ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...

ಇತ್ತೀಚೆಗೆ ನಗರ ಪ್ರದೇಶಗಳಲ್ಲಿನ ಯುವ ಬೈಕ್ ಸವಾರರು ಬೈಕ್ ಮಾಡಿಫೈ ಮೇಲೆ ಹೆಚ್ಚಿನ ವ್ಯಾಮೋಹ ಹೊಂದುತ್ತಿದ್ದು, ಇದು ಸಾರ್ವಜನಿಕ ಜೀವನಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.

By Praveen Sannamani

ಇತ್ತೀಚೆಗೆ ನಗರ ಪ್ರದೇಶಗಳಲ್ಲಿನ ಯುವ ಬೈಕ್ ಸವಾರರು ಬೈಕ್ ಮಾಡಿಫೈ ಮೇಲೆ ಹೆಚ್ಚಿನ ವ್ಯಾಮೋಹ ಹೊಂದುತ್ತಿದ್ದು, ಇದು ಸಾರ್ವಜನಿಕ ಜೀವನಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಇದರಿಂದಾಗಿ ಕಾನೂನು ಬಾಹಿರ ಬೈಕ್ ಮಾಡಿಫೈಗಳ ಮೇಲೆ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...

ನಿಮಗೆಲ್ಲಾ ಗೊತ್ತಿರುವ ಹಾಗೆ ಈ ಹಿಂದೆ ಹಳ್ಳಿಗಳ ಕಡೆಗೆಲ್ಲಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಬಂದ್ರೆ ಸಾಕು 1 ಕಿ.ಮಿ ದೂರವಿರುವಾಗಲೇ ಬೈಕ್ ಬರುತ್ತಿದೆ ಎಂಬುದು ಗೊತ್ತಾಗುತ್ತಿತ್ತು. ಆದ್ರೆ ಕಾಲ ಬದಲಾದಂತೆ ಬೈಕ್‌ಗಳ ಶಬ್ದ ಮಾಲಿನ್ಯಕ್ಕೆ ಬ್ರೇಕ್ ಹಾಕಲಾಗುತ್ತಿದ್ದು, ಎಕ್ಸಾಸ್ಟ್ ವೈಶಿಷ್ಟ್ಯತೆಗಳಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ.

ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...

ಹೀಗಿದ್ದರೂ ನಗರ ಪ್ರದೇಶಗಳಲ್ಲಿನ ಯುವ ಬೈಕ್ ಸವಾರರು ಬೈಕ್ ಮಾಡಿಫೈಗೆ ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೈಕ್ ಮೂಲವನ್ನೇ ಬದಲಿಸುತ್ತಿರುವ ಟ್ರೆಂಡ್ ಆಗುವುದರ ಜೊತೆ ಜೊತೆಗೆ ಇತರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...

ಇದರಿಂದ ಸಾರ್ವಜನಿಕರು ಮತ್ತು ಮಾಡಿಫೈ ಬೈಕ್ ಸವಾರರ ನಡುವೆ ಹಲವು ಸಂದರ್ಭಗಳಲ್ಲಿ ವಾಗ್ವಾದಕ್ಕೆ ಕಾರಣವಾಗುತ್ತಿದ್ದು, ಮಾಡಿಫೈ ಬೈಕ್ ಸವಾರರ ವಿರುದ್ಧ ಪ್ರಕರಣಗಳನ್ನು ಕೂಡಾ ದಾಖಲಿಸುತ್ತಿದ್ದಾರೆ.

ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...

ಇಷ್ಟು ದಿನಗಳ ಕಾಲ ನಿಯಮ ಉಲ್ಲಂಘಿಸಿ ಶಬ್ದ ಮಾಡುತ್ತಿದ್ದ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಎಕ್ಸಾಸ್ಟ್‌ಗಳನ್ನು ಸ್ಪಾಟ್‌ನಲ್ಲೇ ಕಿತ್ತುಹಾಕುತ್ತಿದ್ದ ಪೊಲೀಸರು ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸಾರ್ವಜನಿಕರಿಗೆ ಕಿರಿಕಿರಿ ಮಾಡುವ ಆರ್‌ಇ ಬೈಕ್ ಸವಾರರಿಗೆ ದಂಡ ವಿಧಿಸುವುದಲ್ಲದೇ ಕೇಸ್ ದಾಖಲಿಸಿ ಜೈಲಿಗೆ ಅಟ್ಟುತ್ತಿದ್ದಾರೆ.

ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...

ಹೌದು, ದೆಹಲಿ ಮತ್ತು ಗುರುಗ್ರಾಮ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಸವಾರರಿಂದ ಸಾರ್ವಜನಿಕವಾಗಿ ಭಾರೀ ಕಿರಿಕಿರಿ ಉಂಟಾಗುತ್ತಿದ್ದು, ನಿಯಮ ಉಲ್ಲಂಘಿಸಿ ಶಬ್ದ ಮಾಡುತ್ತಿದ್ದ ಮೂವರು ಯುವಕರನ್ನು ಗುರ್‌ಗ್ರಾಮ್ ಪೊಲೀಸರು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...

ಪ್ರತ್ಯೇಕ ಪ್ರಕರಣಗಳಲ್ಲಿ ಮೆವಾತ್, ಗಜೇಂದ್ರ ಮತ್ತು ಅರುಣ್ ಎಂಬಾತನನ್ನು ಬಂಧಿಸಿರುವ ಗುರ್‌ಗ್ರಾಮ್ ಪೊಲೀಸರು ಐಪಿಸಿ ಸೆಕ್ಷನ್ 160 ಅಡಿ ಕೇಸ್ ದಾಖಲಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಇದರಲ್ಲಿ ಅರುಣ್ ಎಂಬುವನಿಗೆ ಮಾತ್ರ ಷರುತ್ತು ಬದ್ಧ ಜಾಮೀನು ನೀಡಲಾಗಿದೆ.

ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...

ಈ ಬಗ್ಗೆ ಮಾತನಾಡಿರುವ ಟ್ರಾಫಿಕ್ ವಿಭಾಗದ ಡಿಸಿಪಿ ದೀಪಕ್ ಗಹ್ಲಾವತ್, ನಿಯಮ ಉಲ್ಲಂಘಿಸಿ ಮಾಡಿಫೈ ಎಕ್ಸಾಸ್ಟ್ ಅಳಡಿಕೆಯಿಂದಾಗಿ ಸಾರ್ವಜನಿಕವಾಗಿ ಸಾಕಷ್ಟು ತೊಂದರೆಯಾಗುತ್ತಿದ್ದು, ಈ ಹಿನ್ನೆಲೆ ರಾಯಲ್ ಎನ್‌ಫೀಲ್ಡ್ ಮತ್ತು ಇತರೆ ಬೈಕ್ ಸವಾರರ ವಿರುದ್ಧ ವಿಶೇಷ ಕಾರ್ಯಚರಣೆ ಆರಂಭಿಸಿದ್ದೇವೆ ಎಂದಿದ್ದಾರೆ.

ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...

ಜೊತೆಗೆ ಪ್ರಮುಖ ರಸ್ತೆಗಳಲ್ಲಿ ತಪಾಸಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಪೊಲೀಸರು ಸ್ಪಾಟ್‌ನಲ್ಲೇ ಬೈಕ್‌ನ ಎಕ್ಸಾಸ್ಟ್ ಕಿತ್ತುಹಾಕುವುದಲ್ಲದೇ ಬೈಕ್ ಸೀಸ್ ಕೂಡಾ ಮಾಡುತ್ತಿದ್ದಾರೆ. ಈಗಾಗಲೇ ಇದೇ ವಿಚಾರಕ್ಕೆ ಸುಮಾರು 150ಕ್ಕೂ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.

ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...

ಒಟ್ಟಿನಲ್ಲಿ ಕಾನೂನು ಬಾಹಿರವಾಗಿ ಮಾಡಿಫೈ ಮಾಡಿಸುವುದಲ್ಲದೇ ಸಾರ್ವಜನಿಕರಿಗೂ ಕಿರಿಕಿರಿ ಉಂಟು ಮಾಡುತ್ತಿರುವ ಮಾಡಿಫೈ ಬೈಕ್ ಪ್ರಿಯರಿಗೆ ಚಳಿ ಬಿಡಿಸುತ್ತಿರುವ ಪೊಲೀಸರ ಕ್ರಮ ಸ್ವಾಗತಾರ್ಹವಾಗಿದ್ದು, ಕಾನೂನು ಬಾಹಿರವಾಗಿ ಮಾಡಿಫೈ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...

ಇನ್ನು ನಮ್ಮ ಬೆಂಗಳೂರಿನಲ್ಲೂ ಸಹ ಕೆಟ್ಟದಾಗಿ ಸೌಂಡ್ ಮಾಡುವ ಮಾಡಿಫೈ ಬೈಕ್‌ಗಳ ವಿರುದ್ಧ ವಿಶೇಷ ಕಾರ್ಯಚರಣೆ ಆರಂಭಿಸಲಾಗಿದ್ದು, ಇದುವರೆಗೆ 500ಕ್ಕೂ ಹೆಚ್ಚು ರಾಯಲ್ ಎನ್‌ಫೀಲ್ಡ್ ಬೈಕ್‌‌ಗಳ ಎಕ್ಸಾಸ್ಟ್‌ಗಳನ್ನು ಕಿತ್ತು ಹಾಕಿದ್ದಲೇ ಭಾರೀ ಮೊತ್ತದ ದಂಡ ವಸೂಲಿ ಮಾಡಲಾಗುತ್ತಿದೆ.

ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...

ಒಂದು ವೇಳೆ ನೀವು ಕೂಡಾ ರಾಯಲ್ ಬೈಕ್ ಅಥವಾ ಇತರೆ ಸೂಪರ್ ಬೈಕ್‌ಗಳನ್ನು ಹೊಂದಿದ್ದರೆ ಕಾನೂನು ಬಾಹಿರ ಬೈಕ್ ಮಾಡಿಫೈ ಮಾಡಿಸುವ ಮತ್ತೊಮ್ಮೆ ಯೋಚಿಸಿ. ಇಲ್ಲವಾದ್ರೆ ಭಾರೀ ಪ್ರಮಾಣದ ದಂಡ ಬೀಳುವುದಲ್ಲದೇ ಬೈಕ್ ಕೂಡಾ ಸೀಸ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಮಗು ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಕಾರಿನಲ್ಲಿದ್ದ 7 ಮಂದಿ ದುರ್ಮರಣ....

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ? ಇದು ನಿಜವೇ?

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಕಾರುಗಳಿಗೆ ಸದ್ಯದಲ್ಲೇ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಕಡ್ಡಾಯವಂತೆ..!!

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

Most Read Articles

Kannada
Read more on traffic rules police
English summary
Bullet riders arrested over patakha sounds.
Story first published: Tuesday, April 24, 2018, 13:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X