ಟಾಟಾ ಮೋಟಾರ್ಸ್ ಹೆಚ್‍5ಎಕ್ಸ್ ಮತ್ತು 45ಎಕ್ಸ್ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಟಾಟಾ ಮೋಟಾರ್ಸ್ ಫೆಬ್ರವರಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ತಮ್ಮ ಹೊಸ ಹೆಚ್‍5ಎಕ್ಸ್ ಎಸ್‍‍ಯುವಿ ಮತ್ತು 45ಎಕ್ಸ್ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರಿನ ಪರಿಕಲ್ಪನೆಯನ್ನು ಪ್ರದರ್ಶಿಸಿತ್ತು.

By Rahul Ts

ಟಾಟಾ ಮೋಟಾರ್ಸ್ ಫೆಬ್ರವರಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ತಮ್ಮ ಹೊಸ ಹೆಚ್‍5ಎಕ್ಸ್ ಎಸ್‍‍ಯುವಿ ಮತ್ತು 45ಎಕ್ಸ್ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರಿನ ಪರಿಕಲ್ಪನೆಯನ್ನು ಪ್ರದರ್ಶಿಸಿತ್ತು. ಇದೀಗ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ದೊರೆತಿದ್ದು ಶೀಘ್ರದಲ್ಲೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎನ್ನಲಾಗಿದೆ.

ಟಾಟಾ ಮೋಟಾರ್ಸ್ ಹೆಚ್‍5ಎಕ್ಸ್ ಮತ್ತು 45ಎಕ್ಸ್ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಟಾಟಾ ಹೆಚ್‍5ಎಕ್ಸ್ ಎಸ್‍‍ಯುವಿ ಕಾರು ಮುಂದಿನ ವರ್ಷದ ಮೊದಲನೆಯ ತ್ರೈಮಾಸಿಕ ಅವದಿಯಲ್ಲಿ ಬಿಡುಗಡೆಗೊಳ್ಳಲಿದ್ದು, ಇನ್ನು 45ಎಕ್ಸ್ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರು ಮುಂದಿನ ವರ್ಷದ ಕೊನೆಯ ತ್ರೈಮಾಸಿಕ ಅವದಿಯಲ್ಲಿ ಬಿಡುಗಡೆಗೊಳ್ಳಲಿದೆ.

ಟಾಟಾ ಮೋಟಾರ್ಸ್ ಹೆಚ್‍5ಎಕ್ಸ್ ಮತ್ತು 45ಎಕ್ಸ್ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಬಿಡುಗಡೆಗೊಳ್ಳಲಿರುವ ಹೆಚ್‍5ಎಕ್ಸ್ ಎಸ್‍‍ಯುವಿ ಮತ್ತು 45ಎಕ್ಸ್ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರುಗಳು ಟಾಟಾ ಮೋಟಾರ್ಸ್‍‍ನ ಇಂಪ್ಯಾಕ್ಟ್ ಡಿಸೈನ್ 2.0 ಸಿದ್ದಾಂತ ಆಧರಿತ ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಸಂಸ್ಥೆಯು ಈ ಕಾರುಗಳನ್ನು ಗ್ರಾಹಕರಿಗೆ ಅನುಕೂಲವಾಗುವಂತೆ ನಿಗದಿಪಡಿಸಲಿದೆಯಂತೆ.

ಟಾಟಾ ಮೋಟಾರ್ಸ್ ಹೆಚ್‍5ಎಕ್ಸ್ ಮತ್ತು 45ಎಕ್ಸ್ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ, ನಾವು ಒಮೆಗಾ ಪ್ಲಾಟ್‍ಫಾರ್ಮ್ ಆಧಾರಿತ ಹೊಸ ಎಸ್ಯುವಿ H5X ಅನ್ನು ಪರಿಚಯಿಸುತ್ತೇವೆ. ಹಾಗೆಯೆ ಮುಂದಿನ ವರ್ಷದ ಕೊನೆಯ ತ್ರೈಮಾಸಿಕ ಅವದಿಯಲ್ಲಿ ಆಲ್ಫಾ ಪ್ಲಾಟ್‍‍ಫಾರ್ಮ್‍ನ ಆಧಾರಿತ ಹೊಸ 45ಎಕ್ಸ್ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರುಗಳನ್ನು ಪರಿಚಯಿಸಲಿದ್ದೇವೆ.

ಟಾಟಾ ಮೋಟಾರ್ಸ್ ಹೆಚ್‍5ಎಕ್ಸ್ ಮತ್ತು 45ಎಕ್ಸ್ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಜೊತೆಗೆ ಮುಂದಿನ ಮೂರು ವರ್ಷದಲ್ಲಿ ನಮ್ಮ ಸೆಡಾನ್ ಕಾರುಗಳನ್ನು ಮತ್ತಷ್ಟು ಅಭಿವೃದ್ದಿಗೊಳಿಸಿ 2021ರ ವೇಳೆಗೆ ಮಾರುಕಟ್ಟೆಯಲ್ಲಿ ಶೇಕಡ 90ರಷ್ಟು ಗ್ರಾಹಕರನ್ನು ಪಡೆಯುವ ಯೋಜನೆಯಲ್ಲಿದ್ದೇವೆ. ಎಂದು ಟಾಟಾ ಮೋಟಾರ್ಸ್‍‍ನ ಪ್ಯಾಸೆಂಜರ್ ವಾಹನಗಳ ವ್ಯಾಪಾರ ಘಟಕದ ಮುಖ್ಯಸ್ಥರಾದ ಮಾಯಾಂಕ್ ಪರೀಕ್ ಹೇಳಿಕೊಂಡಿದ್ದಾರೆ.

ಟಾಟಾ ಮೋಟಾರ್ಸ್ ಹೆಚ್‍5ಎಕ್ಸ್ ಮತ್ತು 45ಎಕ್ಸ್ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಬಿಡಗಡೆಗೆ ಸಜ್ಜುಗೊಂಡಿರುವ ಹೆಚ್‍5ಎಕ್ಸ್ ಎಸ್‍ಯುವಿ ಫೇಸ್‍ಲಿಫ್ಟ್ ಕಾರು ಮೊದಲ ಇಂಪ್ಯಾಕ್ಟ್ 2.0 ವಿನ್ಯಾಸ ತತ್ವಶಾಸ್ತ್ರವನ್ನು ಪಡೆದ ಕಾರಾಗಿದ್ದು, ಇನ್ನು ಕಾರಿನ ಉತ್ಪಾದನ ಆವೃತ್ತಿಯು ಫ್ಲೇರ್ಡ್ ಆರ್ಚೆಸ್, ಮುಂಭಾಗದ ಬಂಪರ್‍‍ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್‍‍ಗಳಿಂದ ಸಜ್ಜುಗೊಂಡಿದೆ.

ಟಾಟಾ ಮೋಟಾರ್ಸ್ ಹೆಚ್‍5ಎಕ್ಸ್ ಮತ್ತು 45ಎಕ್ಸ್ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಕಾರಿನ ಒಳ ಹಾಗು ಹೊರ ವಿನ್ಯಾಸ

ಹೆಚ್‍ಎಕ್ಸ್ ಎಸ್‍ಯುವಿ ಫೇಸ್‍ಲಿಫ್ಟ್ ಕಾರು ಐಷಾರಾಮಿ ಒಳವಿನ್ಯಾಸ ವಿಷಾಲವಾದ ಜಾಗ ಪಡೆದಿದ್ದು, ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪ್ರೀಮಿಯಂ ಆಡಿಯೊ ಸಿಸ್ಟಂ ಹಾಗು ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ.

ಟಾಟಾ ಮೋಟಾರ್ಸ್ ಹೆಚ್‍5ಎಕ್ಸ್ ಮತ್ತು 45ಎಕ್ಸ್ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಟಾಟಾ ಹೆಚ್5ಎಕ್ಸ್ ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ್ದು, ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡ ಈ ಪ್ಲಾಟ್‍‍ಫಾರ್ಮ್ ಅನ್ನು ಕಾಣಬಹುದಾಗಿದೆ.

ಟಾಟಾ ಮೋಟಾರ್ಸ್ ಹೆಚ್‍5ಎಕ್ಸ್ ಮತ್ತು 45ಎಕ್ಸ್ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಎಂಜಿನ್ ಸಾಮರ್ಥ್ಯ

ಹೊಸ ಫೇಸ್‍ಲಿಫ್ಟ್ ಟಾಟಾ ಹೆಚ್5ಎಕ್ಸ್ ಕಾರು ತನ್ನ 2 ಲೀಟರ್ ಮಲ್ಟಿಜೆಟ್ 2 ಡೀಸೆಲ್ ಎಂಜಿನ್ ಸಹಾಯದಿಂದ 140ಬಿಹೆಚ್‍ಪಿ ಹಾಗು 170ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ಟಿಯನ್ನು ಪಡೆದಿದ್ದು, ಜೆಡ್ಎಫ್ ಮೂಲದ 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ ಎನ್ನಲಾಗಿದೆ.

ಟಾಟಾ ಮೋಟಾರ್ಸ್ ಹೆಚ್‍5ಎಕ್ಸ್ ಮತ್ತು 45ಎಕ್ಸ್ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಇನ್ನು ಬಿಡುಗಡೆಗೊಳ್ಳಲಿರುವ 45ಎಕ್ಸ್ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರು ಬ್ಯಾನೆಟ್ ಹಾಗೂ ಹಿಂಭಾಗದ ವಿಂಡೋಗಳು ಕೂಡಾ ವಿಭಿನ್ನ ರಚನೆ ಹೊಂದಿದ್ದು, ಸ್ಲಿಕ್ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್ಸ್, ಫಾಗ್ ಲ್ಯಾಂಪ್ ಮತ್ತು ವಿನೂತನ ಗ್ರೀಲ್‌ಗಳು ಈ ಕಾರಿಗೆ ಮತ್ತಷ್ಟು ಮೆರಗು ತಂದಿವೆ.

ಟಾಟಾ ಮೋಟಾರ್ಸ್ ಹೆಚ್‍5ಎಕ್ಸ್ ಮತ್ತು 45ಎಕ್ಸ್ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಆದರೇ, ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಹೊಸ ಕಾರುಗಳನ್ನು ಹೊರತರುವ ಯೋಜನೆ ಹೊಂದಿದೆ.

ಟಾಟಾ ಮೋಟಾರ್ಸ್ ಹೆಚ್‍5ಎಕ್ಸ್ ಮತ್ತು 45ಎಕ್ಸ್ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಟಾಟಾ ಮೋಟಾರ್ಸ್‍ನ ಹೆಚ್‍5ಎಕ್ಸ್ ಕಾರಿನ ಬೆಲೆಯ ಕುರಿತಾಗಿ ಮಾಹಿತಿ ದೊರೆತಿಲ್ಲವಾದರೂ ಸುಮಾರು ರೂ.16 ಲಕ್ಷದಿಂದ ರೂ.18 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗುತ್ತಿದದ್ದು, 45ಎಕ್ಸ್ ಪ್ರೀಮಿಯಂ ಹ್ಯಾಚ್‍‍ಯಾಕ್ ಕಾರು 9 ರಿಂದ 12 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..

ಬೈಕ್‌ಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಳ ಮಾಡಿದ ಹೀರೋ ಮೊಟೊಕಾರ್ಪ್

ನೆಕ್ಸ್ಟ್ ಜನರೇಷನ್ ಆಲ್ಟ್ರಾ ರೇಂಜ್ ಟ್ರಕ್‌ಗಳನ್ನು ಬಿಡುಗಡೆ ಮಾಡಿದ ಟಾಟಾ

ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

Most Read Articles

Kannada
Read more on tata motors suv
English summary
Tata Motors’ H5X SUV & 45X premium hatchback: Launch timelines revealed.
Story first published: Friday, April 27, 2018, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X