ಕಾರ್ ಡೋರ್‍‍ಗಳನ್ನು ತೆಗೆಯುವ ಡಚ್ ರೀಚ್ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರತಿದಿನ ಪ್ರಪಂಚದ್ಯಾಂತ ಲಕ್ಷಾಂತರ ಕಾರುಗಳು ಚಲಿಸುತ್ತಿರುತ್ತವೆ. ಕಾರುಗಳ ಒಳಗೆ ಹೋಗಲು ಅಥವಾ ಹೊರಗಡೆ ಬರಲು ಡೋರ್‍‍ಗಳನ್ನು ತೆಗೆಯುವುದು ಅವಶ್ಯಕ. ಡೋರು ತೆಗೆಯುವುದು ಏನು ಮಹಾ ಅಂದು ಕೊಳ್ಳುತ್ತಿದ್ದೀರಾ? ಈಗ ನಾವು ಹೇಳುತ್ತಿರುವ ವಿಷಯವನ್ನು ಕೇಳಿದರೆ ಇಷ್ಟು ದಿನ ನೀವು ಕಾರುಗಳ ಡೋರುಗಳನ್ನು ತೆಗೆಯುತ್ತಿದ್ದ ರೀತಿಯೇ ತಪ್ಪು ಎಂದೆನಿಸದೇ ಇರದು.

ಕಾರ್ ಡೋರ್‍‍ಗಳನ್ನು ತೆಗೆಯುವ ಡಚ್ ರೀಚ್ ಬಗ್ಗೆ ನಿಮಗೆಷ್ಟು ಗೊತ್ತು?

ಕಾರುಗಳ ಡೋರ್‍‍ಗಳನ್ನು ಸರಿಯಾದ ರೀತಿಯಲ್ಲಿ ತೆರೆಯದಿದ್ದರೇ ಏನೆಲ್ಲಾ ತೊಂದರೆಗಳಾಗಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಕಾರಿನ ಡೋರ್ ತೆಗೆಯುವುದು ಸುಲಭವಾದ ಕೆಲಸವೆಂದು ಅನಿಸಬಹುದು. ಆದರೆ ಕಾರಿನ ಹಿಂದೆ ಬರುತ್ತಿರುವವರನ್ನು ನೋಡದೇ ಡೋರ್‍‍ಗಳನ್ನು ತೆಗೆದರೆ ಅಪಾಯ ಕಟ್ಟಿಟ್ಟ ಬುತ್ತಿ.

ಕಾರ್ ಡೋರ್‍‍ಗಳನ್ನು ತೆಗೆಯುವ ಡಚ್ ರೀಚ್ ಬಗ್ಗೆ ನಿಮಗೆಷ್ಟು ಗೊತ್ತು?

ಕಾರುಗಳ ಡೋರ್‍‍ಗಳನ್ನು ತೆಗೆದಾಗ ಡೋರುಗಳು ಸಾಕಷ್ಟು ಸ್ಥಳವನ್ನು ಆಕ್ರಮಿಸಿಕೊಳ್ಳುತ್ತವೆ. ಅವುಗಳನ್ನು ಏಕಾ‍ಏಕಿ ತೆಗೆದಾಗ ಆ ಕಾರಿನ ಹಿಂದೆ ಬರುತ್ತಿರುವವರು ಡೋರ್‍‍ಗಳಿಗೆ ಗುದಿಯುವ ಸಾಧ್ಯತೆಗಳಿವೆ. ಇದರಿಂದಾಗಿ ಕೆಳಗೆ ಬಿದ್ದು ಗಾಯಗಳಾಗಬಹುದು, ಇಲ್ಲವೇ ಪ್ರಾಣವೇ ಹೋಗಬಹುದು.

ಕಾರ್ ಡೋರ್‍‍ಗಳನ್ನು ತೆಗೆಯುವ ಡಚ್ ರೀಚ್ ಬಗ್ಗೆ ನಿಮಗೆಷ್ಟು ಗೊತ್ತು?

ಯೂಟ್ಯೂಬ್‍‍ನಲ್ಲಿ ಈ ಕುರಿತಾದ ಹಲವಾರು ವೀಡಿಯೊಗಳಿವೆ. ಅವುಗಳಲ್ಲಿ ಕಾರಿನಲ್ಲಿರುವವರು ಹಿಂದೆ ಬರುವವರನ್ನು ಗಮನಿಸದೇ ಡೋರುಗಳನ್ನು ತೆಗೆದಾಗ ಅವಘಡಗಳಾಗಿರುವ ಸಾಕಷ್ಟು ಸನ್ನಿವೇಶಗಳನ್ನು ಕಾಣಬಹುದು.

ಕಾರ್ ಡೋರ್‍‍ಗಳನ್ನು ತೆಗೆಯುವ ಡಚ್ ರೀಚ್ ಬಗ್ಗೆ ನಿಮಗೆಷ್ಟು ಗೊತ್ತು?

ಈ ರೀತಿಯ ಘಟನೆಗಳು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಸಂಚಾರಿ ನಿಯಮಗಳನ್ನು ಪಾಲಿಸದ ಜಗತ್ತಿನ ಹಲವೆಡೆ ಈ ರೀತಿಯ ಘಟನೆಗಳು ನಡೆದಿವೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಫುಟೇಜ್‍‍ನಲ್ಲಿ ಕಾರ್ ಅನ್ನು ಪಾರ್ಕ್ ಮಾಡುತ್ತಿರುವುದನ್ನು ಕಾಣಬಹುದು.

ಆ ಕಾರಿನ ಚಾಲಕನು ತನ್ನ ಕಾರಿನ ಡೋರ್ ಅನ್ನು ತೆಗೆದಾಗ ಸೈಕಲ್ ಸವಾರನು ಕಾರಿನ ಡೋರಿಗೆ ಗುದ್ದಿ ನಿಯಂತ್ರಣ ಕಳೆದುಕೊಂಡು ಕೆಳಗೆ ಬೀಳುತ್ತಾನೆ. ಪಕ್ಕದಲ್ಲೇ ಒಂದು ಕಾರು ಹಾದು ಹೋಗುತ್ತದೆ. ಸ್ವಲ್ಪದರಲ್ಲೇ ಸೈಕಲ್ ಸವಾರನು ಪ್ರಾಣ ಉಳಿಸಿಕೊಳ್ಳುತ್ತಾನೆ. ಯಾವುದಾದರೂ ವಾಹನಗಳು ವೇಗವಾಗಿ ಆ ರಸ್ತೆಯಲ್ಲಿ ಬಂದಿದ್ದರೇ ಸೈಕಲ್ ಸವಾರನ ಪ್ರಾಣ ಹೋಗುವ ಸಾಧ್ಯತೆಗಳಿದ್ದವು.

ಕಾರ್ ಡೋರ್‍‍ಗಳನ್ನು ತೆಗೆಯುವ ಡಚ್ ರೀಚ್ ಬಗ್ಗೆ ನಿಮಗೆಷ್ಟು ಗೊತ್ತು?

ಈ ಹಿಂದೆ ಭಾರತದಲ್ಲಿ ನಡೆದಿದ್ದ ಇದೇ ರೀತಿಯ ಘಟನೆಯಲ್ಲಿ ಕಾರಿನ ಚಾಲಕನು ಏಕಾ‍ಏಕಿ ಡೋರ್ ತೆಗೆದ ಕಾರಣ, ಕಾರಿನ ಡೋರಿಗೆ ಗುದ್ದಿದ ಬೈಕಿನಲ್ಲಿದ್ದ ಮೂವರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಾಗ ಅವರ ಮೇಲೆ ಟ್ರಕ್‍‍ವೊಂದು ಹರಿದಿತ್ತು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಕಾರ್ ಡೋರ್‍‍ಗಳನ್ನು ತೆಗೆಯುವ ಡಚ್ ರೀಚ್ ಬಗ್ಗೆ ನಿಮಗೆಷ್ಟು ಗೊತ್ತು?

ಈ ರೀತಿಯ ಘಟನೆಗಳನ್ನು ಸರಳವಾದ ವಿಧಾನವನ್ನು ಅನುಸರಿಸುವ ಮೂಲಕ ತಡೆಗಟ್ಟಬಹುದು. ಯಾವುದೇ ಕಾರಿನ ಡ್ರೈವರ್ ಆಗಲಿ, ಅಥವಾ ಕಾರಿನಿಂದ ಇಳಿಯುತ್ತಿರುವವರೇ ಆಗಲಿ, ತಮ್ಮ ಹಿಂದೆ ಯಾರಾದರೂ ಬರುತ್ತಿದಾರೆಯೇ ಎಂಬುದನ್ನು ಪರೀಕ್ಷಿಸಿ ನಂತರ ಡೋರ್‍‍ಗಳನ್ನು ತೆಗೆಯುವುದು ಒಳಿತು.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಕಾರ್ ಡೋರ್‍‍ಗಳನ್ನು ತೆಗೆಯುವ ಡಚ್ ರೀಚ್ ಬಗ್ಗೆ ನಿಮಗೆಷ್ಟು ಗೊತ್ತು?

ಒಂದು ವೇಳೆ ಕಾರಿನ ಹಿಂದೆ ಯಾರಾದರೂ ಬರುತ್ತಿದ್ದರೆ, ಯಾವುದಾದರೂ ವಾಹನಗಳಿದ್ದರೆ ಅವುಗಳು ಮುಂದೆ ತೆರಳಿದ ನಂತರ ಡೋರ್‍‍ಗಳನ್ನು ತೆಗೆಯುವುದು ಕ್ಷೇಮ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಹಲವಾರು ದೇಶಗಳಲ್ಲಿ ರಸ್ತೆಯ ಕಡೆಗೆ ಡೋರ್‍‍ಗಳನ್ನು ತೆಗೆಯುವುದು ಕಾನೂನು ಬಾಹಿರ. ಆದರೆ ಇನ್ನೂ ಹಲವು ದೇಶಗಳಲ್ಲಿ ಈ ರೀತಿಯ ಯಾವುದೇ ಕಾನೂನು ಇಲ್ಲ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕಾರ್ ಡೋರ್‍‍ಗಳನ್ನು ತೆಗೆಯುವ ಡಚ್ ರೀಚ್ ಬಗ್ಗೆ ನಿಮಗೆಷ್ಟು ಗೊತ್ತು?

ಈ ದೇಶಗಳಲ್ಲಿ ಕಾರು ಚಾಲಕರು ಸರಳವಾದ ವಿಧಾನವನ್ನು ಅನುಸರಿಸಬೇಕು. ಸುರಕ್ಷಿತವಾಗಿ ಕಾರುಗಳ ಬಾಗಿಲುಗಳನ್ನು ತೆಗೆಯುವ ವಿಧಾನಕ್ಕೆ ಡಚ್ ರೀಚ್ ವಿಧಾನವೆಂದು ಹೇಳುತ್ತಾರೆ. ಈ ವಿಧಾನವನ್ನು ಮೊದಲ ಬಾರಿಗೆ ನೆದೆರ್‍‍ಲ್ಯಾಂಡ್‍‍ನಲ್ಲಿ ಆರಂಭಿಸಲಾಯಿತು.

ಈ ವಿಧಾನವು ಅಲ್ಲಿರುವ ಸ್ಕೂಲ್‍‍ಗಳಲ್ಲಿ ಪಠ್ಯದ ವಿಷಯವಾಗಿದೆ. ಈ ವಿಧಾನದ ಮೂಲಕ ಕೈಗಳನ್ನು ಉದ್ದಕ್ಕೆ ಚಾಚಿ ಡೋರ್‍‍ಗಳ ಹ್ಯಾಂಡಲ್‍‍ಗಳ ಮೂಲಕ ಡೋರ್‍‍ಗಳನ್ನು ತೆರೆಯಬಹುದು. ಇದರಿಂದಾಗಿ ಬಾಗಿಲು ತೆಗೆಯಲು ಯತ್ನಿಸುತ್ತಿರುವ ವ್ಯಕ್ತಿಯ ದೇಹವು ಸಹಜವಾಗಿ ಹಿಂದಕ್ಕೆ ತಿರುಗುತ್ತದೆ.

ಕಾರ್ ಡೋರ್‍‍ಗಳನ್ನು ತೆಗೆಯುವ ಡಚ್ ರೀಚ್ ಬಗ್ಗೆ ನಿಮಗೆಷ್ಟು ಗೊತ್ತು?

ಇದರಿಂದಾಗಿ ಕಾರಿನ ಹಿಂಭಾಗದಲ್ಲಿ ಯಾರಾದರೂ ಬರುತ್ತಿದ್ದಾರೆಯೇ ಎಂಬುದನ್ನು ನೋಡಬಹುದು. ಭಾರತದಲ್ಲಾದರೆ, ನೀವು ಚಾಲಕನ ಜಾಗದಲ್ಲಿ ಕುಳಿತಿದ್ದರೆ, ನಿಮ್ಮ ಎಡಗೈಯನ್ನು ಚಾಚಿ ಡೋರ್‍‍ಗಳನ್ನು ತೆಗೆಯಿರಿ. ಇದರಿಂದ ನೀವೂ ಸಹ ಈ ವಿಧಾನವನ್ನು ಪಾಲಿಸಬಹುದು.

Most Read Articles

Kannada
English summary
How to open car door dutch reach technique explained - Read in kannada
Story first published: Wednesday, September 25, 2019, 18:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X