ಮಾರ್ಚ್ ಅವಧಿಯಲ್ಲಿ ವಿವಿಧ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್..!
ಕಳೆದ ಕೆಲ ದಿನಗಳಿಂದ ಆಟೋ ಉದ್ಯಮದಲ್ಲಿ ಆಗುತ್ತಿರುವ ಕೆಲವು ಬದಲಾವಣೆಗಳು ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಾಹನಗಳ ಮಾರಾಟ ಪ್ರಮಾಣವು ಮಂದಗತಿಯಲ್ಲಿ ಸಾಗಿದೆ. ವಾಹನ ಮಾರಾಟದಲ್ಲಿ ಸದಾ ಭರ್ಜರಿ ಲಾಭ ಗಳಿಸುತ್ತಿದ್ದ ಬಹುತೇಕ ಆಟೋ ಸಂಸ್ಥೆಗಳು ಕಳೆದ 3-4 ತಿಂಗಳಿನಿಂದ ನಿಗದಿತ ಮಟ್ಟದ ವಾಹನಗಳನ್ನು ಮಾರಾಟ ಮಾಡುವುದಕ್ಕೂ ಪರದಾಡುವಂತಾಗಿದ್ದು, ಗ್ರಾಹಕರ ಸೆಳೆಯಲು ಭರ್ಜರಿ ಆಫರ್ ಘೋಷಣೆ ಮಾಡುತ್ತಿವೆ. ಹಾಗಾದ್ರೆ ಮಾರ್ಚ್ ಅವಧಿಯಲ್ಲಿ ಯಾವ ಕಾರುಗಳ ಮೇಲೆ ಎಷ್ಟು ಪ್ರಮಾಣದ ರಿಯಾಯ್ತಿ ಘೋಷಣೆ ಮಾಡಿದ್ದಾರೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಹೋಂಡಾ ಕಾರುಗಳು
ದೇಶದ ಜನಪ್ರಿಯ ಕಾರು ಮಾರಾಟ ಸಂಸ್ಥೆಯಾಗಿರುವ ಹೋಂಡಾ ಸಂಸ್ಥೆಯು ಕಾರು ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದರು ಸಹ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಏರುಪೇರುಗಳು ಮಾರಾಟದಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಹೀಗಾಗಿ ಗ್ರಾಹಕರನ್ನು ಸೆಳೆಯಲು ಅತ್ಯುತ್ತಮ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದೆ.

ಅಮೇಜ್ (ಕಂಪ್ಯಾಕ್ಟ್ ಸೆಡಾನ್)- ರೂ. 20 ಸಾವಿರ ಮೌಲ್ಯದ ಎಕ್ಸ್‌ಚೆಂಜ್ ಆಫರ್ ಮತ್ತು ಕಾರಿನ ವಾರಂಟಿ ಅವಧಿ 4 ವರ್ಷದಿಂದ 5 ವರ್ಷಕ್ಕೆ ವಿಸ್ತರಣೆ
ಜಾಝ್ (ಹ್ಯಾಚ್‌ಬ್ಯಾಕ್) - ರೂ.35 ಸಾವಿರ ಮೌಲ್ಯದ ಎಕ್ಸ್‌ಚೆಂಜ್ ಬೋನಸ್ ಮತ್ತು ಮೊದಲ ವರ್ಷದ ಉಚಿತ ಇನ್ಸುರೆನ್ಸ್
ಡಬ್ಲ್ಯುಆರ್-ವಿ ಪೆಟ್ರೋಲ್ (ಕಂಪ್ಯಾಕ್ಟ್ ಎಸ್‌ಯುವಿ) - ರೂ. 35 ಸಾವಿರ ಮೌಲ್ಯದ ಎಕ್ಸ್‌ಚೆಂಜ್ ಬೋನಸ್ ಮತ್ತು ಮೊದಲ ವರ್ಷದ ಉಚಿತ ಇನ್ಸುರೆನ್ಸ್
ಸಿಟಿ (ಸೆಡಾನ್) - ರೂ.60 ಸಾವಿರ ಮೌಲ್ಯದ ಎಕ್ಸ್‌ಚೆಂಜ್ ಬೋನಸ್, ಆಕ್ಸೆರಿಸ್ ಮತ್ತು ಮೊದಲ ವರ್ಷದ ಉಚಿತ ಇನ್ಸುರೆನ್ಸ್
ಬಿಆರ್-ವಿ (ಕಂಪ್ಯಾಕ್ಟ್ ಎಸ್‌ಯುವಿ) - 85 ಸಾವಿರ ಮೌಲ್ಯದ ಎಕ್ಸ್‌ಚೆಂಜ್ ಬೋನಸ್, ಆಕ್ಸೆರಿಸ್ ಮತ್ತು ಮೊದಲ ವರ್ಷದ ಉಚಿತ ಇನ್ಸುರೆನ್ಸ್

ಟೊಯೊಟಾ ಕಾರುಗಳು
ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಮೋಟಾರ್ಸ್ ಕೂಡಾ ಅತ್ಯುತ್ತಮ ಕಾರು ಮಾದರಿಗಳೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇನೋವಾ ಕ್ರಿಸ್ಟಾ ಮತ್ತು ಇಟಿಯಾಸ್ ಸರಣಿ ಕಾರುಗಳು ಅತಿ ಹೆಚ್ಚು ಬೇಡಿಕೆ ಹೊಂದಿವೆ. ಆದರೂ ಸಹ ಕೆಲವು ದಿನಗಳಿಂದ ಕಾರು ಮಾರಾಟದಲ್ಲಿ ಗಣನೀಯ ಮಟ್ಟದಲ್ಲಿ ಇಳಿಕೆಯಾಗಿದ್ದು, ಮಾರ್ಚ್ ಅವಧಿಯಲ್ಲಿ ಗರಿಷ್ಠ ಮಟ್ಟದ ಕಾರು ಮಾರಾಟಕ್ಕಾಗಿ ಆಕರ್ಷಕ ಡಿಸ್ಕೌಂಟ್ ಘೋಷಿಸಿದೆ.

ಇಟಿಯಾಸ್ (ಸೆಡಾನ್)- 38 ಸಾವಿರ ಮೌಲ್ಯದ ಬೋನಸ್
ಯಾರಿಸ್ (ಸೆಡಾನ್) - 1.34 ಲಕ್ಷ ಮೌಲ್ಯದ ಡಿಸ್ಕೌಂಟ್, ಎಕ್ಸ್‌ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಕೆಲವು ವಿಶೇಷ ಆಕ್ಸೆರಿಸ್‌ಗಳು ಲಭ್ಯ
ಇನೋವಾ ಕ್ರಿಸ್ಟಾ (ಎಂಪಿವಿ) - 45 ಸಾವಿರ ಮೌಲ್ಯದ ಡಿಸ್ಕೌಂಟ್ ಮತ್ತು ಕಾರ್ಪೊರೇಟ್ ವಲಯ ಉದ್ಯೋಗಿಗಳಿಗೆ ಕೆಲವು ವಿಶೇಷ ವಿನಾಯ್ತಿಗಳು
ಕರೊಲ್ಲಾ ಆಲ್ಟಿಸ್ (ಐಷಾರಾಮಿ ಸೆಡಾನ್) - ರೂ.70 ಮೌಲ್ಯದ ಡಿಸ್ಕೌಂಟ್
MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಒಟ್ಟಿನಲ್ಲಿ ಕಾರು ಖರೀದಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದಾಗಿದ್ದು, ಹೋಂಡಾ ಮತ್ತು ಟೊಯೊಟಾ ಸಂಸ್ಥೆಗಳನ್ನು ಹೊರತುಪಡಿಸಿ ಇನ್ನುಳಿದ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಸಂಸ್ಥೆಗಳು ಕೆಲವು ಆಫರ್‌ಗಳನ್ನು ಘೋಷಣೆ ಮಾಡಿವೆ. ಒಂದು ವೇಳೆ ನೀವು ಕಾರು ಖರೀದಿಯ ಯೋಜನೆಯಲ್ಲಿದ್ದರೇ ಮಾರ್ಚ್ ಅವಧಿಯ ಆಫರ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರವೇ ಕಾರು ಖರೀದಿ ವ್ಯವಹಾರ ಮುಂದುವರಿಸಿ.


Click it and Unblock the Notifications