ಗ್ರೇಟ್ ವಾಲ್ ಮೋಟಾರ್ಸ್ ನಂತರ ಭಾರತದಲ್ಲಿ ಬಿಡುಗಡೆಯಾಗಲಿವೆ ಹೈಮಾ, ಬಿವೈಡಿ ಕಾರುಗಳು

ಭಾರತದಲ್ಲಿ ವಿದೇಶಿ ಮೂಲದ ಕಾರು ಉತ್ಪನ್ನಗಳ ಮಾರಾಟವು ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಬ್ರಿಟಿಷ್ ಮೂಲದ ಎಂಜಿ ಮೋಟಾರ್ ಮಾತೃಸಂಸ್ಥೆಯಾಗಿರುವ ಚೀನಿ ಆಟೋ ಉತ್ಪಾದನಾ ಸಂಸ್ಥೆ ಸೈಕ್ ತನ್ನ ಕಾರುಗಳ ಬಿಡುಗಡೆಯ ನಂತರ ಚೀನಿ ಮೂಲದ ಹಲವು ಕಾರು ಮಾದರಿಗಳು ದೇಶಿಯ ಮಾರುಕಟ್ಟೆಯಲ್ಲಿ ಸದ್ದು ಮಾಡುವ ನೀರಿಕ್ಷೆಯಲ್ಲಿವೆ.

ಗ್ರೇಟ್ ವಾಲ್ ಮೋಟಾರ್ಸ್ ನಂತರ ಭಾರತದಲ್ಲಿ ಬಿಡುಗಡೆಯಾಗಲಿವೆ ಹೈಮಾ, ಬಿವೈಡಿ ಕಾರುಗಳು

ಹೌದು, ಸೈಕ್ ನಂತರ ಗ್ರೇಟ್ ವಾಲ್ ಮೋಟಾರ್ಸ್, ಬಿವೈಡಿ ಸಂಸ್ಥೆಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಹೊಸ ವಾಹನ ಉತ್ಪನ್ನಗಳನ್ನು ಮಾರಾಟ ಆರಂಭಿಸುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದು, ಇದೀಗ ಮತ್ತೊಂದು ಚೀನಿ ಕಾರು ಉತ್ಪಾದನಾ ಸಂಸ್ಥೆಯಾದ ಹೈಮಾ ಆಟೋಮೊಬೈಲ್ ಕೂಡಾ ಹೊಸ ಕಾರುಗಳು ಬಿಡುಗಡೆಗೆ ಸಿದ್ದತೆ ನಡೆಸಿದೆ. ಈ ಕುರಿತು ಮಾಧ್ಯಮ ಸಂಸ್ಥೆಯೊಂದರ ಸಂದರ್ಶನ ಮಾತನಾಡಿರುವ ಹೈಮಾ ಆಟೋಮೊಬೈಲ್ ಇಂಡಿಯಾ ಸಂಸ್ಥೆಯ ಹಿರಿಯ ಅಧಿಕಾರಿಗಳು 2020ರಲ್ಲಿ ತಮ್ಮ ಮೊದಲ ಕಾರು ಉತ್ಪನ್ನವನ್ನು ಪ್ರದರ್ಶನ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಗ್ರೇಟ್ ವಾಲ್ ಮೋಟಾರ್ಸ್ ನಂತರ ಭಾರತದಲ್ಲಿ ಬಿಡುಗಡೆಯಾಗಲಿವೆ ಹೈಮಾ, ಬಿವೈಡಿ ಕಾರುಗಳು

2020ರ ಫೆಬ್ರುವರಿ 5ರಿಂದ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹೈಮಾ ಆಟೋಮೊಬೈಲ್ ಸಂಸ್ಥೆಯು ಭಾಗಿಯಾಗಲಿದ್ದು, ಚೀನಿ ಮಾರುಕಟ್ಟೆಯಲ್ಲಿ ಜನಪ್ರಿಯಗೊಂಡಿರುವ ಕೆಲವು ಕಾರು ಮಾದರಿಗಳನ್ನು ಪ್ರದರ್ಶನ ಮಾಡಲಿದೆಯೆಂತೆ.

ಗ್ರೇಟ್ ವಾಲ್ ಮೋಟಾರ್ಸ್ ನಂತರ ಭಾರತದಲ್ಲಿ ಬಿಡುಗಡೆಯಾಗಲಿವೆ ಹೈಮಾ, ಬಿವೈಡಿ ಕಾರುಗಳು

ಮಾಹಿತಿಗಳ ಪ್ರಕಾರ, ಹೈಮಾ ಆಟೋಮೊಬೈಲ್ ಸಂಸ್ಥೆಯು ತಲಾ ಒಂದೊಂದು ಎಸ್‌ಯುವಿ, ಹ್ಯಾಚ್‌ಬ್ಯಾಕ್, ಸೆಡಾನ್ ಮತ್ತು ಎಂಪಿವಿ ಕಾರು ಆವೃತ್ತಿಯನ್ನು ಪ್ರದರ್ಶನ ಮಾಡಲಿದ್ದು, ಇದರ ಜೊತೆಯಲ್ಲಿ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಸಹ ಅಭಿವೃದ್ದಿಪಡಿಸುತ್ತಿರುವುದಾಗಿ ಹೇಳಿಕೊಂಡಿದೆ.

ಗ್ರೇಟ್ ವಾಲ್ ಮೋಟಾರ್ಸ್ ನಂತರ ಭಾರತದಲ್ಲಿ ಬಿಡುಗಡೆಯಾಗಲಿವೆ ಹೈಮಾ, ಬಿವೈಡಿ ಕಾರುಗಳು

ಹೀಗಾಗಿ ಹೊಸ ಕಾರು ಉತ್ಪನ್ನಗಳ ಬಿಡುಗಡೆಗೂ ಮುನ್ನ ವಿವಿಧ ಹಂತದ ಮಾರುಕಟ್ಟೆ ಅಧ್ಯಯನ ನಡೆಸಲಿರುವ ಹೈಮಾ ಆಟೋಮೊಬೈಲ್ ಸಂಸ್ಥೆಯು ಭಾರತದಲ್ಲಿ ಹೊಸ ಕಾರು ಉತ್ಪನ್ನಗಳ ಬಿಡುಗಡೆಗಾಗಿ ಬರ್ಡ್ ಗ್ರೂಫ್ ಜೊತೆಗೂಡಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಯೋಜನೆ ರೂಪಿಸುತ್ತಿದೆ. ಈ ಕುರಿತಂತೆ ಕೇಂದ್ರ ಸರ್ಕಾರದ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಹೈಮಾ ಸಂಸ್ಥೆಯು ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಹೊಸ ಕಾರು ಉತ್ಪನ್ನಗಳನ್ನು ಸಿದ್ದಪಡಿಸುವುದಾಗಿ ಹೇಳಿಕೊಂಡಿದೆ.

ಗ್ರೇಟ್ ವಾಲ್ ಮೋಟಾರ್ಸ್ ನಂತರ ಭಾರತದಲ್ಲಿ ಬಿಡುಗಡೆಯಾಗಲಿವೆ ಹೈಮಾ, ಬಿವೈಡಿ ಕಾರುಗಳು

ಈ ಮೂಲಕ ಭಾರತದಲ್ಲಿ ಹೊಸದಾಗಿ ಕಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸಲು ಸಿದ್ದವಾಗುತ್ತಿರುವ ಗ್ರೇಟ್ ವಾಲ್ ಮೋಟಾರ್ಸ್ ಮತ್ತು ಬಿವೈಡಿ ಸಂಸ್ಥೆಗಳಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿರುವ ಹೈಮಾ ಸಂಸ್ಥೆಯು ಭಾರತೀಯ ಗ್ರಾಹಕರ ಅಭಿರುಚಿ ತಕ್ಕಂತೆ ಹಲವು ಕಾರು ಉತ್ಪನ್ನಗಳನ್ನು ಸಿದ್ದಪಡಿಸುತ್ತಿದೆ.

ಗ್ರೇಟ್ ವಾಲ್ ಮೋಟಾರ್ಸ್ ನಂತರ ಭಾರತದಲ್ಲಿ ಬಿಡುಗಡೆಯಾಗಲಿವೆ ಹೈಮಾ, ಬಿವೈಡಿ ಕಾರುಗಳು

ಹೈಮಾ ಆಟೋಮೊಬೈಲ್ ಸಂಸ್ಥೆಯು 1988ರಲ್ಲೇ ಕಾರು ಮಾರಾಟವನ್ನು ಆರಂಭಿಸಿದ್ದು, ಚೀನಿ ಮಾರುಕಟ್ಟೆಯಲ್ಲಿ ಮಜ್ದಾ ಕಾರುಗಳ ರೀಬ್ಯಾಡ್ಜ್ ಮಾರಾಟ ಮೂಲಕ ಜಾಗತಿಕ ಆಟೋ ಉತ್ಪಾದನಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

MOST READ: ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್

ಗ್ರೇಟ್ ವಾಲ್ ಮೋಟಾರ್ಸ್ ನಂತರ ಭಾರತದಲ್ಲಿ ಬಿಡುಗಡೆಯಾಗಲಿವೆ ಹೈಮಾ, ಬಿವೈಡಿ ಕಾರುಗಳು

ಜೊತೆಗೆ ಚೀನಿ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಫಾವ್ ಗ್ರೂಪ್‌ ನಿರ್ಮಾಣದ ಕಾರುಗಳಿಂತಲೂ ಅಧಿಕ ಮಾರಾಟವನ್ನು ಹೊಂದಿರುವ ಹೈಮಾ ಸಂಸ್ಥೆಯು, ಹೊಸ ಕಾರುಗಳ ಅಭಿವೃದ್ದಿಗಾಗಿ ಗ್ಲೊಬಲ್ ಆರ್ಕಿಟೆಕ್ಚರ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡುತ್ತಿರುವುದು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ.

MOST READ: ಗಂಡನಿಗೆ ಸರ್‍‍ಪ್ರೈಸ್ ಗಿಫ್ಟ್ ನೀಡಿದ ಹೆಂಡತಿ..!

ಗ್ರೇಟ್ ವಾಲ್ ಮೋಟಾರ್ಸ್ ನಂತರ ಭಾರತದಲ್ಲಿ ಬಿಡುಗಡೆಯಾಗಲಿವೆ ಹೈಮಾ, ಬಿವೈಡಿ ಕಾರುಗಳು

ಹೊಸ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಮೇಲೆ ಸಿದ್ದವಾಗಿರುವ ಐಶಾಂಗ್ 360 ಹ್ಯಾಚ್‌ಬ್ಯಾಕ್, ಇ3 ಸೆಡಾನ್, ಇ5 ಎಸ್‌ಯುವಿ ಮತ್ತು ಇ70 ಎನ್ನುವ ಎಲೆಕ್ಟ್ರಿಕ್ ಎಂಪಿವಿ ಕಾರು ಭಾರತದಲ್ಲೂ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಹೊಸ ಕಾರುಗಳು ಮಧ್ಯಮ ಕ್ರಮಾಂಕದ ಬೆಲೆಯೊಂದಿಗೆ ಮಾರಾಟಗೊಳ್ಳಲಿವೆ.

MOST READ: ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಗ್ರೇಟ್ ವಾಲ್ ಮೋಟಾರ್ಸ್ ನಂತರ ಭಾರತದಲ್ಲಿ ಬಿಡುಗಡೆಯಾಗಲಿವೆ ಹೈಮಾ, ಬಿವೈಡಿ ಕಾರುಗಳು

ಈ ಮೂಲಕ ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯಗೊಳ್ಳುತ್ತಿರುವ ಕಿಯಾ ಮೋಟಾರ್ಸ್, ಎಂಜಿ ಮೋಟಾರ್ ಸಂಸ್ಥೆಗಳಿಗೆ ಪೈಪೋಟಿ ನೀಡಲಿರುವ ಹೈಮಾ ಆಟೋಮೊಬೈಲ್ ಸಂಸ್ಥೆಯು ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಗೆ ಪೈಪೋಟಿಯಾಗಿ ಹಲವು ಹೊಸ ಕಾರು ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ.

Source: ACI

Most Read Articles

Kannada
English summary
Chinese automobile maker, Haima has confirmed India debut at 2020 Auto Expo.
Story first published: Wednesday, December 25, 2019, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X