೆ ಕಂಡಂತಾಗಿದೆ. ಪೆಟ್ರೋಲ್ ದರದೊಂದಿಗೆ ಏರಿಕೆಯಾಗುತ್ತಲೇ ಸಾಗಿದ್ದ ಡೀಸೆಲ್ ಬೆಲೆಯೂ ಕೂಡ ನಿತಂತರವಾಗಿ ಇಳಿಕೆಯತ್ತಲೇ ಸಾಗಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 31 ಪೈಸೆ ಇಳಿಕೆಯಾಗಿದ್ದು, ಇದರಿಂದ ಪ್ರತೀ ಲೀಟರ್ ಗೆ 71.93 ರು.ಗಳಾಗಿದೆ. ಇನ್ನು ಡೀಸೆಲ್ ದರ 37 ಪೈಸೆ ಇಳಿಕೆಯಾಗಿದ್ದು ಇದರಿಂದ ಪ್ರತೀ ಲೀಟರ್ ಡೀಸೆಲ್ ಬೆಲೆ 66.66 ರು.ಗಳಷ್ಟಾಗಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ಬೆಂಗಳೂರಿನಲ್ಲಿಯೂ ಕೂಡ ದರ ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ಬೆಲೆ 72.49 ಹಾಗೂ ಪ್ರತೀ ಲೀಟರ್ ಡೀಸೆಲ್ ಬೆಲೆ 67 ರು.ಗಳಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ದರ ಏರಿಕೆ ಬಿಸಿಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಕಳೆದ 50 ದಿನಗಳಿಂದ ನಿರಂತರವಾಗಿ ಇಳಿಕೆಯಾಗುತ್ತಿರುವ ತೈಲ ದರವು ರಿಲೀಫ್ ನೀಡಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ಮುಂಬೈ ನಗರದಲ್ಲಂತೂ ಸೆಪ್ಟೆಂಬರ್ ತಿಂಗಳಿಗಿಂತಾ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಎಂದರೆ ಅಕ್ಟೋಬರ್ 04ರಂದು ಪೆಟ್ರೋಲ್ ಪ್ರತೀ ಲೀಟರ್‍‍ಗೆ ರೂ. 91.04ಕ್ಕೆ ಮಾರಾಟವಾಗುತ್ತಿದ್ದು, ಸೋಮವಾರದ ಪೆಟ್ರೋಲ್ ಪ್ರತೀ ಲೀಟರ್‍‍‍ಗೆ ರೂ.77.50 ಕ್ಕೆ ಮಾರಾಟವಾಗುತ್ತಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ಮೇಲೆ ಹೇಳಿರುವ ಹಾಗೆ ಸುಮಾರು ದಿನಗಳಿಂದ ಕೇಂದ್ರ ಸರ್ಕಾರವು ಹೊರ ರಾಷ್ಟ್ರಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಕಾರಣ ಇಂಧನ ಬೆಲೆಯು ಕಡಿಮೆ ಆಗುತ್ತಿದೆ ಎಂದು ಹಲವರಿಗೆ ತಿಳಿದಿದೆ, ಆದರೆ ಯುಎಸ್ ಸರ್ಕಾರವು ಶೀಘ್ರವೇ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ತಡೆಹಿಡಿಯುವ ಯತ್ನದಲ್ಲಿದೆ. ಹಾಗಾದರೆ ಯುಎಸ್ ಸರ್ಕಾರವು ಕಚ್ಚಾ ತೈಲದ ಬಗೆಗಿನ ಆದೇಶವೇನು ಎಂಬುದನ್ನು ತಿಳಿಯಲು ಮುಂದಕ್ಕೆ ಓದಿರಿ..

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ಮೇ ತಿಂಗಳಿನಲ್ಲಿ ಅಮೆರಿಕಾ ಇರಾನ್ ದೇಶದೊಂದಿಗೆ ನಡೆಸುತ್ತಿದ್ದ ನ್ಯೂಕ್ಲಿಯರ್ ಪವರ್ ಡೀಲ್ ಅನ್ನು ವಾಪಸ್ ಹಿಂತೆಗೆದುಕೊಂಡಿದ್ದು, ಇದೀಗ ಯುನೈಟೆಡ್ ಸ್ಟೇಟ್ಸ್ ಸರ್ಕಾರವು ಎಲ್ಲಾ ಮೂಲೆಗಳಿಂದ ಇರಾನ್ ಸರ್ಕಾರವನ್ನ ಹತ್ತಿಕ್ಕಲು ಹಲವಾರು ಸವಾಲುಗಳನ್ನು ಎದುರಿಸುವಂತೆ ಮಾಡುತ್ತಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ಇದರಲ್ಲಿ ಬಹು ಮುಖ್ಯವಾದಾದು ಇರಾನ್ ದೇಶದಿಂದ ಇನ್ನಿತರೆ ದೇಶದವರು ಕಚ್ಚಾ ತೈಲವನ್ನ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಆದೇಶಿಸಲಾಗಿದ್ದು, ಜೊತೆಗೆ ಈ ಆದೇಶವನ್ನು ಉಲ್ಲಂಘಿಸುವ ರಾಷ್ಟ್ರಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಅಮೆರಿಕ ಸರ್ಕಾರ ಎಚ್ಚರಿಸಿದೆ.

MOST READ: ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ ನಟ ಸಿಂಬು ಈಗ ಬೆಂಟ್ಲಿ ಒಡೆಯ

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ನಮ್ಮ ದೇಶಕ್ಕೆ ಕಚ್ಚಾ ತೈಲವನ್ನು ಕಳುಹಿಸುವ ಪ್ರಮುಖ ದೇಶಗಳಲ್ಲಿ ಇರಾನ್ ಮೂರನೆಯ ಸ್ಥಾನದಲ್ಲಿದ್ದು, ಇದೀಗ ಟ್ರಂಪ್ ಆದೇಶದಂತೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ ದೇಶದಲ್ಲಿ ಮತ್ತೊಮೆ ಇಂಧನ ಬೆಲೆಯಲ್ಲಿ ಏರಿಕೆಯಾಗಲಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ಕಚ್ಚಾ ತೈಲವನ್ನು ಆಮದು ಮಾಡುವುದನ್ನು ನಿಲ್ಲಿಸಬೇಕು ಎಂದು ನವೆಂಬರ್ 4, 2018ರ ವರೆಗು ಗಡುವನ್ನು ನೀಡಲಾಗಿತ್ತು, ಆದರೂ ಸಹ ಭಾರತ ಸೇರಿದಂತೆ ಇನ್ನಿತರೆ ದೇಶಗಳು ಇರಾನ್ ಸರ್ಕಾರದ ನೆರವಿನೊಂದಿಗೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲಿಸಲಿಲ್ಲ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ಯುಎಸ್ ಸರ್ಕಾರವು ತೆಗೆದುಕೊಂಡ ಈ ನಿರ್ಧಾರದಿಂದ ಇಂಧನದ ಬೇಡಿಕೆಯು ಹೆಚ್ಚಿರುವ ದೇಶಗಳಲ್ಲಿ ತೊಂದರೆ ಉಂಟಾಗುತ್ತದೆ. ಏಕೆಂದರೆ ಇಂಧನ ಆಧಾರಿತ ವಾಹನಗಳೇ ಹೆಚ್ಚು ಚಲಿಸುತ್ತಿರುವ ಕಾರಣ ಬೇಡಿಕೆಯು ಕೂಡಾ ಹೆಚ್ಚುತ್ತಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ಈಗಾಗಲೆ ಇರಾನ್ ದೇಶದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಚೀನಾ, ಜಪಾನ್, ಸೌತ್ ಕೊರಿಯಾ, ಇಟಾಲಿ, ಟರ್ಕಿ, ಗ್ರೀಸ್, ಭಾರತ ಮತ್ತು ತೈವಾನ್ ದೇಶಗಳಿಗೆ ಕಚ್ಚಾ ತೈಲವನ್ನು ಆಮದು ಮಾಡುವುದನ್ನ ನಿಲ್ಲಿಸಲು ಅಮೆರಿಕಾ ಆದೇಶಿಸಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ಆದರೆ ಈ ದೇಶಗಳಲ್ಲಿ ಇಂಧನಗಳ ಬೇಡಿಕೆಯು ಹೆಚ್ಚಾಗಿಯೆ ಇರುವ ಕಾರಣ ಬೇರೆ ದಾರಿ ಇಲ್ಲದೇ ಯುಎಸ್ ಸರ್ಕಾರ ನೀಡಿದ ಗಡುವಿನ ನಂತರವೂ ಇರಾನ್ ದೇಶದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ಆದುದರಿಂದ ಈ ಎಂಟು ರಾಷ್ಟ್ರಗಳಿಗೆ 6 ತಿಂಗಳವರೆಗೆ ವಿನಾಯಿತಿಯನ್ನು ನೀಡಲಾಗುತ್ತಿದ್ದು, 6 ತಿಂಗಳ ಬಳಿಕ ಸಂಪೂರ್ಣವಾಗಿ ಇರಾನ್ ದೇಶದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂಬ ಅಮೆರಿಕಾ ಆದೇಶಕ್ಕೆ ಮೋದಿ ಕ್ಯಾರೇ ಎಂದಿಲ್ಲ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ಭಾರತದಲ್ಲಿ ದಿನದಿಂದ ದಿನಕ್ಕೆ ಇಂಧನದ ಬೇಡಿಕೆಯು ಹೆಚ್ಚುತ್ತಲೇ ಇದೆ, ಆದುದರಿಂದ ಯುಎಸ್ ಸರ್ಕಾರ ನೀಡಿದ ಆದೇಶದ ಮೆರೆಗೆ ಪ್ರಧಾನಿ ಮೋದಿಯವರು ಯಾವ ರೀತಿಯ ನಿರ್ಣಯವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಕಾಯ್ದು ನೋಡಬೇಕಿದ್ದು, ಇರಾನ್ ದೇಶದಿಂದ ಒಮ್ಮೆ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದಲ್ಲಿ, ಮತ್ತೊಮ್ಮೆ ಇಂಧನದ ಬೆಲೆಯು ಏರಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾಗುತ್ತಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

2018ರ ಅಕ್ಟೋಬರ್ ತಿಂಗಳಿನಲ್ಲಿ ಭಾರತವು ಇರಾನ್ ದೇಶದಿಂದ 2.57 ಮಿಲಿಯನ್ ಟನ್‍ಗಳ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದ್ದರೆ, ಇನ್ನು 2017ರಲ್ಲಿ ಸುಮಾರು 1.89 ಮಿಲಿಯನ್ ಟನ್‍ಗಳ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿತ್ತು. ಅಂದರೆ ಕಳೆದ ವರ್ಷಕ್ಕಿಂತಾ ಈ ವರ್ಷದ ಆಕ್ಟೋಬರ್‍‍ನಲ್ಲಿ ಶೇಕಡ 36ರಷ್ಟು ಹೆಚ್ಚಾಗಿ ಆಮದು ಮಾಡಿಕೊಂಡಿದೆ.

MOST READ: ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

2018ರ ಮೊದಲ ಅರ್ಧ ಹಣಕಾಸು ವರ್ಷದಲ್ಲಿ (ಎಪ್ರಿಲ್-ಅಕ್ಟೋಬರ್) ಭಾರತವು ಇರಾನ್‍ನಿಂದ ಬರೊಬ್ಬರಿ 17.62 ಮಿಲಿಯನ್ ಟನ್‍ಗಳ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಗಿದ್ದು, 2017ರ ಹಣಕಾಸು ವರ್ಷದಲ್ಲಿ ಮಾಡಿಕೊಂಡ ಆಮದುಗಿಂತಾ ಶೇಕಡಾ 38.41ರಷ್ಟು ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

ಈ ವರ್ಷದ ದಸರಾ ಹಬ್ಬದ ಮುಂಚೆ ದೇಶದಲ್ಲಿ ಇಂಧನದ ಬೆಲೆಯು ಹಲವಾರು ಪ್ರಮುಖ ನಗರಗಳಲ್ಲಿ ರೂ. 93ಕ್ಕೆ ದಾಟಿತ್ತು, ಹಬ್ಬದ ನಂತರ ಇಲ್ಲಿಯ ವರೆಗು ಇಂಧನದ ಬೆಲೆಯು ಕಡಿಮೆ ಆಗಿದೆ. ಇನ್ನು ಇರಾನ್ ದೇಶದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದೆ ಆದಲ್ಲಿ ಮತ್ತೊಮ್ಮೆ ಬೇಡಿಕೆಗೆ ಅನುಗುಣವಾಗಿ ಇಂಧನ ಬೆಲೆಯಲ್ಲಿ ಏರಿಕೆಯಾದರೂ ಆಗಬಹುದು.

Most Read Articles

Kannada
English summary
Petrol and diesel prices slashed again. Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X