ನೆಕ್ಸ್ಟ್ ಜನರೇಷನ್ ಆಲ್ಟ್ರಾ ರೇಂಜ್ ಟ್ರಕ್‌ಗಳನ್ನು ಬಿಡುಗಡೆ ಮಾಡಿದ ಟಾಟಾ

ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿ ಸಾಧಿಸಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಗ್ರಾಹಕ ಸ್ನೇಹಿ ಮಾದರಿಯ ನೆಕ್ಸ್ಟ್ ಜನರೇಷನ್ ಆಲ್ಟ್ರಾ ರೇಂಜ್ ಟ್ರಕ್‌ಗಳನ್ನು ಬಿಡುಗಡೆ ಮಾಡಿದೆ.

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಟ್ರಕ್‌ಗಳಿಗೆ ವಿಶೇಷ ಬೇಡಿಕೆಯಿದ್ದು, ಈ ಹಿನ್ನೆಲೆ ಗ್ರಾಹಕರ ಸ್ನೇಹಿ ನೆಕ್ಸ್ಟ್ ಜನರೇಷನ್ ಆಲ್ಟ್ರಾ ರೇಂಜ್ ಪ್ಲ್ಯಾಟ್‌ಫಾರ್ಮ್ ಆಧಾರದ ಮೇಲೆ ಹೊಸ ಟ್ರಕ್‌ಗಳನ್ನು ಅಭಿವೃದ್ದಿ ಮಾಡಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಟ್ರಕ್ ಮಾದರಿಗಳಿಂತ ಹೊಸ ತಂತ್ರಜ್ಞಾನ ಪ್ರೇರಿತ ಟ್ರಕ್‌ಗಳು ಎಂಜಿನ್ ಕಾರ್ಯಕ್ಷಮತೆಯಲ್ಲಿ ಉತ್ತಮ ಮಾದರಿಯಾಗಿರಲಿವೆ.

ಹೊಸ ತಂತ್ರಜ್ಞಾನ ಪ್ರೇರಿತ ಟಿಪ್ಲರ್, ರಿಪರ್ ವ್ಯಾನ್(ಸರಕು ಸಾಗಿಸುವ ವಾಹನ), ಮುನ್ಸಿಪಾಲಿಟಿ ವಾಹನಗಳು ಹೆಚ್ಚಿನ ಗುಣಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, ವಾಹನ ಸವಾರರಿಗೆ ಗರಿಷ್ಠ ಮಟ್ಟದ ಸುರಕ್ಷತೆ ಒದಗಿಸುವ ಭರವಸೆ ನೀಡುತ್ತವೆ.

ನೆಕ್ಸ್ಟ್ ಜನರೇಷನ್ ಆಲ್ಟ್ರಾ ರೇಂಜ್ ಟ್ರಕ್‌ಗಳನ್ನು ಬಿಡುಗಡೆ ಮಾಡಿದ ಟಾಟಾ

ಇನ್ನು ಅಲ್ಟ್ರಾ ರೇಂಜ್ ಟ್ರಕ್ ಈ ಹಿಂದಿಗಿಂತಲೂ ತೂಕದಲ್ಲಿ ಬದಲಾವಣೆ ಪಡೆದುಕೊಂಡಿದ್ದು, ಟ್ರಕ್ ಮಾದರಿಗಳಿಗೆ ಅನುಗುಣವಾಗಿ 7 ಟನ್‌ಗಳಿಂದ 16 ಟನ್ ತೂಕ ಪಡೆದುಕೊಂಡಿರಲಿವೆ ಎಂದು ಟಾಟಾ ಹೇಳಿಕೊಂಡಿದೆ.

ನೆಕ್ಸ್ಟ್ ಜನರೇಷನ್ ಆಲ್ಟ್ರಾ ರೇಂಜ್ ಟ್ರಕ್‌ಗಳನ್ನು ಬಿಡುಗಡೆ ಮಾಡಿದ ಟಾಟಾ

ಎಂಜಿನ್ ವೈಶಿಷ್ಟ್ಯತೆಗಳು

ಟಾಟಾ ಆಲ್ಟ್ರಾ ರೇಂಜ್ ಟ್ರಕ್‌ಗಳು ಟರ್ಬೋಟ್ರಾನ್ 3-ಲೀಟರ್ ಮತ್ತು 5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 3-ಲೀಟರ್ ಎಂಜಿನ್ ಮಾದರಿಯು 138-ಬಿಎಚ್‌ಪಿ, 360-ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ 5-ಲೀಟರ್ ಎಂಜಿನ್‌ಗಳು 177-ಬಿಎಚ್‌ಪಿ, 590-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ನೆಕ್ಸ್ಟ್ ಜನರೇಷನ್ ಆಲ್ಟ್ರಾ ರೇಂಜ್ ಟ್ರಕ್‌ಗಳನ್ನು ಬಿಡುಗಡೆ ಮಾಡಿದ ಟಾಟಾ

ಜೊತೆಗೆ ಪ್ರತಿಯೊಂದು ಟ್ರಕ್ ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಗೇರ್‌ ಅಳವಡಿಸಿದ್ದು, ಆಯ್ಕೆ ರೂಪದಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಯನ್ನು ಆಯ್ಕೆ ಮಾಡಬಹುದಾಗಿದೆ. ಇದಲ್ಲದೇ ಇಂಧನ ಕಾರ್ಯಕ್ಷಮತೆಯಲ್ಲೂ ಹೊಸ ಟ್ರಕ್‌ಗಳು ಬೆಸ್ಟ್ ಇನ್ ಕ್ಲಾಸ್ ಮಾದರಿಯಾಗಿವೆ.

ನೆಕ್ಸ್ಟ್ ಜನರೇಷನ್ ಆಲ್ಟ್ರಾ ರೇಂಜ್ ಟ್ರಕ್‌ಗಳನ್ನು ಬಿಡುಗಡೆ ಮಾಡಿದ ಟಾಟಾ

ನೆಕ್ಸ್ಟ್ ಜನರೇಷನ್ ಅಲ್ಟ್ರಾ ರೇಂಜ್ ತಂತ್ರಜ್ಞಾನ ಬಳಕೆ ಹಿನ್ನೆಲೆ ವಾಹನಗಳ ಖರ್ಚು ಅಧಿಕವಾಗಿ ತಗ್ಗಲಿದ್ದು, ಉತ್ತಮ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಅತ್ಯುತ್ತಮ ವೆಹಿಕಲ್ ಸರ್ವಿಸ್‌ಗಳಿಂದಾಗಿ ಅಧಿಕ ಪ್ರಮಾಣ ಲಾಭ ತಂದುಕೊಡಲಿವೆ.

ನೆಕ್ಸ್ಟ್ ಜನರೇಷನ್ ಆಲ್ಟ್ರಾ ರೇಂಜ್ ಟ್ರಕ್‌ಗಳನ್ನು ಬಿಡುಗಡೆ ಮಾಡಿದ ಟಾಟಾ

ಇದಲ್ಲದೇ ಅಲ್ಟ್ರಾ ರೇಂಜ್ ಟ್ರಕ್‌ಗಳಲ್ಲಿ ಜಿಪಿಎಸ್ ಅಳವಡಿಕೆ ಸಹ ಇದ್ದು, ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ ವೆಹಿಕಲ್ ಟ್ರ್ಯಾಕ್ ಮಾಡುವ ಮೂಲಕ ಸರ್ವಿಸ್ ನೀಡುವ ಉದ್ದೇಶ ಹೊಂದಿದೆ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಜಿಪಿಎಸ್ ಮುಖಾಂತರ ಟಾಟಾ ಮುಖ್ಯ ಕಛೇರಿಗೆ ಎಸ್ಎಂಎಸ್ ಅಲರ್ಟ್ ರವಾನೆಯಾಗಲಿದ್ದು, ಈ ಮೂಲಕ ಟ್ರಕ್ ಸ್ಥಿತಿಗತಿ ಅರಿಯಲು ಇದು ಸಹಾಯಕ್ಕೆ ಬರಲಿದೆಯಂತೆ.

ನೆಕ್ಸ್ಟ್ ಜನರೇಷನ್ ಆಲ್ಟ್ರಾ ರೇಂಜ್ ಟ್ರಕ್‌ಗಳನ್ನು ಬಿಡುಗಡೆ ಮಾಡಿದ ಟಾಟಾ

ಈ ಮೂಲಕ ಟ್ರಕ್ ಮಾಲೀಕರ ಆತ್ಮವಿಶ್ವಾಸ ಹೆಚ್ಚಿಸಲು ಇದು ಸಹಕಾರಿಯಾಗಲಿದ್ದು, ಕೇವಲ ದೇಶಿಯ ಮಾರುಕಟ್ಟೆಯಲ್ಲಿಯಷ್ಟೇ ಅಲ್ಲದೇ ಸೌತ್ ಆಫ್ರಿಕಾ, ಮಲೆಷಿಯಾ, ಫಿಲಿಪ್ಪೀನ್ಸ್, ಇಂಡೋನೇಷ್ಯಾದಲ್ಲೂ ಟಾಟಾ ವಿನೂತನ ಟ್ರಕ್‌ಗಳು ಸದ್ದು ಮಾಡುವ ನೀರಿಕ್ಷೆಯಲ್ಲಿವೆ.

Most Read Articles

Kannada
English summary
Tata Motors Launches Next-Gen Ultra Range Of Trucks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X