ಸ್ಕೋಡಾ ಸಂಸ್ಥೆಯಿಂದ ವಿನೂತನ ಸನ್‌ರಾಕ್ ಕಾನ್ಸೆಪ್ಟ್ ಅನಾವರಣ

ಜೆಕ್ ಗಣರಾಜ್ಯದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಸ್ಕೋಡಾ ಹತ್ತಾರು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದ್ದು, ಇದೀಗ ವಿನೂತನ ಕನ್ವರ್ಟಬಲ್ ಡ್ರಾಪ್ ಟಾಪ್ ಎಸ್‌ಯುವಿ ಒಂದನ್ನು ಅನಾವರಣಗೊಳಿಸಿದೆ.

By Praveen Sannamani

ಸ್ಕೋಡಾ ಸಂಸ್ಥೆಯು ಅನಾವರಣಗೊಳಿಸಿರುವ ಕನ್ವರ್ಟಬಲ್ ಡ್ರಾಪ್ ಟಾಪ್ ಎಸ್‌ಯುವಿ ಕಾರಿಗೆ ಸನ್‌ರಾಕ್ ಎಂದು ನಾಮಕರಣ ಮಾಡಲಾಗಿದ್ದು, ಸ್ಕೋಡಾ ಸಂಸ್ಥೆಯ ಮತ್ತೊಂದು ವಿನೂತನ ಎಸ್‌ಯುವಿ ಕರೋಕ್ ಎಸ್‌ಯುವಿ ಪ್ಯಾಟ್‌ಫಾರ್ಮ್ ಅಡಿಯಲ್ಲೇ ಸನ್‌ರಾಕ್ ಕಾರನ್ನು ಸಹ ಅಭಿವೃದ್ಧಿಗೊಳಿಸಲಾಗಿದೆ ಎಂದು ಸ್ಕೋಡಾ ಸಂಸ್ಥೆಯೇ ಹೇಳಿಕೊಂಡಿದೆ.

ಸ್ಕೋಡಾ ಸಂಸ್ಥೆಯಿಂದ ವಿನೂತನ ಸನ್‌ರಾಕ್ ಕಾನ್ಸೆಪ್ಟ್ ಅನಾವರಣ

ವಿದ್ಯಾರ್ಥಿಗಳಿಂದ ಸಿದ್ದವಾಗಿದೆ ಸನ್‌ರಾಕ್

ಸ್ಕೋಡಾ ಸಂಸ್ಥೆಯು ಅನಾವರಣ ಮಾಡಿರುವ ಈ ಹೊಸ ಕಾರು ವಿದ್ಯಾರ್ಥಿಗಳಿಂದಯೇ ಸಿದ್ದವಾಗಿದೆ. ಅರೇ ಅದು ಹೇಗೆ ಅಂತೀರಾ? ಹೌದು, ಜೆಕ್‌ನಲ್ಲಿರುವ ಸ್ಕೋಡಾ ಮುಖ್ಯ ಕಾರು ಉತ್ಪಾದನಾ ಘಟಕದಲ್ಲಿ ಆಟೋ ಉತ್ಪಾದನಾ ಕೌಶಲ್ಯ ತರಬೇತಿ ಪಡೆಯುತ್ತಿರುವ 23 ವಿದ್ಯಾರ್ಥಿಗಳು ಸೇರಿ ಈ ಹೊಸ ನಮೂನೆಯ ಕಾರನ್ನು ಹೊರತಂದಿದ್ದಾರೆ.

ಸ್ಕೋಡಾ ಸಂಸ್ಥೆಯಿಂದ ವಿನೂತನ ಸನ್‌ರಾಕ್ ಕಾನ್ಸೆಪ್ಟ್ ಅನಾವರಣ

ಈ ವಿನೂತನ ಕಾರಿನ ವಿನ್ಯಾಸಗಳನ್ನು ಸಿದ್ದಪಡಿಸಲು ಬರೋಬ್ಬರಿ 8 ತಿಂಗಳು ಕಾಲ ಶ್ರಮವಹಿಸಿರುವ 23 ಕಲಿಕಾ ವಿದ್ಯಾರ್ಥಿಗಳು, ವಿಶ್ವ ದರ್ಜೆದ ಗುಣಮಟ್ಟದ ವಿನ್ಯಾಸಗಳನ್ನು ಸೇರಿಸುವ ಮೂಲಕ ಟಾಪ್ ಲೆಸ್ ಕಾರುಗಳ ಪರಿಕಲ್ಪನೆಗಳಿಗೆ ಹೊಸ ರೂಪ ನೀಡಿದ್ದಾರೆ.

ಸ್ಕೋಡಾ ಸಂಸ್ಥೆಯಿಂದ ವಿನೂತನ ಸನ್‌ರಾಕ್ ಕಾನ್ಸೆಪ್ಟ್ ಅನಾವರಣ

ತರಬೇತಿಯಲ್ಲಿರುವ 23 ವಿದ್ಯಾರ್ಥಿಗಳು ಇಂಜಿನಿಯರ್, ಇಂಟಿರಿಯರ್ ಡಿಸೈನ್, ಎಕ್ಸ್‌ಟಿರಿಯರ್ ಡಿಸೈನ್, ಮಾರ್ಕೆಟಿಂಗ್, ಮೆಕ್ಯಾನಿಕಲ್ ವಿಭಾಗದಲ್ಲಿನ ಆಸಕ್ತಿಯೊಂದಿಗೆ ಆಟೋ ಉತ್ಪಾದನಾ ಕೌಶಲ್ಯ ಶಿಬಿರದಲ್ಲಿ ಭಾಗಿಯಾಗಿದ್ದು, ಸನ್‌ರಾಕ್ ಕಾರು ಸಿದ್ದಗೊಳಿಸುವ ಮೂಲಕ ಆಟೋ ಉದ್ಯಮದಲ್ಲಿ ಕುತೂಹಲ ಹುಟ್ಟುಹಾಕಿದ್ದಾರೆ.

ಸ್ಕೋಡಾ ಸಂಸ್ಥೆಯಿಂದ ವಿನೂತನ ಸನ್‌ರಾಕ್ ಕಾನ್ಸೆಪ್ಟ್ ಅನಾವರಣ

ಇನ್ನು ಸ್ಕೋಡಾ ಸಂಸ್ಥೆಯಿಂದ ಸಿದ್ದವಾಗಿರುವ ಸನ್‌ರಾಕ್ ಕಾರುಗಳು ಮರ್ಸಿಡಿಸ್ ಬೆಂಝ್ ನಿರ್ಮಾಣದ ಕ್ಯಾಬ್ರಿಯೊ ವಿನ್ಯಾಸಗಳನ್ನು ಪಡೆದಿರುವುದು ಸಹ ಚರ್ಚೆಗೆ ಕಾರಣವಾಗಿದ್ದು, ಸುಧಾರಿತ ತಂತ್ರಜ್ಞಾನ ಹೊಂದಿರುವ ಐಷಾರಾಮಿ ಡ್ರಾಪ್ ಟಾಪ್ ಕ್ಯಾಬ್ರಿಯೊ ವಿನ್ಯಾಸಕ್ಕೂ ಮತ್ತು ಸನ್‌ರಾಕ್ ವಿನ್ಯಾಸಕ್ಕೂ ಸಾಕಷ್ಟು ಭಿನ್ನತೆಗಳಿವೆ ಎನ್ನಬಹುದು.

ಸ್ಕೋಡಾ ಸಂಸ್ಥೆಯಿಂದ ವಿನೂತನ ಸನ್‌ರಾಕ್ ಕಾನ್ಸೆಪ್ಟ್ ಅನಾವರಣ

ಎಂಜಿನ್ ಸಾಮರ್ಥ್ಯ

ಕರೋಕ್ ಕಾರಿನ ಎಂಜಿನ್ ಮಾದರಿಯನ್ನೇ ಸನ್‌ರಾಕ್‌ನಲ್ಲೂ ಎರವಲು ಪಡೆಯಲಾಗಿದ್ದು, 1.5-ಲೀಟರ್, ಫೌರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಬಳಕೆ ಮಾಡಲಾಗಿದೆ. ಈ ಮೂಲಕ ಹೊಸ ಎಂಜಿನ್ ಮಾದರಿಯು 204-ಬಿಎಚ್‌ಪಿ ಉತ್ಪಾದಿಸುವ ಗುಣಹೊಂದಿದೆ.

ಸ್ಕೋಡಾ ಸಂಸ್ಥೆಯಿಂದ ವಿನೂತನ ಸನ್‌ರಾಕ್ ಕಾನ್ಸೆಪ್ಟ್ ಅನಾವರಣ

ಸನ್‌ರಾಕ್ ಕಾರುಗಳು 195 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಟೈಲ್‌ಗೇಟ್, ರೆಡ್ ಕಲರ್ ಸ್ಕೀಮ್, ಡ್ಯುಯಲ್ ಟೋನ್ ಇಂಟಿರಿಯರ್ ಡಿಸೈನ್, ಮುಂಭಾಗದ ಬ್ಯಾನೆಟ್ ಡಿಸೈನ್, ಗ್ರಿಲ್ ವಿನ್ಯಾಸಗಳು ಸಾಕಷ್ಟು ಗಮನ ಸೆಳೆಯುತ್ತಿದ್ದು, ಡ್ರಾಪ್ ಟಾಪ್ ವರ್ಷನ್ ಕಾರುಗಳಲ್ಲಿ ವಿಶೇಷ ಎನ್ನಿಸಲಿದೆ.

ಸ್ಕೋಡಾ ಸಂಸ್ಥೆಯಿಂದ ವಿನೂತನ ಸನ್‌ರಾಕ್ ಕಾನ್ಸೆಪ್ಟ್ ಅನಾವರಣ

ಆದ್ರೆ ಸ್ಕೋಡಾ ಸಂಸ್ಥೆಯು ಕಲಿಕಾ ವಿದ್ಯಾರ್ಥಿ ಸಿದ್ದಪಡಿಸಿರುವ ಸನ್‌ರಾಕ್ ಅನ್ನು ಉತ್ಪಾದನೆ ಮಾಡುವುದಿಲ್ಲ ಎನ್ನುವುದೇ ಬೇಸರ ಸಂಗತಿಯಾಗಿದ್ದು,ಇದರ ಬದಲಾಗಿ ಫೋಕ್ಸ್‌ವ್ಯಾಗನ್ ಸಂಸ್ಥೆಯ ಜೊತೆಯಾಗಿ ಟಿ-ರಾಕ್ ಎನ್ನುವ ಡ್ರಾಪ್ ಟಾಪ್ ವರ್ಷನ್ ಒಂದನ್ನು ಮುಂದಿನ ವರ್ಷ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಒಟ್ಟಿನಲ್ಲಿ ಕಲಿಕಾ ವಿದ್ಯಾರ್ಥಿಗಳು ವಿಶ್ವದರ್ಜೆಯಲ್ಲಿ ಕಾರು ಮಾದರಿಯೊಂದನ್ನು ಸಿದ್ದಗೊಳಿಸಿರುವುದು ಪ್ರಮುಖ ವಿಚಾರ ಎನ್ನಬಹುದಾಗಿದ್ದು, ವಿದ್ಯಾರ್ಥಿಗಳು ತಯಾರಿದ ಪರಿಕಲ್ಪನಾ ಮಾದರಿಯ ವಿಡಿಯೋ ಇಲ್ಲಿದೆ ನೋಡಿ...

Most Read Articles

Kannada
Read more on skoda ಸ್ಕೋಡಾ
English summary
Skoda Sunroq Concept Revealed — A One-Off Cabriolet Concept.
Story first published: Wednesday, June 6, 2018, 19:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X