ಶೀಘ್ರದಲ್ಲೇ ರಸ್ತೆಗಿಳಿಯಲಿವೆ ನೀಲಿ ಬಣ್ಣದ ಬಸ್ಸುಗಳು
ಮುಂದಿನ ತಿಂಗಳು ನಗರದ ರಸ್ತೆಗಳಲ್ಲಿ ನೀಲಿ ಬಸ್ಸುಗಳು ಸಂಚರಿಸಲಿವೆ ಎಂದು ದೆಹಲಿ ಸರ್ಕಾರ ಪ್ರಕಟಿಸಿದೆ. ಕ್ಲಸ್ಟರ್ ಯೋಜನೆಯಡಿ 1,000 ಲೋ ಫ್ಲೋರ್ ಏರ್ ಕಂಡಿಷನ್ ಬಸ್‌ಗಳನ್ನು ಸರ್ಕಾರವು ಬಿಡುಗಡೆಗೊಳಿಸಲಿದ್ದು, ಈ ಪೈಕಿ ಮೊದಲ 50 ಬಸ್ಸುಗಳನ್ನು ಡಿಸೆಂಬರ್‌ನಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ.

ಕ್ಲಸ್ಟರ್ ಯೋಜನೆಯ ಮೂಲಕ ಲೋ ಫ್ಲೋರ್ ಬಸ್ಸುಗಳನ್ನು ಅಳವಡಿಸುತ್ತಿರುವುದು ಇದೇ ಮೊದಲ ಬಾರಿಯೆಂದು ಸರ್ಕಾರವು ಹೇಳಿಕೊಂಡಿದೆ. ಈ ಯೋಜನೆಯಲ್ಲಿ ಈಗಾಗಲೇ 1,900 ಸ್ಟ್ಯಾಂಡರ್ಡ್ ಫ್ಲೋರ್ ಬಸ್‌ಗಳಿವೆ.

ಬಹು ಬಣ್ಣದ ಆಯ್ಕೆಗಳ ಬಗ್ಗೆ ಚರ್ಚಿಸಿದ ನಂತರ ನೀಲಿ ಬಣ್ಣವನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ದೆಹಲಿ ಸಾರಿಗೆ ನಿಗಮದ ಏರ್ ಕಂಡಿಷನ್ ಅಲ್ಲದ ಹಸಿರು ಹಾಗೂ ಕೆಂಪು ಬಸ್ಸುಗಳು ಹಾಗೂ ಕ್ಲಸ್ಟರ್ ಯೋಜನೆಯಡಿಯಲ್ಲಿರುವ ಆರೇಂಜ್ ಬಣ್ಣದ ಏರ್ ಕಂಡಿಷನ್ ಅಲ್ಲದ ಬಸ್ಸುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಈ ಬಣ್ಣವು ಸಹಾಯ ಮಾಡಲಿದೆ.

ಲೋ ಫ್ಲೋರ್ ಬಸ್ಸುಗಳು ವೃದ್ಧರಿಗೆ, ಮಕ್ಕಳಿಗೆ ಹಾಗೂ ವಿಶೇಷ ಚೇತನರಿಗೆ ಬಸ್ಸುಗಳನ್ನು ಹತ್ತುವುದನ್ನು ಹಾಗೂ ಇಳಿಯುವುದನ್ನು ಸುಲಭಗೊಳಿಸುತ್ತವೆ. ದೆಹಲಿ ಸರ್ಕಾರದ ಸಾರಿಗೆ ಇಲಾಖೆಯಿಂದ 650 ಲೋ ಫ್ಲೋರ್ ಬಸ್‌ಗಳನ್ನು ಒಳಗೊಂಡ ಮೂರು ಕ್ಲಸ್ಟರ್‌ಗಳ ಒಪ್ಪಂದವನ್ನು ಈಗಾಗಲೇ ಮಂಜೂರು ಮಾಡಲಾಗಿದ್ದು, ಶೀಘ್ರದಲ್ಲೇ ವಾಹನಗಳನ್ನು ದೆಹಲಿ ಸರ್ಕಾರಕ್ಕೆ ವಿತರಿಸುವ ನಿರೀಕ್ಷೆಯಿದೆ.

ಉಳಿದ 350 ಬಸ್‌ಗಳಿಗೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ದೆಹಲಿ ಸರ್ಕಾರವು ಹೈಡ್ರಾಲಿಕ್ ಲಿಫ್ಟ್‌ಗಳನ್ನು ಒಳಗೊಂಡಿರುವ 1,000 ಸ್ಟ್ಯಾಂಡರ್ಡ್-ಫ್ಲೋರ್ ಬಸ್‌ಗಳನ್ನು ಅಳವಡಿಸುವ ಪ್ರಕ್ರಿಯೆಯಲ್ಲಿದೆ.

ಈ ವರ್ಷದ ಆಗಸ್ಟ್‌ನಿಂದ ಸರಿಸುಮಾರು 229 ಬಸ್‌ಗಳನ್ನು ಕ್ಲಸ್ಟರ್ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಿದೆ. ದೆಹಲಿಯಲ್ಲಿ 1,000 ಎಲೆಕ್ಟ್ರಿಕ್ ಬಸ್ಸುಗಳನ್ನು ಸೇರಿಸುವ ಪ್ರಕ್ರಿಯೆಯಲ್ಲಿಯೂ ಸರ್ಕಾರ ನಿರತವಾಗಿದೆ.

ಈ ಬಸ್ಸುಗಳನ್ನು ವಿವಿಧ ಹಂತಗಳಲ್ಲಿ ಸೇರಿಸಲಾಗುವುದು. ಮೊದಲ ಹಂತದ ಭಾಗವಾಗಿ 300 ಲೋ ಫ್ಲೋರ್ ಎಲೆಕ್ಟ್ರಿಕ್ ಬಸ್‌ಗಳಿಗೆ ಅಕ್ಟೋಬರ್ 15ರಂದು ಟೆಂಡರ್ ಕರೆಯಲಾಯಿತು. ಬಿಡ್ ಸಲ್ಲಿಸಲು ನವೆಂಬರ್ 13 ಕೊನೆಯ ದಿನವಾಗಿತ್ತು.
MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಎಲ್ಲಾ ಹೊಸ ಬಸ್‌ಗಳು 37 ಆಸನಗಳನ್ನು ಒಳಗೊಂಡಿರಲಿವೆ. ಈ ಬಸ್ಸುಗಳಲ್ಲಿ ಜಿಪಿಎಸ್ ಟ್ರ್ಯಾಕರ್, ಅಲಾರಾಂಗಳೊಂದಿಗೆ 14 ಪ್ಯಾನಿಕ್ ಬಟನ್‌ಗಳು, ಮೂರು ಸಿಸಿಟಿವಿ ಕ್ಯಾಮೆರಾಗಳು, ವೃದ್ಧರಿಗೆ ಹಾಗೂ ವಿಶೇಷ ಚೇತನರಿಗಾಗಿ ಹೈಡ್ರಾಲಿಕ್ ಲಿಫ್ಟ್‌ಗಳಂತಹ ಫೀಚರ್‍ಗಳನ್ನು ಹೊಂದಿವೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕ್ಲಸ್ಟರ್ ಯೋಜನೆಯೊಂದಿಗೆ ಬಳಸಲು ದಿನದ ಪಾಸ್‌ಗಳನ್ನು ನೀಡಲು ಸರ್ಕಾರ ಯೋಜಿಸುತ್ತಿದೆ. ದಿನದ ಪಾಸ್‌ಗಳು ಸದ್ಯಕ್ಕೆ ದೆಹಲಿ ಸಾರಿಗೆ ನಿಗಮದಿಂದ ನಿರ್ವಹಿಸಲ್ಪಡುವ ಬಸ್‌ಗಳಲ್ಲಿ ಮಾತ್ರ ಲಭ್ಯವಿವೆ. ಈ ಪಾಸ್‌ಗಳ ಬೆಲೆ ರೂ.50 ಆಗಿರಲಿದೆ.
MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಈ ಪಾಸ್‍ನಿಂದಾಗಿ ದಿನವಿಡೀ ಕ್ಲಸ್ಟರ್ ಸ್ಕೀಮ್ ಬಸ್‌ಗಳಲ್ಲಿ ಎಷ್ಟು ಬಾರಿ ಬೇಕಾದರೂ ಪ್ರಯಾಣಿಸಬಹುದು. ಈ ಪ್ರಸ್ತಾಪಕ್ಕಾಗಿ ಸರ್ಕಾರ ಕ್ಯಾಬಿನೆಟ್ ಟಿಪ್ಪಣಿಯನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಬೇರೆ ಬೇರೆ ಬಸ್‌ಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ವಿಭಿನ್ನ ಬಣ್ಣಗಳನ್ನು ಬಳಸುವುದು ಉತ್ತಮವಾದ ಯೋಜನೆಯಾಗಿದೆ. ಯಾವ ಬಸ್ಸುಗಳು ಯಾವ ಮಾರ್ಗಗಳಲ್ಲಿ ಚಲಿಸುತ್ತವೆ, ಯಾವ ಬಸ್ಸುಗಳು ಏರ್ ಕಂಡಿಷನ್ ಹೊಂದಿವೆ ಎಂಬುದು ಸುಲಭವಾಗಿ ತಿಳಿದು ಬರಲಿದೆ.


Click it and Unblock the Notifications