ಹೊಸ ಟಯರ್ ಬಿಡುಗಡೆಗೊಳಿಸಿದ ಗುಡ್‍‍ಇಯರ್

ಗುಡ್‍‍ಇಯರ್ ಕಂಪನಿಯು, ಅಶ್ಯೂರೆನ್ಸ್ ಡ್ಯೂರಾ ಪ್ಲಸ್ ಹಾಗೂ ವ್ರಾಂಗ್ಲರ್ ಎ‍‍ಟಿ ಸೈಲೆಂಟ್ ಟ್ರಾಕ್ ಎಂಬ ಎರಡು ಹೊಸ ಸರಣಿಯ ಟಯರ್‍‍ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಎರಡೂ ಹೊಸ ಟಯರ್‍‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿರುವ ಪ್ಯಾಸೆಂಜರ್ ವಾಹನಗಳಲ್ಲಿ ಬಳಸಲಾಗುವುದು.

ಹೊಸ ಟಯರ್ ಬಿಡುಗಡೆಗೊಳಿಸಿದ ಗುಡ್‍‍ಇಯರ್

ಅಶ್ಯೂರೆನ್ಸ್ ಡುರಾಪ್ಲಸ್ 2 ಟಯರ್ ಅನ್ನು ಸಣ್ಣ ಹಾಗೂ ಮಧ್ಯಮ ಗಾತ್ರದ ಪ್ರಯಾಣಿಕ ವಾಹನಗಳಿಗಾಗಿ ತಯಾರಿಸಿರುವುದಾಗಿ ಕಂಪನಿ ಹೇಳಿದೆ. ವ್ರಾಂಗ್ಲರ್ ಎಟಿ ಸೈಲೆಂಟ್‌ಟ್ರಾಕ್ ಅನ್ನು ಆಫ್ ರೋಡ್ ಎಸ್‌ಯುವಿಗಳಿಗಾಗಿ ತಯಾರಿಸಲಾಗಿದೆ. ಗುಡ್‌ಇಯರ್ ಅಶ್ಯೂರೆನ್ಸ್ ಡುರಾಪ್ಲಸ್ 2 ಟಯರ್‌ಗಳನ್ನು 13 ರಿಂದ 15 ಇಂಚಿನ ರಿಮ್ ಡೈಯಮೀಟರ್‍‍ನಲ್ಲಿ ಮಾರಾಟ ಮಾಡುವುದಾಗಿ ಕಂಪನಿ ತಿಳಿಸಿದೆ. ವ್ರಾಂಗ್ಲರ್ ಎಟಿ ಸೈಲೆಂಟ್‌ಟ್ರಾಕ್ ಟಯರ್‍‍ಗಳು 15 ರಿಂದ 17 ಇಂಚಿನ ರಿಮ್ ಡೈಯಮೀಟರ್ ಹೊಂದಿರಲಿವೆ.

ಹೊಸ ಟಯರ್ ಬಿಡುಗಡೆಗೊಳಿಸಿದ ಗುಡ್‍‍ಇಯರ್

ಗುಡ್‌ಇಯರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಆನಂದ್‍‍ರವರು ಮಾತನಾಡಿ ಟಯರ್ ತಂತ್ರಜ್ಞಾನದಲ್ಲಿ ಅಗ್ರಗಣ್ಯ ಕಂಪನಿಯಾದ, ಗುಡ್‌ಇಯರ್ ಯಾವಾಗಲೂ ಹೊಸತನವನ್ನು ನೀಡುತ್ತಾ ಬಂದಿದೆ.

ಹೊಸ ಟಯರ್ ಬಿಡುಗಡೆಗೊಳಿಸಿದ ಗುಡ್‍‍ಇಯರ್

ವಿವಿಧ ಮಾರುಕಟ್ಟೆ ವಿಭಾಗಗಳಿಗೆ ಹೊಸ ಕೊಡುಗೆಗಳ ನೀಡಲು ವ್ಯಾಪಕ ಬಂಡವಾಳವನ್ನು ಹೂಡಲಾಗುತ್ತಿದೆ. ಉತ್ತಮ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ, ಗ್ರಾಹಕರಿಗೆ ಉತ್ತಮವಾದುದನ್ನು ನೀಡಲು ನಮಗೆ ನಾವೇ ಸವಾಲು ಹಾಕಿಕೊಳ್ಳುತ್ತೇವೆ ಎಂದು ಹೇಳಿದರು.

ಹೊಸ ಟಯರ್ ಬಿಡುಗಡೆಗೊಳಿಸಿದ ಗುಡ್‍‍ಇಯರ್

ಅಶ್ಯೂರೆನ್ಸ್ ಡುರಾಪ್ಲಸ್ 2 ಟಯರ್‍‍‍ಗಳು ಗುಡ್‌ಇಯರ್‍‍ನ ಟ್ರೆಡ್‌ಲೈಫ್ ಟೆಕ್ನಾಲಜಿಯನ್ನು ಹೊಂದಿವೆ. ಇದರಿಂದಾಗಿ ಟಯರ್‌ಗಳು ಹೆಚ್ಚಿನ ಮೈಲೇಜ್, ಬಾಳಿಕೆ ಹಾಗೂ ಸ್ತಬ್ಧ ಸವಾರಿಯನ್ನು ನೀಡಲಿವೆ. ಈ ಹೊಸ ಸರಣಿಯ ಕಾರ್ ಟಯರ್‌ಗಳು ಗ್ರಾಹಕರಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಲಿವೆ.

ಹೊಸ ಟಯರ್ ಬಿಡುಗಡೆಗೊಳಿಸಿದ ಗುಡ್‍‍ಇಯರ್

ಈ ಟಯ‍‍ರ್‍‍ಗಳಲ್ಲಿರುವ ದೃಢವಾದ ಸೈಡ್‍‍ವಾಲ್ ಹಾಗೂ ಕಡಿಮೆ ಶಬ್ದದ ಪರ್ಫಾಮೆನ್ಸ್ ನಿಂದಾಗಿ ಅಧಿಕ ಮೈಲೇಜ್ ಹಾಗೂ 1,11,000 ಕಿ.ಮೀ.ವರೆಗಿನ ಕಾರ್ಯಕ್ಷಮತೆ ಸಿಗಲಿದೆ. ವ್ರಾಂಗ್ಲರ್ ಎಟಿ ಸೈಲೆಂಟ್‌ಟ್ರಾಕ್ ಟಯರ್‍‍ಗಳನ್ನು ಆನ್ ರೋಡ್ ಹಾಗೂ ಆಫ್ ರೋಡ್‍‍ನಲ್ಲಿನ ಪರ್ಫಾಮೆನ್ಸ್ ಹಾಗೂ ಹ್ಯಾಂಡ್ಲಿಂಗ್ ಸಾಮರ್ಥ್ಯಗಳನ್ನು ಹೆಚ್ಚಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಹೊಸ ಟಯರ್ ಬಿಡುಗಡೆಗೊಳಿಸಿದ ಗುಡ್‍‍ಇಯರ್

ಈ ಸರಣಿಯ ಟಯರ್‍‍ಗಳು ಡುರಾವಾಲ್ ಟೆಕ್ನಾಲಜಿಯನ್ನು ಹೊಂದಿವೆ. ಈ ಟೆಕ್ನಾಲಜಿಯು ಆಫ್ ರೋಡ್ ಪರ್ಫಾಮೆನ್ಸ್ ಅನ್ನು ಹೆಚ್ಚಿಸುತ್ತದೆ. ವ್ರಾಂಗ್ಲರ್ ಎಟಿ ಸೈಲೆಂಟ್‌ಟ್ರಾಕ್‌ನಲ್ಲಿನ ಥ್ರೆಡ್ ಮಾದರಿಯನ್ನು ಸ್ತಬ್ಧ ಸವಾರಿಯನ್ನು ನೀಡಲು ಸಹಾಯವಾಗುವಂತೆ ತಯಾರಿಸಲಾಗಿದೆ. ಇದರಿಂದಾಗಿ ವಾಹನದ ಮೈಲೇಜ್ ಹೆಚ್ಚಲಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಹೊಸ ಟಯರ್ ಬಿಡುಗಡೆಗೊಳಿಸಿದ ಗುಡ್‍‍ಇಯರ್

ಗುಡ್‌ಇಯರ್ ಇಂಡಿಯಾದ ಗ್ರಾಹಕ ವ್ಯವಹಾರಗಳ ಉಪಾಧ್ಯಕ್ಷರಾದ ಪಿಕೆ ವಾಲಿಯಾರವರು ಮಾತನಾಡಿ, ಹೆಚ್ಚುತ್ತಿರುವ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಸಲುವಾಗಿ ನಮ್ಮ ಹೊಸ ಟೆಕ್ನಾಲಜಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ನಾವು ಉತ್ಸುಕರಾಗಿದ್ದೇವೆ.

MOST READ: ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ಹೊಸ ಟಯರ್ ಬಿಡುಗಡೆಗೊಳಿಸಿದ ಗುಡ್‍‍ಇಯರ್

ಅಶ್ಯೂರೆನ್ಸ್ ಡುರಾಪ್ಲಸ್ 2 ಹಾಗೂ ವ್ರಾಂಗ್ಲರ್ ಎಟಿ ಸೈಲೆಂಟ್‌ಟ್ರಾಕ್ ಎರಡೂ ಟಯರ್‍‍ಗಳು ಈ ಹಿಂದಿದ್ದ ಟಯರ್‍‍ಗಳಿಗಿಂತ ಉತ್ತಮವಾಗಿವೆ. ಈ ಹೊಸ ಟಯರ್‍‍ಗಳು ನಮ್ಮ ಗ್ರಾಹಕರಿಗೆ ಮತ್ತಷ್ಟು ಹೊಸತನವನ್ನು ನೀಡುತ್ತವೆಂಬ ನಂಬಿಕೆಯಿದೆ. ಈ ಟಯರ್‍‍ಗಳು ನಮ್ಮ ಗ್ರಾಹಕರಿಗೆ ಉತ್ತಮ ಪ್ರಯೋಜನಗಳನ್ನು ನೀಡುವುದರ ಜೊತೆಗೆ ಸುರಕ್ಷಿತವಾದ ಹಾಗೂ ಗುಣಮಟ್ಟದ ಚಾಲನಾ ಅನುಭವವನ್ನು ನೀಡುತ್ತವೆ ಎಂದು ಹೇಳಿದರು.

MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಹೊಸ ಟಯರ್ ಬಿಡುಗಡೆಗೊಳಿಸಿದ ಗುಡ್‍‍ಇಯರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಗುಡ್‌ಇಯರ್ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿ ಎರಡು ಹೊಸ ಸರಣಿಯ ಕಾರ್ ಟಯರ್‌ಗಳನ್ನು ಬಿಡುಗಡೆಗೊಳಿಸಿದೆ. ಒಂದು ಸರಣಿಯ ಟಯರ್ ಸಣ್ಣ ಹಾಗೂ ಮಧ್ಯಮ ಗಾತ್ರದ ಪ್ಯಾಸೆಂಜರ್ ವಾಹನಗಳಿಗಾಗಿದ್ದರೆ, ಮತ್ತೊಂದನ್ನು ಆಫ್ ರೋಡ್ ವಾಹನಗಳಿಗಾಗಿ ತಯಾರಿಸಲಾಗಿದೆ. ಇದರಿಂದಾಗಿ ಗುಡ್‍ಇಯರ್ ದೇಶಿಯ ಮಾರುಕಟ್ಟೆಯಲ್ಲಿರುವ ಎಲ್ಲಾ ರೀತಿಯ ಗ್ರಾಹಕರನ್ನು ತಲುಪುವ ಉದ್ದೇಶವನ್ನು ಹೊಂದಿದೆ.

Most Read Articles

Kannada
English summary
Goodyear Launches Tarmac & Off-Road Specific Car Tyres In India - Read in kannada
Story first published: Saturday, August 24, 2019, 13:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X