ಹೀಗಿರಲಿದೆ ನೋಡಿ ಭಾರತದಲ್ಲಿ ಬಿಡುಗಡೆಯಾಗಲಿರುವ ಹವಾಲ್ ಹೆಚ್6 ಕಾರು
ಈ ಮೊದಲು ಗ್ರೇಟ್ ವಾಲ್ ಮೋಟಾರ್ಸ್ (ಜಿಡಬ್ಲ್ಯುಎಂ) ಭಾರತದಲ್ಲಿ ತನ್ನ ಜನಪ್ರಿಯ ಎಸ್‍ಯುವಿ ಹವಾಲ್ ಅನ್ನು ಬಿಡುಗಡೆಗೊಳಿಸುವುದಾಗಿ ವರದಿಯಾಗಿತ್ತು. ಈ ಎಸ್‍ಯುವಿಯನ್ನು ಮುಂಬರುವ 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗುವುದು.

ಹವಾಲ್ ಇತ್ತೀಚಿಗಷ್ಟೇ ಹೆಚ್9 ಎಸ್‍ಯುವಿಯನ್ನು ಮಲೇಶಿಯಾದಲ್ಲಿ ಅನಾವರಣಗೊಳಿಸಿತ್ತು. ಹೆಚ್9 ಎಸ್‍ಯುವಿಯು ಮಲೇಶಿಯಾದಲ್ಲಿ ಟೊಯೊಟಾ ಫಾರ್ಚೂನರ್ ಹಾಗೂ ಫೋರ್ಡ್ ಎಂಡೀವರ್‍ಗಳಿಗೆ ಪೈಪೋಟಿ ನೀಡುತ್ತದೆ.

ಹೆಚ್9 ಕಾರಿನ ಗಾತ್ರ ದೊಡ್ಡದಾದ ಕಾರಣ, ಹವಾಲ್ ಹೆಚ್6 ಹೆಸರಿನ ಮಧ್ಯಮ ಗಾತ್ರದ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಹೆಚ್6 ಎಂಜಿ ಹೆಕ್ಟರ್, ಟಾಟಾ ಹ್ಯಾರಿಯರ್ ಹಾಗೂ ಮಹೀಂದ್ರಾ ಎಕ್ಸ್‌ಯುವಿ 500ಗಳಿಗೆ ಪೈಪೋಟಿ ನೀಡಲಿದೆ.

ಈ ಕಾರುಗಳು ಸರಿ ಸುಮಾರು ರೂ.15 ಲಕ್ಷದ ಬೆಲೆ ಹೊಂದಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿವೆ. ಹೆಚ್ 6 ಎಸ್‍ಯುವಿ ಹಲವು ಡಿಸೈನ್ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಹವಾಲ್ ಕಂಪನಿಯ ವಿವಿಧ ಕಾರುಗಳಲ್ಲಿರುವ ಹಾರಿಜಾಂಟಲ್ ಕ್ರೋಮ್ ಸ್ಲಾಟ್ ಗ್ರಿಲ್ ಸಹ ಸೇರಿದೆ.

ಈ ಗ್ರಿಲ್‍ನ ಸುತ್ತಲೂ ಟ್ವಿನ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್‍ಗಳಿದ್ದು, ಅದರ ಕೆಳಗೆ ಕ್ರೋಮ್ ಹೌಸಿಂಗ್‍ನಲ್ಲಿರುವ ಫಾಗ್ ಲ್ಯಾಂಪ್‍ಗಳಿವೆ. ಹೆಚ್6 ಕಾರಿನ ಸೈಡಿನಲ್ಲಿ ಕಾರಿಗೆ ರಗಡ್ ಲುಕ್ ನೀಡಲು ಕ್ಲಾಡಿಂಗ್‍ಗಳಿವೆ. ಡ್ಯುಯಲ್ ಟೋನ್‍ನಲ್ಲಿರುವ 19 ಇಂಚಿನ ಅಲಾಯ್ ವ್ಹೀಲ್‍ಗಳು ಮುಂಭಾಗದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಹೆಚ್6ನ ಸೈಡಿನಲ್ಲಿ ಸಬ್ಟಲ್ ಕ್ರೀಸ್ ನೀಡಲಾಗಿದೆ. ಹೆಚ್ 6ನ ಹಿಂಭಾಗದಲ್ಲಿ ಕ್ರೋಮ್ ಸ್ಟ್ರಿಪ್‍ನಿಂದ ಕನೆಕ್ಟ್ ಆದ ಎಲ್ಇಡಿ ಲೈಟ್‍ಗಳಿವೆ. ಸ್ಪೋರ್ಟಿ ಬಂಪರ್ ಹೊಂದಿರುವ ಡ್ಯುಯಲ್ ಎಕ್ಸಾಸ್ಟ್ ಗಳು ಕಾರಿನ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಹೆಚ್6 ಎಸ್‍ಯುವಿಯ ಒಳಗೆ, ಪ್ರೀಮಿಯಂ ಕ್ಯಾಬಿನ್ ನೀಡಲಾಗಿದೆ. ಈ ಕ್ಯಾಬಿನ್‍ನ ಸೆಂಟ್ರಲ್ ಕನ್ಸೋಲ್‌ನಲ್ಲಿ ಉದ್ದವಾದ ಎಸಿ ವೆಂಟ್‍ಗಳಿವೆ. ಇದರ ಜೊತೆಗೆ 9 ಇಂಚಿನ ಇನ್ಫೋಟೇನ್‍ಮೆಂಟ್ ಸಿಸ್ಟಂ ಹಾಗೂ 12.3 ಇಂಚಿನ ಇನ್ಸ್ ಟ್ರೂಮೆಂಟ್ ಡಿಸ್‍ಪ್ಲೇಗಳಿದ್ದು ಕ್ಯಾಬಿನ್‍ಗೆ ಮತ್ತಷ್ಟು ಪ್ರೀಮಿಯಂ ನೀಡುತ್ತವೆ.
MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಹೆಚ್6 ಎಸ್‍ಯುವಿಯು ಎಂಪಿ 5 ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಪನೋರಾಮಿಕ್ ಸನ್‌ರೂಫ್, ಕ್ರೂಸ್ ಕಂಟ್ರೋಲ್, ಎಲ್ಇಡಿ ಎಕ್ಸ್ ಟಿರಿಯರ್ ಲ್ಯಾಂಪ್, ಪುಶ್ ಬಟನ್ ಸ್ಟಾರ್ಟ್ ಹೊಂದಿರುವ ಕೀ ಲೆಸ್ ಎಂಟ್ರಿ, ಪವರ್ಡ್ ಫ್ರಂಟ್ ಸೀಟುಗಳು ಹಾಗೂ ಹೀಟೆಡ್ ಸ್ಟೀಯರಿಂಗ್ ವ್ಹೀಲ್‍ಗಳನ್ನು ಹೊಂದಿದೆ.
MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಇಷ್ಟೆಲ್ಲಾ ಫೀಚರ್‍ಗಳನ್ನು ಹೊಂದಿರುವ ಈ ಎಸ್‍ಯುವಿಯಲ್ಲಿ ಆಂಡ್ರಾಯಿಡ್ ಆಟೋ ಆಗಲಿ ಅಥವಾ ಆಪಲ್ ಕಾರ್ ಪ್ಲೇ ಫೀಚರ್‍ಗಳಿಲ್ಲದೇ ಇರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ. ಹೆಚ್6 ಎಸ್‍ಯುವಿ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, 360 ಡಿಗ್ರಿ ಕ್ಯಾಮೆರಾ, ರೇರ್ ಪಾರ್ಕಿಂಗ್ ಸೆನ್ಸಾರ್, ಲೇನ್ ಡಿಪಾರ್ಚರ್ ವಾರ್ನಿಂಗ್, ಕ್ರಾಸ್ ಟ್ರಾಫಿಕ್ ಅಲರ್ಟ್ ಹಾಗೂ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂಗಳಂತಹ ಸುರಕ್ಷತಾ ಫೀಚರ್‍ಗಳನ್ನು ಹೊಂದಿದೆ.
MOST READ: ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್ ಬಗ್ಗೆ ನಿಮಗೆಷ್ಟು ಗೊತ್ತು?

ಹೆಚ್6 ಎಸ್‍ಯುವಿ - 1.5 ಲೀಟರಿನ ಟಿ-ಜಿಡಿಐ ಎಂಜಿನ್ ಹಾಗೂ 2.0 ಲೀಟರಿನ ಟಿ-ಜಿಡಿಐ ಎಂಜಿನ್ - ಎಂಬ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. 1.5 ಲೀಟರಿನ ಎಂಜಿನ್ 160 ಬಿಹೆಚ್‍ಪಿ ಪವರ್ ಹಾಗೂ 280 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

2.0 ಲೀಟರಿನ ಟಿ-ಜಿಡಿಐ ಎಂಜಿನ್ 187 ಬಿಹೆಚ್‍ಪಿ ಪವರ್ ಹಾಗೂ 340 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‍ಗಳು 7 ಸ್ಪೀಡಿನ ಡಿಸಿಟಿ ಹೊಂದಿದ್ದು, ಪವರ್ ಅನ್ನು ಮುಂಭಾಗದ ವ್ಹೀಲ್‍ಗಳಿಗೆ ಮಾತ್ರ ಕಳುಹಿಸುತ್ತವೆ.

ಹವಾಲ್ ಹೆಚ್6 ದೇಶಿಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಅಂಶಗಳನ್ನು ಹೊಂದಿದೆ. ಇದರ ಜೊತೆಗೆ ಹಲವಾರು ಫೀಚರ್‍ಗಳನ್ನು ಹಾಗೂ ಪ್ರೀಮಿಯಂ ಕ್ಯಾಬಿನ್, ಬಲಶಾಲಿಯಾದ ಟಿ-ಜಿಡಿಐ ಎಂಜಿನ್‍ಗಳನ್ನು ಹೊಂದಿದೆ.


Click it and Unblock the Notifications