ದೇಶಿಯ ಮಾರುಕಟ್ಟೆಯಲ್ಲಿ ಲಂಬೋರ್ಗಿನಿ ಸಂಸ್ಥೆಗೆ ಮರುಜೀವ ಕೊಟ್ಟ ಉರುಸ್

ಭಾರತದಲ್ಲಿ ಐಷಾರಾಮಿ ಕಾರುಗಳ ಮಾರಾಟವು ದಿನದಿಂದ ಹೆಚ್ಚುತ್ತಿದ್ದು, ಲಂಬೋರ್ಗಿನಿ ನಿರ್ಮಾಣದ ಉರುಸ್ ಎಸ್‌ಯುವಿ ಮಾದರಿಯು ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಕಳೆದ 2018ರ ಜನವರಿಯಲ್ಲಿ ಬಿಡುಗಡೆಯಾಗಿದ್ದ ಉರುಸ್ ಕಾರು 2019ರ ಮೊದಲಾರ್ಧದಲ್ಲಿ ಭರ್ಜರಿಯಾಗಿ ಮಾರಾಟವಾಗಿದ್ದು, ಶೇ.96ರಷ್ಟು ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಲಂಬೋರ್ಗಿನಿ ಸಂಸ್ಥೆಗೆ ಭಾರೀ ಪ್ರಮಾಣದ ಲಾಭಂಶ ತಂದುಕೊಟ್ಟಿದೆ.

ದೇಶಿಯ ಮಾರುಕಟ್ಟೆಯಲ್ಲಿ ಲಂಬೋರ್ಗಿನಿ ಸಂಸ್ಥೆಗೆ ಮರುಜೀವ ಕೊಟ್ಟ ಉರುಸ್

ಈ ಹಿಂದೆ 2018ರ ಮೊದಲಾರ್ಧದಲ್ಲಿ ಬರೋಬ್ಬರಿ 2,693 ವಿವಿಧ ಮಾದರಿಯ ಐಷಾರಾಮಿ ಕಾರುಗಳನ್ನು ಮಾರಾಟ ಮಾಡಿದ್ದ ಲಂಬೋರ್ಗಿನಿ ಸಂಸ್ಥೆಯು 2019ರ ಮೊದಲಾರ್ಧದಲ್ಲಿ 4,553 ಕಾರುಗಳನ್ನು ಮಾರಾಟ ಮಾಡಿದ್ದು, ಇದರಲ್ಲಿ ಶೇ.60ರಷ್ಟು ಉರುಸ್ ಎಸ್‌ಯುವಿವೊಂದೇ ಕಾರು ಮಾರಾಟದಲ್ಲಿ ಭರ್ಜರಿಯಾಗಿ ಮಿಂಚಿದೆ. ಆಕರ್ಷಕ ಬೆಲೆಯೊಂದಿಗೆ ಉತ್ತಮ ಎಂಜಿನ್ ಆಯ್ಕೆಯು ಉರುಸ್ ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಸಿನಿತಾರೆಯರು ಮತ್ತು ಉದ್ಯಮಿಗಳ ಹಾಟ್ ಫೆವರಿಟ್ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ದೇಶಿಯ ಮಾರುಕಟ್ಟೆಯಲ್ಲಿ ಲಂಬೋರ್ಗಿನಿ ಸಂಸ್ಥೆಗೆ ಮರುಜೀವ ಕೊಟ್ಟ ಉರುಸ್

ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಐಷಾರಾಮಿ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಇದೇ ಉದ್ದೇಶದಿಂದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಲಂಬೋರ್ಗಿನಿಯು ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಿನೂತನ ಎಸ್‌ಯುವಿ ಆವೃತ್ತಿಯಾದ ಉರುಸ್ ಕಾರನ್ನು ರಸ್ತೆಗಿಳಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಲಂಬೋರ್ಗಿನಿ ಸಂಸ್ಥೆಗೆ ಮರುಜೀವ ಕೊಟ್ಟ ಉರುಸ್

ಇಲ್ಲಿ ವಿಶೇಷ ಅಂದ್ರೆ ಲಂಬೋರ್ಗಿನಿ ಸಂಸ್ಥೆಯು ತನ್ನ ಕಾರು ಉತ್ಪನಗಳಲ್ಲೇ ಮೊದಲ ಬಾರಿಗೆ ಟರ್ಬೋಚಾರ್ಜ್ಡ್ ಎಂಜಿನ್ ಪರಿಚಯಿಸಿದ್ದು, ಉರುಸ್ ಎಸ್‌ಯುವಿ ಮಾದರಿಯು 4.0-ಲೀಟರ್ ಟ್ವಿನ್ ಟರ್ಬೋ ವಿ8 ಎಂಜಿನ್ ಪಡೆದುಕೊಂಡಿದೆ. ಈ ಮೂಲಕ ಪ್ರತಿ ಗಂಟೆಗೆ 305 ಕಿಮಿ ಟಾಪ್ ಸ್ಪೀಡ್‌ನಲ್ಲಿ ಕ್ರಮಿಸಬಲ್ಲ ಶಕ್ತಿ ಹೊಂದಿರುವ ಉರುಸ್ ಎಸ್‌ಯುವಿಯು ಕೇವಲ 3.6 ಸೇಕೆಂಡ್‌ಗಳಲ್ಲಿ 100 ಕಿಮಿ ವೇಗ ಪಡೆಯಬಲ್ಲದು. ಹೀಗಾಗಿ ಪ್ರದೇಶಗಳಿಗೆ ಅನುಗುಣವಾಗಿ ಡ್ರೈವಿಂಗ್ ಮೂಡ್‌ಗಳನ್ನು ಒದಗಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಲಂಬೋರ್ಗಿನಿ ಸಂಸ್ಥೆಗೆ ಮರುಜೀವ ಕೊಟ್ಟ ಉರುಸ್

ಸ್ಟ್ರೀಟ್, ಟ್ರಾಕ್ ಮತ್ತು ಆಪ್ ರೋಡಿಂಗ್ ಮೋಡ್‌ಗಳಾದ ಸ್ಯಾಂಡ್, ಗ್ರಾವೆಲ್, ಸ್ನೋ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಎಲ್ಲಾ ಕಠಿಣ ಪರಿಸ್ಥಿತಿಗಳಲ್ಲೂ ಸುಲಭ ಚಾಲನೆ ಮಾಡುವಂತ ಸೌಲಭ್ಯಗಳನ್ನು ಹೊಂದಿದೆ. ಹೀಗಾಗಿ ಇದು ಐಷಾರಾಮಿ ಕಾರು ಪ್ರಿಯರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿದ್ದು, ಹಲವು ವಿಶೇಷ ಸೌಲಭ್ಯಗಳನ್ನು ಪಡೆದುಕೊಂಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಲಂಬೋರ್ಗಿನಿ ಸಂಸ್ಥೆಗೆ ಮರುಜೀವ ಕೊಟ್ಟ ಉರುಸ್

ಐಷಾರಾಮಿ ಕಾರುಗಳ ಮಾರಾಟದಲ್ಲಿ ಉನ್ನತ ಸ್ಥಾನ ಹೊಂದಿರುವ ಲಂಬೋರ್ಗಿನಿ ಸಂಸ್ಥೆಯು ಕಳೆದ 25 ವರ್ಷಗಳ ಹಿಂದೆಯೇ ಸೂಪರ್ ಕಾರುಗಳ ಜೊತೆಗೆ ಪ್ರಮುಖ 2 ಎಸ್‌ಯುವಿಗಳನ್ನು ಪರಿಚಯಿಸಿತ್ತು. ಆದ್ರೆ ಮಾರಾಟದಲ್ಲಿ ಆದ ಹಿನ್ನಡೆಯಿಂದಾಗಿ ಎಸ್‌ಯುವಿ ಮಾರಾಟವನ್ನು ಕೈಬಿಟ್ಟಿತ್ತು. ಆದ್ರೆ ಇದೀಗ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಹೊಸ ಮಾದರಿಯ ಉರುಸ್ ಮಾದರಿಯು ಸಂಸ್ಥೆಯ ಚಿತ್ರಣವನ್ನೇ ಬದಲಿಸುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಲಂಬೋರ್ಗಿನಿ ಸಂಸ್ಥೆಗೆ ಮರುಜೀವ ಕೊಟ್ಟ ಉರುಸ್

ಸೂಪರ್ ಸ್ಪೋರ್ಟಿ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ಉರುಸ್ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3 ಕೋಟಿಗೆ ನಿಗದಿ ಮಾಡಲಾಗಿದ್ದು, ಆಲ್ ವೀಲ್ಹ್ ಡ್ರೈವ್ ಸಿಸ್ಟಂ, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್, ವೆಂಟಿಲೆಟೆಡ್ ಲೆದರ್ ಸೀಟುಗಳು, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, 8-ಏರ್‌ಬ್ಯಾಗ್‌ಗಳು, ಅತ್ಯಾಧುನಿಕ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ 85-ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಲಂಬೋರ್ಗಿನಿ ಸಂಸ್ಥೆಗೆ ಮರುಜೀವ ಕೊಟ್ಟ ಉರುಸ್

ಈ ಮೂಲಕ ಯುಎಸ್ಎ ಮಾರುಕಟ್ಟೆಗಿಂತಲೂ ಹೆಚ್ಚಿನ ಮಟ್ಟದ ಬೇಡಿಕೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಲ್ಯಾಂಬೋರ್ಗಿನಿ ಉರುಸ್ ಆವೃತ್ತಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆಯುವ ನೀರಿಕ್ಷೆಯಲ್ಲಿದ್ದು, ಕಾರು ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸಿದ್ದ ಲಂಬೋರ್ಗಿನಿ ಸಂಸ್ಥೆಗೆ ಉರುಸ್ ಮರುಜೀವ ನೀಡಿದೆ ಎನ್ನಬಹುದು.

Most Read Articles

Kannada
English summary
Lamborghini Urus Becomes Star Performer; Lamborghini Sales Increase By 96 Percent.
Story first published: Saturday, July 13, 2019, 13:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X