TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಬೈಕ್‌ಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಳ ಮಾಡಿದ ಹೀರೋ ಮೊಟೊಕಾರ್ಪ್
ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಹೀರೋ ಮೊಟೊಕಾರ್ಪ್ ಕಳೆದ ಜನವರಿಯಲ್ಲಿ ಬೈಕ್ ಬೆಲೆಯನ್ನು ಹೆಚ್ಚಳ ಮಾಡಿತ್ತು. ಬೆಲೆ ಹೆಚ್ಚಳ ಮಾಡಿದ ಮೂರು ತಿಂಗಳ ಅಂತರದಲ್ಲಿ ಮತ್ತೊಮ್ಮೆ ಬೈಕ್ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಣೆ ಮಾಡಿದೆ.
ಇನ್‌ಪುಟ್ ಮತ್ತು ಸರಕು ವೆಚ್ಚದ ಕಾರಣದಿಂದಾಗಿ ತನ್ನ ದ್ವಿಚಕ್ರ ವಾಹನಗಳ ಬೆಲೆಗಳನ್ನು ಹೆಚ್ಚಿಸಲು ಹೀರೋ ಮೊಟೊಕಾರ್ಪ್ ಸಂಸ್ಥೆಯು ನಿರ್ಧರಿಸಿದೆ ಎನ್ನಲಾಗಿದ್ದು, ಎಲ್ಲಾ ಮಾದರಿಗಳ ಬೆಲೆಗಳನ್ನು ಇಂದಿನಿಂದಲೇ ಎಕ್ಸ್‌ಶೋರಂ ಪ್ರಕಾರ ರೂ.625 ಬೆಲೆ ಹೆಚ್ಚಳ ಮಾಡಿದೆ.
ಹೀಗಾಗಿ ಜನವರಿಯಲ್ಲಿ ಹೆಚ್ಚಳವಾದ ರೂ.400 ಮತ್ತು ಇದೀಗ ಹೆಚ್ಚಳ ಮಾಡಲಾದ ರೂ.625 ಸೇರಿ 1 ಸಾವಿರ ಏರಿಕೆಯಾಗಿದ್ದು, ಇದು ವಿವಿಧ ನಗರಗಳಲ್ಲಿನ ಅಧಿಕೃತ ಮಾರಾಟಗಾರರನ್ನು ಆಧರಿಸಿ ಇನ್ನಷ್ಟು ಹೆಚ್ಚಳವಾಗಬಹುದು.
ಪ್ರಸ್ತುತ ಹೀರೋ ಮೊಟೊಕಾರ್ಪ್ ಸಂಸ್ಥೆಯು, ಪ್ರವೇಶ ಮಟ್ಟದ ಹೆಚ್ಎಫ್ ಡಿಲಕ್ಸ್, ಪ್ಲೆಷರ್ ಮತ್ತು ಉತ್ಕೃಷ್ಟ ಮಾದರಿಯ ಎಕ್ಸ್‌ಟ್ರಿಮ್ 200ಆರ್ ವರೆಗೆ ಭಾರತದ ಹಲವಾರು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.
ಹೀರೋ ಮೊಟೊಕಾರ್ಪ್ ತನ್ನ ಹೊಸ ಶ್ರೇಣಿಯ ಪ್ಯಾಶನ್ ಪ್ರೊ, ಪ್ಯಾಶನ್ ಎಕ್ಸ್‌ಪ್ರೊ ಮತ್ತು ಸೂಪರ್ ಸ್ಪ್ಲೆಂಡರ್‌ನಂತಹ ಪ್ರಯಾಣಿಕ ಮೋಟಾರ್ ಸೈಕಲ್‌ಗಳನ್ನು ಸಹ ಮಾರಾಟ ಮಾಡುತ್ತಿದ್ದು, ಎಲ್ಲಾ ಮೂರು ಪ್ರಯಾಣಿಕ ದ್ವಿಚಕ್ರ ವಾಹನಗಳೂ ಕೂಡಾ ಅತ್ಯಾಕರ್ಷಕ ವೈಶಿಷ್ಟ್ಯಗಳು ಮತ್ತು ವಿನ್ಯಾಸ ಅಂಶಗಳನ್ನು ಪಡೆದುಕೊಂಡಿವೆ.
ಮೇಲೆ ಹೇಳಿದ ಹೀರೊ ಮೊಟೊಕಾರ್ಪ್ ಕಂಪನಿಯ ಹೊಸ ಪ್ಯಾಶನ್ ಪ್ರೊ, ಎಕ್ಸ್‌ಪ್ರೊ ಮತ್ತು ಸೂಪರ್ ಸ್ಪ್ಲೆಂಡರ್ ವಾಹನಗಳ ಹೊಸ ಆವೃತಿಗಳನ್ನು ಸಹ ಬಿಡುಗಡೆ ಮಾಡಿದ್ದು, ಬೆಲೆ ಹೆಚ್ಚಳದಿಂದ ಬೈಕ್ ಮಾರಾಟ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಎಂಬುವುದೇ ಸದ್ಯದ ಪ್ರಶ್ನೆ.
ಆದರೂ, ಕಮ್ಯುಟರ್ ಬೈಕ್ ವಿಭಾಗದದಲ್ಲಿ ತನ್ನದೇ ಜನಪ್ರಿಯತೆ ಹೊಂದಿರುವ ಹೀರೋ ಸಂಸ್ಥೆಯು ಬೆಲೆ ಹೆಚ್ಚಳದಿಂದ ಯಾವುದೇ ಪರಿಣಾಮ ಬೀರದು ಎಂಬ ವಿಶ್ವಾಸದಲ್ಲಿದ್ದು, ಹೀರೋ ಮಾದರಿಯಲ್ಲೇ ಇತರೆ ಬೈಕ್ ಉತ್ಪಾದನಾ ಸಂಸ್ಥೆಗಳು ಸಹ ಬೆಲೆ ಏರಿಕೆ ಮಾಡಲಿವೆ ಎನ್ನಲಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಮಗು ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಕಾರಿನಲ್ಲಿದ್ದ 7 ಮಂದಿ ದುರ್ಮರಣ....
ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...
ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್ ವಿಶೇಷತೆ ಏನು?
ಮೇ 18ಕ್ಕೆ ಬಿಡುಗಡೆಯಾಗಲಿರುವ ಟೊಯೊಟಾ ಯಾರಿಸ್ ಬೆಲೆ ಎಷ್ಟು ಗೊತ್ತಾ?
ಗ್ರಾಹಕನ ಕೈ ಸೇರುವ ಮುನ್ನವೇ ಗ್ಯಾರೇಜ್ ಸೇರಿದ ಮಾರುತಿ ಸುಜುಕಿ ಹೊಸ ಡಿಜೈರ್