ಬೆಂಗಳೂರಿನ ಜನಕ್ಕೆ ಸರ್ಫೈಸ್‌ ಕೊಟ್ಟ ಸೈಪಾ ಆರಿಯೋ ಮತ್ತು ಟಿಬಾ 2 ಸೆಡಾನ್ ಕಾರುಗಳು

ಸೈಪಾ ಸಂಸ್ಥೆಯು ಆರಿಯೋ ಮತ್ತು ಟಿಬಾ 2 ಎನ್ನುವ ಸೆಡಾನ್ ಆವೃತ್ತಿಗಳನ್ನು ಪರಿಚಯಿಸುತ್ತಿದ್ದು, ಇದಕ್ಕೂ ಮುನ್ನ ಹೊಸ ಕಾರುಗಳು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದು ಸಾರ್ವಜನಿಕವಾಗಿ ಭಾರೀ ಚರ್ಚೆಗೆ ಕಾರಣವಾಗಿವೆ.

By Praveen

Recommended Video

Speeding Truck Loses Control On A Wet Road - DriveSpark

ಭಾರತದಲ್ಲಿ ಮೊದಲ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಯನ್ನು ಆರಂಭಿಸುತ್ತಿರುವ ಇರಾನ್ ಮೂಲದ ಸೈಪಾ ಆಟೋ ಮೊಬೈಲ್ ಉತ್ಪಾದನಾ ಸಂಸ್ಥೆಯು ಮೊದಲ ಹಂತದಲ್ಲೇ ಆರಿಯೋ ಮತ್ತು ಟಿಬಾ 2 ಎನ್ನುವ ಸೆಡಾನ್ ಆವೃತ್ತಿಗಳನ್ನು ಪರಿಚಯಿಸುತ್ತಿದ್ದು, ಇದಕ್ಕೂ ಮುನ್ನ ಹೊಸ ಕಾರುಗಳು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದು ಸಾರ್ವಜನಿಕವಾಗಿ ಭಾರೀ ಚರ್ಚೆಗೆ ಕಾರಣವಾಗಿವೆ.

ಬೆಂಗಳೂರಿನ ಜನಕ್ಕೆ ಸರ್ಫೈಸ್‌ ಕೊಟ್ಟ ಸೈಪಾ ಆರಿಯೋ ಮತ್ತು ಟಿಬಾ 2 ಸೆಡಾನ್ ಕಾರುಗಳು

ನಿನ್ನೆ ತಡರಾತ್ರಿ ಬೆಂಗಳೂರಿನ ಆಡುಗೋಡಿ ಬಳಿಯ ಬಾಷ್ ಸಂಸ್ಥೆಯ ಮುಂಭಾಗದಲ್ಲಿ ಸೈಪಾ ನಿರ್ಮಾಣದ ಹೊಸ ಕಾರುಗಳು ಸಾರ್ವಜನಿಕವಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಬೀಡಿಭಾಗಗಳ ಜೋಡಣೆಯ ಉದ್ದೇಶಕ್ಕಾಗಿ ಚೆನ್ನೈನಿಂದ ಬೆಂಗಳೂರಿಗೆ ಹೊಸ ಕಾರುಗಳನ್ನು ತರಲಾಗಿತ್ತು.

ಬೆಂಗಳೂರಿನ ಜನಕ್ಕೆ ಸರ್ಫೈಸ್‌ ಕೊಟ್ಟ ಸೈಪಾ ಆರಿಯೋ ಮತ್ತು ಟಿಬಾ 2 ಸೆಡಾನ್ ಕಾರುಗಳು

ಈ ವೇಳೆ ಡ್ರೈವ್ ಸ್ಪಾರ್ಕ್ ತಂಡಕ್ಕೆ ಸೈಪಾ ನಿರ್ಮಾಣದ ಆರಿಯೋ ಮತ್ತು ಟಿಬಾ 2 ಕಾರುಗಳ ರಹಸ್ಯ ಚಿತ್ರಗಳನ್ನು ಸೆರೆಹಿಡಿಯಲಾಗಿದ್ದು, ದೇಶಿಯ ಮಾರುಕಟ್ಟೆಗೆ ಸದ್ಯದಲ್ಲೇ ಲಗ್ಗೆಯಿಡುತ್ತಿರುವ ಕುರಿತಾದ ಎಕ್ಸ್‌ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನ ಜನಕ್ಕೆ ಸರ್ಫೈಸ್‌ ಕೊಟ್ಟ ಸೈಪಾ ಆರಿಯೋ ಮತ್ತು ಟಿಬಾ 2 ಸೆಡಾನ್ ಕಾರುಗಳು

ಇನ್ನು ಸೈಪಾ ಬಿಡುಗಡೆ ಮಾಡುತ್ತಿರುವ ಆರಿಯೋ ಸೆಡಾನ್ ಮತ್ತು ಟಿಬಾ 2 ಕಂಪ್ಯಾಕ್ಟ್ ಸೆಡಾನ್ ಕಾರುಗಳು ಭಾರತೀಯ ಗ್ರಾಹಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಲಾರ್ಜ್ ಹೆಡ್‌ಲ್ಯಾಂಪ್, ಬ್ಲ್ಯಾಕ್ ಗ್ರೀಲ್ ಮತ್ತು ಅಲಾಯ್ ವೀಲ್‌ಗಳನ್ನು ಹೊಂದಿರುವುದು ಕಂಡುಬಂದಿದೆ.

ಬೆಂಗಳೂರಿನ ಜನಕ್ಕೆ ಸರ್ಫೈಸ್‌ ಕೊಟ್ಟ ಸೈಪಾ ಆರಿಯೋ ಮತ್ತು ಟಿಬಾ 2 ಸೆಡಾನ್ ಕಾರುಗಳು

ಜೊತೆಗೆ ಫೋರ್ಡ್ ಫಿಗೊ ಟೈಟಾನಿಯಂ ಸೆಡಾನ್ ಮಾದರಿಯಲ್ಲೇ ಹಿಂಭಾಗದ ವಿನ್ಯಾಸವನ್ನು ಹೊಂದಿರುವ ಆರಿಯೋ ಮತ್ತು ಟಿಬಾ 2 ಸೆಡಾನ್ ಮಾದರಿಗಳು ಫಾಗ್ ಲ್ಯಾಂಪ್, ಡ್ಯುಯಲ್ ಟೋನ್ ಇಂಟಿರಿಯರ್, ಆಟೋಮ್ಯಾಟಿಕ್ ಟ್ರಾನ್‌ಮಿಷನ್ ಪಡೆದಿರುವುದು ಪತ್ತೆಯಾಗಿದೆ.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಬೆಂಗಳೂರಿನ ಜನಕ್ಕೆ ಸರ್ಫೈಸ್‌ ಕೊಟ್ಟ ಸೈಪಾ ಆರಿಯೋ ಮತ್ತು ಟಿಬಾ 2 ಸೆಡಾನ್ ಕಾರುಗಳು

ಹೀಗಾಗಿ ಸೆಡಾನ್ ಮಾದರಿಗಳಲ್ಲಿ ಹೊಸ ಸಂಚಲನ ಸೃಷ್ಟಿಸಲಿರುವ ಸೈಪಾ ಸಂಸ್ಥೆಯು ಭಾರತದಲ್ಲಿ ನಿಸ್ಸಾನ್ ಮತ್ತು ರೆನಾಲ್ಟ್ ಮತ್ತು ಬರಲಿರುವ ಕಿಯಾ ಮೋಟಾರ್ಸ್ ಜೊತೆಗೂಡಿ ಹೊಸ ಕಾರುಗಳನ್ನು ಉತ್ಪಾದನೆ ಮಾಡಲಿದ್ದು, ಸೆಡಾನ್ ಪ್ರಿಯರಿಗೆ ಹೊಸ ಅನುಭೂತಿ ನೀಡಲಿವೆ.

ಬೆಂಗಳೂರಿನ ಜನಕ್ಕೆ ಸರ್ಫೈಸ್‌ ಕೊಟ್ಟ ಸೈಪಾ ಆರಿಯೋ ಮತ್ತು ಟಿಬಾ 2 ಸೆಡಾನ್ ಕಾರುಗಳು

ಎಂಜಿನ್ ಸಾಮರ್ಥ್ಯ

ಆರಿಯೋ ಕಾರುಗಳು 1.5-ಲೀಟರ್ ಮತ್ತು ಆರಿಯೋ ಟಾಪ್ ಕಾರುಗಳು 1.6-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, ಟಿಬಾ 2 ಕಾರುಗಳು 1.6-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿವೆ ಎಂಬ ಮಾಹಿತಿ ಇದೆ.

ಬೆಂಗಳೂರಿನ ಜನಕ್ಕೆ ಸರ್ಫೈಸ್‌ ಕೊಟ್ಟ ಸೈಪಾ ಆರಿಯೋ ಮತ್ತು ಟಿಬಾ 2 ಸೆಡಾನ್ ಕಾರುಗಳು

ಬೆಲೆ (ಅಂದಾಜು)

ಗುಣಮಟ್ಟದಲ್ಲಿ ನಿಸ್ಸಾನ್ ಸನ್ನಿ ಮತ್ತು ಫೋರ್ಡ್ ಫಿಗೊ ಟೈಟಾನಿಯಂ ಸೆಡಾನ್‌ಗೆ ಸಮನಾಗಿರುವ ಸೈಪಾ ಕಾರುಗಳ ಬೆಲೆಯು 8 ರಿಂದ 12 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಬೆಂಗಳೂರಿನ ಜನಕ್ಕೆ ಸರ್ಫೈಸ್‌ ಕೊಟ್ಟ ಸೈಪಾ ಆರಿಯೋ ಮತ್ತು ಟಿಬಾ 2 ಸೆಡಾನ್ ಕಾರುಗಳು

ಕೆಲವು ಮೂಲಗಳ ಪ್ರಕಾರ ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತಿರುವ ಸೈಪಾ ಸಂಸ್ಥೆಯ ಟಿಬಾ 2 ಕಾರುಗಳು ಫೇಸ್‌ಲಿಫ್ಟ್ ಆವೃತ್ತಿ ಎನ್ನಲಾಗಿದ್ದು, ಕಂಪ್ಯಾಕ್ಟ್ ಸೆಡಾನ್ ಬಯಸುವ ಭಾರತೀಯ ಗ್ರಾಹಕರಿಗೆ ಇದೊಂದು ಉತ್ತಮ ಕಾರು ಮಾದರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Trending On DriveSpark Kannada:

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇಲ್ಲಿದೆ ಸೂಪರ್ ಸುಪ್ರೀಂ ಐಡಿಯಾ !!

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ರಸ್ತೆ ನಿಯಮ ಉಲ್ಲಂಘಿಸುವರಿಗೆ ಕಾದಿದೆ ಮಾರಿಹಬ್ಬ- ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ಗೊತ್ತಾ?

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Monday, January 22, 2018, 15:43 [IST]
English summary
SAIPA Ario And Tiba 2 Spotted In Bangalore.
Read more on saipa spy image auto news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+