ಅಗ್ರಸ್ಥಾನದಲ್ಲಿ ಮುಂದುವರೆದ ಮಾರುತಿ ಸುಜುಕಿ ಎರ್ಟಿಗಾ

ಹಬ್ಬದ ವಾತಾವರಣವು ಕಳೆಗುಂದಿದ್ದ ದೇಶಿಯ ಆಟೋ ಮೊಬೈಲ್ ಉದ್ಯಮಕ್ಕೆ ಚೇತರಿಕೆಯನ್ನು ನೀಡಿದೆ. ಕಳೆದ 8-9 ತಿಂಗಳುಗಳಿಗೆ ಹೋಲಿಸಿದರೆ ಬಹುತೇಕ ಎಲ್ಲಾ ಸೆಗ್‍‍ಮೆಂಟಿನಲ್ಲಿರುವ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿವೆ.

ಅಗ್ರಸ್ಥಾನದಲ್ಲಿ ಮುಂದುವರೆದ ಮಾರುತಿ ಸುಜುಕಿ ಎರ್ಟಿಗಾ

ಎಂಪಿವಿ ಸೆಗ್‍‍ಮೆಂಟಿನಲ್ಲಿರುವ ವಾಹನಗಳೂ ಸಹ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿವೆ. ಈ ಸೆಗ್‍ಮೆಂಟ್ ವರ್ಷದಿಂದ ವರ್ಷಕ್ಕೆ 32% ಬೆಳವಣಿಗೆಯನ್ನು ದಾಖಲಿಸುತ್ತಿದೆ. ಈ ಪ್ರಮಾಣವು ಸದ್ಯದ ಪರಿಸ್ಥಿತಿಯಲ್ಲಿ ಶ್ಲಾಘನೀಯ. ಈ ಸೆಗ್‍‍ಮೆಂಟಿನಲ್ಲಿ ಹೊಸದಾಗಿ ಬಿಡುಗಡೆಯಾಗಿರುವ 2018 ಎರ್ಟಿಗಾ, ಮಾರುತಿ ಎಕ್ಸ್‌ಎಲ್ 6 ಹಾಗೂ ರೆನಾಲ್ಟ್ ಟ್ರೈಬರ್ ವಾಹನಗಳು ಹೆಚ್ಚು ಮಾರಾಟವನ್ನು ದಾಖಲಿಸಿವೆ.

ಅಗ್ರಸ್ಥಾನದಲ್ಲಿ ಮುಂದುವರೆದ ಮಾರುತಿ ಸುಜುಕಿ ಎರ್ಟಿಗಾ

ಈಗಿರುವ ಎರ್ಟಿಗಾವನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಆ ವೇಳೆ ಕಡಿಮೆ ಪ್ರಮಾಣದಲ್ಲಿ ಮಾರಾಟವಾಗಿತ್ತು. ಈ ವರ್ಷ ಅಕ್ಟೋಬರ್ ತಿಂಗಳಿನಲ್ಲಿ 418%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಅಗ್ರಸ್ಥಾನದಲ್ಲಿ ಮುಂದುವರೆದ ಮಾರುತಿ ಸುಜುಕಿ ಎರ್ಟಿಗಾ

ಎರ್ಟಿಗಾದಂತೆಯೇ ಕಾಣುವ ಎಕ್ಸ್‌ಎಲ್ 6 ಎಂಪಿವಿಯ 4,328 ಯುನಿಟ್‌ಗಳು ಕಳೆದ ತಿಂಗಳು ಮಾರಾಟವಾಗಿವೆ. ಎರ್ಟಿಗಾ ಹಾಗೂ ಎಕ್ಸ್‌ಎಲ್ 6ಗಳ ಒಟ್ಟಾರೆ ಮಾರಾಟವನ್ನು ಒಟ್ಟುಗೂಡಿಸಿದರೆ, ಈ ಸೆಗ್‍‍ಮೆಂಟಿನಲ್ಲಿ 39% ಕೊಡುಗೆ ನೀಡಿವೆ.

ಅಗ್ರಸ್ಥಾನದಲ್ಲಿ ಮುಂದುವರೆದ ಮಾರುತಿ ಸುಜುಕಿ ಎರ್ಟಿಗಾ

ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ಎರಡೂ ಎಂಪಿವಿಗಳ ಮಾರಾಟವು ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಬಿಡುಗಡೆಯಾದ, ರೆನಾಲ್ಟ್ ಟ್ರೈಬರ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ.

ಅಗ್ರಸ್ಥಾನದಲ್ಲಿ ಮುಂದುವರೆದ ಮಾರುತಿ ಸುಜುಕಿ ಎರ್ಟಿಗಾ

ಸೆಪ್ಟೆಂಬರ್ ತಿಂಗಳಿಗಿಂತ ಅಕ್ಟೋಬರ್ ತಿಂಗಳಿನಲ್ಲಿ ಟ್ರೈಬರ್‍‍ನ 530 ಯುನಿ‍‍ಟ್‍‍ಗಳು ಹೆಚ್ಚಿಗೆ ಮಾರಾಟವಾಗಿವೆ. ಅಕ್ಟೋಬರ್ ತಿಂಗಳಿನಲ್ಲಿ 5,240 ಯುನಿ‍‍ಟ್‍‍ಗಳು ಮಾರಾಟವಾಗಿವೆ. ಈ ಸೆಗ್‍‍ಮೆಂಟಿನ ಮಾರಾಟ ಪಟ್ಟಿಯ ಟಾಪ್ 5 ಸ್ಥಾನಗಳಲ್ಲಿರುವ ಇತರ ಎರಡು ಕಾರುಗಳೆಂದರೆ ಮಹೀಂದ್ರಾ ಬೊಲೆರೊ ಹಾಗೂ ಟೊಯೋಟಾ ಇನೊವಾ.

ಸ್ಥಾನ ಮಾದರಿ ಮಾರಾಟ ಪ್ರಮಾಣ (ಯುನಿಟ್‍‍ಗಳಲ್ಲಿ)

1 ಮಾರುತಿ ಎರ್ಟಿಗಾ 7,197
2 ಮಹೀಂದ್ರಾ ಬೊಲೆರೊ 5,884
3 ರೆನಾಲ್ಟ್ ಟ್ರೈಬರ್ 5,240
4 ಟೊಯೊಟಾ ಇನೊವಾ ಕ್ರಿಸ್ಟಾ 5,062
5 ಮಾರುತಿ ಎಕ್ಸ್ ಎಲ್6 4,328
6 ಮಹೀಂದ್ರಾ ಮರಾಜೊ 1,044
7 ಹೋಂಡಾ ಬಿ‍ಆರ್ - ವಿ 284
8 ಟಾಟಾ ಹೆಕ್ಸಾ 229
9 ದಟ್ಸನ್ ಗೋ ಪ್ಲಸ್ 189
10 ಮಹೀಂದ್ರಾ ಜೈಲೊ 87
ಅಗ್ರಸ್ಥಾನದಲ್ಲಿ ಮುಂದುವರೆದ ಮಾರುತಿ ಸುಜುಕಿ ಎರ್ಟಿಗಾ

ಈ ಎರಡೂ ವಾಹನಗಳು ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿದ್ದು, ತಮ್ಮ ಸೆಗ್‍‍ಮೆಂಟಿನಲ್ಲಿ ಪ್ರಾಬಲ್ಯ ಹೊಂದಿವೆ. ಮಹೀಂದ್ರಾ ಬೊಲೆರೊದ 5,884 ಯುನಿ‍‍ಟ್‍‍ಗಳು ಮಾರಾಟವಾಗಿದ್ದರೆ, ಇನೊವಾದ 5,062 ಯುನಿಟ್‍‍ಗಳು ಮಾರಾಟವಾಗಿವೆ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಅಗ್ರಸ್ಥಾನದಲ್ಲಿ ಮುಂದುವರೆದ ಮಾರುತಿ ಸುಜುಕಿ ಎರ್ಟಿಗಾ

ಕಳೆದ ವರ್ಷ ಬಿಡುಗಡೆಯಾದ ಮಹೀಂದ್ರಾ ಕಂಪನಿಯ ಮತ್ತೊಂದು ಎಂಪಿವಿಯಾದ ಮರಾಜೊ ಪ್ರತಿ ತಿಂಗಳು ನಿಧಾನಗತಿಯ ಮಾರಾಟವನ್ನು ಕಾಣುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಮರಾಜೊದ ಕೇವಲ 1,044 ಯುನಿಟ್‍‍ಗಳು ಮಾರಾಟವಾಗಿವೆ. 2018ರ ಅಕ್ಟೋಬರ್‍‍ನಲ್ಲಿ 2,766 ಯುನಿಟ್‍‍ಗಳು ಮಾರಾಟವಾಗಿದ್ದವು.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಅಗ್ರಸ್ಥಾನದಲ್ಲಿ ಮುಂದುವರೆದ ಮಾರುತಿ ಸುಜುಕಿ ಎರ್ಟಿಗಾ

ಈ ಮೂಲಕ ಒಟ್ಟಾರೆ 72% ನಷ್ಟು ಕುಸಿತ ಕಂಡಿದೆ. ಈ ಸೆಗ್‍‍ಮೆಂಟಿನಲ್ಲಿರುವ ಇತರ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿಲ್ಲ. ಕಳೆದ ವರ್ಷದ ಅಕ್ಟೋಬರ್‌ನಿಂದ ಮಾರಾಟ ಪ್ರಮಾಣವು ಕಡಿಮೆಯಾಗಿದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಅಗ್ರಸ್ಥಾನದಲ್ಲಿ ಮುಂದುವರೆದ ಮಾರುತಿ ಸುಜುಕಿ ಎರ್ಟಿಗಾ

ಅಕ್ಟೋಬರ್ ತಿಂಗಳಿನಲ್ಲಿ ಹೋಂಡಾ ಬಿ‍ಆರ್‍‍ವಿಯ 284 ಯುನಿಟ್‍‍ಗಳು, ಟಾಟಾ ಹೆಕ್ಸಾದ 229 ಯುನಿಟ್‍‍ಗಳು, ದಟ್ಸನ್ ಗೋ ಪ್ಲಸ್‍‍ನ 189 ಯುನಿಟ್‍‍ಗಳು, ಮಹೀಂದ್ರಾ ಜೈಲೊದ 87 ಯುನಿಟ್‍‍ಗಳು, ರೆನಾಲ್ಟ್ ಲಾಡ್ಜಿಯ 48 ಯುನಿಟ್‍‍ಗಳು ಮಾರಾಟವಾಗಿವೆ. ಹೊಸ ಮಾಲಿನ್ಯ ನಿಯಮಗಳ ಹಿನ್ನೆಲೆಯಲ್ಲಿ ಟಾಟಾ ಸುಮೋ ವಾಹನದ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

Article Published On: Thursday, November 7, 2019, 13:03 [IST]
English summary
Bestselling mpvs in India top 10 mpvs for october 2019 - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+