ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಸ್ಯಾಂಡಲ್‍ವುಡ್‍ನಲ್ಲಿ ಚಾಲೆಂಜಿಂಗ್ ಸ್ಟಾರ್ ಎಂಬ ಖ್ಯಾತಿಯಿಂದ ಕೋಟ್ಯಾಂದಂತ ಅಭಿಮಾನಿಗಳನ್ನು ಪಡೆದುಕೊಂಡಿರುವ ನಟ ದರ್ಶನ್ ತೂಗುದೀಪರವರು, ಕೇವಲ ನಟನೆಯಲ್ಲಿ ಮಾತ್ರವಲ್ಲ ಸಾಮಾಜ ಸೇವೆ ಹಾಗು ಕಾರುಗಳ ಬಗ್ಗೆ ಎಲ್ಲಿಲ್ಲದ ಒಲವು ಎಂಬುದ ಬಗ್ಗೆ ನಾವೀಗಾಗಲೇ ತಿಳಿದಿದ್ದೇವೆ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಹೀಗಿರುವಾಗ ಸ್ಯಾಂಡಲ್‍ವುಡ್‍ನಲ್ಲಿ ಕಾರ್ ಕ್ರೇಜ್ ಇರೋದು ದರ್ಶನ್‍ಗೆ ಮಾತ್ರ ಕೂಡಾ ಅಂತ ಹೇಳ್ಬೋದು, ಯಾಕಂದ್ರೆ ಈಗಾಗಲೇ ಹಲವಾರು ಐಷಾರಾಮಿ ಕಾರುಗಳ ಒಡೆಯನಾಗಿರುವ ನಟ ದರ್ಶನ್ ಇದೀಗ ಮತ್ತೊಂದು ಐಷಾರಾಮಿ ಕಾರನ್ನು ಖರೀದಿ ಮಾಡಲಾಗಿದ್ದು, ಸಧ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ನಿಟ್ಟಿನಲ್ಲಿ ಡಿ-ಬಾಸ್ ದರ್ಷನ್ ಖರೀದಿ ಮಾದಡಿರುವ ಆ ಕಾರು ಯಾವುದು ಮತ್ತು ಕಾರಿನ ವಿಶೇಷತೆಗಳೆನು ಎಂಬುದನ್ನು ತಿಳಿಯಲು ಮುಂದಕ್ಕೆ ಓದಿರಿ..

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಡಿ-ಬಾಸ್ ದರ್ಶನ್ರವರು ಈಗಾಗಲೇ ದರ್ಶನ್ ಬಳಿ ಜಾಗ್ವಾರ್, Porsche, ಆಡಿ ಕ್ಯೂ 7, ಐ 20, ರೇಂಜ್ ರೋವರ್, ಫಾರ್ಚೂನರ್, ಬೆಂಜ್, ಮಿನಿ ಕೂಪರ್, ಹಮ್ಮರ್, ಲಂಬೋರ್ಗಿನಿ ಅಂತಹ ಕಾರುಗಳನ್ನ ದರ್ಶನ್ ಹೊಂದಿದ್ದು, ಇದೀಗ ಹಳದಿ ಬಣ್ಣ್ದಲ್ಲಿರುವ ಲ್ಯಾಂಭೀರ್ಗಿನಿ ಸಂಸ್ಥೆಯ ಉರುಸ್ ಎಂಬ ಅಧಿಕ ಪರ್ಫಾರ್ಮೆನ್ಸ್ ಕಾರನ್ನು ಖರೀದಿ ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಪ್ರಥಮ ಬಾರಿಗೆ ಲಂಬೋರ್ಗಿನಿ ಉರುಸ್ ಎಸ್‌ಯುವಿ ಮಾದರಿಯು ಬಿಡುಗಡೆಯಾಗಿದ್ದು, ಸೂಪರ್ ಸ್ಪೋರ್ಟಿ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ಉರುಸ್ ಕಾರಿನ ಬೆಲೆಯನ್ನು 3 ಕೋಟಿಗೆ(ದೆಹಲಿ ಎಕ್ಸ್‌ಶೋರಂ) ನಿಗದಿ ಮಾಡಲಾಗಿದೆ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಐಷಾರಾಮಿ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಇದೇ ಉದ್ದೇಶದಿಂದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಲಂಬೋರ್ಗಿನಿಯು ಭಾರತದಲ್ಲಿ ಪ್ರಥಮ ಬಾರಿಗೆ ವಿನೂತನ ಎಸ್‌ಯುವಿ ಉರುಸ್ ಪರಿಚಯಿಸಿದೆ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಇನ್ನೊಂದು ವಿಶೇಷ ಅಂದ್ರೆ ತನ್ನ ಕಾರು ಉತ್ಪನಗಳಲ್ಲೇ ಮೊದಲ ಬಾರಿಗೆ ಟರ್ಬೋಚಾರ್ಜ್ಡ್ ಎಂಜಿನ್ ಪರಿಚಯಿಸಿದ್ದು, ಉರುಸ್ ಎಸ್‌ಯುವಿ ಮಾದರಿಯು 4.0-ಲೀಟರ್ ಟ್ವಿನ್ ಟರ್ಬೋ ವಿ8 ಎಂಜಿನ್ ಪಡೆದುಕೊಂಡಿದೆ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಈ ಮೂಲಕ ಪ್ರತಿ ಗಂಟೆಗೆ 305 ಕಿಮಿ ಕ್ರಮಿಸಬಲ್ಲ ಶಕ್ತಿ ಹೊಂದಿರುವ ಉರುಸ್ ಎಸ್‌ಯುವಿಯು ಕೇವಲ 3.6 ಸೇಕೆಂಡ್‌ಗಳಲ್ಲಿ 100 ಕಿಮಿ ವೇಗ ಪಡೆಯಬಲ್ಲದು. ಹೀಗಾಗಿ ಪ್ರದೇಶಗಳಿಗೆ ಅನುಗುಣವಾಗಿ ಡ್ರೈವಿಂಗ್ ಮೂಡ್‌ಗಳನ್ನು ಒದಗಿಸಲಾಗಿದೆ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಸ್ಟ್ರೀಟ್, ಟ್ರಾಕ್ ಮತ್ತು ಆಪ್ ರೋಡಿಂಗ್ ಮೂಡ್‌ಗಳಾದ ಸ್ಯಾಂಡ್, ಗ್ರಾವೆಲ್, ಸ್ನೋ ಡ್ರೈವಿಂಗ್ ಮೂಡ್‌ಗಳನ್ನು ನೀಡಲಾಗಿದ್ದು, ಎಲ್ಲಾ ಕಠಿಣ ಪರಿಸ್ಥಿತಿಗಳಲ್ಲೂ ಸುಲಭ ಚಾಲನೆ ಮಾಡುವಂತ ಸೌಲಭ್ಯಗಳನ್ನು ಹೊಂದಿದೆ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಇನ್ನು ಐಷಾರಾಮಿ ಕಾರು ಚಾಲನೆಗೆ ಸ್ಪೂರ್ತಿ ನೀಡಬಲ್ಲ ಆಲ್ ವೀಲ್ಹ್ ಡ್ರೈವ್ ಸಿಸ್ಟಂ, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್, ಟಾಪ್ ಎಂಡ್ ಹೊರ ವಿನ್ಯಾಸಗಳು ಉರುಸ್ ನೋಟವನ್ನು ಹೆಚ್ಚಿಸಿದ್ದು, 2,200 ಕೆಜಿ ತೂಕದೊಂದಿಗೆ 85 ಲೀಟರ್ ಇಂಧನ ಟ್ಯಾಂಕ್ ಅಳವಡಿಕೆಯಿದೆ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಒಳವಿನ್ಯಾಸಗಳು

ಅತ್ಯಾಧುನಿಕ ಒಳವಿನ್ಯಾಸ ಹೊಂದಿರುವ ಉರುಸ್ ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಏರೋ ಡೈಮಾನಿಕ್‌ ಅಳವಡಿಕೆಯೊಂದಿಗೆ ಇನ್ಪೋ‍‌ಟೈನ್‌ಮೆಂಟ್ ಸಿಸ್ಟಂ, ಫೈವ್ ಲೆದರ್ ಸೀಟುಗಳು ಮತ್ತು ಸುರಕ್ಷತೆಗಾಗಿ 8 ಏರ್‌ಬ್ಯಾಗ್ ವ್ಯವಸ್ಥೆಯನ್ನು ಹೊಂದಿದೆ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಹೊಸ ಕಾರು ಖರೀದಿ ಸಂಭ್ರಮದಲ್ಲಿ ಅಪ್ಪ ಕೊಡಿಸಿದ ಗಿಫ್ಟ್ ನೆನೆದ ನಟ ಧನಂಜಯ್..!

ಸದ್ಯ ಚಂದನವನದಲ್ಲಿ ಯಶಸ್ವಿ ಹೆಜ್ಜೆಯಿಡುತ್ತಿರುವ ನಟ ಧನಂಜಯ್ ಅವರು ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೇ ಪರಭಾಷೆ ಚಿತ್ರಗಳಲ್ಲೂ ತಮ್ಮದೆ ಛಾಪು ಮೂಡಿಸುತ್ತಿದ್ದಾರೆ. ಡಾಲಿ ಪಾತ್ರದ ಮೂಲಕ ಹೊಸ ಟ್ರೆಂಡ್ ಸೃಷ್ಠಿಸಿರುವ ಧನಂಜಯ್ ಅವರ ಮನೆಗೆ ಸದ್ಯ ಹೊಸ ಅತಿಥಿಯೊಂದು ಆಗಮನವಾಗಿದೆ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಡೈರೆಕ್ಟರ್ಸ್ ಸ್ಪೆಷಲ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟ ಧನಂಜಯ್ ಲುಕ್ ಇದೀಗ ಸಿಕ್ಕಾಪಟ್ಟೆ ಬದಲಾಗಿದೆ. ಸ್ಯಾಂಡಲ್ ವುಡ್‌ ಮತ್ತು ಟಾಲಿವುಡ್ ನಲ್ಲೂ ಮಿಂಚುತ್ತಿರುವ ಧನಂಜಯ್ ಇದೀಗ ದುಬಾರಿ ಕಾರು ಒಂದನ್ನು ಖರೀದಿಸಿದ್ದಾರೆ. ಕೆಂಪು ಬಣ್ಣದ ರೇಂಜ್ ರೋವರ್ ಇವೋಕ್ ಖರೀದಿ ಮಾಡಿರುವ ಧನಂಜಯ್, ಹೊಸ ಕಾರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಹೊಸ ರೇಂಜ್ ರೋವರ್ ಇವೋಕ್ ಕಾರಿಗೆ KA 05 TS 8241 ನೋಂದಣಿ ನಂಬರ್ ನೀಡಲಾಗಿದ್ದು, ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹೊಸ ಕಾರಿಗೆ ಧನಂಜಯ್ ಪೂಜೆ ಮಾಡಿಸಿದ್ದಾರೆ. ಈ ವೇಳೆ ಹೊಸ ಅತಿಥಿ ಸಂಭ್ರಮದಲ್ಲಿದ್ದ ಧನಂಜಯ್ ಅವರು ಅಪ್ಪ ಕೊಡಿಸಿದ್ದ ಟಿವಿಎಸ್ ಎಕ್ಸ್ಎಲ್ ಸೂಪರ್ ಬೈಕ್ ಅನ್ನು ಮಾತ್ರ ಮರೆತಿರಲಿಲ್ಲ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಅಪ್ಪನ ಗಿಫ್ಟ್ ನೆನೆದ ಡಾಲಿ..!

ಹೌದು, ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಸಾಕಷ್ಟು ಕಷ್ಟಪಟ್ಟಿರುವ ಧನಂಜಯ್‌ಗೆ ಅಪ್ಪನ ಪ್ರೀತಿಯ ಗಿಫ್ಟ್ ಟಿವಿಎಸ್ ಎಕ್ಸ್ಎಲ್ ಮರೆಯರು ಸಾಧ್ಯವೇ ಇಲ್ಲ. ಅದೇ ಕಾರಣಕ್ಕೆ ದುಬಾರಿ ಬೆಲೆಯ ರೇಂಜ್ ರೋವರ್ ಕಾರು ಬಂದ್ರು ಕೂಡಾ ತನ್ನ ಹಳೆಯ ಬೈಕಿನ ಮೇಲಿನ ಸವಾರಿಯನ್ನು ಮರೆತಿಲ್ಲ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಅಭಿಮಾನಿಗಳಿಗೆ ಕೃತಜ್ಞತೆ..!

ಹೊಸ ಕಾರು ಖರೀದಿಯ ಸಂಭ್ರಮದಲ್ಲಿರುವ ಧನಂಜಯ್ ತಮ್ಮ ಅಭಿಯಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಪ್ಪ ಕೊಡ್ಸಿದ್ದು ಟಿವಿಎಸ್ ಎಕ್ಸ್ಎಲ್ ಸೂಪರ್, ಹಾಗೆಯೇ ನೀವು ಕೊಟ್ಟಿದ್ದು ರೇಂಜ್ ರೋವರ್ ಅಂತಾ ತಮ್ಮ ಫೇಜ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಜೊತೆಗೆ ನಿಮ್ಮ ಪ್ರೀತಿ ಸದಾ ಹೀಗೆ ಇರಲಿ ಎಂದು ಅಭಿಮಾನಿಗಳ ಅಭಿಮಾನವನ್ನು ನೆನೆದಿರುವ ಧನಂಜಯ್ ಅವರು, ಹೊಸ ಕಾರಿನೊಂದಿಗೆ ಅಪ್ಪನ ಕೊಡಿಸಿದ್ದ ಟಿವಿಎಸ್ ಎಕ್ಸ್ಎಲ್ ಬೈಕಿಗೂ ಪೂಜೆ ಮಾಡಿಸಿದ್ದು ಮತ್ತಷ್ಟು ವಿಶೇಷವಾಗಿತ್ತು.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಶುಭಾಷಯಗಳ ಮಾಹಾಪೂರ ಹೊಸ ಕಾರು ಖರೀದಿಸಿ ಸಂಭ್ರಮದಲ್ಲಿರುವ ಧನಂಜಯ್‌ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದ್ದು, ಅಭಿಯಾನಗಳನ್ನು ನೆನೆದ ಡಾಲಿಗೆ ಸಾವಿರಾರು ಜನ ತಮ್ಮದೇ ರೀತಿಯಲ್ಲಿ ಶುಭಹಾರೈಸುತ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಸದ್ಯ ಕನ್ನಡದಲ್ಲಿ ಯಜಮಾನ ಮತ್ತು ಪಾಪ್ ಕಾರ್ನ್ ಮಂಕಿ ಚಿತ್ರದಲ್ಲಿ ನಟಿಸುತ್ತಿರುವ ಧನಂಜಯ್, ಹೊಸ ಲುಕ್‌ನೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲವಿದ್ದು, ಡಾಲಿ ಪಾತ್ರದ ನಂತರ ಮತ್ತೊಂದು ಹವಾ ಕ್ರಿಯೆಟ್ ಮಾಡುವ ತವಕದಲ್ಲಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಇನ್ನು ಧನಂಜಯ್ ಅವರ ಕಾರಿನ ಬೆಲೆಯ ಬೆಂಗಳೂರಿನಲ್ಲಿ ಆರಂಭಿಕವಾಗಿ ರೂ.65 ಲಕ್ಷ ಆನ್‌ರೋಡ್ ಬೆಲೆಯನ್ನು ಹೊಂದಿದ್ದು, 2.0-ಲೀಟರ್(1999 ಸಿಸಿ) ಇಗ್ನೆನಿಯಂ ಡೀಸೆಲ್ ಎಂಜಿನ್ ಪಡೆದುಕೊಂಡಿದೆ. ಇದು ಸಾಮಾನ್ಯ ರಸ್ತೆಗಳಲ್ಲಿ ಅಷ್ಟೇ ಅಲ್ಲದೇ ಪರ್ಫಾಮೆನ್ಸ್ ಡ್ರೈವ್‌ನಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲದು.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಭಾರತೀಯ ಗ್ರಾಹಕನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ರೇಂಜ್ ರೋವರ್ ಸಂಸ್ಥೆಯು ಇದುವರೆಗೆ ವಿವಿಧ ಕಾರು ಮಾದರಿಗಳನ್ನು ಪರಿಚಯಿಸುವ ಮೂಲಕ ತನ್ನದೇ ಜನಪ್ರಿಯತೆ ಕಾಯ್ದುಕೊಂಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಇವೋಕ್ ಎಡಿಷನ್ ಸಿದ್ಧಗೊಳಿಸಿದೆ.

READ MORE: ದುಬೈನಲ್ಲಿ ಲಕ್ಕಿ ಡ್ರಾ ಮೂಲಕ 1.5 ಕೋಟಿ ಮೌಲ್ಯದ ಸ್ಪೋರ್ಟ್ಸ್ ಕಾರನ್ನು ಗೆದ್ದ ಭಾರತೀಯ

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಟಾಪ್ 10 ಶ್ರೇಷ್ಠ ಎಸ್‌ಯುವಿಗಳಲ್ಲಿ ಒಂದಾಗಿರುವ ರೇಂಜ್ ರೋವರ್ ಇವೋಕ್ ಕಾರು ಸದ್ಯ ಭಾರತದಲ್ಲಿ ಅತಿಹೆಚ್ಚು ಮಾರಾಟಗೊಳ್ಳುತ್ತಿರುವ ಐಷಾರಾಮಿ ಕಾರು ಮಾದರಿಯಾಗಿದ್ದು, ಅತ್ಯುತ್ತಮ ಚಾಲನಾ ಸೌಲಭ್ಯ ಮತ್ತು ಸುರಕ್ಷತೆಗೆ ಈ ಕಾರಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಇದೇ ಕಾರಣಕ್ಕೆ ಐಷಾರಾಮಿ ಎಸ್‌ಯುವಿ ಪ್ರಿಯರನ್ನು ಸೆಳೆಯಲು ಯಶಸ್ವಿಯಾಗಿರುವ ರೇಂಜ್ ರೋವರ್ ಇವೋಕ್, ಅತ್ಯಾಧುನಿಕ ಡ್ರೈವ್ ಟೆಕ್ನಾಲಜಿ ಸೌಲಭ್ಯದೊಂದಿಗೆ ಆಲ್ ವೀಲ್ಹ್ ಡ್ರೈವ್, 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಿಟ್ಟಿಕೊಂಡಿದೆ.

READ MORE: ಟಾಟಾ ನೆಕ್ಸಾನ್ ಕಾರು ಚಾಲಕನಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸರು

ಚಾಲೆಂಜಿಂಗ್ ಸ್ಟಾರ್ ಖರೀದಿ ಮಾಡಿದ್ರು ಮತ್ತೊಂದು ಐಷಾರಾಮಿ ಲ್ಯಾಂಬೋರ್ಗಿನಿ ಕಾರು

ಈ ಮೂಲಕ 237-ಬಿಎಚ್‌ಪಿ ಮತ್ತು 340-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ರೇಂಜ್ ರೋವರ್ ಇವೋಕ್ ಕಾರುಗಳು ಪ್ರತಿ ಗಂಟೆಗೆ 217ಕಿ.ಮಿ ಟಾಪ್ ಸ್ಪೀಡ್ ಪಡೆದುಕೊಂಡಿದ್ದು, ಕೇವಲ 8 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮಿ ವೇಗ ಪಡೆದುಕೊಳ್ಳುತ್ತವೆ.

Most Read Articles

Kannada
English summary
Sandalwood Star Darshan Added New Lamborghini Urus To His Luxury Car Collection. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X