'ಕೆಜಿಎಫ್' ಗರುಡನ ಐಷಾರಾಮಿ ಕಾರು ಯಾವುದು ಗೊತ್ತಾ.?

ಕೆಜಿಎಫ್ ಅಂದರೆ ಮೊದಲಿಗೆ ಅದೊಂದು ಕೇವಲ ಒಂದು ಊರಿನ ಹೆಸರಾಗಿತ್ತು, ಆದರೆ ಇದೀಗ ಕೇಜಿಎಫ್ ಎಂದರೆ ನೆನಪಾಗೊದು, ನಟ ಯಶ್ ಮತ್ತು ಸ್ಯಾಂಡಲ್‍‍ವುಡ್ ಅಂತಾನೇ ಹೇಳ್ಬೋದು. ಈ ಕೆಜಿಎಸ್ ಸಿನಿಮಾದಲ್ಲಿ ಬಂದ ಎಲ್ಲಾ ಪಾತ್ರಗಳೂ ಸಹ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರಿಗು ತಲುಪುವ ಹಾಗೆ ಪ್ರಶಾಂತ್ ನೀಲ್ ಇದನ್ನು ನಿರ್ದೇಶನ ಮಾಡಿದ್ದಾರೆ.

'ಕೆಜಿಎಫ್' ಗರುಡನ ವಾಹನವಾದ ಐಷಾರಾಮಿ ಕಾರು ಯಾವುದು ಗೊತ್ತಾ.?

ಕೆಜಿಎಫ್ ಸಿನಿಮಾದಲ್ಲಿ 'ಗರುಡ' ಪಾತ್ರ ಮಾಡಿ ತಮ್ಮ ನಟೆನೆಯಿಂದ ಇದೀಗ ಇಡೀ ದೇಶದಲ್ಲಿ ಫೇಮಸ್ ಆದವರು ನಮ್ಮ ರಾಮಚಂದ್ರ ರಾಜು. ಅಂದ್ಹಾಗೆ, ಗರುಡ ಸದ್ದು ಮಾಡುತ್ತಿರುವುದು ಸಿನಿಮಾ ವಿಚಾರಕ್ಕೆ ಅಲ್ಲ, ಬದಲಿಗೆ ದುಬಾರಿ ಕಾರಿ ಮೂಲಕ. 'ಕೆಜಿಎಫ್' ನ ಸಕ್ಸಸ್ ಖುಷಿಯಲ್ಲಿರುವ ಗರುಡ ದುಬಾರಿ ಕಾರು ಖರೀದಿಸಿದ್ದಾರೆ. ಹಾಗಾದರೆ ರಾಮಚಂದ್ರ ರಾಜು ಅವರು ಖರೀದಿಸಿದ ಐಷಾರಾಮಿ ಕಾರು ಯಾವುದು ಎಂದು ತಿಳಿಯಲು ಮುಂದಕ್ಕೆ ಒದಿರಿ...

'ಕೆಜಿಎಫ್' ಗರುಡನ ವಾಹನವಾದ ಐಷಾರಾಮಿ ಕಾರು ಯಾವುದು ಗೊತ್ತಾ.?

ದುಬಾರಿ ಕಾರು ಯಾವುದು?

'ಕೆಜಿಎಫ್' ಯಶಸ್ಸಿನ ಖುಷಿಯಲ್ಲಿರುವ ಗರುಡ ಫಾರ್ಚೂನರ್ ಕಾರು ಖರೀದಿಸಿದ್ದಾರೆ. ಬಿಳಿ ಬಣ್ಣದ ಫಾರ್ಚೂನರ್ ಕೊಂಡುಕೊಂಡ ರಾಮ್ ಕಾರಿನ ಮೇಲೆ ಅವರಿಗೆ ಇಷ್ಟವಾದ ಮತ್ತು ದೊಡ್ಡ ಮಟ್ಟಕ್ಕೆ ಖ್ಯಾತಿ ತಂದುಕೊಟ್ಟ 'ಗರುಡ' ಪ್ರತಿಮೆ ಹಾಕಿಸಿಕೊಂಡಿದ್ದಾರೆ.

'ಕೆಜಿಎಫ್' ಗರುಡನ ವಾಹನವಾದ ಐಷಾರಾಮಿ ಕಾರು ಯಾವುದು ಗೊತ್ತಾ.?

ಹೊಸ ಕಾರು ಖರೀದಿ ಮಾಡಿದ್ದರ ಜೊತೆಗೆ ರಾಕಿಂಗ್ ಸ್ಟಾರ್ ಯಶ್‍ ಮೇಲಿನ ಅಭಿಮಾನವನ್ನು ಸಾರಲು ಕಾರನ್ನು ಖರೀದಿ ಮಾಡಿದ ತಕ್ಷಣವೇ ರಾಮಚಂದ್ರ ರಾಜುರವರು ಯಶ್‍‍ರವರನ್ನ ಭೇಟಿ ಮಾಡಿದ್ದಾರೆ. ಹೊಸ ಕಾರು ನೋಡಿ ಸಂತಸ ಪಟ್ಟ ಯಶ್ ಗರುಡ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ ಕಾರಿನ ಜೊತೆ ನಿಂತು ಫೋಟೋಗೆ ಪೋಸ್ ಕೂಡ ನೀಡಿದ್ದಾರೆ.

'ಕೆಜಿಎಫ್' ಗರುಡನ ವಾಹನವಾದ ಐಷಾರಾಮಿ ಕಾರು ಯಾವುದು ಗೊತ್ತಾ.?

ಇನ್ನು ಗರುಡ ಖರೀದಿ ಮಾಡಿದ ಟೊಯೊಟಾ ಫಾರ್ಚ್ಯುನಾರ್ ಕಾರಿನ ಬಗ್ಗೆ ಹೇಳುವುದಾದರೆ ಫಾರ್ಚೂನರ್ ಪ್ರೀಮಿಯಂ ಮತ್ತು ಲಗ್ಷುರಿ ವೈಶಿಷ್ಟ್ಯತೆಯುಳ್ಳ ಗರಿಷ್ಠ ಮಟ್ಟದ ಇಂಟೀರಿಯರ್ ಸೌಲಭ್ಯಗಳೊಂದಿಗೆ ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಕಪ್ಪು ಮತ್ತು ಕಂದು ಬಣ್ಣದ ಡ್ಯುಯಲ್ ಟೋನ್ ಕ್ಯಾಬಿನ್‌ಗಳು ಕಾರಿನ ಅಂದವನ್ನು ಹೆಚ್ಚಿಸಿವೆ. ಜೊತೆಗೆ ಕಾರಿನ ಡ್ಯಾಶ್‌ಬೋರ್ಡ್ ಸಿಲ್ವರ್ ಮಾದರಿಯೊಂದಿಗೆ ಮರದ ಟ್ರಿಮ್ ಹೊಂದಿರುವುದು ಕಾರಿನ ಐಷಾರಾಮಿ ಸೌಲಭ್ಯದ ಪ್ರಮುಖ ಆಕರ್ಷಣೆಯಾಗಿದೆ.

'ಕೆಜಿಎಫ್' ಗರುಡನ ವಾಹನವಾದ ಐಷಾರಾಮಿ ಕಾರು ಯಾವುದು ಗೊತ್ತಾ.?

ಫಾರ್ಚೂನರ್ ಕಾರಿನಲ್ಲಿ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆ ನೇವಿಗೆಷನ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆಟೋ ರಿಯರ್ ಕೂಲರ್, ಕ್ರೂಸ್ ಕಂಟ್ರೋಲ್, ದೊಡ್ಡದಾದ ಎಂಐಡಿ, ಕೂಲ್ಡ್ ಅಪರ್ ಗ್ರೋವ್ ಬಾಕ್ಸ್ ಮತ್ತು ಆಯ್ಕೆ ರೂಪದಲ್ಲಿರುವ ಕ್ರೋಮ್ ಲೇಪಿತ ಕೂಲ್-ಬ್ಲೂ ಕಾಂಬಿಮೀಟರ್ ಸೌಲಭ್ಯವಿದೆ. ಇವುಗಳಲ್ಲಿ ಎರಡು ಪ್ರಮುಖ ಡ್ರೈವಿಂಗ್ ಮೋಡ್‌ಗಳಿದ್ದು, ಇಕೋ ಮತ್ತು ಪವರ್ ಮೂಲಕ ಎಲ್ಲಾ ಅವಧಿಯಲ್ಲೂ ಗರಿಷ್ಠ ಇಂಧನ ದಕ್ಷತೆ ಕಾಯ್ದುಕೊಳ್ಳಬಹುದಾಗಿದೆ.

'ಕೆಜಿಎಫ್' ಗರುಡನ ವಾಹನವಾದ ಐಷಾರಾಮಿ ಕಾರು ಯಾವುದು ಗೊತ್ತಾ.?

ಫಾರ್ಚೂನರ್‌ನಲ್ಲಿ ಪ್ರಯಾಣಿಕರಿಗೆ ಅನೂಕರವಾಗುವ ಹಲವು ವಿಶೇಷ ಸೌಲಭ್ಯವಿದ್ದು, ಮೃದವಾದ ದಿಂಬುಗಳು, ಮೆಟಾಲಿಕ್ ಅಸೆಂಟ್ಸ್ ಜೊತೆ ವುಡ್ ಗ್ರೈನ್ ಪ್ಯಾಟರ್ನ್ ಸೌಲಭ್ಯಗಳು ಕಾರಿನ ಪ್ರಯಾಣಕ್ಕೆ ಮತ್ತಷ್ಟು ಮೆರಗು ತರಲಿವೆ. ಕಾರಿನಲ್ಲಿ 7 ಜನ ಅರಾಮದಾಯಕವಾಗಿ ಪ್ರಯಾಣಿಸಬಹುದಾಗಿದ್ದು, ಎರಡನೇ ಮತ್ತು ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೂ ಗರಿಷ್ಠ ಸುರಕ್ಷಾ ಸೌಲಭ್ಯಗಳಿದ್ದು, ದೂರದ ಪ್ರಯಾಣದಲ್ಲೂ ನಿಮಗೆ ಯಾವುದೇ ಬೇಸರ ತರಿಸದು.

MOST READ: ತಂದೆಯ ಕನಸಿನ ಕಾರನ್ನು ಉಡುಗೊರೆಯಾಗಿ ನೀಡಿದ ಮಗ

'ಕೆಜಿಎಫ್' ಗರುಡನ ವಾಹನವಾದ ಐಷಾರಾಮಿ ಕಾರು ಯಾವುದು ಗೊತ್ತಾ.?

ಟೊಯೊಟಾ ಫಾರ್ಚೂನರ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಏಳು ಏರ್‌ಬ್ಯಾಗ್, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್ ಜೊತೆ ಬ್ರೇಕ್ ಅಸಿಸ್ಟ್, ಹಿಲ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಮೌಂಟ್ ಸೌಲಭ್ಯವಲ್ಲದೆ ಎಬಿಎಸ್ ಜೊತೆ ಇಬಿಡಿ ಮತ್ತು ಡೌನ್‌ಹಿಲ್ ಅಸಿಸ್ಟ್ ಕಂಟ್ರೋಲ್(4ಡಬ್ಲ್ಯಡಿ ವೆರಿಯೆಂಟ್‌ಗಳಲ್ಲಿ ಮಾತ್ರ) ಸೌಲಭ್ಯವಿದೆ.

'ಕೆಜಿಎಫ್' ಗರುಡನ ವಾಹನವಾದ ಐಷಾರಾಮಿ ಕಾರು ಯಾವುದು ಗೊತ್ತಾ.?

ಎಂಜಿನ್ ಸಾಮರ್ಥ್ಯ

ಎಸ್‌ಯುವಿಗಳಲ್ಲೇ ವಿಶೇಷ ಎನ್ನಿಸಿರುವ ಫಾರ್ಚೂನರ್ ಕಾರು 7 ಸೀಟರ್ ವಿನ್ಯಾಸದೊಂದಿಗೆ 2.8-ಲೀಟರ್ ಡಿಸೇಲ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿವೆ. ಈ ಮೂಲಕ ಡೀಸೆಲ್ ಎಂಜಿನ್ ಮಾದರಿಯು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 174.5 ಬಿಎಚ್‌ಪಿ ಮತ್ತು 420 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

'ಕೆಜಿಎಫ್' ಗರುಡನ ವಾಹನವಾದ ಐಷಾರಾಮಿ ಕಾರು ಯಾವುದು ಗೊತ್ತಾ.?

ಇನ್ನು 6-ಸ್ಪೀಡ್ ಆಟೋಮ್ಯಾಟಿಕ್ ಮಾದರಿಯ ಡಿಸೇಲ್ ಎಂಜಿನ್ ಮಾದರಿಯು 450 ಎನ್ಎಂ ಉತ್ಪಾದಿಸುತ್ತೆ. ಹಾಗೆಯೇ, ಪೆಟ್ರೋಲ್ ಎಂಜಿನ್ ಪ್ರೇರಿತ ಕಾರು 164 ಬಿಎಚ್‌ಪಿ ಮತ್ತು 245 ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದು.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

'ಕೆಜಿಎಫ್' ಗರುಡನ ವಾಹನವಾದ ಐಷಾರಾಮಿ ಕಾರು ಯಾವುದು ಗೊತ್ತಾ.?

ಇದರಲ್ಲಿ ಟೊಯೊಟಾ ಫಾರ್ಚೂನರ್ ಡೀಸೆಲ್ ಎಂಜಿನ್ ಪ್ರೇರಿತ ಕಾರಿನಲ್ಲಿ ಮಾತ್ರ ಆಲ್ ವೀಲ್ಹ್ ಡ್ರೈವ್(4ಡಬ್ಯುಡಿ) ಟೆಕ್ನಾಲಜಿ ಸೌಲಭ್ಯವಿದ್ದು, ಇದು ಕಠಿಣ ಭೂಪ್ರದೇಶಗಳಲ್ಲೂ ಸರಾಗವಾಗಿ ಕಾರು ಚಾಲನೆಗೆ ಸಹಕರಿಸುತ್ತೆ. ಬಲಿಷ್ಠ ಎಂಜಿನ್‌ನೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿರುವ ಫಾರ್ಚೂನರ್ ಎಸ್‌ಯುವಿಯು, ಪೆಟ್ರೋಲ್ ಎಂಜಿನ್ ಮೂಲಕ ಪ್ರತಿ ಲೀಟರ್‌ಗೆ 10ಕಿ.ಮಿ ಮೈಲೇಜ್ ನೀಡಿದಲ್ಲಿ ಡಿಸೇಲ್ ಎಂಜಿನ್ ಪ್ರೇರಣೆಯೊಂದಿಗೆ ಪ್ರತಿ ಲೀಟರ್‌ಗೆ 12 ರಿಂದ 14 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

More from DriveSpark

Article Published On: Wednesday, April 3, 2019, 10:48 [IST]
English summary
KGF Villain Garuda Bought New Toyota Fortuner SUV. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+