ಕೈಗೆಟುಕುವ ಬೆಲೆಯಲ್ಲಿ ಆರು ಏರ್‍‍ಬ್ಯಾಗ್ ಹೊಂದಿರುವ ಕಾರುಗಳಿವು

ಕೇಂದ್ರ ಸರ್ಕಾರದ ಹೊಸ ನಿಯಮದ ಪ್ರಕಾರ ಹೊಸದಾಗಿ ಮಾರುಕಟ್ಟೆಗೆ ಬರುವ ಕಾರುಗಳು ಏರ್‍‍ಬ್ಯಾಗ್‍ ಹೊಂದುವುದು ಕಡ್ಡಾಯವಾಗಿದೆ. ಅಪಘಾತವಾಗುವ ಸಂದರ್ಭಗಳಲ್ಲಿ ಜೀವಕ್ಕೆ ತೊಂದರೆಯಾಗದೇ ಇರಲಿ ಎಂಬ ಕಾರಣಕ್ಕೆ ಏರ್‍‍ಬ್ಯಾಗ್‍‍ಗಳನ್ನು ಕಡ್ಡಾಯಗೊಳಿಸಲಾಗಿದೆ.

ಕೈಗೆಟುಕುವ ಬೆಲೆಯಲ್ಲಿ ಆರು ಏರ್‍‍ಬ್ಯಾಗ್ ಹೊಂದಿರುವ ಕಾರುಗಳಿವು

ಕಾರುಗಳಲ್ಲಿ ಒಂದು ಏರ್‍‍ಬ್ಯಾಗ್ ನೀಡುವುದು ಕಡ್ಡಾಯ ಎಂಬ ನಿಯಮವಿದ್ದರೂ, ಹಲವು ಕಾರು ತಯಾರಕ ಕಂಪನಿಗಳು ಒಂದು ಹೆಜ್ಜೆ ಮುಂದೆ ಹೋಗಿ 6 ಅಥವಾ ಅದಕ್ಕಿಂತ ಹೆಚ್ಚಿನ ಏರ್‍‍ಬ್ಯಾಗ್‍‍ಗಳನ್ನು ನೀಡಲು ಮುಂದಾಗಿವೆ. 6 ಅಥವಾ ಅದಕ್ಕಿಂತ ಹೆಚ್ಚಿನ ಏರ್‍‍ಬ್ಯಾಗ್‍‍ಗಳನ್ನು ಹೊಂದಿರುವ ಭಾರತದ ಕಾರುಗಳ ಮಾಹಿತಿಯನ್ನು ನಿಮಗಾಗಿ ನೀಡುತ್ತಿದ್ದೇವೆ.

ಕೈಗೆಟುಕುವ ಬೆಲೆಯಲ್ಲಿ ಆರು ಏರ್‍‍ಬ್ಯಾಗ್ ಹೊಂದಿರುವ ಕಾರುಗಳಿವು

ಫೋರ್ಡ್ ಫಿಗೊ

ಆರಂಭಿಕ ಬೆಲೆ: ರೂ.6.65 ಲಕ್ಷ

ದೇಶಿಯ ಮಾರುಕಟ್ಟೆಯಲ್ಲಿ ಫೋರ್ಡ್ ಕೈಗೆಟುಕುವ ದರ ಹೊಂದಿರುವ ಅಗ್ಗದ ವಾಹನವಾಗಿದೆ. ಈ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳನ್ನು ನೀಡಲಾಗುತ್ತದೆ. ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಹ್ಯುಂಡೈ ಗ್ರ್ಯಾಂಡ್ ಐ10 ಕಾರುಗಳು, ಈ ಕಾರಿನ ಪ್ರತಿಸ್ಪರ್ಧಿಗಳಾಗಿವೆ. ಟಾಪ್ ಎಂಡ್‍‍ನ ಬ್ಲೂ ಮಾದರಿಯಲ್ಲಿ ಮಾತ್ರವೇ ಆರು ಏರ್‌ಬ್ಯಾಗ್‌ಗಳನ್ನು ನೀಡಲಾಗುತ್ತಿದೆ. ಫಿಗೊವನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಫಿಗೊ ಬಲಶಾಲಿಯಾದ ಡೀಸೆಲ್ ಎಂಜಿನ್‌ಗೆ ಹೆಸರುವಾಸಿಯಾಗಿದೆ.

ಕೈಗೆಟುಕುವ ಬೆಲೆಯಲ್ಲಿ ಆರು ಏರ್‍‍ಬ್ಯಾಗ್ ಹೊಂದಿರುವ ಕಾರುಗಳಿವು

ಫೋರ್ಡ್ ಫ್ರೀಸ್ಟೈಲ್

ಆರಂಭಿಕ ಬೆಲೆ ರೂ.7.46 ಲಕ್ಷ

ಫೋರ್ಡ್ ಫ್ರೀಸ್ಟೈಲ್, ಫಿಗೊದ ಕ್ರಾಸ್ಒವರ್ ಫ್ಲೇರ್‍‍ನ ನವೀಕೃತ ಆವೃತ್ತಿಯಾಗಿದೆ. ಉಳಿದ ಫೋರ್ಡ್ ವಾಹನಗಳಂತೆ, ಫ್ರೀಸ್ಟೈಲ್ ಸಹ 6 ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಹ್ಯಾಚ್‌ಬ್ಯಾಕ್ ಎಬಿಎಸ್ ಹಾಗೂ ಇಬಿಡಿ, ಟ್ರಾಕ್ಷನ್ ಕಂಟ್ರೋಲ್ ಹಾಗೂ ಎಲೆಕ್ಟ್ರಾನಿಕ್ ಸ್ಟಾಬಿಲಿಟಿ ಪ್ರೋಗ್ರಾಂಗಳನ್ನು ಹೊಂದಿದೆ. ಟೈಟಾನಿಯಂ ಪ್ಲಸ್ ಮಾದರಿಯ ಕಾರುಗಳು 6 ಏರ್‌ಬ್ಯಾಗ್‌ಗಳನ್ನು ಹೊಂದಿದ್ದರೆ, ಈ ಸರಣಿಯಲ್ಲಿರುವ ಉಳಿದ ಕಾರುಗಳು ಸ್ಟಾಂಡರ್ಡ್ ಆಗಿ 2 ಏರ್‌ಬ್ಯಾಗ್‌ಗಳನ್ನು ಹೊಂದಿರಲಿವೆ.

ಕೈಗೆಟುಕುವ ಬೆಲೆಯಲ್ಲಿ ಆರು ಏರ್‍‍ಬ್ಯಾಗ್ ಹೊಂದಿರುವ ಕಾರುಗಳಿವು

ಫೋರ್ಡ್ ಆಸ್ಪೈರ್

ಆರಂಭಿಕ ಬೆಲೆ ರೂ.7.72 ಲಕ್ಷ

ಫೋರ್ಡ್ ಆಸ್ಪೈರ್, ಫಿಗೊ ಹ್ಯಾಚ್‌ಬ್ಯಾಕ್‌ ಕಾರಿನ ಸೆಡಾನ್ ಆವೃತ್ತಿಯಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ 6 ಏರ್‌ಬ್ಯಾಗ್‍‍ಗಳನ್ನು ನೀಡಲಾಗುತ್ತಿದೆ. ಫಿಗೊ ಆಸ್ಪೈರ್, ಸದ್ಯಕ್ಕೆ ಸಬ್4 ಮೀಟರ್ ಕಾಂಪ್ಯಾಕ್ಟ್ ಸೆಗ್‍‍ಮೆಂಟಿನಲ್ಲಿ 6 ಏರ್‌ಬ್ಯಾಗ್‌ಗಳನ್ನು ಹೊಂದಿರುವ ಏಕೈಕ ಸೆಡಾನ್ ಆಗಿದೆ. ಟಾಪ್ ಎಂಡ್‍‍ನ ಟೈಟಾನಿಯಂ ಪ್ಲಸ್ ಮಾದರಿಯಲ್ಲಿ ಮಾತ್ರ 6 ಏರ್‌ಬ್ಯಾಗ್‌ಗಳನ್ನು ನೀಡಲಾಗುತ್ತಿದೆ. ಪೆಟ್ರೋಲ್ ಮಾದರಿಯ ಕಾರುಗಳ ಬೆಲೆಯು ರೂ.7.72 ಲಕ್ಷಗಳಾಗಿದೆ.

ಕೈಗೆಟುಕುವ ಬೆಲೆಯಲ್ಲಿ ಆರು ಏರ್‍‍ಬ್ಯಾಗ್ ಹೊಂದಿರುವ ಕಾರುಗಳಿವು

ಹ್ಯುಂಡೈ ಎಲೈಟ್ ಐ20

ಆರಂಭಿಕ ಬೆಲೆ ರೂ.8.07 ಲಕ್ಷ

ಹೊಸ ತಲೆಮಾರಿನ ಹ್ಯುಂಡೈ ಎಲೈಟ್ 20, ಹ್ಯುಂಡೈ ಕಂಪನಿಯ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾಗಿದೆ. ಈ ಸೆಗ್‍‍ಮೆಂಟಿನಲ್ಲಿ 6 ಏರ್‌ಬ್ಯಾಗ್ ಹೊಂದಿದ ಕೆಲವು ಕಾರುಗಳಲ್ಲಿ ಹಳೆಯ ತಲೆಮಾರಿನ ಐ20 ಕೂಡ ಒಂದು. 6 ಏರ್‌ಬ್ಯಾಗ್‌ಗಳನ್ನು ಟಾಪ್ ಎಂಡ್ ಮಾದರಿಯ ಅಸ್ತಾ ವಾಹನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ.

ಕೈಗೆಟುಕುವ ಬೆಲೆಯಲ್ಲಿ ಆರು ಏರ್‍‍ಬ್ಯಾಗ್ ಹೊಂದಿರುವ ಕಾರುಗಳಿವು

ಹ್ಯುಂಡೈ ಐ 20 ಆಕ್ಟಿವ್

ಆರಂಭಿಕ ಬೆಲೆ ರೂ.8.56 ಲಕ್ಷ

ಐ20 ಆಕ್ಟಿವ್, ಎಲೈಟ್ ಐ20 ಕಾರಿನ ಕ್ರಾಸ್ಒವರ್ ಆವೃತ್ತಿಯಾಗಿದೆ. ಐ20 ಆಕ್ಟಿವ್ 6 ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಏರ್‍‍ಬ್ಯಾಗ್‍‍ಗಳನ್ನು ಅಸ್ತಾ ಮಾದರಿಯ ಟಾಪ್ ಎಂಡ್ ಮಾದರಿಗಳಲ್ಲಿ ಮಾತ್ರ ಮಾಡಲಾಗುತ್ತಿದೆ. ಇವುಗಳ ಬೆಲೆ ರೂ. 8.56 ಲಕ್ಷಗಳಾಗಿದೆ. ಐ20 ಆಕ್ಟಿವ್ ಕಾರ್ ಅನ್ನು 1.2 ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್ ಹಾಗೂ 1.4ಎಲ್ ಡೀಸೆಲ್ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಕೈಗೆಟುಕುವ ಬೆಲೆಯಲ್ಲಿ ಆರು ಏರ್‍‍ಬ್ಯಾಗ್ ಹೊಂದಿರುವ ಕಾರುಗಳಿವು

ಹ್ಯುಂಡೈ ವೆನ್ಯೂ

ಆರಂಭಿಕ ಬೆಲೆ ರೂ.10.60 ಲಕ್ಷ

ಹ್ಯುಂಡೈ ವೆನ್ಯೂ ಭಾರತದಲ್ಲಿರುವ ಸಬ್4 ಮೀಟರ್ ಎಸ್‌ಯುವಿಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಈ ಸೆಗ್‍‍ಮೆಂಟಿನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ಮೊದಲನೇ ಸ್ಥಾನದಲ್ಲಿರುವ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಎಸ್‍‍ಯು‍‍ವಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ. ಈ ಸೆಗ್‍‍ಮೆಂಟಿನಲ್ಲಿರುವ ಕಾರುಗಳಲ್ಲಿ ಇಲ್ಲದೇ ಇರುವ ಅನೇಕ ಫೀಚರ್‍‍ಗಳನ್ನು ಹೊಂದಿದೆ. ಹ್ಯುಂಡೈ ಕಂಪನಿಯು ಈ ಕಾರಿನಲ್ಲಿ 6 ಏರ್‌ಬ್ಯಾಗ್‌ಗಳನ್ನು ನೀಡುತ್ತಿದ್ದರೂ, ಅವು ಎಸ್‌ಎಕ್ಸ್ 1.0 -ಒ ಮಾದರಿಗಳಲ್ಲಿ ಮಾತ್ರ ದೊರೆಯಲಿವೆ.

ಕೈಗೆಟುಕುವ ಬೆಲೆಯಲ್ಲಿ ಆರು ಏರ್‍‍ಬ್ಯಾಗ್ ಹೊಂದಿರುವ ಕಾರುಗಳಿವು

ಫೋರ್ಡ್ ಇಕೋಸ್ಪೋರ್ಟ್

ಆರಂಭಿಕ ಬೆಲೆ ರೂ. 10 ಲಕ್ಷ

ಫೋರ್ಡ್ ಸಬ್ 4 ಮೀಟರ್ ಸೆಗ್‍‍ಮೆಂಟಿನಲ್ಲಿ ಹೊಸ ಕಾರುಗಳಿಗೆ ಪೈಪೋಟಿ ನೀಡಲು ಇಕೋಸ್ಪೋರ್ಟ್ ಶ್ರೇಣಿಯನ್ನು ನವೀಕರಿಸಿದೆ. ಈ ಸೆಗ್‍‍ಮೆಂಟಿನ ಮೊದಲ ವಾಹನಗಳ ಪೈಕಿ ಒಂದಾದ ಇಕೋಸ್ಪೋರ್ಟ್ 6 ಏರ್‌ಬ್ಯಾಗ್‌ಗಳನ್ನು ಹೊಂದಿದ್ದು, ತನ್ನ ಸೆಗ್‍‍ಮೆಂಟಿನಲ್ಲಿ ಆರು ಏರ್‌ಬ್ಯಾಗ್‌ಗಳನ್ನು ನೀಡುವ ಏಕೈಕ ವಾಹನವಾಗಿದೆ. ಸ್ಟಾಂಡರ್ಡ್ ಆಗಿ 2 ಏರ್‌ಬ್ಯಾಗ್‌ಗಳನ್ನು ನೀಡಿದರೆ, ಟೈಟಾನಿಯಂ ಪ್ಲಸ್ ಮಾದರಿಯಲ್ಲಿ 6 ಏರ್‌ಬ್ಯಾಗ್‌ಗಳನ್ನು ನೀಡಲಾಗುತ್ತದೆ.

MOST READ: ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಕೈಗೆಟುಕುವ ಬೆಲೆಯಲ್ಲಿ ಆರು ಏರ್‍‍ಬ್ಯಾಗ್ ಹೊಂದಿರುವ ಕಾರುಗಳಿವು

ಮಹೀಂದ್ರಾ ಎಕ್ಸ್‌ಯುವಿ 300

ಆರಂಭಿಕ ಬೆಲೆ ರೂ.11.64 ಲಕ್ಷ

ಮಹೀಂದ್ರಾ ಎಕ್ಸ್‌ಯುವಿ 300 ಭಾರತದಲ್ಲಿ ಖರೀದಿಸಬಹುದಾದ ಸುರಕ್ಷಿತ ಸಬ್ 4 ಮೀಟರ್ ಎಸ್‍‍ಯು‍‍ವಿಯಾಗಿದೆ. ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಎಕ್ಸ್‌ಯುವಿ 300 ಹೆಚ್ಚು ಮಾರಾಟವಾಗುತ್ತಿದ್ದರೂ, ಮಾರುಕಟ್ಟೆಯಲ್ಲಿನ ನಿಧಾನಗತಿಯಿಂದಾಗಿ ಮಾರಾಟವು ಕುಸಿಯುತ್ತಿದೆ. ಟಾಪ್ ಎಂಡ್ ಮಾದರಿಯ ಡಬ್ಲ್ಯು 8ಒ ಕಾರಿನಲ್ಲಿ 7 ಏರ್‍‍ಬ್ಯಾಗ್‍‍ಗಳನ್ನು ನೀಡಲಾಗುತ್ತದೆ. ಉಳಿದ ಮಾದರಿಯ ಕಾರುಗಳಲ್ಲಿ ಸ್ಟಾಂಡರ್ಡ್ ಆಗಿ 2 ಏರ್‍‍ಬ್ಯಾಗ್‍‍ಗಳನ್ನು ನೀಡಲಾಗುತ್ತದೆ.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಕೈಗೆಟುಕುವ ಬೆಲೆಯಲ್ಲಿ ಆರು ಏರ್‍‍ಬ್ಯಾಗ್ ಹೊಂದಿರುವ ಕಾರುಗಳಿವು

ಹ್ಯುಂಡೈ ವರ್ನಾ

ಆರಂಭಿಕ ಬೆಲೆ ರೂ.8.08 ಲಕ್ಷ

ಹ್ಯುಂಡೈ ಕಂಪನಿಯು, ದೇಶಿಯ ಮಾರುಕಟ್ಟೆಯಲ್ಲಿ ಎಲೈಟ್ ಐ20ಗಿಂತ ಮೇಲ್ಪಟ್ಟ ಕಾರುಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಆಯ್ಕೆಯಾಗಿ ನೀಡುತ್ತದೆ. ಸ್ಟೈಲಿಶ್ ವರ್ನಾದ ಎಸ್‌ಎಕ್ಸ್-ಒ ಮಾದರಿಯಲ್ಲಿ 6 ಏರ್‍‍ಬ್ಯಾಗ್‍‍ಗಳನ್ನು ನೀಡಲಾಗುತ್ತಿದೆ. ಹ್ಯುಂಡೈ ವರ್ನಾ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯವಾಗಿದ್ದು, ಹೋಂಡಾ ಸಿಟಿ ಹಾಗೂ ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

MOST READ: ಎಕ್ಸ್‌ಪ್ರೆಸ್‌ವೇಗಳಲ್ಲಿ ಎದುರಾಗುವ ಅಪಾಯಕಾರಿ ಸಂಗತಿಗಳಿವು..!

ಕೈಗೆಟುಕುವ ಬೆಲೆಯಲ್ಲಿ ಆರು ಏರ್‍‍ಬ್ಯಾಗ್ ಹೊಂದಿರುವ ಕಾರುಗಳಿವು

ಟೊಯೊಟಾ ಯಾರಿಸ್

ಆರಂಭಿಕ ಬೆಲೆ ರೂ.9.29 ಲಕ್ಷ

ಟೊಯೊಟಾ ಯಾರಿಸ್ ಈ ಸೆಗ್‍‍ಮೆಂಟಿನಲ್ಲಿಯೇ ಆಗಲಿ ಅಥವಾ ಬೇರೆ ಸೆಗ್‍‍ಮೆಂಟಿನಲ್ಲಿಯೇ ಆಗಲಿ 7 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿರುವ ಏಕೈಕ ಕಾರ್ ಆಗಿದೆ. ಟೊಯೊಟಾ ಸೆಡಾನ್‌ನ ಬೇಸ್ ಜೆ ಎಂಟಿ ಮಾದರಿಯಲ್ಲಿ 7 ಏರ್‌ಬ್ಯಾಗ್‌ಗಳನ್ನು ನೀಡುತ್ತದೆ. ಇದರ ಬೆಲೆ ರೂ.9.29 ಲಕ್ಷಗಳಾಗಿದೆ. ಭಾರತದಲ್ಲಿ ಮಾರಾಟವಾಗುವ ಯಾರಿಸ್ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು ಸಾಕಷ್ಟು ಫೀಚರ್‍‍ಗಳನ್ನು ಹೊಂದಿದೆ. ಆದರೆ ಈ ಕಾರು ಕಂಪನಿಯು ನಿರೀಕ್ಷಿಸಿದ ಮಟ್ಟದಲ್ಲಿ ಮಾರಾಟವಾಗುತ್ತಿಲ್ಲ.

Most Read Articles

Kannada
English summary
Cheapest cars in India with 6 airbags - Read in kannada
Story first published: Monday, August 5, 2019, 15:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X