ಬಜಾಜ್ ಡೋಮಿನಾರ್ 400 v/s ಆರ್‌ಇ ಹಿಮಾಲಯನ್... ಈ ಬಾರಿ ಟಾಂಗ್ ಕೊಟ್ಟವರು ಯಾರು?

Written By:

ಭಾರತದಲ್ಲಿ ಬಜಾಜ್ ಡೋಮಿನಾರ್ 400 ಬೈಕ್‌ಗಳನ್ನು ಬಿಡುಗೊಂಡ ದಿನದಿಂದಲೂ ನೇರವಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದು, ಹಾಥಿ ಮತ್ ಪಾಲೊ ಎನ್ನುವ ಜಾಹೀರಾತು ಸರಣಿ ಮೂಲಕ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಸಾಮರ್ಥ್ಯದ ಕುರಿತು ಕಾಲೆಳೆಯುವ ಪ್ರಯತ್ನ ಮಾಡುತ್ತಲೇ ಇದೆ.

ಬಜಾಜ್ ಡೋಮಿನಾರ್ 400 v/s ಆರ್‌ಇ ಹಿಮಾಲಯನ್... ಈ ಬಾರಿ ಟಾಂಗ್ ಕೊಟ್ಟವರು ಯಾರು?

'ಹಾಥಿ ಮತ್ ಪಾಲೊ' ಎನ್ನುವ ಜಾಹೀರಾತು ಸರಣಿ ಮೂಲಕ ಇದುವರೆಗೆ ಬರೋಬ್ಬರಿ 5 ಜಾಹೀರಾತುಗಳನ್ನು ಹೊರತಂದಿರುವ ಬಜಾಜ್ ಸಂಸ್ಥೆಯು, ಪ್ರತಿ ಜಾಹೀರಾತಿನಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಡೋಮಿನಾರ್ 400 ಬೈಕ್‌ಗಳ ಮುಂದೆ ಬಚ್ಚಾ ಎನ್ನುವಂತೆ ಬಿಂಬಿಸುತ್ತಲೇ ಬಂದಿದೆ.

ಬಜಾಜ್ ಡೋಮಿನಾರ್ 400 v/s ಆರ್‌ಇ ಹಿಮಾಲಯನ್... ಈ ಬಾರಿ ಟಾಂಗ್ ಕೊಟ್ಟವರು ಯಾರು?

ಪ್ರತಿ ಜಾಹೀರಾತಿನಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಆನೆಗೆ ಹೋಲಿಸಿ ಜಾಹೀರಾತುಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಮದ್ದಾನೆ ಹಾಗೇ ಇರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಅಷ್ಟೇನು ಚುರುತನ ಹೊಂದಿಲ್ಲ ಎಂಬ ಸಂದೇಶವನ್ನು ಬಿತ್ತರಿಸಲಾಗುತ್ತಿದೆ.

ಬಜಾಜ್ ಡೋಮಿನಾರ್ 400 v/s ಆರ್‌ಇ ಹಿಮಾಲಯನ್... ಈ ಬಾರಿ ಟಾಂಗ್ ಕೊಟ್ಟವರು ಯಾರು?

ಆದ್ರೆ 'ಅತ್ತೆಗೊಂದು ಕಾಲ ಸೊಸೆಗೂ ಒಂದು ಕಾಲ' ಎನ್ನುವ ಗಾದೆ ಮಾತಿನಂತೆ ಈ ಬಾರಿ ಡೋಮಿನಾರ್ 400 ಬೈಕ್‌ಗಳು ಹಿಮಾಲಯನ್ ಬೈಕಿನ ಆಪ್ ರೋಡ್ ಕೌಶಲ್ಯದ ಮುಂದೆ ನೆಲಕಚ್ಚಿದೆ. ಹೌದು, ಆಪ್ ರೋಡ್ ಪ್ರದರ್ಶನದ ವೇಳೆ ಗುಡ್ಡಗಾಡು ಪ್ರದೇಶದಲ್ಲಿ ಸಲೀಸಾಗಿ ಏರಿದ ಹಿಮಾಲಯನ್ ಬೈಕ್‌ಗಳ ಕಸರತ್ತು ಮೆಚ್ಚಲೇಬೇಕು.

ಇದೇ ವೇಳೆ ಹಿಮಾಲಯನ್ ಬೈಕಿಗೆ ಪೈಪೋಟಿ ನೀಡಲು ಬಂದಿದ್ದ ಬಜಾಜ್ ಡೋಮಿನಾರ್ 400 ಬೈಕ್‌ ಕಡಿದಾದ ಪ್ರದೇಶಗಳಲ್ಲಿ ಮುನ್ನಗ್ಗಲು ಸಾಧ್ಯವಾಗದೇ ಮುಗ್ಗರಿಸಿತು. ನಂತರ ಇತರರ ಸಹಾಯದೊಂದಿಗೆ ಗುರಿತಲುಪುವ ಪ್ರಯತ್ನ ಮಾಡಿದೆ.

ಬಜಾಜ್ ಡೋಮಿನಾರ್ 400 v/s ಆರ್‌ಇ ಹಿಮಾಲಯನ್... ಈ ಬಾರಿ ಟಾಂಗ್ ಕೊಟ್ಟವರು ಯಾರು?

ಜೊತೆಗೆ ಡೋಮಿನಾರ್ 400 ಬೈಕ್ ಸಾಮರ್ಥ್ಯವನ್ನು ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಂತಲೂ ಒಂದು ಪಟ್ಟು ಹೆಚ್ಚು ಎಂದಿದ್ದ ಬಜಾಜ್, ಆರ್‌ಇ ಬೈಕ್ ಮಾಲೀಕರನ್ನು ತನ್ನತ್ತ ಸೆಳೆಯುವ ತಂತ್ರ ನಡೆಸುತ್ತಿದೆ.

ಬಜಾಜ್ ಡೋಮಿನಾರ್ 400 v/s ಆರ್‌ಇ ಹಿಮಾಲಯನ್... ಈ ಬಾರಿ ಟಾಂಗ್ ಕೊಟ್ಟವರು ಯಾರು?

ಆದರೆ ಇದೀಗ ಬಂದಿರುವ ಹೊಸ ವಿಡಿಯೋಯೊಂದು ಬಜಾಜ್ ಸಂಸ್ಥೆಗೆ ಪರೋಕ್ಷ ಟಾಂಗ್ ನೀಡುತ್ತಿದ್ದು, ಈ ಮೊದಲು ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳು ಹಿಯಾಳಿಸಿದ್ದ ಬಜಾಜ್ ಸಂಸ್ಥೆಗೆ ಆರ್‌ಬಿ ಅಭಿಮಾನಿಗಳು ಸಹ ಇದನ್ನೇ ಮುಂದಿಟ್ಟುಕೊಂಡು ಕಾಲೆಳೆಯುತ್ತಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!

02. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

03. ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

04. ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಜ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!!

05. ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು...

Read more on royal enfield bajaj
English summary
Royal Enfield Himalayan Vs Bajaj Dominar- This Time The Dominar Is Left In The Dirt.
Story first published: Saturday, March 24, 2018, 19:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark