ಫೋರ್ಬ್ಸ್ ನಿಯತಕಾಲಿಕೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಟಾಟಾ ಮೋಟಾರ್ಸ್
ಭಾರತೀಯರ ಗ್ರಾಹಕರ ವಿಶ್ವಾರ್ಹತೆಯೊಂದಿಗೆ ಅತ್ಯುತ್ತಮ ಆಟೋ ಉತ್ಪಾದನಾ ಸಂಸ್ಥೆಯಾಗಿ ಹೊರಹೊಮ್ಮಿರುವ ಟಾಟಾ ಸಂಸ್ಥೆಯು ವಿಶ್ವಮಟ್ಟದಲ್ಲೂ ಗುರುತಿಸಿಕೊಂಡಿದ್ದು, ಇದೀಗ ಅಮೆರಿಕದ ಹೆಸರಾಂತ ಬಿಸಿನೆಸ್ ನಿಯತಕಾಲಿಕ ಫೋರ್ಬ್ಸ್ ಸಿದ್ಧಪಡಿಸಿರುವ ವಿಶ್ವದ ಅತ್ಯುತ್ತಮ ಆಟೋ ಕಂಪನಿಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.

ಹೌದು, ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಟಾಟಾ ಸಂಸ್ಥೆಯು ಇದೇ ಮೊದಲ ಬಾರಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ವಿಶ್ವಾದ್ಯಂತ ಸುಮಾರು 2 ಸಾವಿರ ಪ್ರಮುಖ ಸಂಸ್ಥೆಗಳ ಕಾರ್ಯನಿರ್ವಹಣೆ ಕುರಿತಂತೆ ನಡೆಸಿದ ಸಮೀಕ್ಷೆಯಲ್ಲಿ ಟಾಟಾ ಸಂಸ್ಥೆಯು 31 ಸ್ಥಾನದಲ್ಲಿದೆ. ಇದರಲ್ಲಿ ಆಟೋ ಉತ್ಪಾದನಾ ಸಂಸ್ಥೆಗಳ ಪೈಕಿ ಭಾರತೀಯ ಆಟೋ ಕಂಪನಿಯಾಗಿರುವ ಟಾಟಾ ಸಂಸ್ಥೆಯು 5 ಸ್ಥಾನದಲ್ಲಿದ್ದು, ಕಾರ್ಯ ನಿರ್ವಹಣಾ ಕ್ಷಮತೆ, ಗ್ರಾಹಕರ ವಿಶ್ವಾರ್ಹತೆ ಮತ್ತು ಉದ್ಯೋಗಿಗಳಿಗೆ ಸಂಬಂಧಿತ ನೀತಿ ನಿರೂಪಣೆಯ ಆಧಾರದ ಮೇಲೆ ಈ ಸ್ಥಾನ ನೀಡಲಾಗಿದೆ.

ಸದ್ಯ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳ ಪೈಕಿ ಮೊದಲ ಸ್ಥಾನದಲ್ಲಿರುವ ಟಾಟಾ ಸಂಸ್ಥೆಯು ತನ್ನ ಜನಪ್ರಿಯ ಕಾರು ಮಾದರಿಗಳ ಮೂಲಕ ಗ್ರಾಹಕರ ಮೆಚ್ಚುಗೆ ಪಾತ್ರವಾಗಿದ್ದು, ಇತ್ತೀಚೆಗೆ ಕಾರು ಉತ್ಪಾದನೆಯಲ್ಲಿ ಕೈಗೊಳ್ಳಲಾದ ಕೆಲವು ಮಹತ್ವದ ಬದಲಾವಣೆಗಳೇ ರ‍್ಯಾಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಕಾರಣವಾಗಿದೆ.

ಭಾರತೀಯ ಆಟೋ ಉತ್ಪಾದನಾ ಸಂಸ್ಥೆಯೊಂದು ನಿರ್ಮಾಣ ಮಾಡಿದ ಕಾರೊಂದು 5 ಸ್ಟಾರ್ ರೇಟಿಂಗ್ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಐಷಾರಾಮಿ ಕಾರುಗಳನ್ನು ಹೊರತುಪಡಿಸಿ ಮಧ್ಯಮ ಗಾತ್ರದ ಕಾರುಗಳಲ್ಲಿ ಪೂರ್ಣ ಪ್ರಮಾಣದ ಸುರಕ್ಷಾ ರೇಟಿಂಗ್ ಬಂದಿದ್ದು ನೆಕ್ಸಾನ್ ಕಾರಿಗೆ ಮಾತ್ರ ಎನ್ನುವುದು ಬಹುಮುಖ್ಯ ವಿಚಾರ.

ಭಾರತದಲ್ಲಿ ಸದ್ಯ ಮಾರಾಟವಾಗುತ್ತಿರುವ 20ಕ್ಕೂ ಹೆಚ್ಚು ಕಾರ್ ಬ್ರಾಂಡ್ ಮಾದರಿಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸಿದ್ದು, ಅಪಘಾತದ ವೇಳೆ ಸುರಕ್ಷಾ ಸಾಧನಗಳು ಇಲ್ಲದಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನುವುದು ಕಟು ಸತ್ಯ. ಈ ನಿಟ್ಟಿನಲ್ಲಿ ನೆಕ್ಸಾನ್ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಸಂಪೂರ್ಣ ಅಂಕ ಪಡೆದ ಕಾರು ಮಾದರಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಗ್ರಾಹಕರ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗುತ್ತಿದೆ.

ಕಳೆದ ಮೂರು ವರ್ಷದಿಂದ ಮಾರಾಟದಲ್ಲಿ ಅಧಿಕ ಸಂಖ್ಯೆಯನ್ನು ಕಾಣುತ್ತಿರುವ ಟಾಟಾ ಮೋಟಾರ್ಸ್ ಭಾರತದಲ್ಲಿ ಶೇಕಡಾ 7ರಷ್ಟು ಪಾಲುದಾರಿಕೆಯನ್ನು ಹೊಂದಿದ್ದು, ಮುಂದಿನ 3 ರಿಂದ 5ವರ್ಷಗಳೊಳಗೆ ತಮ್ಮದೇ ಸಂಸ್ಥೆಯ 'ಆಲ್ಫಾ' ಮತ್ತು 'ಒಮೊಗಾ' ಪ್ಲಾಟ್‍ಫಾರ್ಮ್‍ನ ಅಡಿಯಲ್ಲಿ ಹೊಸ ವಾಹನಗಳನ್ನು ಬಿಡುಗಡೆಗೊಳಿಸುವುದಾಗಿ ಸಹ ಹೇಳಿಕೊಂಡಿದೆ.

ದೇಶಿಯ ವಾಹನ ತಯಾರಕ ಸಂಸ್ಥೆಗಳು ತಮ್ಮ ಗ್ರಾಹಕರ ಸುರಕ್ಷತೆಯ ಸಲುವಾಗಿ ಕಾರು ಉತ್ಪನ್ನಗಳಲ್ಲಿ ಹೆಚ್ಚಿನ ಸುರಕ್ಷತಾ ಉಪಕರಣಗಳನ್ನು ಅಳವಡಿಸುತ್ತಿರುವುದು ಸಂತೋಷದ ವಿಚಾರವಾಗಿದ್ದು, ಟಾಟಾ ಸಂಸ್ಥೆಯು ಹೊಸ ಕಾರು ಉತ್ಪನ್ನಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.
MOST READ: 15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್ ಮಾಡಿಸದ ಮಾಲೀಕರಿಗೆ ಕಾದಿದೆ ಶಾಕಿಂಗ್ ಸುದ್ದಿ..!

2017ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಟಾಟಾ ಜನಪ್ರಿಯ ನೆಕ್ಸಾನ್ ಎಸ್‌ಯುವಿ ಕಾರುಗಳು ಸದ್ಯ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸುತ್ತಿದ್ದು, ಇದರೊಂದಿಗೆ ಸುರಕ್ಷತೆಯಲ್ಲೂ ಹೊಸ ಭರವಸೆ ಮೂಡಿಸುವ ಮೂಲಕ ಪ್ರತಿಷ್ಠಿತ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ ತನ್ನದಾಗಿಸಿಕೊಂಡಿದೆ.

ಹೊಸ ಕಾರುಗಳ ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಗ್ಲೋಬಲ್ ನ್ಯೂ ಕಾರ್ ಅಸಿಸ್‌ಮೆಂಟ್ ಪ್ರೋಗ್ರಾಮ್ (ಎನ್‌ಸಿಎಪಿ) ಏಜೆನ್ಸಿಯು ನಡೆಸುವ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಖರೀದಿಗೆ ಅತ್ಯುತ್ತಮ ಎನಿಸಿರುವ ಟಾಟಾ ನೆಕ್ಸಾನ್ ಎಸ್‌ಯುವಿ ಕಾರುಗಳು ಪೂರ್ಣ ಪ್ರಮಾಣದ 5 ಸ್ಟಾರ್ ರೇಟಿಂಗ್ ತನ್ನದಾಗಿಸಿಕೊಂಡಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಸದ್ಯ ಹೊಸ ಮೈಲಿಗಲ್ಲಿಗೆ ಕಾರಣವಾಗಿದೆ.
MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಇದು ಭಾರತೀಯ ಆಟೋ ಉತ್ಪಾದನಾ ಸಂಸ್ಥೆಯೊಂದು ನಿರ್ಮಾಣ ಮಾಡಿದ ಕಾರು ಮೊದಲ ಬಾರಿಗೆ 5 ಸ್ಟಾರ್ ರೇಟಿಂಗ್ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಐಷಾರಾಮಿ ಕಾರುಗಳನ್ನು ಹೊರತುಪಡಿಸಿ ಮಧ್ಯಮ ಗಾತ್ರದ ಕಾರುಗಳಲ್ಲಿ ಪೂರ್ಣ ಪ್ರಮಾಣದ ಸುರಕ್ಷಾ ರೇಟಿಂಗ್ ಬಂದಿದ್ದು ನೆಕ್ಸಾನ್ ಕಾರಿಗೆ ಮಾತ್ರ ಎನ್ನುವುದು ಬಹುಮುಖ್ಯ ವಿಚಾರ.


Click it and Unblock the Notifications