ಪ್ರಪಂಚದ ಅತಿ ಗಾಢ ಬಣ್ಣದಲ್ಲಿ ಬರಲಿದೆ ಬಿ‍ಎಂ‍‍ಡಬ್ಲ್ಯು ಎಕ್ಸ್6

ಬಿ‍ಎಂ‍‍ಡಬ್ಲ್ಯು ಮೂರನೇ ತಲೆಮಾರಿನ ಎಕ್ಸ್6 ಕಾರ್ ಅನ್ನು ವಾಂಟಾಬ್ಲಾಕ್ ಬಣ್ಣದಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಕಾರ್ ಅನ್ನು ಮುಂಬರುವ ಫ್ರಾಂಕ್‍‍ಫರ್ಟ್ ಮೋಟಾರ್ ಶೋದಲ್ಲಿ ಅನಾವರಣಗೊಳಿಸಲಾಗುವುದು. ವಾಂಟಾಬ್ಲಾಕ್ ಪ್ರಪಂಚದ ಅತಿ ಗಾಢ ಬಣ್ಣವಾಗಿದೆ. ಈ ಬಣ್ಣವು ಕಾರಿನಲ್ಲಿರುವ ಎಲ್ಲಾ ವಿನ್ಯಾಸಗಳನ್ನು ಹಾಗೂ ಫೀಚರ್‍‍ಗಳನ್ನು ಕಾಣದಂತೆ ಮಾಡುತ್ತದೆ.

ಪ್ರಪಂಚದ ಅತಿ ಗಾಢ ಬಣ್ಣದಲ್ಲಿ ಬರಲಿದೆ ಬಿ‍ಎಂ‍‍ಡಬ್ಲ್ಯು ಎಕ್ಸ್6

ಬಿ‍ಎಂ‍‍ಡಬ್ಲ್ಯು ಎಕ್ಸ್ 6, ವಾಂಟಾಬ್ಲಾಕ್ ವಿಬಿ‍ಎಕ್ಸ್ 2 ಬಣ್ಣವನ್ನು ಹೊಂದಿರುವ ಪ್ರಪಂಚದ ಮೊದಲ ಹಾಗೂ ಏಕೈಕ ಕಾರ್ ಆಗಿದೆ. ವಾಂಟಾಬ್ಲಾಕ್ ಬಣ್ಣವು ಬೆಳಕನ್ನು ಹೀರುವ ತನ್ನ ಗುಣಕ್ಕೆ ಹೆಸರುವಾಸಿಯಾಗಿದೆ. ಈ ಬಣ್ಣವು 99.96%ನಷ್ಟು ಬೆಳಕನ್ನು ಹೀರುತ್ತದೆ. ಈ ಬಣ್ಣವು ಪ್ರಪಂಚದ ಅತಿ ಗಾಢವಾದ ಬಣ್ಣವಾಗಿದೆ. ಈ ವಿಶೇಷವಾದ ಬಿಎಂಡಬ್ಲ್ಯು ಎಕ್ಸ್ 6 ಕಾರ್ ಅನ್ನು ಬಿಎಂಡಬ್ಲ್ಯು ಹಾಗೂ ಸರ್ರೆ ನ್ಯಾನೋಸಿಸ್ಟಮ್ಸ್ ಸಹಭಾಗಿತ್ವದಲ್ಲಿ ತಯಾರಿಸಲಾಗಿದೆ. ಈ ಕಾರ್ ಅನ್ನು ಕೇವಲ ಪ್ರದರ್ಶನಕ್ಕಾಗಿ ಬಳಸಲಾಗುವುದು.

ಪ್ರಪಂಚದ ಅತಿ ಗಾಢ ಬಣ್ಣದಲ್ಲಿ ಬರಲಿದೆ ಬಿ‍ಎಂ‍‍ಡಬ್ಲ್ಯು ಎಕ್ಸ್6

ವಾಂಟಾಬ್ಲಾಕ್ ಬಣ್ಣವನ್ನು ಹೊಂದಿರುವ ಎಕ್ಸ್ 6 ಕಾರಿನಲ್ಲಿ ಕಾಣುವ ಫೀಚರ್‍‍ಗಳೆಂದರೆ ಪ್ರಜ್ವಲಿಸುವ ಕಿಡ್ನಿ ಗ್ರಿಲ್, ಹೆಡ್‌ಲ್ಯಾಂಪ್‌ ಹಾಗೂ ಟೇಲ್ ಲ್ಯಾಂಪ್‌ಗಳು. ಸರ್ರೆ ನ್ಯಾನೊ ಸಿಸ್ಟಮ್ಸ್ ಸಂಸ್ಥಾಪಕ ಹಾಗೂ ಮುಖ್ಯ ತಾಂತ್ರಿಕ ಅಧಿಕಾರಿ ಬೆನ್ ಜೆನ್ಸನ್‍‍ರವರು ಮಾತನಾಡಿ, ನಾವು ಈ ಹಿಂದೆ ವಿವಿಧ ವಾಹನ ತಯಾರಕರ ಹಲವಾರು ಮನವಿಗಳನ್ನು ತಿರಸ್ಕರಿಸಿದ್ದೇವೆ. ಬಿಎಂಡಬ್ಲ್ಯು ಎಕ್ಸ್ 6 ಹಾಗೂ ಅದರ ವಿಶಿಷ್ಟವಾದ, ಅಭಿವ್ಯಕ್ತಿಶೀಲ ವಿನ್ಯಾಸವನ್ನು ಆಲೋಚನೆಯನ್ನು ಉತ್ತೇಜಿಸಲು ಮುಂದಾಗಿದ್ದೇವೆ ಎಂದು ಹೇಳಿದರು.

ಪ್ರಪಂಚದ ಅತಿ ಗಾಢ ಬಣ್ಣದಲ್ಲಿ ಬರಲಿದೆ ಬಿ‍ಎಂ‍‍ಡಬ್ಲ್ಯು ಎಕ್ಸ್6

ಮಾನವನ ಕಣ್ಣು ವಾಂಟಾಬ್ಲಾಕ್ ಅನ್ನು ಎರಡು ಆಯಾಮಗಳಲ್ಲಿ ನೋಡಲಿದೆ. ಹೊಸ ಬಿಎಂಡಬ್ಲ್ಯು ಎಕ್ಸ್ 6 ವಾಂಟಾಬ್ಲಾಕ್ ವಿಬಿಎಕ್ಸ್ 2 ಫಿನಿಶ್ ಅನ್ನು ಸರಿದೂಗಿಸಲು ಆಕರ್ಷಕವಾದ ಕಾಂಟ್ರಾಷ್ಟ್ ಗಳನ್ನು ನೀಡಿದೆ. ಇದರಿಂದಾಗಿ ಯಾವುದೇ ವಸ್ತುವನ್ನು ಮೂರು ಆಯಾಮಗಳಲ್ಲಿ ನೋಡಬಹುದಾಗಿದೆ. ಈ ಕೋಟಿಂಗ್ ಅನ್ನು ಸರ್ಫೇಸ್‍‍ಗೆ ಸಿಂಪಡಿಸಬಹುದು. ಇದು 1%ನ ಹೆಮಿಸ್ಪಿರಿಕಲ್ ರಿಫ್ಲೆಕ್ಟನ್ಸ್ ಹೊಂದಿರುತ್ತದೆ. ಪ್ರತಿಯೊಂದು ಆಂಗಲ್‍‍ನಿಂದ ಸಣ್ಣ ಪ್ರಮಾಣದ ರಿಫ್ಲೆಕ್ಷನ್ ಅನ್ನು ಎನೇಬಲ್ ಮಾಡುವುದರಿಂದ ಇದನ್ನು ಸೂಪರ್ ಬ್ಲಾಕ್ ಎಂದು ಪರಿಗಣಿಸಲಾಗುತ್ತದೆ.

ಪ್ರಪಂಚದ ಅತಿ ಗಾಢ ಬಣ್ಣದಲ್ಲಿ ಬರಲಿದೆ ಬಿ‍ಎಂ‍‍ಡಬ್ಲ್ಯು ಎಕ್ಸ್6

ಈ ಬಣ್ಣವನ್ನು ಹೆಚ್ಚಾಗಿ ಬಳಸದಿರಲು ಕಾರಣವೆಂದರೆ ಬಿಎಂಡಬ್ಲ್ಯು ಎಕ್ಸ್ 6 ನಲ್ಲಿ ವಾಂಟಾಬ್ಲಾಕ್ ಬಣ್ಣವನ್ನು ಪ್ರಭಾವಶಾಲಿಯಾಗಿ ಬಳಸಲಾಗಿದೆ. ಆದರೆ ಬೇರೆ ವಸ್ತುಗಳು ಈ ರೀತಿಯಾಗಿ ಬಳಸದೇ ಅವುಗಳು ಮೂರು ಆಯಾಮವನ್ನು ಕಳೆದುಕೊಳ್ಳುತ್ತವೆ. ವಾಂಟಾ ಎಂದರೆ ವರ್ಟಿಕಲಿ ಅಲೈನ್ಡ್ ನ್ಯಾನೋ ಟ್ಯೂಬ್ ಆರೆ ಎಂಬುದಾಗಿದೆ. ಇದನ್ನು ಕಾರ್ಬನ್‍‍ನಿಂದ ತಯಾರಿಸಲಾಗಿದೆ. ಕಾರ್ಬನ್ ಅಂಶಗಳನ್ನು ಪ್ಯಾಕ್ ಮಾಡುವ ಕಾರಣ ಬೆಳಕು ಇವುಗಳ ಮೇಲೆ ರಿಫ್ಲೆಕ್ಟ್ ಆಗುವುದಿಲ್ಲ.

ಪ್ರಪಂಚದ ಅತಿ ಗಾಢ ಬಣ್ಣದಲ್ಲಿ ಬರಲಿದೆ ಬಿ‍ಎಂ‍‍ಡಬ್ಲ್ಯು ಎಕ್ಸ್6

ಆದ ಕಾರಣ ತಮ್ಮ ಸರ್ಫೆಸ್ ಮೇಲೆ ಬೀಳುವ ಯಾವುದೇ ಬೆಳಕನ್ನು ಹೀರಿಕೊಂಡು, ಅದನ್ನು ಪರಿಣಾಮಕಾರಿಯಾಗಿ ಶಾಖವಾಗಿ ಪರಿವರ್ತಿಸುತ್ತವೆ. ಈ ಬಣ್ಣದ ಮೇಲಿರುವ ಕಾರ್ಬನ್ ಅಂಶಗಳು ಮನುಷ್ಯರ ಕೂದಲುಗಿಂತ ತೆಳ್ಳಗಿರುತ್ತವೆ. ಮೊದಲ ತಲೆಮಾರಿನ ವಾಂಟಾಬ್ಲಾಕ್ ಅನ್ನು 2014 ರಲ್ಲಿ ಸರ್ರೆ ನ್ಯಾನೋಸಿಸ್ಟಮ್ಸ್ ಬಿಡುಗಡೆಗೊಳಿಸಿತ್ತು. ಮೊದಲ ಆವೃತ್ತಿಯು ಶೇಕಡಾ 99.965 ರಷ್ಟು ಬೆಳಕನ್ನು ಹೀರಿಕೊಳ್ಳುತ್ತಿತ್ತು. ಇದು ಯಾವುದೇ ರಿಫ್ಲೆಕ್ಟ್ ಹಾಗೂ ಬೆಳಕನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಪ್ರಪಂಚದ ಅತಿ ಗಾಢ ಬಣ್ಣದಲ್ಲಿ ಬರಲಿದೆ ಬಿ‍ಎಂ‍‍ಡಬ್ಲ್ಯು ಎಕ್ಸ್6

ಹೈಟೆಕ್ ಆಗಿರುವ ವಾಂಟಾಬ್ಲಾಕ್, ಮಸುಕಾದ ನಕ್ಷತ್ರಗಳು ಮತ್ತು ದೂರದ ಗೆಲಕ್ಸಿಗಳನ್ನು ವೀಕ್ಷಿಸಲು ಸಹಾಯ ಮಾಡುತ್ತದೆ. ಬಿಎಂಡಬ್ಲ್ಯು ಎಕ್ಸ್ 6 ಕಾರು 3.0 ಲೀಟರಿನ, ಟರ್ಬೋಚಾರ್ಜ್ಡ್ ಆರು ಸಿಲಿಂಡರ್ ಎಂಜಿನ್ ಹೊಂದಿದ್ದು, 300 ಬಿಹೆಚ್‌ಪಿ ಪವರ್ ಹಾಗೂ 407 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಕ್ಸ್ ಡ್ರೈವ್ 50ಐ ಟರ್ಬೊ 4.4-ಲೀಟರ್ ವಿ8, 443 ಬಿಹೆಚ್‌ಪಿ ಪವರ್ ಹಾಗೂ 650 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‍‍ಗಳು ಎಂಟು ಸ್ಫೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹಾಗೂ ಬಿಎಂಡಬ್ಲ್ಯುನ ಎಕ್ಸ್ ಡ್ರೈವ್ ಎಡಬ್ಲ್ಯೂಡಿ ಸಿಸ್ಟಂ ಹೊಂದಿವೆ.

MOST READ: ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಪ್ರಪಂಚದ ಅತಿ ಗಾಢ ಬಣ್ಣದಲ್ಲಿ ಬರಲಿದೆ ಬಿ‍ಎಂ‍‍ಡಬ್ಲ್ಯು ಎಕ್ಸ್6

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೆಚ್ಚಿನ ತಯಾರಕರು ಒಂದೇ ಕಪ್ಪು ಎಂದು ಅನೇಕ ಹೆಸರುಗಳಿಂದ ಕರೆಯುತ್ತಿದ್ದರೆ, ಬಿಎಂಡಬ್ಲ್ಯು ಮಾನದಂಡವನ್ನು ಹೆಚ್ಚಿಸಿದೆ. ಅವರು ಜಗತ್ತಿನಲ್ಲಿರುವ ಕಪ್ಪಾದ ಕಪ್ಪಾದ ಎಕ್ಸ್ 6 ಅನ್ನು ತರುತ್ತಿದ್ದಾರೆ ಮತ್ತು ಅದನ್ನು ಮನೆಯ ಟರ್ಫ್‌ನಲ್ಲಿ ತೋರಿಸುತ್ತಿದ್ದಾರೆ. ವಂಟಾಬ್ಲಾಕ್ನಲ್ಲಿ ಎಕ್ಸ್ 6 ಸಂಪೂರ್ಣವಾಗಿ ಬೆರಗುಗೊಳಿಸುತ್ತದೆ! 22 ನೇ ಶತಮಾನದ ನೈಟ್ ರೈಡರ್ ರೇಡಿಯೊದಲ್ಲಿ ಬ್ಯಾಕ್ ಇನ್ ಬ್ಲ್ಯಾಕ್ ಅನ್ನು ಕೇಳುತ್ತಿರುವುದನ್ನು ಕಿಂಡಾ ನಮಗೆ ನೆನಪಿಸುತ್ತದೆ.

Most Read Articles

Kannada
English summary
BMW X6 Arrives In Vantablack — The World's Darkest Black Car - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X