ಕ್ಯಾಬ್ ಸೇವೆಗಳಿಗಾಗಿ ಟಾಟಾ ನ್ಯಾನೋ ಇವಿ ಕಾರುಗಳನ್ನು ರಸ್ತೆಗಿಳಿಸಲಿದೆ ಓಲಾ..

ಓಲಾ ಸಂಸ್ಥೆಯು ಟಾಟಾ ನಿರ್ಮಾಣದ ಎಲೆಕ್ಟ್ರಿಕ್ ನ್ಯಾನೋ ಕಾರುಗಳನ್ನು ಕ್ಯಾಬ್ ಸೇವೆಗಳಿಗಾಗಿ ಬಳಕೆ ಮಾಡುವ ಯೋಜನೆ ರೂಪಿಸಿದೆ.

By Praveen Sannamani

ಟಾಟಾ ಮೋಟಾರ್ಸ್ ಸಂಸ್ಥೆಯು ಸದ್ಯ ಎಲೆಕ್ಚ್ರಿಕ್ ಕಾರುಗಳ ಅಭಿವೃದ್ಧಿ ಯೋಜನೆ ಮೇಲೆ ವಿಶೇಷ ಆಸಕ್ತಿ ತೊರುತ್ತಿದೆ. ಈ ಹಿನ್ನೆಲೆ ಜೆಯಂ ನಿಯೋ ಎನ್ನುವ ಸಂಸ್ಥೆಯೊಂದಿಗೆ ಜೊತೆಗೂಡಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನೆ ಮಾಡುತ್ತಿದ್ದು, ಇದೀಗ ಓಲಾ ಸಂಸ್ಥೆಯು ಟಾಟಾ ನಿರ್ಮಾಣದ ಎಲೆಕ್ಟ್ರಿಕ್ ನ್ಯಾನೋ ಕಾರುಗಳನ್ನು ಕ್ಯಾಬ್ ಸೇವೆಗಳಿಗಾಗಿ ಬಳಕೆ ಮಾಡುವ ಯೋಜನೆ ರೂಪಿಸಿದೆ.

ಕ್ಯಾಬ್ ಸೇವೆಗಳಿಗಾಗಿ ಟಾಟಾ ನ್ಯಾನೋ ಇವಿ ಕಾರುಗಳನ್ನು ರಸ್ತೆಗಿಳಿಸಲಿದೆ ಓಲಾ..

ಟಾಟಾ ಮತ್ತು ಜೆಯಂ ನಿಯೋ ಸಂಸ್ಥೆಯು ಜೊತೆಗೂಡಿ ಅಭಿವೃದ್ಧಿಗೊಳಿಸಿರುವ ಟಾಟಾ ನ್ಯಾನೋ ಕಾರುಗಳು ಸದ್ಯ ಹೈದ್ರಾಬಾದ್‌ನಲ್ಲಿ ಕಾಣಿಸಿಕೊಂಡಿದ್ದು, ಓಲಾ ಸ್ಟಿಕರ್‌ಗಳನ್ನು ಅಂಟಿಸಿಕೊಂಡು ಸ್ಪಾಟ್ ಟೆಸ್ಟಿಂಗ್ ನಡೆಸುಲಾಗುತ್ತಿದೆ. ಮೂಲಗಳ ಪ್ರಕಾರ ನ್ಯಾನೋ ಕಾರುಗಳ ಎಂಜಿನ್ ಪರ್ಫಾಮೆನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಓಲಾ ಸಂಸ್ಥೆಯು ತನ್ನ ಕ್ಯಾಬ್ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳುವ ಯೋಜನೆ ರೂಪಿಸಿದೆ.

ಕ್ಯಾಬ್ ಸೇವೆಗಳಿಗಾಗಿ ಟಾಟಾ ನ್ಯಾನೋ ಇವಿ ಕಾರುಗಳನ್ನು ರಸ್ತೆಗಿಳಿಸಲಿದೆ ಓಲಾ..

ಟಾಟಾದಿಂದ ಸುಮಾರು 400 ನ್ಯಾನೋ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿ ಮಾಡಲಿರುವ ಓಲಾ ಸಂಸ್ಥೆಯು ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಸೇವೆ ಒದಗಿಸಲಿದೆ. ಇದಕ್ಕಾಗಿ ಮತ್ತಷ್ಟು ಉದ್ಯೋಗಿಗಳನ್ನು ನೇಮಕ ಮಾಡಲಿರುವ ಓಲಾ ಸಂಸ್ಥೆಯು ಡಿಸೇಲ್ ಕಾರುಗಳನ್ನು ಕಡಿತಗೊಳಿಸುವ ಸಾಧ್ಯತೆಗಳಿವೆ.

ಕ್ಯಾಬ್ ಸೇವೆಗಳಿಗಾಗಿ ಟಾಟಾ ನ್ಯಾನೋ ಇವಿ ಕಾರುಗಳನ್ನು ರಸ್ತೆಗಿಳಿಸಲಿದೆ ಓಲಾ..

ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಮುಂದಾದರೆ ಡಿಸೇಲ್ ಕಾರುಗಳ ಸಂಖ್ಯೆ ಓಲಾ ಸಂಸ್ಥೆಗೆ ಹೊರೆಯಾಗಲಿದ್ದು, ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಮಾನ್ಯತೆ ಕೂಡಾ ನೀಡಬಹುದು ಎಲ್ಲಲಾಗಿದೆ.

ಕ್ಯಾಬ್ ಸೇವೆಗಳಿಗಾಗಿ ಟಾಟಾ ನ್ಯಾನೋ ಇವಿ ಕಾರುಗಳನ್ನು ರಸ್ತೆಗಿಳಿಸಲಿದೆ ಓಲಾ..

ಇನ್ನು ಜೆಯಂ ನಿಯೋ ಸಂಸ್ಥೆಯ ಜೊತೆಗೂಡಿ ಟಿಗೋರ್ ಎಲೆಕ್ಟ್ರಿಕ್, ಟಿಯಾಗೋ ಎಲೆಕ್ಟ್ರಿಕ್ ಮತ್ತು ನ್ಯಾನೋ ಹ್ಯಾಚ್‌ಬ್ಯಾಕ್ ಕಾರುಗಳನ್ನು ಅಭಿವೃದ್ಧಿ ಮಾಡುತ್ತಿರುವ ಟಾಟಾ ಸಂಸ್ಥೆಯು ಗ್ರಾಹಕರಲ್ಲಿ ಎಲೆಕ್ಟ್ರಿಕ್ ಕಾರುಗಳ ಬಗೆಗೆ ತಿಳುವಳಿಕೆ ನೀಡುವ ಉದ್ದೇಶದಿಂದಲೇ ಓಲಾ ಸಂಸ್ಥೆಗೆ ನ್ಯಾನೋ ಇವಿ ಕಾರುಗಳನ್ನು ಒದಗಿಸಲು ಒಪ್ಪಿಗೆ ನೀಡಿದೆ.

ಕ್ಯಾಬ್ ಸೇವೆಗಳಿಗಾಗಿ ಟಾಟಾ ನ್ಯಾನೋ ಇವಿ ಕಾರುಗಳನ್ನು ರಸ್ತೆಗಿಳಿಸಲಿದೆ ಓಲಾ..

ಇದರಿಂದ ಟಾಟಾ ಸಂಸ್ಥೆಯೊಂದಿನ ಒಪ್ಪಂದದ ಪ್ರಕಾರ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ತ್ರೀವಗೊಳಿಸಿರುವ ಜೆಯಂ ನಿಯೋ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ ಬೇಡಿಕೆ ಇರುವ ಇವಿ ಕಾರುಗಳನ್ನು ಪೂರೈಕೆ ಮಾಡಲಿದ್ದು, ಓಲಾ ಸೇವೆಗಳಲ್ಲಿ ನ್ಯಾನೋ ಇವಿ ಕಾರುಗಳು ಹೊಸ ಸಂಚಲನ ಸೃಷ್ಠಿಸಲಿವೆ ಎನ್ನಲಾಗಿದೆ.

ಕ್ಯಾಬ್ ಸೇವೆಗಳಿಗಾಗಿ ಟಾಟಾ ನ್ಯಾನೋ ಇವಿ ಕಾರುಗಳನ್ನು ರಸ್ತೆಗಿಳಿಸಲಿದೆ ಓಲಾ..

ಜೆಯಂ ನಿಯೋ ಸಂಸ್ಥೆಯು ಅಭಿವೃದ್ಧಿ ಮಾಡುತ್ತಿರುವ ನ್ಯಾನೋ ಕಾರುಗಳಲ್ಲಿ 48 ವೋಲ್ಟ್ ಎಲೆಕ್ಟ್ರಿಕ್ ಸಿಸ್ಟಂ ಜೋಡಣೆ ಮಾಡಲಾಗಿದ್ದು, ಇದು 17ಕಿಲೋ ವ್ಯಾಟ್ ಔಟ್‌ಪುಟ್ ಮೂಲಕ 23-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

ಕ್ಯಾಬ್ ಸೇವೆಗಳಿಗಾಗಿ ಟಾಟಾ ನ್ಯಾನೋ ಇವಿ ಕಾರುಗಳನ್ನು ರಸ್ತೆಗಿಳಿಸಲಿದೆ ಓಲಾ..

ಜೊತೆಗೆ ನ್ಯಾನೋ ಎಲೆಕ್ಟ್ರಿಕ್ ಕಾರುಗಳು ಪ್ರತಿ ಚಾರ್ಜ್‌ಗೆ 100 ಕಿ.ಮೀ ನಿಂದ 120 ಕಿ.ಮೀ ತನಕ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬ ಮಾಹಿತಿ ಇದ್ದು, ಇದು ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳಿಗಿಂತ ವಿಭಿನ್ನ ಎನ್ನಿಸಲಿದೆ.

ಕ್ಯಾಬ್ ಸೇವೆಗಳಿಗಾಗಿ ಟಾಟಾ ನ್ಯಾನೋ ಇವಿ ಕಾರುಗಳನ್ನು ರಸ್ತೆಗಿಳಿಸಲಿದೆ ಓಲಾ..

ಓಲಾ ಸಂಸ್ಥೆಯು ಸಹ ಇದೇ ಕಾರಣಕ್ಕೆ ನ್ಯಾನೋ ಇವಿ ಕಾರುಗಳನ್ನು ಬಳಕೆ ಮಾಡಿಕೊಳ್ಳಲು ಉದ್ದೇಶಿಸಿದ್ದು, ಈ ಮೂಲಕ ಖರ್ಚುಗಳನ್ನು ಕಡಿತಗೊಳಿಸಿ ಲಾಭಾಂಶ ಹೆಚ್ಚಿಸಲು ಇವಿ ಕಾರುಗಳು ಸಹಕಾರಿಯಾಗಬಲ್ಲವು ಎನ್ನುವುದು ಕೂಡಾ ವಾಸ್ತಾಂಶವಾಗಿದೆ.

Source: Autocar India

ಕ್ಯಾಬ್ ಸೇವೆಗಳಿಗಾಗಿ ಟಾಟಾ ನ್ಯಾನೋ ಇವಿ ಕಾರುಗಳನ್ನು ರಸ್ತೆಗಿಳಿಸಲಿದೆ ಓಲಾ..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!

ಪ್ರತಿ ಚಾರ್ಜ್‌ಗೆ 547 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು....

ನಿಮ್ಮ ಕಾರಿನ ಎಂಜಿನ್ ಹೆಚ್ಚು ದಿನ ಬಾಳಿಕೆ ಬರಬೇಕಾದ್ರೆ ಹೀಗೆ ಮಾಡಿ ನೋಡಿ...

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?

More from DriveSpark

Article Published On: Tuesday, June 19, 2018, 18:53 [IST]
English summary
Tata Nano based Jayem Neo EV spotted.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+