ತಾಂತ್ರಿಕವಾಗಿ ಉತ್ತಮವಾಗಿದ್ದರೂ ಫ್ಲಾಪ್ ಆದ ಕಾರುಗಳಿವು..!
ಅನೇಕ ಕಾರುಗಳು ದೇಶಿಯ ಮಾರುಕಟ್ಟೆಗೆ ಕಾಲಿಟ್ಟರೂ ಹೆಚ್ಚು ಮಾರಾಟವಾಗಲೇ ಇಲ್ಲ. ಅವುಗಳಲ್ಲಿ ಕೆಲವನ್ನು ನಾವು ನೆನಪಿಸಿಕೊಳ್ಳಬೇಕು. ನೀವು ಪೆಟ್ರೋಲ್ ಮಾದರಿಯ ಕಾರುಗಳನ್ನು ಪ್ರೀತಿಸುವವರಾದರೆ ನೀವು ಖಂಡಿತವಾಗಿಯೂ ಈ ಕಾರುಗಳನ್ನು ಇಷ್ಟಪಡುವಿರಿ. ಈ ರೀತಿ ದೇಶಿಯ ಮಾರುಕಟ್ಟೆಗೆ ಕಾಲಿಟ್ಟ ಕಾರುಗಳು ಒಳ್ಳೆಯ ಪರ್ಫಾಮೆನ್ಸ್ ಹಾಗೂ ಅನೇಕ ಹೊಸ ಫೀಚರ್‍ಗಳನ್ನು ಹೊಂದಿದ್ದವು.

ಈ ಲೇಖನದಲ್ಲಿ ನಾವು ಹೆಚ್ಚು ಇಷ್ಟಪಟ್ಟ ಆದರೆ ಮಾರಾಟದಲ್ಲಿ ಅಷ್ಟೇನೂ ಪ್ರಗತಿ ಕಾಣದ ಐದು ಕಾರುಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ದೇಶಿಯ ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಆದ ಹಲವಾರು ಬದಲಾವಣೆಗಳಿಂದ ಮುಂಚೆ ಇದ್ದ ಕಾರುಗಳಿಗೂ, ಈಗಿರುವ ಕಾರುಗಳಿಗೂ ಅನೇಕ ವ್ಯತ್ಯಾಸಗಳಾಗಿವೆ. ಈ ಲೇಖನದಲ್ಲಿ ಮುಂಚೆ ಇದ್ದ ಕಾರುಗಳ ಬಗ್ಗೆ, ಅವುಗಳು ಮಾರುಕಟ್ಟೆಯಿಂದ ಕಣ್ಮರೆಯಾದ ಕಾರಣಗಳ ಬಗೆಗಿನ ಮಾಹಿತಿಯನ್ನು ನೀಡುತ್ತಿದ್ದೇವೆ.

ಫೋರ್ಡ್ ಮಾಂಡಿಯೊ
ನೀವು ಈ ಕಾರಿನಲ್ಲಿದ್ದರೆ ಅಥವಾ ಹೆಚ್ಚು ಮುಖ್ಯವಾಗಿ ಅದನ್ನು ಚಾಲನೆ ಮಾಡಿದ್ದರೆ, ಅದರ ಅನುಭವವನ್ನು ಮಿಸ್ ಮಾಡಿಕೊಳ್ಳುತ್ತಿರಿ. ಇದು ಬಿಡುಗಡೆಯಾದ ಕಾಲಕ್ಕೆ ಅಸಾಧಾರಣವಾದ ಕಾರ್ ಆಗಿತ್ತು. ಅದ್ಭುತ ಪ್ಯಾಕೇಜ್ ಹೊಂದಿದ್ದ ಈ ಕಾರ್ ಅನ್ನು ಆಮದು ಮಾಡಿಕೊಂಡು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು.

ದುಬಾರಿ ಬೆಲೆಯ ನಿರ್ವಹಣಾ ವೆಚ್ಚ ಹಾಗೂ ಬಿಡಿಭಾಗಗಳ ಸೀಮಿತ ಲಭ್ಯತೆಯಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ವಿಫಲವಾಯಿತು. ಬಿಡುಗಡೆಯಾದ ಸಮಯದಲ್ಲಿ ಈ ಕಾರು ಐಷಾರಾಮಿ ಸೆಡಾನ್ ಆಗಿತ್ತು. ಆ ಸಮಯದಲ್ಲಿ ಫೋರ್ಡ್ ಕಂಪನಿಯ ಸೇವೆಗಳು ದುಬಾರಿಯಾಗಿದ್ದ ಈ ಕಾರಣ ಈ ಕಾರಿನ ಮಾರಾಟವು ಕುಸಿಯಿತು. ಈಗ ಫೋರ್ಡ್ ಕಂಪನಿಯು ಕೈಗೆಟುಕುವ ದರಗಳೊಂದಿಗೆ ಸ್ಥಳೀಯವಾಗಿ ಹೊಸ ಕಾರುಗಳನ್ನು ತಯಾರಿಸುತ್ತಿದೆ.

ಒಪೆಲ್ ವೆಕ್ಟ್ರಾ
ಒಪೆಲ್ ವೆಕ್ಟ್ರಾ ಕಾರು ದುಬಾರಿ ನಿರ್ವಹಣಾ ವೆಚ್ಚ, ಕಳಪೆ ಮರುಮಾರಾಟ ಹಾಗೂ ಬಿಡಿಭಾಗಗಳ ಕೊರತೆಗೆ ಬಲಿಯಾದ ಮತ್ತೊಂದು ಕಾರ್ ಆಗಿದೆ. ಔಟ್‍ಡೇಟೆಡ್ ಕಾರುಗಳಾದ ಅಸ್ಟ್ರಾ ಹಾಗೂ ಕೊರ್ಸಾ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಮೂಲಕ ಒಪೆಲ್ ಕಂಪನಿಯು ಭಾರತದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ನಂತರ, ಇದು ವೆಕ್ಟ್ರಾ ಕಾರುಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡಿತು. ಫೋರ್ಡ್ ಕಂಪನಿಯು ಭಾರತದಲ್ಲಿ ಹೆಸರು ಕೆಡಿಸಿಕೊಂಡಿದ್ದರ ಪರಿಣಾಮವಾಗಿ ವೆಕ್ಟ್ರಾ ಕಾರುಗಳ ಮಾರಾಟವು ಕುಸಿಯಿತು.
MOST READ: ಕಾರಿನೊಳಗೆ ಸಿಲುಕಿದ್ದ ಮಗು- ಕೊನೆಗೂ ಬಚಾವ್ ಆಗಿದ್ದು ಹೇಗೆ ಗೊತ್ತಾ?

ಫಿಯೆಟ್ ಪಾಲಿಯೊ
ನೀವು ಪಾಲಿಯೊವನ್ನು ಓಡಿಸಿದ್ದರೆ, ಖಂಡಿತವಾಗಿಯೂ ಈ ಕಾರ್ ಅನ್ನು ಹೊಂದಿರುವ ಸಾಧ್ಯತೆಗಳಿವೆ. ಇದೊಂದು ಅದ್ಭುತವಾದ ಹ್ಯಾಚ್‌ಬ್ಯಾಕ್ ಕಾರ್ ಆಗಿತ್ತು. 1.6 ಲೀಟರ್ ಪೆಟ್ರೋಲ್ ಹಾಗೂ 1.9-ಲೀಟರ್ ಡೀಸೆಲ್ ಎಂಜಿನ್‍ಗಳನ್ನು ಹೊಂದಿದ್ದ ಪಾಲಿಯೊ ಕಾರು ರಾಕೆಟ್ ರೀತಿಯಲ್ಲಿತ್ತು. ಹೆಚ್ಚಿನ ಬಾರಿ ಬ್ರೆಜಿಲ್‍ನಿಂದ ಆಮದು ಮಾಡಿಕೊಳ್ಳಬೇಕಿದ್ದ ದುಬಾರಿ ಬೆಲೆಯ ಬಿಡಿಭಾಗಗಳಿಂದಾಗಿ ಹಾಗೂ ಕಡಿಮೆ ಮೈಲೇಜ್ ನೀಡುತ್ತಿದ್ದ ಪೆಟ್ರೋಲ್ ಎಂಜಿನ್‌ನಿಂದಾಗಿ ಈ ಕಾರಿನ ಮರುಮಾರಾಟ ಮೌಲ್ಯವು ಕಡಿಮೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲಿಲ್ಲ.
MOST READ: ಬಿಎಂಡಬ್ಲ್ಯು ಎಂ8 ಕಾರು ಗೆದ್ದ ಭಾರತೀಯ ಗಾಲ್ಫ್ ಆಟಗಾರ

ಹ್ಯುಂಡೈ ಟೆರಾಕನ್
ಈ ಕಾರು ಹ್ಯುಂಡೈ ಕಂಪನಿಯ ಮೊದಲ ಎಸ್‌ಯುವಿ. ಹೆಚ್ಚಿನ ಬೆಲೆಯಿದ್ದ ಕಾರಣಕ್ಕೆ ಹೆಚ್ಚು ಮಾರಾಟವಾಗಲಿಲ್ಲ. ಈ ಕಾರ್ ಅನ್ನು ಸ್ಥಳೀಕರಿಸಿದ್ದರೆ, ಭಾರತದಲ್ಲಿ ಹೆಚ್ಚು ಜನಪ್ರಿಯವಾಗುವ ಸಾಧ್ಯತೆಗಳಿದ್ದವು. ಆರಾಮದಾಯಕ ಚಾಲನಾ ಅನುಭವವನ್ನು ಹೊಂದಿತ್ತು. ಹೆಚ್ಚು ಆಕರ್ಷಣಿಯವಾಗಿತ್ತು. ಎಸ್‍ಯುವಿ ಮಾರುಕಟ್ಟೆಯಲ್ಲಿ ಆರಂಭದಲ್ಲಿಯೇ ಎಡವಿದರೂ, ಈಗ ಹ್ಯುಂಡೈ ಕಂಪನಿಯು ಈ ಸೆಗ್‍ಮೆಂಟಿನಲ್ಲಿ ಮುಂಚೂಣಿಯಲ್ಲಿದೆ.
MOST READ: ಕವಾಸಕಿ ನಿಂಜಾ300 ಬೈಕಿಗೆ ಹೆಚ್ಚಿದ ಬೇಡಿಕೆ

ಮಾರುತಿ ಸುಜುಕಿ ಕಿಜಾಶಿ
ಅದ್ಭುತವಾದ ಡ್ರೈವಿಂಗ್ ಅನುಭವವನ್ನು ನೀಡುತ್ತಿದ್ದ ಈ ಕಾರು, ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲಿಲ್ಲ. ಪ್ರೀಮಿಯಂ ಬೆಲೆಯನ್ನು ಹೊಂದಿದ್ದ ಕಾರಣ ಭಾರತೀಯ ಗ್ರಾಹಕರನ್ನು ಆಕರ್ಷಿಸಲಿಲ್ಲ. ಇದು ಈ ಸೆಡಾನ್ ಕಾರಿನ ಅವಸನಕ್ಕೆ ಕಾರಣವಾಯಿತು. ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ ಡೀಸೆಲ್ ಕಾರುಗಳು ಹೊಂದಿದ್ದ ಬೆಲೆಯನ್ನು ಈ ಕಾರಿನ ಪೆಟ್ರೋಲ್ ಆವೃತ್ತಿ ಹೊಂದಿತ್ತು. ಆ ಸಮಯದಲ್ಲಿ ರಾಕೆಟ್‍ನಂತಹ ಡೀಸೆಲ್ ಎಂಜಿನ್ ಹೊಂದಿದ್ದ ಚೇವಿ ಕ್ರೂಜ್ ಕಾರು ಯಶಸ್ವಿಯಾದ ಕಾರಣ ಮಾರುತಿ ಕಿಜಾಶಿ ವಿಫಲವಾಯಿತು.


Click it and Unblock the Notifications