ಹೆದ್ದಾರಿಗಳಲ್ಲಿ ಬೇಕಾಬಿಟ್ಟಿಯಾಗಿ ಚಲಿಸುವ ಭಾರೀ ಗಾತ್ರದ ವಾಹನಗಳಿಗೆ 5 ಸಾವಿರ ದಂಡ

ವಾಹನಗಳ ಸಂಖ್ಯೆ ಹೆಚ್ಚಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಕೂಡಾ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಬಹುತೇಕ ವಾಹನ ಸವಾರರು ಲೈನ್‌ಗಳನ್ನು ಸರಿಯಾಗಿ ಬಳಕೆ ಮಾಡದೆ ಬೇಕಾಬಿಟ್ಟಿಯಾಗಿ ಚಾಲನೆ ಮಾಡುತ್ತಿರುತ್ತಾರೆ. ಆದ್ರೆ ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಅಪಘಾತ ಸಂಖ್ಯೆ ತಗ್ಗಿಸಲು ಹೊಸ ನಿಯಮವೊಂದನ್ನು ಜಾರಿಗೆ ತರಲಾಗಿದೆ.

ಹೆದ್ದಾರಿಗಳಲ್ಲಿ ಬೇಕಾಬಿಟ್ಟಿಯಾಗಿ ಚಲಿಸುವ ಭಾರೀ ಗಾತ್ರದ ವಾಹನಗಳಿಗೆ 5 ಸಾವಿರ ದಂಡ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸುಗಮ ಚಾಲನೆಗಾಗಿ ಸಣ್ಣ ಗಾತ್ರದ ವಾಹನಗಳು ಮತ್ತು ಭಾರೀ ಗಾತ್ರದ ವಾಹನಗಳಿಗಾಗಿ ಪ್ರತ್ಯೇಕವಾಗಿ ಲೈನ್ ಬಳಕೆ ಮಾಡಬೇಕೆಂಬ ನಿಯಮ ರೂಪಿಸಿದ್ದರೂ ಸಹ ಭಾರೀ ಗಾತ್ರದ ವಾಹನಗಳು ಮಾತ್ರ ಲೈನ್ ತಪ್ಪಿಸಿ ಓವರ್‌ಟೆಕ್ ಮಾಡಲು ಮುಂದಾಗುತ್ತವೆ. ಇದರಿಂದ ಅಪಘಾತಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಬೇಕಾಬಿಟ್ಟಿಯಾಗಿ ಲೈನ್ ಬದಲಿಸಿ ಚಲಿಸುವ ಭಾರೀ ಗಾತ್ರದ ವಾಹನಗಳಿಗೆ ಗರಿಷ್ಠ ಮಟ್ಟದ ದಂಡವಿಧಿಸಲಾಗುತ್ತಿದೆ.

ಹೆದ್ದಾರಿಗಳಲ್ಲಿ ಬೇಕಾಬಿಟ್ಟಿಯಾಗಿ ಚಲಿಸುವ ಭಾರೀ ಗಾತ್ರದ ವಾಹನಗಳಿಗೆ 5 ಸಾವಿರ ದಂಡ

ಈ ಹಿಂದೆಯೇ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಭಾರೀ ಗಾತ್ರದ ಸಕಲು ಸೇವೆಯ ವಾಹನಗಳಿಗೆ ಪ್ರತ್ಯೇಕವಾಗಿ ಎಡಬದಿಯ ಲೈನ್ ಅನ್ನು ಕಾಯ್ದಿರಿಸಲಾಗಿದ್ದು, ಓವರ್‌ಟೆಕ್ ಮಾಡುವ ಸಂಬಂಧ ಬಹುತೇಕ ವಾಹನ ಸವಾರರು ಸಣ್ಣ ಗಾತ್ರದ ಬಸ್ ಮತ್ತು ಕಾರುಗಳು ಚಲಿಸುವ ಬಲಬದಿಯಲ್ಲೇ ಚಲಿಸುತ್ತಿರುತ್ತವೆ.

ಹೆದ್ದಾರಿಗಳಲ್ಲಿ ಬೇಕಾಬಿಟ್ಟಿಯಾಗಿ ಚಲಿಸುವ ಭಾರೀ ಗಾತ್ರದ ವಾಹನಗಳಿಗೆ 5 ಸಾವಿರ ದಂಡ

ಹೀಗಾಗಿ ಈ ಹಿಂದಿನ ರೂ.200 ಇದ್ದ ದಂಡದ ಮೊತ್ತವನ್ನು ಇದೀಗ ಹೊಸ ಮೋಟಾರ್ ಕಾಯ್ದೆ ತಿದ್ದುಪಡಿ ಅನ್ವಯ ರೂ.1 ಸಾವಿರದಿಂದ ರೂ.5 ಸಾವಿರ ತನಕ ಹೆಚ್ಚಳ ಮಾಡಲಾಗಿದ್ದು, ಲೈನ್ ಬದಲಿಸುವ ವೇಳೆ ಅಪಘಾತಗಳು ಸಂಭವಿಸಿದಲ್ಲಿ ಇನ್ನು ಹೆಚ್ಚಿನ ಮಟ್ಟದ ದಂಡ ಬಿಳಲಿದೆ.

ಹೆದ್ದಾರಿಗಳಲ್ಲಿ ಬೇಕಾಬಿಟ್ಟಿಯಾಗಿ ಚಲಿಸುವ ಭಾರೀ ಗಾತ್ರದ ವಾಹನಗಳಿಗೆ 5 ಸಾವಿರ ದಂಡ

ಲೈನ್ ಬದಲಿಸುವ ಭಾರೀ ಗಾತ್ರದ ವಾಹನಗಳಿಗೆ ಈಗಾಗಲೇ ಮುಂಬೈ ಮತ್ತು ಪುಣೆ ಪೊಲೀಸರು ದಂಡ ವಿಧಿಸುತ್ತಿದ್ದು, ಮುಂಬೈ ಟು ಪುಣೆ ಹಾಗೂ ಮುಂಬೈ ಟು ಅಲಹಾಬಾದ್ ಎಕ್ಸ್‌ಪ್ರೆಸ್ ವೇ ಗಳಲ್ಲಿ ಸಂಚರಿಸುವ ಸಾವಿರಾರು ಲಾರಿ ಮಾಲೀಕರಿಗೆ ಇ-ಚಲನ್ ಮೂಲಕ ಭಾರೀ ಪ್ರಮಾಣದ ದಂಡವಿಧಿಸಲಾಗಿದ್ದಾರೆ. ಈ ಕುರಿತು ಮಾತನಾಡಿರುವ ರಾಷ್ಟ್ರೀಯ ಹೆದ್ದಾರಿ ಕಾವಲು ಪಡೆಯ ಎಸ್ಪಿ ವಿಜಯ್ ಪಾಟೀಲ್ ಮಾತನಾಡಿ, ಕಳೆದ ಜುಲೈ 15ರಿಂದಲೇ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ಹೆದ್ದಾರಿಗಳಲ್ಲಿ ಬೇಕಾಬಿಟ್ಟಿಯಾಗಿ ಚಲಿಸುವ ಭಾರೀ ಗಾತ್ರದ ವಾಹನಗಳಿಗೆ 5 ಸಾವಿರ ದಂಡ

ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ಮುಂದೆ ಬೇಕಾಬಿಟ್ಟಿಯಾಗಿ ಲೈನ್ ಬದಲಿಸಿ ಚಲಿಸುವ ವಾಹನಗಳಿಗೆ ಬ್ರೇಕ್ ಬೀಳಲಿದ್ದು, ಸಣ್ಣ ಗಾತ್ರದ ವಾಹನಗಳು ಮತ್ತು ಕಾರು ಚಾಲನೆಗೆ ಮತ್ತಷ್ಟು ಸುಗಮವಾಗಿದೆ ಎನ್ನಬಹುದು.

ಹೆದ್ದಾರಿಗಳಲ್ಲಿ ಬೇಕಾಬಿಟ್ಟಿಯಾಗಿ ಚಲಿಸುವ ಭಾರೀ ಗಾತ್ರದ ವಾಹನಗಳಿಗೆ 5 ಸಾವಿರ ದಂಡ

ಇದಲ್ಲದೇ ಭಾರೀ ಗಾತ್ರದ ವಾಣಿಜ್ಯ ವಾಹನಗಳನ್ನು ಓಡಿಸುವ ಚಾಲಕರ ಲೈಸೆನ್ಸ್ ನವೀಕರಣದಲ್ಲೂ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ಲೈಸೆನ್ಸ್ ನವೀಕರಣಕ್ಕೆ ಬರುವ ಚಾಲಕರು ಕಡ್ಡಾಯವಾಗಿ ಹೊಸ ಚಾಲನಾ ಪರೀಕ್ಷೆಯನ್ನು ಎದುರಿಸಬೇಕಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹೆದ್ದಾರಿಗಳಲ್ಲಿ ಬೇಕಾಬಿಟ್ಟಿಯಾಗಿ ಚಲಿಸುವ ಭಾರೀ ಗಾತ್ರದ ವಾಹನಗಳಿಗೆ 5 ಸಾವಿರ ದಂಡ

ಈ ಪರೀಕ್ಷೆಯು ಚಾಲಕರ ಚಾಲನಾ ಶೈಲಿ ಹಾಗೂ ಅದರಿಂದ ಇಂಧನ ಬಳಕೆಯ ಮೇಲೆ ಉಂಟಾಗುವ ಪರಿಣಾಮ ತಿಳಿದು ಬರಲಿದ್ದು, ಈ ಪರೀಕ್ಷೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಇಂಧನವನ್ನು ಬಳಸಿದರೆ ಅವರ ಚಾಲನಾ ಪರವಾನಿಗೆಯ ನವೀಕರಣವನ್ನು ತಡೆಹಿಡಿಯಲಾಗುತ್ತದೆ.

MOST READ: ಹೊಸ ಕಾರುಗಳ ಉಚಿತ ನೋಂದಣಿಗಾಗಿ ಆರ್‌ಟಿಓದಿಂದ ಭರ್ಜರಿ ಆಫರ್

ಹೆದ್ದಾರಿಗಳಲ್ಲಿ ಬೇಕಾಬಿಟ್ಟಿಯಾಗಿ ಚಲಿಸುವ ಭಾರೀ ಗಾತ್ರದ ವಾಹನಗಳಿಗೆ 5 ಸಾವಿರ ದಂಡ

ಅಂತಹವರು ಪುನಃ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ನಾಸಿಕ್‍‍ನ ಆರ್‍‍ಟಿ‍ಒದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಈ ಪರೀಕ್ಷೆಯನ್ನು ಈ ವರ್ಷ ಏಪ್ರಿಲ್ 1ರಿಂದಲೇ ಆರಂಭಿಸಲಾಗಿದ್ದು, ಈ ಪರೀಕ್ಷೆಯನ್ನು ಕೇವಲ ಟ್ರಕ್ ಹಾಗೂ ಬಸ್‍‍ಗಳ ಚಾಲಕರಿಗೆ ಮಾತ್ರ ನಡೆಸಲಾಗುತ್ತದೆ ಎನ್ನಲಾಗಿದೆ.

MOST READ: ಸಂಕಷ್ಟದಲ್ಲಿ ಆಟೋ ಉದ್ಯಮ- ಕಾರು ಉತ್ಪಾದನೆಗೆ ಬ್ರೇಕ್ ಹಾಕಿದ ಮಾರುತಿ ಸುಜುಕಿ..!

ಹೆದ್ದಾರಿಗಳಲ್ಲಿ ಬೇಕಾಬಿಟ್ಟಿಯಾಗಿ ಚಲಿಸುವ ಭಾರೀ ಗಾತ್ರದ ವಾಹನಗಳಿಗೆ 5 ಸಾವಿರ ದಂಡ

ಭಾರೀ ವಾಹನಗಳು ಹೆಚ್ಚಿನ ಪ್ರಮಾಣದ ಇಂಧನವನ್ನು ಬಳಸುವ ಕಾರಣ ಭಾರೀ ಗಾತ್ರದ ವಾಹನಗಳ ಚಾಲಕರು ತಮ್ಮ ಚಾಲನಾ ಶೈಲಿಯನ್ನು ಸುಧಾರಿಸಿಕೊಳ್ಳಲು ಈ ಪರೀಕ್ಷೆ ಅನುಕೂಲಕರವಾಗಿದ್ದು, ಇದರಿಂದ ಇಂಧನ ಉಳಿತಾಯದ ಜೊತೆ ಪರಿಸರ ಮಾಲಿನ್ಯವೂ ಸಹ ಕಡಿಮೆಯಾಗಲಿದೆ ಎನ್ನಬಹುದು.

More from DriveSpark

Article Published On: Thursday, August 8, 2019, 17:21 [IST]
English summary
Heavy vehicles using right lane may soon be fined 5,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+