ಬಾಲಿವುಡ್ ಸ್ಟಾರ್‍‍ಗಳ ಬಳಿಯಿರುವ ಕಾರುಗಳಿವು

ಬಾಲಿವುಡ್ ಸ್ಟಾರ್‍‍ಗಳಿಗೆ ರೀಲ್ ಲೈಫ್ ನಲ್ಲಿ ಮಾತ್ರವಲ್ಲದೇ, ರಿಯಲ್ ಲೈಫ್‍‍ನಲ್ಲೂ ಕಾರ್ ಕ್ರೇಜ್ ಹೆಚ್ಚೆ ಇದೆ. ಈ ಸ್ಟಾರ್ ಗಳ ಕಾರ್ ಕ್ರೇಜ್ ಇತ್ತೀಚೆಗೆ ಟ್ರೆಂಡ್ ಆಗಿ ಬಿಟ್ಟಿದೆ. ಬಾಲಿವುಡ್‍‍ನ ಕೆಲವು ಸ್ಟಾರ್‍‍ಗಳು ತಮ್ಮ ಚಿತ್ರದ ಮೂಲಕ ಸುದ್ದಿ ಮಾಡಿಲ್ಲವಾದರೂ ಐಷಾರಾಮಿ ವಿನೂತನ ಕಾರು ಖರೀದಿಸಿ ಸುದ್ದಿಯಾಗುತ್ತಾರೆ.

ಬಾಲಿವುಡ್ ಸ್ಟಾರ್‍‍ಗಳ ಬಳಿಯಿರುವ ಕಾರುಗಳಿವು

ಬಾಲಿವುಡ್ ಸ್ಟಾರ್‍‍ಗಳಿಗೆ ದುಬಾರಿ ಮತ್ತು ಐಷಾರಾಮಿ ಕಾರುಗಳ ಮೇಲೆ ಹೆಚ್ಚು ಕ್ರೇಜ್ ಇರುವುದು ಗೊತ್ತಿರುವ ವಿಷಯವಾಗಿದೆ. ಆದರೆ ಕುತೂಹಲಕಾರಿ ವಿಷಯವೆಂದರೆ ಕೆಲವು ಬಾಲಿವುಡ್ ಸ್ಟಾರ್‍‍ಗಳಿಗೆ ಮಾಸ್ ಸೆಗ್‍‍‍ಮೆಂಟ್ ವಾಹನಗಳ ಮೇಲೆ ಹೆಚ್ಚು ಕ್ರೇಜ್ ಇದೆ. ಇಷ್ಟೇ ಅಲ್ಲದೇ ಅವರು ಮಾಸ್ ಸೆಗ್‍‍ಮೆಂಟ್ ವಾಹನಗಳನ್ನು ಹೊಂದಿದ್ದಾರೆ. ಯಾವ ಬಾಲಿವುಡ್ ಸ್ಟಾರ್ ಯಾವ ಮಾಸ್ ಸೆಗ್‍ಮೆಂಟ್ ವಾಹನವನ್ನು ಹೊಂದಿದ್ದಾರೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೋಡೊಣ.

ಬಾಲಿವುಡ್ ಸ್ಟಾರ್‍‍ಗಳ ಬಳಿಯಿರುವ ಕಾರುಗಳಿವು

ಜಾನ್ ಅಬ್ರಹಾಂ

ಮಾರುತಿ ಸುಜುಕಿ ಜಿಪ್ಸಿ

ಬಾಲಿವುಡ್ ಜನಪ್ರಿಯ ನಟ ಜಾನ್ ಅಬ್ರಹಾಂ ಅವರಿಗೆ ಕಾರು ಮತ್ತು ಬೈಕುಗಳ ಮೇಲೆ ಹೆಚ್ಚು ಕ್ರೇಜ್ ಇದೆ. ಈ ನಟನ ಬಳಿ ಕವಾಸಕಿ ಝಡ್‍ಎಕ್ಸ್ 14 ಆರ್, ಎಪ್ರಿಲಿಯಾ ಆರ್‍ಎಸ್‍‍ವಿ4 ಆರ್‍ಎಫ್, ಯಮಹಾ ವಿ-ಮ್ಯಾಕ್ಸ್, ಯಮಹಾ ವೈ‍‍ಝಡ್‍ಎಫ್ ಆರ್ 1, ಡುಕಾಟಿ ವಿ4 ಪ್ಯಾನಿಗಲ್ ಹಾಗೂ ಎಂವಿ ಅಗಸ್ಟಾ ಎಫ್3 800 ಬೈಕುಗಳಿವೆ.

ಬಾಲಿವುಡ್ ಸ್ಟಾರ್‍‍ಗಳ ಬಳಿಯಿರುವ ಕಾರುಗಳಿವು

ಇನ್ನೂ ಇವರ ಬಳಿ ನಿಸ್ಸಾನ್ ಜಿಟಿ-ಆರ್ ನಂತಹ ಐಷಾರಾಮಿ ಕಾರುಗಳಿವೆ. ಜಾನ್ ಅಬ್ರಹಾಂ ಅವರ ಬಳಿ ಐಷಾರಾಮಿ ಕಾರುಗಳ ಜೊತೆಗೆ ಮಾರುತಿ ಸುಜುಕಿ ಜಿಪ್ಸಿಯನ್ನು ಹೊಂದಿದ್ದಾರೆ. ಇವರ ಬಳಿ ಇರುವ ಜಿಪ್ಸಿಗೆ ಯಾವುದೇ ಮಾಡಿಫೈಗಳನ್ನು ಮಾಡಲಾಗಿಲ್ಲ. ಈ ಜಿಪ್ಸಿಯು ಶೋರೂಂನಿಂದ ಖರೀದಿಸಿದ ರೀತಿಯಲ್ಲಿದೆ.

ಬಾಲಿವುಡ್ ಸ್ಟಾರ್‍‍ಗಳ ಬಳಿಯಿರುವ ಕಾರುಗಳಿವು

ದಿಶಾ ಪಟಾನಿ

ಲ್ಯಾಂಡ್ ರೋವರ್

ಬಾಲಿವುಡ್ ಗ್ಲಾಮರಸ್ ಕ್ವೀನ್ ದಿಶಾ ಪಟಾನಿ ಅವರು ಇತ್ತೀಚಿಗೆ ಲ್ಯಾಂಡ್ ರೋವರ್ ಅನ್ನು ಖರೀದಿಸಿದ್ದಾರೆ. ಇದಲ್ಲದೇ ದಿಶಾ ಅವರು ಹಲವಾರು ದುಬಾರಿ ಮತ್ತು ಐಷಾರಾಮಿ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ. ಅವರ ಬಳಿ ಷೆವರ್ಲೆ ಕ್ರೂಜ್ ಮತ್ತು ಹೋಂಡಾ ಸಿವಿಕ್ ಮತ್ತು ಐಷಾರಾಮಿ ಕಾರುಗಳಾದ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಮತ್ತು ಬಿಎಂಡಬ್ಲ್ಯು 5-ಸೀರಿಸ್ ಕಾರುಗಳಿವೆ.

ಬಾಲಿವುಡ್ ಸ್ಟಾರ್‍‍ಗಳ ಬಳಿಯಿರುವ ಕಾರುಗಳಿವು

ಹೋಂಡಾ ಸಿವಿಕ್

ದಿಶಾ ಪಟಾನಿ ಅವರಿಗೆ ಕಾರುಗಳನ್ನು ಡ್ರೈವ್ ಮಾಡುವ ಕ್ರೇಜ್ ಹೆಚ್ಚಿದೆ. ಅವರು ತಮ್ಮ ಹೋಂಡಾ ಸಿವಿಕ್ ಕಾರ್ ಅನ್ನು ಹೆಚ್ಚಾಗಿ ಡ್ರೈವ್ ಮಾಡುತ್ತಾರೆ. ಇವರು ಹೋಂಡಾ ಸಿವಿಕ್ ಕಾರ್ ಅನ್ನು ಡ್ರೈವ್ ಮಾಡುವಾಗ ಹಲವು ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ಬಾಲಿವುಡ್ ಸ್ಟಾರ್‍‍ಗಳ ಬಳಿಯಿರುವ ಕಾರುಗಳಿವು

ಅಕ್ಷಯ್ ಕುಮಾರ್

ಜೀಪ್ ಕಂಪಾಸ್

ಹಲವು ಬಾಲಿವುಡ್ ಸೆಲೆಬ್ರಿಟಿಗಳು ಜೀಪ್ ಕಾಂಪಾಸ್ ಎಸ್‍‍ಯುವಿಯುಯನ್ನು ಹೊಂದಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಬಳಿಯು ಕೂಡ ಜೀಪ್ ಕಂಪಾಸ್ ಎಸ್‍ಯುವಿ ಇದೆ. ಅಕ್ಷಯ್ ಕುಮಾರ್ ಅವರು ಈ ಎಸ್‍ಯುವಿಯನ್ನು ಹೆಚ್ಚಾಗಿ ಬಳಸುವುದಿಲ್ಲ. ಕೆಲವು ಮೂಲಗಳ ವರದಿಯ ಪ್ರಕಾರ ಈ ಜೀಪ್ ಕಾಂಪಾಸ್ ಎಸ್‍‍ಯುವಿಯನ್ನು ಕುಟುಂಬದ ಬೇರೊಬ್ಬರ ಬಳಕೆಗಾಗಿ ಖರೀದಿಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಾಲಿವುಡ್ ಸ್ಟಾರ್‍‍ಗಳ ಬಳಿಯಿರುವ ಕಾರುಗಳಿವು

ಜಾಕಿ ಶ್ರಾಫ್

ಟೊಯೊಟಾ ಇನೋವಾ

ಬಾಲಿವುಡ್ ನಟ ಜಾಕಿ ಶ್ರಾಫ್ ಬೆಂಟ್ಲಿಯಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇದಲ್ಲದೇ ಇನೋವಾ ಎಂಪಿವಿ ವಾಹನವನ್ನು ಹೊಂದಿದ್ದಾರೆ. ಕೆಲವು ಬಾರಿ ಸ್ವತಃ ಅವರೇ ಡ್ರೈವ್ ಮಾಡುತ್ತಾರೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಾಲಿವುಡ್ ಸ್ಟಾರ್‍‍ಗಳ ಬಳಿಯಿರುವ ಕಾರುಗಳಿವು

ಅಮೀರ್ ಖಾನ್

ಮಹೀಂದ್ರಾ ಎಕ್ಸ್‌ಯುವಿ 500

ಬಾಲಿವುಡ್‍‍ನಲ್ಲಿ ಬುಲೆಟ್ ಫ್ರೂಫ್ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಹೊಂದಿರುವ ಏಕೈಕ ನಟ ಅಮೀರ್ ಖಾನ್ ಆಗಿದ್ದಾರೆ. ಇದಲ್ಲದೆ ಇವರ ಬಳಿ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍‍ಯುವಿಯನ್ನು ಹೊಂದಿದ್ದಾರೆ. ಎಕ್ಸ್‌ಯುವಿ 500 ಎಸ್‍‍ಯುವಿಯಲ್ಲಿ ಹಲವು ಬಾರಿ ಪ್ರಯಾಣಿಸುತ್ತಾರೆ. ಅಮೀರ್ ಖಾನ್ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಇಕೋಸ್ಪೋರ್ಟ್ ಅನ್ನು ಸಹ ಹೊಂದಿದ್ದಾರೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಬಾಲಿವುಡ್ ಸ್ಟಾರ್‍‍ಗಳ ಬಳಿಯಿರುವ ಕಾರುಗಳಿವು

ನಾನಾ ಪಟೇಕರ್

ಮಹೀಂದ್ರಾ ಸಿಜೆ 4

ನಾನಾ ಪಟೇಕರ್ ಬಾಲಿವುಡ್ ಚಿತ್ರಗಳಲ್ಲಿ ವಿಲನ್ ಪಾತ್ರಗಳಿಗೆ ಹೆಚ್ಚು ಪ್ರಸಿದ್ದಿಯನ್ನು ಪಡೆದವರು. ಇವರ ಬಳಿ ಮಹೀಂದ್ರಾ ಸಿಜೆ 4 ವಾಹನವಿದೆ. ಸಿ‍‍ಜೆ4 ವಾಹನವು ಸಾಕಷ್ಟು ವ್ಹೀಲ್‍ಬೇಸ್ ಅನ್ನು ಹೊಂದಿದೆ. ಸಿಜೆ 4 ವಾಹನವು 2.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಎಂಜಿನ್ 72 ಬಿ‍‍ಹೆಚ್‍‍ಪಿ ಪವರ್ ಮತ್ತು 154 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 3 ಸ್ಪೀಡ್ ಗೇರ್‍‍ಬಾಕ್ಸ್ ಮತ್ತು 4 ವ್ಹೀಲ್ ಡ್ರ್ರೈವ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಬಾಲಿವುಡ್ ಸ್ಟಾರ್‍‍ಗಳ ಬಳಿಯಿರುವ ಕಾರುಗಳಿವು

ಅನಿಲ್ ಕಪೂರ್

ಟಾಟಾ ಸಫಾರಿ ಸ್ಟಾರ್ಮ್

ಟಿವಿ ಕಾರ್ಯಕ್ರಮವನ್ನು ಪ್ರಮೋಟ್ ಮಾಡಲು ಟಾಟಾ ಮೋಟರ್ಸ್ ಕಂಪನಿಯು ಅನಿಲ್ ಕಪೂರ್ ಅವರಿಗೆ ಸಫಾರಿ ಸ್ಟಾರ್ಮ್ ಅನ್ನು ಉಡುಗೊರೆಯಾಗಿ ನೀಡಿತು. ಈ ಎಸ್‍‍ಯುವಿಯನ್ನು ಅನಿಲ್ ಕಪೂರ್ ಅವರು ಹೆಚ್ಚು ಬಳಸುವುದಿಲ್ಲ. ಆದರೆ ಅವರ ಬಳಿ ಇರುವ ಏಕೈಕ ಮಾಸ್-ಸೆಗ್‍‍ಮೆಂಟ್‍‍ನ ಎಸ್‍‍ಯುವಿ ಇದಾಗಿದೆ. ಟಾಟಾ ಸಫಾರಿ ಸ್ಟಾರ್ಮ್ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 148 ಬಿ‍‍ಹೆಚ್‍‍ಪಿ ಪವರ್ ಮತ್ತು 320 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಾಲಿವುಡ್ ಸ್ಟಾರ್‍‍ಗಳ ಬಳಿಯಿರುವ ಕಾರುಗಳಿವು

ಬಿಪಾಶಾ ಬಸು

ಟೊಯೊಟಾ ಫಾರ್ಚೂನರ್‍

ಹಳೆಯ ತಲೆಮಾರಿನ ಟೊಯೊಟಾ ಫಾರ್ಚೂನರ್‍‍ನಲ್ಲಿ ಬಾಲಿವುಡ್ ಬೆಡಗಿ ಬಿಪಾಶಾ ಬಸು ಹೆಚ್ಚು ಪ್ರಯಾಣಿಸುತ್ತಾರೆ. ಬಿಪಾಶಾ ಮತ್ತು ಅವರ ಪತಿ ಕರಣ್ ಗ್ರೋವರ್ ಅವರು ಜೊತೆಯಾಗಿ ಪ್ರಯಾಣಿಸುವಾಗ ಈ ವಾಹನವನ್ನು ಹೆಚ್ಚು ಬಳಸುತ್ತಾರೆ.

ಬಾಲಿವುಡ್ ಸ್ಟಾರ್‍‍ಗಳ ಬಳಿಯಿರುವ ಕಾರುಗಳಿವು

ಮಲೈಕಾ ಅರೋರಾ

ಇನೋವಾ ಕ್ರಿಸ್ಟಾ

ಮಲೈಕಾ ಅರೋರಾ ಖಾನ್ ಅವರ ಬಳಿ ರೇಂಜ್ ರೋವರ್ ವೋಗ್ ಸೇರಿದಂತೆ ಹಲವಾರು ದುಬಾರಿ ಐಷಾರಾಮಿ ಕಾರುಗಳಿವೆ. ಇದರೊಂದಿಗೆ ಅವರು ಇನೋವಾ ಕ್ರಿಸ್ಟಾ ಎಂಪಿವಿಯನ್ನು ಕೂಡ ಹೊಂದಿದ್ದಾರೆ. ಇವರು ಹೆಚ್ಚಾಗಿ ಈ ಎಂಪಿವಿಯನ್ನು ಬಳಸುತ್ತಾರೆ.ಇನೋವಾ ಎಂಪಿವಿಯನ್ನು ಹಲವು ಬಾರಿ ಇವರೇ ಸ್ವತಃ ಡ್ರೈವ್ ಮಾಡುತ್ತಾರೆ.

More from DriveSpark

Article Published On: Wednesday, December 11, 2019, 16:32 [IST]
English summary
Bollywood’s humble cars - Read in Kannaada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+