ಭಾರತದಲ್ಲಿ ಕಾರು ನಿರ್ಮಾಣಕ್ಕಾಗಿ ಒಂದಾಗಲಿವೆ ಫೋರ್ಡ್ ಮತ್ತು ಮಹೀಂದ್ರಾ?

ದೇಶದಲ್ಲಿ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಮಾರುಕಟ್ಟೆ ವಿಸ್ತರಣೆಗಾಗಿ ಹೊಸ ಹೊಸ ಯೋಜನೆಯನ್ನು ರೂಪಿಸುತ್ತಿದ್ದು, ಹೊಸ ಕಾರು ಉತ್ಪಾದನೆಗಾಗಿ ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಒಂದಾದಂತೆ ಇದೀಗ ಮಹೀಂದ್ರಾ ಮತ್ತು ಫೋರ್ಡ್ ಸಂಸ್ಥೆಗಳು ಕೂಡಾ ಕಾರು ಮಾರಾಟ ಮತ್ತು ಹೊಸ ಎಂಜಿನ್ ಅಭಿವೃದ್ದಿಗಾಗಿ ಒಂದಾಗುತ್ತಿವೆ.

ಭಾರತದಲ್ಲಿ ಕಾರು ನಿರ್ಮಾಣಕ್ಕಾಗಿ ಒಂದಾಗಲಿವೆ ಫೋರ್ಡ್ ಮತ್ತು ಮಹೀಂದ್ರಾ?

ಹೌದು, ಭಾರತೀಯ ಆಟೋ ಉದ್ಯಮದಲ್ಲಿ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳು ತಮ್ಮದೆ ಆದ ಜನಪ್ರಿಯತೆ ಹೊಂದಿದ್ದು, ಇದೀಗ ಭವಿಷ್ಯ ಯೋಜನೆಗಳಿಗಾಗಿ ಪರಸ್ಪರ ಕೈ ಜೋಡಿಸುತ್ತಿದ್ದು, ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳ ನಿರ್ಮಾಣ, ಎಂಜಿನ್ ಅಭಿವೃದ್ದಿ ಮತ್ತು ಮಾರಾಟ ಪ್ರಕ್ರಿಯೆಯಲ್ಲೂ ಜೊತೆಯಾಗುವ ಸುಳಿವು ನೀಡಿವೆ.

ಭಾರತದಲ್ಲಿ ಕಾರು ನಿರ್ಮಾಣಕ್ಕಾಗಿ ಒಂದಾಗಲಿವೆ ಫೋರ್ಡ್ ಮತ್ತು ಮಹೀಂದ್ರಾ?

ಈ ಹಿಂದೆ ಫೋರ್ಡ್ ಸಂಸ್ಥೆಗಾಗಿ ವಿನೂತನ ಮಾದರಿಯ ಪೆಟ್ರೋಲ್ ಎಂಜಿನ್ ಒಂದನ್ನು ನಿರ್ಮಾಣ ಮಾಡಿರುವುದಾಗಿ ಹೇಳಿಕೊಂಡಿದ್ದ ಮಹೀಂದ್ರಾ ಸಂಸ್ಥೆಯು ಇದೀಗ ಸಹಭಾಗಿತ್ವದ ಆಧಾರದಲ್ಲಿ ಕಾರು ನಿರ್ಮಾಣ ಮತ್ತು ಮಾರಾಟದಲ್ಲೂ ಒಂದಾಗಲು ಮುಂದಾಗಿವೆ.

ಭಾರತದಲ್ಲಿ ಕಾರು ನಿರ್ಮಾಣಕ್ಕಾಗಿ ಒಂದಾಗಲಿವೆ ಫೋರ್ಡ್ ಮತ್ತು ಮಹೀಂದ್ರಾ?

ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ವಕ್ತಾರರು, ಇನ್ನು ಈ ಬಗ್ಗೆ ಮಾತುಕತೆ ನಡೆದಿದೆ ಹೊರತು ಸಹಭಾಗಿತ್ವದಲ್ಲಿ ಕಾರು ನಿರ್ಮಾಣ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಸಹಕರಿಸುವ ಕುರಿತಾಗಿ ಯಾವುದೇ ಅಂತಿಮ ನಿರ್ಧಾರಗಳನ್ನು ತಗೆದುಕೊಳ್ಳಲಾಗಿಲ್ಲ ಎನ್ನಲಾಗಿದೆ.

ಭಾರತದಲ್ಲಿ ಕಾರು ನಿರ್ಮಾಣಕ್ಕಾಗಿ ಒಂದಾಗಲಿವೆ ಫೋರ್ಡ್ ಮತ್ತು ಮಹೀಂದ್ರಾ?

ಆದ್ರೆ ಸದ್ಯದ ಮಾರುಕಟ್ಟೆಯ ಸನ್ನಿವೇಶದಲ್ಲಿ ಫೋರ್ಡ್ ಸಂಸ್ಥೆಯು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಬೃಹತ್ ಬಂಡವಾಳ, ಆಕರ್ಷಕ ಉತ್ಪನ್ನಗಳು ಮತ್ತು ಸ್ವಂತ ಕಾರು ಉತ್ಪಾದನಾ ಘಟಕಗಳಿದ್ದರೂ ನಷ್ಟ ಅನುಭವಿಸುತ್ತಿದೆ. ಹೀಗಾಗಿ ಮಹೀಂದ್ರಾ ಜೊತೆಗಿನ ಸಹಭಾಗಿತ್ವ ಆಧಾರದ ಕಾರು ಉತ್ಪಾದನೆ ಮತ್ತು ಮಾರಾಟ ಯೋಜನೆಯು ಒಂದು ರೀತಿಯಲ್ಲಿ ಲಾಭದಾಯಕ ಮಾರ್ಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭಾರತದಲ್ಲಿ ಕಾರು ನಿರ್ಮಾಣಕ್ಕಾಗಿ ಒಂದಾಗಲಿವೆ ಫೋರ್ಡ್ ಮತ್ತು ಮಹೀಂದ್ರಾ?

ಇನ್ನು ಮಹೀಂದ್ರಾ ಸಂಸ್ಥೆಗೂ ಇದರಿಂದ ಸಾಕಷ್ಟು ಅನುಕೂಲಕತೆಗಳಿದ್ದು, ಕಾರು ಉತ್ಪಾದನೆಯಿಲ್ಲದೇ ಆರ್ಥಿಕ ಹೊರೆ ಅನುಭವಿಸುತ್ತಿರುವ ಗುಜರಾತಿನ ಸನಂದಾ ಮತ್ತು ಚೆನ್ನೈ ಘಟಕಗಳನ್ನು ಸದ್ಭಳಕೆ ಮಾಡಿಕೊಳ್ಳಲು ಮಹೀಂದ್ರಾ ಸಂಸ್ಥೆಗೂ ಸಹಕಾರಿಯಾಗಲಿದೆ.

MOST READ: ಹೊಸ ಬೈಕ್‌ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ಭಾರತದಲ್ಲಿ ಕಾರು ನಿರ್ಮಾಣಕ್ಕಾಗಿ ಒಂದಾಗಲಿವೆ ಫೋರ್ಡ್ ಮತ್ತು ಮಹೀಂದ್ರಾ?

ಜೊತೆಗೆ ಉತ್ತರ ಭಾರತದ ರಾಜ್ಯಗಳಲ್ಲಿನ ಬೇಡಿಕೆ ಪೂರೈಸಲು ಮಹೀಂದ್ರಾ ಸಂಸ್ಥೆಗೂ ಈ ಹೊಸ ಯೋಜನೆ ಸಹಕಾರಿಯಾಗಲಿದ್ದು, ಈ ಮೂಲಕ ಗ್ರಾಹಕರ ಬೇಡಿಕೆ ಕಳೆದುಕೊಳ್ಳುತ್ತಿರುವ ಫೋರ್ಡ್ ಕಾರುಗಳಿಗೆ ಮಹೀಂದ್ರಾದಿಂದಲೂ ಮತ್ತಷ್ಟು ಉತ್ತೇಜನ ಸಿಗಲಿದೆ.

ಭಾರತದಲ್ಲಿ ಕಾರು ನಿರ್ಮಾಣಕ್ಕಾಗಿ ಒಂದಾಗಲಿವೆ ಫೋರ್ಡ್ ಮತ್ತು ಮಹೀಂದ್ರಾ?

ಯಾಕೆಂದ್ರೆ ಮೆಟ್ರೋ ನಗರಗಳಲ್ಲಿ ಅಷ್ಟೇ ಅಲ್ಲದೇ 2ನೇ ದರ್ಜೆಯ ಮತ್ತು 3ನೇ ದರ್ಜೆಯ ಮಹಾನಗರಗಳಲ್ಲೂ ವ್ಯಾಪಕವಾದ ಮಾರಾಟ ಮಳಿಗೆಗಳನ್ನು ಹೊಂದಿರುವ ಮಹೀಂದ್ರಾ ಸಂಸ್ಥೆಯು ಫೋರ್ಡ್ ಕಾರುಗಳ ಮಾರಾಟಕ್ಕೆ ಸಾಥ್ ನೀಡಲಿದೆ.

MOST READ: ಟೊಯೊಟಾ ಬಿಡದಿ ಘಟಕದ ವಿಸ್ತರಣೆಗಾಗಿ 7 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ ಮಾರುತಿ ಸುಜುಕಿ

ಭಾರತದಲ್ಲಿ ಕಾರು ನಿರ್ಮಾಣಕ್ಕಾಗಿ ಒಂದಾಗಲಿವೆ ಫೋರ್ಡ್ ಮತ್ತು ಮಹೀಂದ್ರಾ?

ಹೀಗಾಗಿ ಸಹಭಾಗಿತ್ವದಲ್ಲಿ ಕಾರು ನಿರ್ಮಾಣ, ಎಂಜಿನ್ ಅಭಿವೃದ್ಧಿ ಮತ್ತು ಮಾರಾಟಕ್ಕೆ ಪರಸ್ಪರ ಸಹಕರಿಸುವ ಹೊಸ ಯೋಜನೆಯು ಭಾರತದಲ್ಲಿ ಯಶಸ್ವಿಯಾಗುವ ಸಾಧ್ಯತೆಗಳಿದ್ದು, ಹೊಸ ಯೋಜನೆ ಕೈಗೊಳ್ಳುವ ಕುರಿತಂತೆ ಮುಂದಿನ ದಿನಗಳಲ್ಲಿ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳೇ ಸ್ಪಷ್ಟನೆ ನೀಡಲಿವೆ.

Most Read Articles

Kannada
English summary
Ford India Plans To Form new JV with Mahindra. Read in Kannada.
Story first published: Wednesday, April 10, 2019, 17:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X