ನಮ್ಮ ಬೆಂಗಳೂರಿನಲ್ಲಿ ನ್ಯೂ ಗ್ಲೋಬಲ್ ಸೀರಿಸ್ ಎಸ್ಎಂಎಲ್ ಇಸುಝು ಟ್ರಕ್‌ಗಳು ಬಿಡುಗಡೆ
ದೇಶದ ಜನಪ್ರಿಯ ವಾಣಿಜ್ಯ ವಾಹನಗಳ ಉತ್ಪಾದನಾ ಸಂಸ್ಥೆಯಾದ ಎಸ್ಎಂಎಲ್ ಇಸುಝು ಸಂಸ್ಥೆಯು ತನ್ನ ಗ್ಲೋಬಲ್ ಸೀರಿಸ್ ಟ್ರಕ್ ಮಾದರಿಗಳನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಟ್ರಕ್‌ಗಳು ಹಲವು ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿರುವುದಲ್ಲದೇ ಅತ್ಯುತ್ತಮ ಇಂಧನ ದಕ್ಷತೆಯನ್ನು ಪಡೆದುಕೊಂಡಿವೆ.

ಎಸ್ಎಂಎಲ್ ಇಸುಝು ಸಂಸ್ಥೆಯು ದೇಶದಲ್ಲಿ ವಿವಿಧ ಮಾದರಿಯ ಹೆವಿ ಡ್ಯೂಟಿ ಟ್ರಕ್‌ಗಳ ಜೊತೆಗೆ ಮಧ್ಯಕ್ರಮಾಂಕದ ಲೈಟ್ ವೆಟ್ ವಾಣಿಜ್ಯ ವಾಹನಗಳನ್ನು ಸಹ ಉತ್ಪಾದನೆ ಮಾಡುತ್ತಿದ್ದು, ಈ ಹಿಂದಿನ ಉತ್ಪನ್ನಗಳಿಂತಲೂ ಹೆಚ್ಚಿನ ಮಟ್ಟದ ತಂತ್ರಜ್ಞಾನ ಸೌಲಭ್ಯ ಹೊಂದಿರುವ ಹೊಸ ಟ್ರಕ್‌ಗಳು ಅರಾಮದಾಯಕ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿವೆ.

ಹೀಗಾಗಿ ಎಸ್ಎಂಎಲ್ ಇಸುಝು ಹೊಸ ಟ್ರಕ್‌ಗಳು ಅತಿ ಕಡಿಮೆ ಪ್ರಮಾಣದ ಕಾರ್ಯನಿರ್ವಹಣಾ ವೆಚ್ಚಗಳನ್ನು ಹೊಂದಿದ್ದು, ಚಾಲಕನಿಗೆ ಸಹಾಯವಾಗಬಲ್ಲ 'ಸಾರಥಿ' ಎನ್ನುವ ಟೆಲಿ ಮ್ಯಾಟ್ರಿಕ್ ಸಲ್ಯೂಷನ್ ಸೌಲಭ್ಯವನ್ನು ಒದಗಿಸಲಾಗಿದೆ.

ಇದು ವಾಣಿಜ್ಯ ವಾಹನಗಳ ವ್ಯವಸ್ಥೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಟ್ರಕ್ ಮಾಲೀಕರು ದೇಶದ ಯಾವುದೇ ಮೂಲೆಯಲ್ಲಿದ್ದರೂ ತತಕ್ಷಣದ ಮಾಹಿತಿ ಮತ್ತು ಸೇವೆಗಳಿಗಾಗಿ ಸಾರಿಥಿ ಮೂಲಕ ಉತ್ಪಾದನಾ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಬಹುದು.

ಇದಲ್ಲದೇ ಹೊಸ ಟ್ರಕ್‌ಗಳಲ್ಲಿನ ಕ್ಯಾಬಿನ್ ವಿನ್ಯಾಸವು ಸಹ ಲಗ್ಷುರಿ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಹೆಡ್‌ಲ್ಯಾಂಪ್ ವಿನ್ಯಾಸ, ವಿಸ್ತರಿತ ಸ್ಟೀರಿಂಗ್ ವಿಭಾಗ ಮತ್ತು ಸುರಕ್ಷತೆಗಾಗಿ ಹಲವು ಹೊಸ ಸೌಲಭ್ಯಗಳನ್ನು ಹೊಂದಿದೆ. ಹೀಗಾಗಿ ಬೆಲೆಯಲ್ಲೂ ತುಸು ದುಬಾರಿ ಎನ್ನಿಸಲಿರುವ ಈ ಟ್ರಕ್‌ಗಳಲ್ಲಿ ನಯವಾಗಿ ಗೇರ್‌ಬಾಕ್ಸ್ ಬಳಕೆಗಾಗಿ ಲೈಟರ್ ಕ್ಲಚ್ ನೀಡಲಾಗಿದೆ.
MOST READ: ವಾಣಿಜ್ಯ ವಾಹನಗಳ ಸ್ಪೀಡ್ ಗವರ್ನರ್ ವಿಚಾರದಲ್ಲಿ ಕೇಂದ್ರದಿಂದ ಮಹತ್ವದ ನಿರ್ಧಾರ

ಖರೀದಿ ಲಭ್ಯವಿರುವ ಹೊಸ ಮಾಡೆಲ್‌ಗಳು.!
ಎಸ್ಎಂಎಲ್ ಇಸುಝು ಸಂಸ್ಥೆಯು ಜಿಎಸ್ ಸೀರಿಸ್‌ನಲ್ಲಿ ಸ್ಮಾರ್ಟ್ ಹೆಚ್‌ಡಿ 19, ಸರ್ತಾಜ್, ಸೂಪರ್, ಟ್ರಿಪ್ಪಲ್ ಸುಪ್ರೀಂ, ಪ್ರೇಸ್ಟಿಜ್, ಸರ್ತಾಜ್ ಹೆಚ್‌ಜಿ 71 ಮತ್ತು ಸಿಎನ್‌ಜಿ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಪ್ರತಿ ಮಾದರಿಯು ಬೇರೆ ಬೇರೆ ಬೆಲೆ ಪಟ್ಟಿಗಳನ್ನು ಪಡೆದುಕೊಂಡಿದೆ.

ವಾರಂಟಿಗಳು!
ಎಸ್ಎಂಎಲ್ ಇಸುಝು ಸಂಸ್ಥೆಯು ತನ್ನ ಉತ್ಪನ್ನಗಳ ಮೇಲೆ ಎರಡು ರೀತಿಯ ವಾರಂಟಿಗಳನ್ನು ಒದಗಿಸಲು ಒಪ್ಪಿಗೆ ಸೂಚಿಸಿದೆ. ಗ್ರಾಹಕರು ಹೊಸ ಟ್ರಕ್ ಎಂಜಿನ್ ಮತ್ತು ಗೇರ್‌ಬಾಕ್ಸ್ ಮೇಲೆ 3 ವರ್ಷದ ವಾರಂಟಿ ಅಥವಾ 3 ವರ್ಷಗಳ ಅನ್‌ಲಿಮಿಟೆಡ್ ಕಿಲೋ ಮೀಟರ್ ವಾರಂಟಿ ಪಡೆಯಬಹುದು.

ಇಲ್ಲವೇ, ವಾಹನದ ಸಂಪೂರ್ಣ ತಾಂತ್ರಿಕ ಸೌಲಭ್ಯಗಳ ಮೇಲೆ 2 ವರ್ಷದ ಅನ್‌ಲಿಮಿಟೆಡ್ ಕಿಲೋಮೀಟರ್ ವಾರಂಟಿ ದೊರೆಯಲಿದ್ದು, ವಾಹನಗಳಲ್ಲಿ ಅಳವಡಿಸಲಾಗಿರುವ ಸಾರಥಿ ಟೆಲಿ ಮ್ಯಾಟ್ರಿಕ್ ಸಲ್ಯೂಷನ್ ಸೌಲಭ್ಯವು ಹೊಸ ವಾಹನಗಳ ಮೇಲೆ 24x7ಮಾದರಿಯಲ್ಲಿ ನಿಗಾ ಇಡಲಿದೆ.

ವೆಹಿಕಲ್ ಟ್ರ್ಯಾಕಿಂಗ್ ಮೂಲಕ ವಾಹನ ಇರುವ ಜಾಗದಲ್ಲೇ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲಿರುವ ಸಾರಥಿ ತಂಡವು ಗ್ರಾಹಕರ ಪರ ಕಾರ್ಯನಿರ್ವಹಣೆ ಮಾಡಲಿದ್ದು, ಮಾಲೀಕರ ವಿಶ್ವಾಸ ಗಳಿಸಲು ಇದು ಸಾಕಷ್ಟು ಸಹಕಾರಿಯಾಗಲಿದೆ ಎನ್ನಬಹುದು.

ಸದ್ಯ ಎಸ್ಎಂಎಲ್ ಇಸುಝು ಸಂಸ್ಥೆಯು ಬೆಂಗಳೂರಿನಲ್ಲೇ ಮೊದಲ ಬಾರಿಗೆ ತನ್ನ ಹೊಸ ಟ್ರಕ್‌ಗಳನ್ನು ಬಿಡುಗಡೆಗೊಳಿಸಲಿದ್ದು, ದಕ್ಷಿಣ ಭಾರತದ ಮಾರುಕಟ್ಟೆಗಳಲ್ಲಿ ಹೆಚ್ಚಿನ ನೀರಿಕ್ಷೆ ಇಟ್ಟುಕೊಂಡಿದೆ. ಇದಕ್ಕಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಇಸುಝು ಸಂಸ್ಥೆಯು ಹೊಸ ಮಾರಾಟ ಮಳಿಗೆಗಳಿಗೂ ಚಾಲನೆ ನೀಡುತ್ತಿದೆ.


Click it and Unblock the Notifications








