ಟಾಟಾ ನೆಕ್ಸಾನ್ ಎಕ್ಸ್‌ಝೆಡ್ ಮಾದರಿ ಬಿಡುಗಡೆ- ಆರಂಭಿಕ ಬೆಲೆ ರೂ. 7.99 ಲಕ್ಷ

Written By:

ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್ ಇದೀಗ ನೆಕ್ಸಾನ್ ಎಸ್‌ಯುವಿ ಆವೃತ್ತಿಗಳಲ್ಲಿ ಹೊಸದೊಂದು ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದು, ನೆಕ್ಸಾನ್ ಎಕ್ಸ್‌ಝೆಡ್ ವೆರಿಯೆಂಟ್ ಹೊರತಂದಿದೆ.

ಟಾಟಾ ನೆಕ್ಸಾನ್ ಎಕ್ಸ್‌ಝೆಡ್ ಮಾದರಿ ಬಿಡುಗಡೆ- ಆರಂಭಿಕ ಬೆಲೆ ರೂ. 7.99 ಲಕ್ಷ

ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಕಾರಿನ ಬೆಲೆಯನ್ನು ಆರಂಭಿಕವಾಗಿ ರೂ.7.99 ಲಕ್ಷಕ್ಕೆ ಮತ್ತು ಡೀಸೆಲ್ ಆವೃತ್ತಿಯ ಬೆಲೆಯನ್ನು ರೂ.8.99 ಲಕ್ಷಕ್ಕೆ ನಿಗದಿ ಮಾಡಿದ್ದು, ಗ್ರಾಹಕರ ಆಯ್ಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಹೊಸ ಆವೃತ್ತಿ ಬಿಡುಗಡೆ ಮಾಡಲಾಗಿದೆ. ಇದು ಕಡಿಮೆ ಬಜೆಟ್‌ನಲ್ಲಿ ಆರಂಭಿಕ ಆವೃತ್ತಿಗಳನ್ನು ಆಯ್ಕೆ ಮಾಡುವ ಗ್ರಾಹಕರಿಗೆ ಅನುಕೂಲಕರ ಎನ್ನಬಹುದು.

ಟಾಟಾ ನೆಕ್ಸಾನ್ ಎಕ್ಸ್‌ಝೆಡ್ ಮಾದರಿ ಬಿಡುಗಡೆ- ಆರಂಭಿಕ ಬೆಲೆ ರೂ. 7.99 ಲಕ್ಷ

ಈಗಾಗಲೇ ಮಾರುಕಟ್ಟೆಯಲ್ಲಿ ನೆಕ್ಸಾನ್ ಕಾರುಗಳು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಝೆಡ್ ಪ್ಲಸ್ ವೆರಿಯೆಂಟ್‍ಗಳಲ್ಲಿ ಲಭ್ಯವಿದ್ದು, ಹೊಸದಾಗಿ ಬಿಡುಗಡೆಯಾದ ಎಕ್ಸ್‌ಝೆಡ್ ಮಾದರಿಗಳು ಎಕ್ಸ್‌ಝೆಡ್ ಪ್ಲಸ್ ಮಾದರಿಗಿಂತ ಕೆಳ ದರ್ಜೆಯ ಮಾದರಿಯಾಗಿರಲಿದೆ.

ಟಾಟಾ ನೆಕ್ಸಾನ್ ಎಕ್ಸ್‌ಝೆಡ್ ಮಾದರಿ ಬಿಡುಗಡೆ- ಆರಂಭಿಕ ಬೆಲೆ ರೂ. 7.99 ಲಕ್ಷ

ಇದಕ್ಕೆ ಕಾರಣ, ಎಲ್ಲಾ ಲೋ ವೆರಿಯೆಂಟ್ ಕಾರುಗಳ ನಡುವೆ ಸುಮಾರು ರೂ.75 ಸಾವಿರ ಬೆಲೆ ಅಂತರವಿದ್ದು, ಇದು ಟಾಪ್ ಎರಡು ಮಾದರಿಗಳಲ್ಲಿ ಮಾತ್ರ ರೂ.1.45 ಲಕ್ಷ ಬೆಲೆ ಅಂತರವಿತ್ತು. ಇದರಿಂದಾಗಿ ಬೆಲೆಗಳ ನಡುವಿನ ಅಂತರವನ್ನು ಸರಿದೂಗಿಸಲು ಎಕ್ಸ್‌ಝೆಡ್ ಮಾದರಿಯನ್ನು ಪರಿಚಯಿಸಲಾಗಿದೆ.

ಟಾಟಾ ನೆಕ್ಸಾನ್ ಎಕ್ಸ್‌ಝೆಡ್ ಮಾದರಿ ಬಿಡುಗಡೆ- ಆರಂಭಿಕ ಬೆಲೆ ರೂ. 7.99 ಲಕ್ಷ

ಹೊಸ ಮಾದರಿಯ ನೆಕ್ಸಾನ್ ಕಾರುಗಳು ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಗಳನ್ನು ಪಡೆಯುವುದಿಲ್ಲವಾದರೂ, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಹಾಗು ಇನ್ನಿತರೆ ಡ್ರೈವಿಂಗ್ ಮೋಡ್‍‍ಗಳನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದೆ.

ಟಾಟಾ ನೆಕ್ಸಾನ್ ಎಕ್ಸ್‌ಝೆಡ್ ಮಾದರಿ ಬಿಡುಗಡೆ- ಆರಂಭಿಕ ಬೆಲೆ ರೂ. 7.99 ಲಕ್ಷ

ಎಂಜಿನ್ ಸಾಮರ್ಥ್ಯ

1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಟಾಟಾ ನೆಕ್ಸಾನ್ ಝೆಡ್ಎಕ್ಸ್ ಮಾದರಿಗಳು, ಪೆಟ್ರೋಲ್ ಎಂಜಿನ್‌ನ ಮೂಲಕ 108ಬಿಎಚ್‌ಪಿ, 170ಎನ್ಎಂ ಟಾರ್ಕ್ ಮತ್ತು ಡೀಸೆಲ್ ಎಂಜಿನ್ ಮೂಲಕ 108ಬಿಎಚ್‌ಪಿ, 260ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಟಾಟಾ ನೆಕ್ಸಾನ್ ಎಕ್ಸ್‌ಝೆಡ್ ಮಾದರಿ ಬಿಡುಗಡೆ- ಆರಂಭಿಕ ಬೆಲೆ ರೂ. 7.99 ಲಕ್ಷ

ಜೊತೆಗೆ ಈ ಹಿಂದಿನಂತೆಯೇ, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೀಡಿರುವ ಟಾಟಾ ಸಂಸ್ಥೆಯು ಸದ್ಯದಲ್ಲೇ ಆಟೋ ಮ್ಯಾಟಿಕ್ ಆವೃತ್ತಿಗಳನ್ನು ಸಹ ಬಿಡುಗಡೆ ಮಾಡುವ ತವಕದಲ್ಲಿದೆ. ಹೀಗಾಗಿ ಸದ್ಯ ಮ್ಯಾನುವಲ್ ಗೇರ್‌ಬಾಕ್ಸ್ ಕಾರುಗಳನ್ನು ಮಾತ್ರ ಆಯ್ಕೆ ಮಾಡಬಹುದಾಗಿದೆ.

ಟಾಟಾ ನೆಕ್ಸಾನ್ ಎಕ್ಸ್‌ಝೆಡ್ ಮಾದರಿ ಬಿಡುಗಡೆ- ಆರಂಭಿಕ ಬೆಲೆ ರೂ. 7.99 ಲಕ್ಷ

ನೆಕ್ಸಾನ್ ಟಾಪ್ಎಂಡ್ ಎಕ್ಸ್ ಜೆಡ್+ ಕಾರಿಗೆ ಹೋಲಿಸಿದರೆ ಈ ಕಾರು ಹೊರಗಿನ ಎಲ್ಇಡಿ ಡಿಆರ್‍ಎಲ್, ಡ್ಯುಯಲ್ ಟೋನ್ ರೂಫ್, ಮುಂಭಾಗ ಮತ್ತು ಹಿಂಭಾಗದ ಫಾಗ್ ಲ್ಯಾಂಪ್ಸ್ ಹಾಗೆಯೇ ರೀರ್ ಡೆಫಾಗರ್ ಅನ್ನು ಕಳೆದುಕೊಂಡಿರುವುದು ಸ್ಪಷ್ಟವಾಗಿದೆ.

ಟಾಟಾ ನೆಕ್ಸಾನ್ ಎಕ್ಸ್‌ಝೆಡ್ ಮಾದರಿ ಬಿಡುಗಡೆ- ಆರಂಭಿಕ ಬೆಲೆ ರೂ. 7.99 ಲಕ್ಷ

ಇದಲ್ಲದೇ ಕಾರಿನ ಒಳಭಾಗದಲ್ಲಿ ಮುಂಭಾಗ ಮತ್ತು ಹಿಂಭಾಗದ ಸೆಂಟರ್ ಆರ್ಮ್‍ರೆಸ್ಟ್, 60:40 ಸ್ಪ್ಲಿಟ್ ಫೋಲ್ಡಿಂಗ್ ರೀರ್ ಸೀಟ್ಸ್ ಮತ್ತು ಸ್ಮಾರ್ಟ್ ಕೀ ಪುಷ್ ಬಟನ್ ಅನ್ನು ಕೂಡ ಕಳೆದುಕೊಂಡಿದೆ.

ಟಾಟಾ ನೆಕ್ಸಾನ್ ಎಕ್ಸ್‌ಝೆಡ್ ಮಾದರಿ ಬಿಡುಗಡೆ- ಆರಂಭಿಕ ಬೆಲೆ ರೂ. 7.99 ಲಕ್ಷ

ಆದರೆ ಕಾರಿನ ಒಳಭಾಗದಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಸ್ಮಾರ್ಟ್‍ಪೋನ್ ಕನೆಕ್ಟಿವಿಟಿ, ಅಡ್ಜೆಸ್ಟ್ ಮಾಡಿಕೊಳ್ಳಬಹುದಾದ ಸೀಟ್ ಮತ್ತು ಸೀಟ್ ಬೆಲ್ಟ್ಸ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲರ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಟಾಟಾ ನೆಕ್ಸಾನ್ ಎಕ್ಸ್‌ಝೆಡ್ ಮಾದರಿ ಬಿಡುಗಡೆ- ಆರಂಭಿಕ ಬೆಲೆ ರೂ. 7.99 ಲಕ್ಷ

ಟಾಟಾ ಸಂಸ್ಥೆಯು ಕಾರು ಮಾರುಕಟ್ಟೆಯಲ್ಲಿ ನೆಕ್ಸಾನ್ ಕಾರು ಮಾದರಿಯನ್ನು ಅನ್ನು ಅತಿ ಹೆಚ್ಚು ಮಾರಾಟಗೊಳಿಸುವ ಪ್ರಯತ್ನದಲ್ಲಿದ್ದು, ಶೀಘ್ರವೇ ನೆಕ್ಸಾನ್ ಕಾರಿನ ಎಎಂಟಿ ಆವೃತ್ತಿಯನ್ನು ಕೂಡ ಪರಿಚಯಿಸುವ ತವಕದಲ್ಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01.ಬಿಡುಗಡೆಯಾದ ಹೋಂಡಾ ಆಕ್ಟಿವಾ 5ಜಿ ಬಗ್ಗೆ ನಿಮಗೆಷ್ಟು ಗೊತ್ತು.?

02.ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

03.ಬಜಾಜ್ ಡೋಮಿನಾರ್ 400 v/s ಆರ್‌ಇ ಹಿಮಾಲಯನ್... ಈ ಬಾರಿ ಟಾಂಗ್ ಕೊಟ್ಟವರು ಯಾರು?

04.30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

English summary
Tata Nexon XZ Variant Launched In India; Prices Start At Rs 7.99 Lakh.
Story first published: Tuesday, March 27, 2018, 11:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark