ಮೇ 18ಕ್ಕೆ ಬಿಡುಗಡೆಯಾಗಲಿರುವ ಟೊಯೊಟಾ ಯಾರಿಸ್ ಬೆಲೆ ಎಷ್ಟು ಗೊತ್ತಾ?

ಸೆಡಾನ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿರುವ ಟೊಯೊಟಾ ಯಾರಿಸ್ ಕಾರುಗಳು ಬಿಡುಗಡೆಗೆ ಸಜ್ಜುಗೊಂಡಿದ್ದು, ಇದೀಗ ಹೊಸ ಕಾರುಗಳ ಬೆಲೆ ಮಾಹಿತಿಯನ್ನು ಬಹಿರಂಗಗೊಳಿಸಲಾಗಿದೆ.

By Praveen Sannamani

2018ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳುವ ಮೂಲಕ ಸೆಡಾನ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿರುವ ಟೊಯೊಟಾ ಯಾರಿಸ್ ಕಾರುಗಳು ಬಿಡುಗಡೆಗೆ ಸಜ್ಜುಗೊಂಡಿದ್ದು, ಇದೀಗ ಹೊಸ ಕಾರುಗಳ ಬೆಲೆ ಮಾಹಿತಿಯನ್ನು ಬಹಿರಂಗಗೊಳಿಸಲಾಗಿದೆ.

ಮೇ 18ಕ್ಕೆ ಬಿಡುಗಡೆಯಾಗಲಿರುವ ಟೊಯೊಟಾ ಯಾರಿಸ್ ಬೆಲೆ ಎಷ್ಟು ಗೊತ್ತಾ?

ಟೊಯೊಟಾ ಸಂಸ್ಥೆಯು ಯಾರಿಸ್ ಸೆಡಾನ್ ಕಾರುಗಳನ್ನು ಮೇ 18ರಂದ ಬಿಡುಗಡೆಗೊಳಿಸುವುದು ಖಚಿತವಾಗಿದ್ದು, ಹೊಸ ಕಾರುಗಳ ಖರೀದಿಗಾಗಿ ರೂ.50 ಸಾವಿರ ಮುಂಗಡದೊಂದಿಗೆ ಬೆಂಗಳೂರಿನ ಪ್ರಮುಖ ಡೀಲರ್ಸ್‌ಗಳಲ್ಲಿ ಬುಕ್ಕಿಂಗ್ ಮಾಡಬಹುದಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿರುವ ಯಾರಿಸ್ ಕಾರುಗಳು ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳಲ್ಲೇ ವಿಶೇಷ ಎನ್ನಿಸಲಿದೆ.

ಮೇ 18ಕ್ಕೆ ಬಿಡುಗಡೆಯಾಗಲಿರುವ ಟೊಯೊಟಾ ಯಾರಿಸ್ ಬೆಲೆ ಎಷ್ಟು ಗೊತ್ತಾ?

ವರದಿಗಳ ಪ್ರಕಾರ ಟೊಯೊಟಾ ಯಾರಿಸ್ ಕಾರುಗಳು ಜೆ, ಜಿ, ವಿ ಹಾಗೂ ವಿಎಕ್ಸ್ ವೇರಿಯಂಟ್‍‍ಗಳಲ್ಲಿ ಮಾರುಕಟ್ಟೆಗೆ ಬರಲಿದ್ದು, ಎಲ್ಲಾ ವೇರಿಯಂಟ್‍‌ಗಳು ಸಹ 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 108 ಬಿಹೆಚ್‍ಪಿ ಹಾಗು 140ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿವೆ.

ಮೇ 18ಕ್ಕೆ ಬಿಡುಗಡೆಯಾಗಲಿರುವ ಟೊಯೊಟಾ ಯಾರಿಸ್ ಬೆಲೆ ಎಷ್ಟು ಗೊತ್ತಾ?

ಟೊಯೊಟಾ ಸಂಸ್ಥೆಯು ಬಹಿರಂಗಗೊಳಿಸಿರುವ ಯಾರಿಸ್ ಕಾರುಗಳ ಬೆಲೆ (ಎಕ್ಸ್‌ಶೋರಂ ಪ್ರಕಾರ) ಪಟ್ಟಿ ಹೀಗಿದೆ...

ಕಾರು ಮಾದರಿಗಳು

ಮ್ಯಾನುವಲ್ ಗೇರ್‌ಬಾಕ್ಸ್

ಆಟೋ ಮ್ಯಾಟಿಕ್ ಗೇರ್‌ಬಾಕ್ಸ್
ಜೆ ರೂ. 8,75,000 ರೂ. 9,95,000
ಜಿ ರೂ. 10,56,000 ರೂ. 11,76,000
ವಿ ರೂ. 11,70,000 ರೂ. 12,90,000
ವಿಎಕ್ಸ್ ರೂ. 12,85,000 ರೂ. 14,07,000
ಮೇ 18ಕ್ಕೆ ಬಿಡುಗಡೆಯಾಗಲಿರುವ ಟೊಯೊಟಾ ಯಾರಿಸ್ ಬೆಲೆ ಎಷ್ಟು ಗೊತ್ತಾ?

ಇನ್ನು ಗ್ರಾಹಕರ ನೀರಿಕ್ಷೆಯಂತೆಯೇ ಪ್ಯಾಂಥಮ್ ಬ್ರೌನ್, ವೈಲ್ಡ್ ಫೈರ್ ರೆಡ್, ಗ್ರೇ ಮೆಟಾಲಿಕ್, ಸಿಲ್ವರ್ ಮೆಟಾಲಿಕ್, ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಮತ್ತು ಸೂಪರ್ ವೈಟ್ ಬಣ್ಣಗಳಲ್ಲಿ ಯಾರಿಸ್ ಕಾರುಗಳನ್ನು ಪರಿಚಯಸಲಿರುವ ಟೊಯೊಟಾ ಸಂಸ್ಥೆಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಒದಗಿಸಲಿದೆ.

ಮೇ 18ಕ್ಕೆ ಬಿಡುಗಡೆಯಾಗಲಿರುವ ಟೊಯೊಟಾ ಯಾರಿಸ್ ಬೆಲೆ ಎಷ್ಟು ಗೊತ್ತಾ?

'ಜೆ' ವೇರಿಯೆಂಟ್‍ ವೈಶಿಷ್ಟ್ಯತೆಗಳು

ಯಾರಿಸ್ ಜೆ ವೇರಿಯೆಂಟ್ ಕಾರುಗಳು 7 ಏರ್‍‍ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್, ಮುಂಭಾಗದಲ್ಲಿ ಹಾಗು ಹಿಂಭಾಗದಲ್ಲಿ ಡಿಸ್ಕ್ ಮತ್ತು ಡ್ರಮ್ ಬ್ರೇಕ್ಸ್, ಎಂಜಿನ್ ಇಮ್ಮೊಬಿಲೈಸರ್, ಸೆಂಟ್ರಲ್ ಲಾಕಿಂಗ್, ಪವರ್ ಸ್ಟೀರಿಂಗ್, ಟಿಲ್ಟ್ ಸ್ಟೀರಿಂಗ್ ಅಡ್ಜಸ್ಟ್ ಮೆಂಟ್, ಕೀಲೆಸ್ ಎಂಟ್ರಿ ಸೌಲಭ್ಯ ಪಡೆದಿದೆ.

ಮೇ 18ಕ್ಕೆ ಬಿಡುಗಡೆಯಾಗಲಿರುವ ಟೊಯೊಟಾ ಯಾರಿಸ್ ಬೆಲೆ ಎಷ್ಟು ಗೊತ್ತಾ?

ಜೊತೆಗೆ ಪವರ್ ವಿಂಡೋ, ವಿದ್ಯುತ್‍‍ನಿಂದ ಅಡ್ಜಸ್ಟ್ ಮಾಡಬಲ್ಲ ಒಆರ್‍‍ವಿಎಂ, ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್, ಡ್ರೈವರ್ ಸೀಟ್ ಹೈಟ್ ಅಡ್ಜಸ್ಟ್ ಮೆಂಟ್, ಕೂಲ್ಡ್ ಗ್ಲೋವ್ ಬಾಕ್ಸ್, ವಿವಿಧ ಮಾಹಿತಿಯನ್ನು ಒಂದೇ ಸುರಿನಲ್ಲ ತಿಳಿಸಿಕೊಡುವ ಎಲ್ಇಡಿ ಇಂಸ್ಟ್ರೂಮೆಂಟ್ ಕ್ಲಸ್ಟರ್, ರೀರ್ ಆರ್ಮ್‍ರೆಸ್ಟ್, ನಾಲ್ಕು ಸ್ಪೀಕರ್‌ವುಳ್ಳ ಆಡಿಯೊ ಸಿಸ್ಟಂ ಮತ್ತು ಏಸಿಯನ್ನು ಪಡೆದುಕೊಂಡಿವೆ.

ಮೇ 18ಕ್ಕೆ ಬಿಡುಗಡೆಯಾಗಲಿರುವ ಟೊಯೊಟಾ ಯಾರಿಸ್ ಬೆಲೆ ಎಷ್ಟು ಗೊತ್ತಾ?

'ಜಿ' ವೇರಿಯಂಟ್‍ ವೈಶಿಷ್ಟ್ಯತೆಗಳು:

ಯಾರಿಸ್ ಜಿ ವೇರಿಯೆಂಟ್‍ ಕಾರುಗಳು ರಿಯರ್ ಪಾರ್ಕಿಂಗ್ ಸೆನ್ಸಾರ್, ಮುಂಭಾಗ ಹಾಗು ಹಿಂಭಾಗದಲ್ಲಿ ಫಾಗ್ ಲ್ಯಾಂಪ್ಸ್, ಆಟೋ ಡೋರ್ ಲಾಕ್ ಹಾಗು ಅನ್‍‍ಲಾಕ್ ಸೆನ್ಸಾರ್ಸ್, ರಿಯರ್ ಡೀಫೋಗರ್, 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ, ನಾಲ್ಕು ಸ್ಪೀಕರ್‍‍ಗಳು, ಕ್ರೋಮ್ ಗ್ರಿಲ್, ವಿದ್ಯುತ್‍ ಒಆರ್‍‍ವಿಎಂ, ಸ್ಟೀರಿಂಗ್ ಮೌನ್‍‍ಟೆಡ್ ಆಡಿಯೋ ಕಂಟ್ರೋಲ್ಸ್, ಸ್ಮಾರ್ಟ್ ಎಂಟ್ರಿ ಹಾಗು ಪುಶ್ ಬಟನ್ ಸ್ಟಾರ್ಟ್ ವೈಶಿ ಷ್ಟ್ಯತೆಗಳನ್ನು ಪಡೆದಿದೆ.

ಮೇ 18ಕ್ಕೆ ಬಿಡುಗಡೆಯಾಗಲಿರುವ ಟೊಯೊಟಾ ಯಾರಿಸ್ ಬೆಲೆ ಎಷ್ಟು ಗೊತ್ತಾ?

'ವಿ' ವೇರಿಯೆಂಟ್‍ ವೈಶಿಷ್ಟ್ಯತೆಗಳು:

ಯಾರಿಸ್ ವಿ ವೇರಿಯೆಂಟ್‍ ಕಾರುಗಳಲ್ಲಿ ನಾಲ್ಕು ಚಕ್ರಗಳಿಗೂ ಡಿಸ್ಕ್ ಬ್ರೇಕ್ಸ್, ಆರು ಸ್ಪೀಕರ್‍‍ಗಳುಳ್ಳ ಏಳು ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ, ಕ್ರೂಸ್ ಕಂಟ್ರೋಲರ್, ಎಲ್ಇಡಿ ಟೈಲ್‍‍ಲ್ಯಾಂಪ್ಸ್, ಫಾಲೊ ಮಿ ಫೀಚರ್ ಸೇರಿತ ಆಟೋ ಹೆಡ್‍‍ಲ್ಯಾಂಪ್‍ಗಳು, 15 ಇಂಚಿನ ಅಲಾಯ್ ಚಕ್ರಗಳು, ಮುಂಭಾಗ ಹಾಗು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್‍‍ಗಳು ಹಾಗು ರೈನ್ ಸೆನ್ಸಿಂಗ್ ವೈಪರ್‍‍ನಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಮೇ 18ಕ್ಕೆ ಬಿಡುಗಡೆಯಾಗಲಿರುವ ಟೊಯೊಟಾ ಯಾರಿಸ್ ಬೆಲೆ ಎಷ್ಟು ಗೊತ್ತಾ?

ಟಾಪ್ ಎಂಡ್ ವಿಎಕ್ಸ್ ವೇರಿಯೆಂಟ್‍ ವೈಶಿಷ್ಟ್ಯತೆಗಳು:

'ವಿಎಕ್ಸ್' ವೇರಿಯೆಂಟ್‍‌ಗಳು ಯಾರಿಸ್ ಕಾರುಗಳಲ್ಲೇ ಅತಿ ಹೆಚ್ಚಿನ ಮಾದರಿಯಾಗಿದೆ. ಇದರಲ್ಲಿ ಟೈರ್ ಪ್ರೇಷರ್ ಮಾನಿಟರಿಂಗ್ ಸಿಸ್ಟಂ, ಪೇಡಲ್ ಶಿಫ್ಟರ್ಸ್, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್ (VSC), ಹಿಲ್ ಸ್ಟಾರ್ಟ್ ಅಸ್ಸಿಸ್ಟ್, ಲೆದರ್ ಸೀಟ್ಸ್, ಎಂಟು ಮಾದರಿಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್‍, ರಿಯರ್ ಸಸ್ಪೆಷನ್, ಎಲ್ಇಡಿ ಡಿಎಲ್‍ಆರ್ ಹಾಗು ಕ್ರೋಮ್ ಡೋರ್ ಹ್ಯಾಂಡಲ್‍‍ನಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಮೇ 18ಕ್ಕೆ ಬಿಡುಗಡೆಯಾಗಲಿರುವ ಟೊಯೊಟಾ ಯಾರಿಸ್ ಬೆಲೆ ಎಷ್ಟು ಗೊತ್ತಾ?

ಜೊತೆಗೆ ಹೊಸ ಯಾರಿಸ್ ಕಾರುಗಳಲ್ಲಿ ಇಂಧನ ಕಾರ್ಯಕ್ಷಮತೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸುರಕ್ಷತೆಗಾಗಿ ಎಲ್ಲಾ ವೆೇರಿಯೆಂಟ್‌ಗಳಲ್ಲೂ 7 ಏರ್‌ಬ್ಯಾಗ್‌ಗಳು, ಪವರ್ ಡ್ರೈವ್ ಸೀಟ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಆಲ್ ವೀಲ್ ಡಿಸ್ಕ್ ಬ್ರೇಕ್ ಒದಗಿಸಲಾಗಿದೆ. ಹೀಗಾಗಿ ಇದೊಂದು ಉತ್ತಮ ಸೆಡಾನ್ ಮಾದರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮೇ 18ಕ್ಕೆ ಬಿಡುಗಡೆಯಾಗಲಿರುವ ಟೊಯೊಟಾ ಯಾರಿಸ್ ಬೆಲೆ ಎಷ್ಟು ಗೊತ್ತಾ?

ಹೀಗಾಗಿ ಸೆಡಾನ್ ಕಾರುಗಳಲ್ಲೇ ವಿಶೇಷ ವಿನ್ಯಾಸಗಳನ್ನು ಹೊಂದಿರುವ ಯಾರಿಸ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಸಿಯಾಜ್, ಸ್ಕೋಡಾ ರ‍್ಯಾಪಿಡ್, ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಇದು ತೀವ್ರ ಪೈಪೋಟಿ ನೀಡಲಿದ್ದು, ಈ ಮೂಲಕ ಪ್ರಯಾಣಿಕ ಕಾರು ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ವಿಶ್ವಾಸದಲ್ಲಿದೆ.

Most Read Articles

Kannada
Read more on toyota sedan
English summary
Toyota Yaris Prices Revealed; To Launch In May.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X