ಎಕ್ಸ್‌ಕ್ಲೂಸಿವ್: ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ 7 ಸೀಟರ್ ಹ್ಯಾರಿಯರ್ ಕಾರು

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆ ಟಾಟಾ ಮುಂದಿನ ಜನವರಿ ವೇಳೆಗೆ ಹೊಸ ಮಾದರಿಯ 5 ಸೀಟರ್ ಹ್ಯಾರಿಯರ್ ಕಾರನ್ನು ಪರಿಚಯಿಸಲು ಸಿದ್ದವಾಗುತ್ತಿದ್ದು, ಈ ಮಧ್ಯೆ ಮತ್ತೊಂದು ವಿನೂತನ ಮಾದರಿಯ 7 ಸೀಟರ್ ಹ್ಯಾರಿಯರ್ ಕಾರನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಎಕ್ಸ್‌ಕ್ಲೂಸಿವ್: ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ 7 ಸೀಟರ್ ಹ್ಯಾರಿಯರ್ ಕಾರು

ಸದ್ಯ ಹ್ಯಾರಿಯರ್ ಪರಿಚಯಿಸಲು ಸಿದ್ದವಾಗುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಹೆಚ್7ಎಕ್ಸ್ ಕೋಡ್ ಆಧಾರದಲ್ಲಿ 7 ಸೀಟರ್ ಹ್ಯಾರಿಯರ್ ಮಾದರಿಯೊಂದನ್ನು ಅಭಿವೃದ್ಧಿಗೊಳಿಸುತ್ತಿದ್ದು, ಇದೀಗ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ನಮ್ಮ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಎಕ್ಸ್‌ಕ್ಲೂಸಿವ್: ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ 7 ಸೀಟರ್ ಹ್ಯಾರಿಯರ್ ಕಾರು

ಈ ಹಿಂದೆ ಫೆಬ್ರುವರಿಯಲ್ಲಿ ನಡೆದ 2018ರ ಆಟೋ ಎಕ್ಸ್‌ಪೋದಲ್ಲಿ 5 ಸೀಟರ್ ಸಾಮರ್ಥ್ಯದ ಹ್ಯಾರಿಯರ್ ಎಸ್‌ಯುವಿಯನ್ನು ಪ್ರದರ್ಶನ ಮಾಡಿದ್ದ ಟಾಟಾ ಸಂಸ್ಥೆಯು, ಇದೀಗ ಅದೇ ಮಾದರಿಯಲ್ಲಿ ಹೆಚ್7ಎಕ್ಸ್ ಎನ್ನುವ 7 ಸೀಟರ್ ಮಾದರಿಯನ್ನು ಸಹ ಬಿಡುಗಡೆಯ ಯೋಜನೆಯಲ್ಲಿದೆ.

ಎಕ್ಸ್‌ಕ್ಲೂಸಿವ್: ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ 7 ಸೀಟರ್ ಹ್ಯಾರಿಯರ್ ಕಾರು

ಹೆಚ್7ಎಕ್ಸ್ ಮಾದರಿಯು 6 ಪ್ಲಸ್ 1 ಮಾದರಿಯ ಎಸ್‌ಯುವಿಯಾಗಿದ್ದು, 2018ರ ಆಟೋ ಎಕ್ಸ್‌ಪೋ ಪ್ರದರ್ಶನವಾದ 5 ಸೀಟರ್ ಹ್ಯಾರಿಯರ್ ಮಾದರಿಯಲ್ಲೇ ಒಳ ಮತ್ತು ಹೊರ ವಿನ್ಯಾಸಗಳನ್ನು ಪಡೆದುಕೊಂಡಿದೆ.

ಎಕ್ಸ್‌ಕ್ಲೂಸಿವ್: ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ 7 ಸೀಟರ್ ಹ್ಯಾರಿಯರ್ ಕಾರು

ಇನ್ನು ಹೆಚ್7ಎಕ್ಸ್ ಎಸ್‍ಯುವಿ ಕಾರುಗಳು ಇಂಪ್ಯಾಕ್ಟ್ 2.0 ಡಿಸೈನ್ ಅಡಿ ನಿರ್ಮಾಣವಾಗಿದ್ದು, ಇನ್ನು ಕಾರಿನ ಉತ್ಪಾದನಾ ಆವೃತ್ತಿಯು ಫ್ಲೇರ್ಡ್ ಆರ್ಚೆಸ್, ಮುಂಭಾಗದ ಬಂಪರ್‍‍ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್‍‍ಗಳಿಂದ ಸಜ್ಜುಗೊಂಡಿದೆ.

ಎಕ್ಸ್‌ಕ್ಲೂಸಿವ್: ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ 7 ಸೀಟರ್ ಹ್ಯಾರಿಯರ್ ಕಾರು

ಕಾರಿನ ವಿನ್ಯಾಸಗಳು

ಹೆಚ್‍7ಎಕ್ಸ್ ಎಸ್‍ಯುವಿ ಕಾರುಗಳು ಐಷಾರಾಮಿ ಒಳವಿನ್ಯಾಸದೊಂದಿಗೆ ವಿಶಾಲವಾದ ಕ್ಯಾಬಿನ್ ಸ್ಪೆಸ್ ಹೊಂದಿದ್ದು, ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಪ್ರೀಮಿಯಂ ಆಡಿಯೊ ಸಿಸ್ಟಂ ಹಾಗೂ ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ.

ಎಕ್ಸ್‌ಕ್ಲೂಸಿವ್: ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ 7 ಸೀಟರ್ ಹ್ಯಾರಿಯರ್ ಕಾರು

ಟಾಟಾ ಹೆಚ್7ಎಕ್ಸ್ ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ್ದು, ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡ ಈ ಪ್ಲಾಟ್‍‍ಫಾರ್ಮ್ ಅನ್ನು ಕಾಣಬಹುದಾಗಿದೆ.

ಎಕ್ಸ್‌ಕ್ಲೂಸಿವ್: ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ 7 ಸೀಟರ್ ಹ್ಯಾರಿಯರ್ ಕಾರು

ಎಂಜಿನ್ ಸಾಮರ್ಥ್ಯ

ಟಾಟಾ ಹೆಚ್7ಎಕ್ಸ್ ಕಾರುಗಳು 2-ಲೀಟರ್ ಟರ್ಬೋ ಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 190-ಬಿಹೆಚ್‍ಪಿ ಹಾಗೂ 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ಟಿಯನ್ನು ಪಡೆದಿದ್ದು, ಜೆಡ್ಎಫ್ 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಿರಬಹುದು ಎನ್ನಲಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಎಕ್ಸ್‌ಕ್ಲೂಸಿವ್: ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ 7 ಸೀಟರ್ ಹ್ಯಾರಿಯರ್ ಕಾರು

ಇದಲ್ಲದೆ ಟಾಟಾ ಹೆಚ್7ಎಕ್ಸ್ ಕಾರುಗಳು ಐಷಾರಾಮಿ ಕಾರುಗಳ ಮಾದರಿಯಲ್ಲೇ ಆಲ್ ವೀಲ್ ಡ್ರೈ ಸಿಸ್ಟಂ ಮತ್ತು ವಿವಿಧ ಡ್ರೈವಿಂಗ್ ಮೋಡ್‍‍ಗಳನ್ನು ಪಡೆದಿರಲಿದ್ದು, ಆಫ್ ರೋಡಿಂಗ್‌ನಲ್ಲೂ ಸರಾಗ ಚಾಲನೆಗಾಗಿ ಆಫ್ ರೋಡ್ ಡ್ರೈವಿಂಗ್ ಮೋಡ್ ಅನ್ನು ಸಹ ಪಡೆದಿರಲಿದೆ.

ಎಕ್ಸ್‌ಕ್ಲೂಸಿವ್: ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ 7 ಸೀಟರ್ ಹ್ಯಾರಿಯರ್ ಕಾರು

ಹೀಗಾಗಿ ಪ್ರಸ್ತುತ ಈ ಕಾರನ್ನು ಭಾರತೀಯ ರಸ್ತೆಗಳಲ್ಲಿ ಪರಿಶೀಲಿಸಲಾಗುತ್ತಿದ್ದು, ಇದೇ ಹಣಕಾಸು ವರ್ಷದ ಅವಧಿಯೊಳಗೆ ಬಿಡುಗಡೆಗೊಳ್ಳಲಿರುವ ಹೊಸ ಕಾರಿನ ಬೆಲೆಯ ಕುರಿತು ನಿಖರ ಮಾಹಿತಿ ಇಲ್ಲವಾದರೂ ಎಕ್ಸ್‌ಶೋರೂಂ ಪ್ರಕಾರ ರೂ. 18 ಲಕ್ಷದಿಂದ ರೂ. 21 ಲಕ್ಷದ ವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.

MOST READ: 7 ಸಾವಿರ ಕೋಟಿ ವೆಚ್ಚದಲ್ಲಿ ತಲೆಎತ್ತಿದ ಕಿಯಾ ಮೋಟಾರ್ಸ್ ಮೊದಲ ಕಾರು ಉತ್ಪಾದನಾ ಘಟಕ

ಎಕ್ಸ್‌ಕ್ಲೂಸಿವ್: ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ 7 ಸೀಟರ್ ಹ್ಯಾರಿಯರ್ ಕಾರು

ಇದರಲ್ಲದೇ ಟಾಟಾ ಸಂಸ್ಥೆಯು ಹೆಚ್7ಎಕ್ಸ್ ಎಸ್‍ಯುವಿ ಕಾರುಗಳು ಮೂಲಕ ಗ್ರಾಹಕರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕುತ್ತಿದ್ದು, ಬಿಡುಗಡೆಗೊಂಡ ನಂತರ ಈ ಕಾರು ಫಾರ್ಚೂನರ್, ಎಂಡೀವರ್ ಮತ್ತು ಹೋಂಡಾ ಸಿಆರ್‌ವಿ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ ಎನ್ನಲಾಗಿದೆ.

Most Read Articles

Kannada
English summary
Tata Harrier 7-Seater (H7X) Spotted Testing Again — More Details Revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X