ಏಪ್ರಿಲ್ 3ರಂದು ಭಾರತದಲ್ಲಿ ಅನಾವಣರಗೊಳ್ಳಲಿದೆ ಸಿಟ್ರನ್ ಮೊದಲ ಎಸ್‌ಯುವಿ..!
ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ವಿಫುಲ ಅವಕಾಶಗಳನ್ನು ತೆರೆದುಕೊಳ್ಳುತ್ತಿರುವ ದೇಶಿಯ ಮಾರುಕಟ್ಟೆಯಲ್ಲಿ ಇದೀಗ ಫ್ರೆಂಚ್ ಕಾರು ಉತ್ಪಾದನಾ ಸಂಸ್ಥೆಗಳು ಹೊಸ ಸಂಚಲನ ಸೃಷ್ಠಿಸಲು ತಮ್ಮ ವಿನೂತನ ಕಾರು ಮಾದರಿಗಳನ್ನ ಬಿಡುಗಡೆಗೊಳಿಸುತ್ತಿದ್ದು, ಜನಪ್ರಿಯ ಪಿಎಸ್ಎ ಗ್ರೂಪ್‌ನ ಅಂಗಸಂಸ್ಥೆಯಾದ ಸಿಟ್ರನ್ ಸಹ ತನ್ನ ವಿನೂತನ ವಿನ್ಯಾಸದ ಎಸ್‌ಯುವಿ ಕಾರುಗಳನ್ನು ಭಾರತಕ್ಕೆ ಪರಿಚಯಿಸುವ ಇರಾದೆಯಲ್ಲಿದೆ.

ಈ ಸಂಬಂಧ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಸುತ್ತಿನ ಮಾರುಕಟ್ಟೆ ಅಧ್ಯಯನ ನಡೆಸಿರುವ ಪಿಎಸ್ಎ ಗ್ರೂಪ್ ಸಂಸ್ಥೆಯು ಮೊದಲ ಹಂತದಲ್ಲಿ ಸಿಟ್ರನ್ ಎಸ್‌ಯುವಿ ಕಾರುಗಳನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿದ್ದು, ಮುಂದಿನ ತಿಂಗಳು ಏಪ್ರಿಲ್ 3ರಂದು ಹೊಸ ಕಾರಿನ ಬಿಡುಗಡೆಯ ಕುರಿತಾದ ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಳ್ಳುವ ಸಂಬಂಧ ಮಾಧ್ಯಮ ಸಂಸ್ಥೆಗಳಿಗೆ ಆಹ್ವಾನ ನೀಡಿದೆ.

ಚೆನ್ನೈನ ಲೀಲಾ ಪ್ಯಾಲೇಜ್ ಹೋಟೆಲ್‌ನಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಪಿಎಸ್ಎ ಗ್ರೂಪ್ ಸಂಸ್ಥೆಯು ಅದೇ ವೇಳೆ ಸಿಟ್ರನ್ ಕಾರನ್ನು ಅನಾವರಣಗೊಳಿಸಲಿದ್ದು, ಹೊಸ ಕಾರಿನ ಕೆಲವು ಮಾಹಿತಿಯನ್ನು ಬಹಿರಂಗಗೊಳಿಸಲಿದೆ.

ಹೀಗಾಗಿ ಎಲ್ಲವೂ ಅಂದುಕೊಂಡಂತೆ ಆದಲ್ಲಿ ಪಿಎಸ್ಎ ಗ್ರೂಪ್ ನಿರ್ಮಾಣದ ಸಿಟ್ರನ್ ಎಸ್‌ಯುವಿ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ಇದಕ್ಕಾಗಿಯೇ ಮೊದಲ ಹಂತವಾಗಿ ಬ್ರಾಂಡ್ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಭಾರತೀಯ ಗ್ರಾಹಕರನ್ನು ಸೆಳೆಯಲು ಸಿಟ್ರನ್ ಕಾರುಗಳನ್ನು ಆಮದು ಮಾಡಿಕೊಳ್ಳುತ್ತಿರುವ ಪಿಎಸ್ಎ ಗ್ರೂಪ್ ಸಂಸ್ಥೆಯು ಜಾಹೀರಾತು ಮತ್ತು ಆಸಕ್ತ ಗ್ರಾಹಕರಿಗಾಗಿ ಟೆಸ್ಟ್ ಡ್ರೈವ್‌ಗಳನ್ನು ಕಲ್ಪಿಸಿ ಹೊಸ ಬ್ರಾಂಡ್ ಪರಿಚಯಿಸುತ್ತಿದೆ.

ಮೂಲಗಳ ಪ್ರಕಾರ, ಪಿಎಸ್ಎ ಗ್ರೂಪ್‌ನ ಸಿಟ್ರನ್ ಸಿ84 ಮತ್ತು ಸಿಟ್ರನ್ ಸಿ5-ಏರೋಕ್ರಾಸ್ ಎಸ್‌ಯುವಿಗಳನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಿದ್ದು, ಮಧ್ಯಮ ಗಾತ್ರದ ಐಷಾರಾಮಿ ಮಾದರಿಗಳಾದ ಜೀಪ್ ಕಂಪಾಸ್, ಹ್ಯುಂಡೈ ಟಕ್ಸನ್ ಮತ್ತು ಸ್ಕೋಡಾ ಕರೋಕ್ ಎಸ್‌ಯುವಿಗಳಿಗೆ ಇವು ತ್ರೀವ ಪೈಪೋಟಿ ನೀಡುವ ನೀರಿಕ್ಷೆಯಲ್ಲಿವೆ.
MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ಜೊತೆಗೆ ಹೊಸ ಕಾರುಗಳನ್ನು ಪರಿಚಯಿಸುವುದಕ್ಕೂ ಮುನ್ನ ದೇಶದ 80 ಪ್ರಮುಖ ನಗರಗಳಲ್ಲಿ 'ಎಕ್ಸ್‌ಪಿರೆನ್ಸ್ ಸ್ಟೋರ್'ಗಳನ್ನು ತೆರೆಯಲಿದ್ದು, ಈ ಮೂಲಕ ಗ್ರಾಹಕರನ್ನು ಹೊಸ ಕಾರ್ ಬ್ರಾಂಡ್‌ನತ್ತ ಸೆಳೆಯುವ ಮಾರುಕಟ್ಟೆ ತಂತ್ರಗಳನ್ನು ಬಳಸುತ್ತಿದೆ.

ಇದಲ್ಲದೇ ಬೆಲೆಗಳಲ್ಲಿ ತುಸು ದುಬಾರಿ ಎನ್ನಿಸಲಿರುವ ಪಿಎಸ್ಎ ಗ್ರೂಪ್ ಕಾರುಗಳ ಬೆಲೆ ತಗ್ಗಿಸುವ ಉದ್ದೇಶದಿಂದ ಚೆನ್ನೈನಲ್ಲಿ ಅಸೆಂಬ್ಲಿ ಯೂನಿಟ್ ಅನ್ನು ಸಹ ತೆರೆಯಲಾಗಿದ್ದು, ಸ್ಥಳೀಯ ಲಭ್ಯವಾಗುವ ಸುಮಾರು ಶೇ.90ರಷ್ಟು ತಾಂತ್ರಿಕ ಬಿಡಿಭಾಗಗಳನ್ನು ಬಳಕೆ ಮಾಡಿಕೊಂಡು ಲಾಭಾಂಶ ಮತ್ತು ಕಾರಿನ ಬೆಲೆ ಇಳಿಕೆಗೆ ಸಹಕಾರಿಯಾಗುವಂತೆ ಯೋಜನೆ ಹಮ್ಮಿಕೊಂಡಿದೆ.
MOST READ: ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ಇನ್ನು ಭಾರತದಲ್ಲಿ ಪಿಎಸ್‌ಎ ಗ್ರೂಪ್‌ನ ಮತ್ತೊಂದು ಅಂಗಸಂಸ್ಥೆಯಾದ ಪ್ಯೂಜೊ ಕೂಡಾ ಭಾರತದಲ್ಲಿ ಈಗಾಗಲೇ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸಿದ್ದು, 2019ರ ಮಧ್ಯಂತರದಲ್ಲಿ ಹೊಸ ಕಾರುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಸ್ಪಾಟ್ ಟೆಸ್ಟಿಂಗ್ ನಡೆಸುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದೆ.


Click it and Unblock the Notifications








