ಕಾರುಗಳಿಗೆ ಸದ್ಯದಲ್ಲೇ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಕಡ್ಡಾಯವಂತೆ..!!
ನಾಲ್ಕು ಚಕ್ರದ ವಾಹನಗಳ ಸುರಕ್ಷೆತೆಗಾಗಿ ಕೆಲವು ಕಡ್ಡಾಯ ಸುರಕ್ಷಾ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರವು ಸದ್ಯದಲ್ಲೇ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಮಾದರಿಯನ್ನು ಕಡ್ಡಾಯ ಮಾಡಲು ಮುಂದಾಗಿದೆ.
ನಾಲ್ಕು ಚಕ್ರದ ವಾಹನಗಳ ಸುರಕ್ಷೆತೆಗಾಗಿ ಕೆಲವು ಕಡ್ಡಾಯ ಸುರಕ್ಷಾ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರವು ಸದ್ಯದಲ್ಲೇ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಮಾದರಿಯನ್ನು ಕಡ್ಡಾಯ ಮಾಡಲು ಮುಂದಾಗಿದೆ.

ಸುಮಾರು ಒಂದು ದಶಕ ಹಿಂದೆಯೇ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳನ್ನು ಜಾರಿ ತಂದಿದ್ದರು ಇದುವರೆಗೆ ಹಲವಾರು ರಾಜ್ಯಗಳಲ್ಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್‌ಗಳು ಕಡ್ಡಾಯವಾಗಿಲ್ಲ. ಹೀಗಾಗಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು ನಾಲ್ಕು ಚಕ್ರದ ವಾಹನಗಳಿಗೆ 2019ರಿಂದ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಕಡ್ಡಾಯವಾಗಿ ಹೊಂದುವಂತೆ ಆದೇಶ ಹೊರಡಿಸಲು ಮುಂದಾಗಿದೆ.

ಇದರ ಜೊತೆಗೆ ಕೇಂದ್ರ ಸರ್ಕಾರ ಹೊಸ ಸುರಕ್ಷಾ ನೀತಿ ಪ್ರಕಾರ, ಇನ್ಮುಂದೆ ಕಾರು ಮಾಲೀಕರು ಆಯ್ಕೆ ಮಾಡುತ್ತಿದ್ದ ನಂಬರ್ ಪ್ಲೇಟ್‌ಗಳನ್ನು ಕಾರು ಉತ್ಪಾದಕರೇ ಪೂರೈಕೆ ಮಾಡಬೇಕಿದ್ದು, ಈ ಮೂಲಕ ಎಂಟ್ರಿ ಲೆವೆಲ್ ಕಾರುಗಳ ಜೊತೆಗೆ ಹೈ ಎಂಡ್ ಕಾರುಗಳಲ್ಲೂ ಏಕರೂಪದ ನಂಬರ್ ಪ್ಲೇಟ್‌ಗಳನ್ನು ಜಾರಿ ಮಾಡುವ ಉದ್ದೇಶ ಹೊಂದಿದೆ.

ಹೀಗಾಗಿ ಕಾರು ಮಾಲೀಕರು ಇನ್ಮುಂದೆ ಕಾರು ಉತ್ಪಾದಕರು ಪೂರೈಸುವ ನಂಬರ್ ಪ್ಲೇಟ್‌ಗಳನ್ನೇ ಉಪಯೋಗಿಸಬೇಕಾದ ಅನಿವಾರ್ಯತೆ ಎದುರಾಗಲಿದ್ದು, ಹೊಸ ಕಾರು ಪೂರೈಕೆ ವೇಳೆಯೇ ಈ ನಂಬರ್ ಪ್ಲೇಟ್‌ಗಳನ್ನು ಸಹ ನೀಡಲಾಗುತ್ತದೆ.

ಇನ್ನೊಂದು ಪ್ರಮಖ ವಿಚಾರ ಅಂದ್ರೆ, ಕಾರು ಉತ್ಪಾದಕರೇ ಪೂರೈಸುವ ನಂಬರ್ ಪ್ಲೇಟ್‌ಗಳು ಹೊಸ ಸುರಕ್ಷಾ ನೀತಿ ಅಡಿಯಲ್ಲೇ ಅಭಿವೃದ್ಧಿಪಡಿಸಿದ ಉತ್ಪನ್ನವಾಗಿದ್ದು, ಇದು ಕೇಂದ್ರ ಸರ್ಕಾರದ ಸಾರಿಗೆ ಇಲಾಖೆಯಿಂದ ಪ್ರಮಾಣಿಕೃತಗೊಂಡಿರುತ್ತದೆ.

ಜೊತೆಗೆ ಕಾರುಗಳ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿಗೆ ಬ್ರೇಕ್ ಬೀಳಲಿದ್ದು, ಪೂರ್ಣ ಪ್ರಮಾಣದ ಸುರಕ್ಷೆ ಸಿಗಲಿದೆ ಎನ್ನುವುದು ಕೇಂದ್ರ ಸಾರಿಗೆ ಇಲಾಖೆಯ ಅಭಿಪ್ರಾಯವಾಗಿದೆ. ಜೊತೆಗೆ ಹೊಸ ಕಾರುಗಳಿಗಾಗಿ ನಂಬರ್ ಪ್ಲೇಟ್‌ಗಳನ್ನು ಖರೀದಿಸಲು ಹೆಚ್ಚುವರಿ ಬೆಲೆ ತೆರಬೇಕಾಗಿದ್ದ ಕಾರು ಮಾಲೀಕರಿಗೂ ಇದರಿಂದ ಕೊಂಚ ರಿಲೀಫ್ ಸಿಗಲಿದೆ.

ಇನ್ನು ಕಾರಿನ ಮೂಲ ಬೆಲೆಯಲ್ಲೇ ನಂಬರ್ ಪ್ಲೇಟ್ ಬೆಲೆಯು ಒಳಗೊಂಡಿರುತ್ತವೆ. ಹೀಗಾಗಿ ಕಾರು ಖರೀದಿಸುವ ಗ್ರಾಹಕರು ನಂಬರ್ ಪ್ಲೇಟ್‌ಗಾಗಿ ಹೆಚ್ಚುವರಿ ಹಣ ತೆರಬೇಕಾದ ಅವಶ್ಯಕತೆ ಇಲ್ಲಾ ಎನ್ನಬುಹುದು.

ಇನ್ನು ಕಾರಿನ ಮೂಲ ಬೆಲೆಯಲ್ಲೇ ನಂಬರ್ ಪ್ಲೇಟ್ ಬೆಲೆಯು ಒಳಗೊಂಡಿರುತ್ತವೆ. ಹೀಗಾಗಿ ಕಾರು ಖರೀದಿಸುವ ಗ್ರಾಹಕರು ನಂಬರ್ ಪ್ಲೇಟ್‌ಗಾಗಿ ಹೆಚ್ಚುವರಿ ಹಣ ತೆರಬೇಕಾದ ಅವಶ್ಯಕತೆ ಇಲ್ಲಾ ಎನ್ನಬುಹುದು.

ಈ ಬಗ್ಗೆ ಮಾತನಾಡಿರುವ ಸಚಿವ ನಿತಿನ್ ಗಡ್ಕರಿ, ಹೊಸ ತಂತ್ರಜ್ಞಾನದ ನಂಬರ್ ಪ್ಲೇಟ್ ನಿಂದಾಗಿ ಗ್ರಾಹಕರಿಗೆ ರಿಲೀಫ್ ಸಿಗುವುದಷ್ಟೇ ಅಲ್ಲದೇ ಎಲ್ಲಾ ರಾಜ್ಯಗಳಲ್ಲೂ ಒಂದೇ ಮಾದರಿಯ ನಂಬರ್ ಪ್ಲೇಟ್ ಗಳು ಲಭ್ಯವಾಗಲಿವೆ ಎಂದಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ನಂಬರ್ ಪ್ಲೇಟ್ ಒಂದಕ್ಕೆ ರೂ.900ರಿಂದ ರೂ.40 ಸಾವಿರ ತನಕ ಬೆಲೆಯಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಕಾರು ಮಾಲೀಕರನ್ನು ಸುಲಿಗೆ ಮಾಡುತ್ತಿರುವ ಏಜೆನ್ಸಿಗಳಿಗೂ ಇದರಿಂದ ಹೊಡೆತ ಬೀಳಲಿದೆ ಎನ್ನಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್ ವಿಶೇಷತೆ ಏನು?
ಮಗು ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಕಾರಿನಲ್ಲಿದ್ದ 7 ಮಂದಿ ದುರ್ಮರಣ....
ಬ್ಯಾಡ್ಜ್ ವಿಚಾರದಲ್ಲಿ ಕಾರು ಚಾಲಕರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ....
ತಾಂತ್ರಿಕ ದೋಷದಿಂದಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಬಿಜೆಪಿ ಮುಖಂಡನ ಹೊಸ ಫೋರ್ಡ್ ಎಂಡೀವರ್...
ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ? ಇದು ನಿಜವೇ?


Click it and Unblock the Notifications








