ಭಾರತೀಯ ಸೇನೆಗೆ ಸೇರ್ಪಡೆಯಾದ ಇ-ವೆರಿಟೋ

ಭಾರತೀಯ ಸೇನೆಯು ನಗರದಲ್ಲಿನ ಓಡಾಟಕ್ಕಾಗಿ ಎಲೆಕ್ಟ್ರಿಕ್ ವಾಹನಗಳ ಸಂಚಾರವನ್ನು ಆರಂಭಿಸಿದೆ. ಭಾರತೀಯ ಸೇನೆಯು ಸದ್ಯಕ್ಕೆ ದೆಹಲಿಯಲ್ಲಿ ತನ್ನ ಹಿರಿಯ ಅಧಿಕಾರಿಗಳ ಪ್ರಯಾಣಕ್ಕಾಗಿ 10 ಇ-ವೆರಿಟೋ ಎಲೆಕ್ಟ್ರಿಕ್ ವಾಹನಗಳನ್ನು ಸೇರ್ಪಡೆಗೊಳಿಸಿದೆ.

ಭಾರತೀಯ ಸೇನೆಗೆ ಸೇರ್ಪಡೆಯಾದ ಇ-ವೆರಿಟೊ

ಪರಿಸರ ಸ್ನೇಹಿಯಾಗಿರುವ ಕಾರಣ ಇನ್ನೂ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು ಸೇನೆಯು ಸೇರ್ಪಡೆಗೊಳಿಸಿಕೊಳ್ಳಲಿದೆ. ಭಾರತೀಯ ಸೇನೆಯು ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಸೇನೆಯಾಗಿದೆ. 11 ಲಕ್ಷಕ್ಕೂ ಅಧಿಕ ಭೂ ಸೇನೆ ಯೋಧರನ್ನು ಹಾಗೂ 9.5 ಲಕ್ಷಕ್ಕೂ ಹೆಚ್ಚು ಮೀಸಲು ಪಡೆಯನ್ನು ಹೊಂದಿದೆ. ಇಷ್ಟು ದೊಡ್ಡ ಸಂಖ್ಯೆಯ ಸೇನೆಗೆ ಸಂಚಾರವು ಪ್ರಮುಖವಾಗಿದೆ. ಭೂ ಸಂಚಾರಕ್ಕಾಗಿ ಭಾರತೀಯ ಸೇನೆಯು ಟ್ರಕ್‍‍ಗಳೂ ಸೇರಿದಂತೆ ಹಲವು ವಾಹನಗಳನ್ನು ಬಳಸುತ್ತಿದೆ.

ಭಾರತೀಯ ಸೇನೆಗೆ ಸೇರ್ಪಡೆಯಾದ ಇ-ವೆರಿಟೊ

ಅವುಗಳೆಂದರೆ ಬಿ‍ಇ‍ಎಂ‍ಎಲ್ ತಾತ್ರಾ, ಅಶೋಕ್ ಲೆಲ್ಯಾಂಡ್ ಸ್ಟಾಲಿಯನ್, ಟಾಟಾ ಎಲ್‍‍ಪಿಟಿ‍ಎ 713, ಟಾಟಾ ಎಲ್‍‍ಪಿ‍ಟಿ‍ಎ 2038, ಸ್ವರಾಜ್ ಮಜ್ದಾ ಟಿ3500 ಮುಂತಾದವುಗಳು. ಮಾರುತಿ ಜಿಪ್ಸಿ, ಮಹೀಂದ್ರಾ ಎಂಎಂ550, ಟಾಟಾ ಸಫಾರಿ ಸ್ಟಾರ್ಮ್, ಫೋರ್ಸ್ ಗೂರ್ಖಾ ಹಾಗೂ ಮಿಟ್ಸುಭಿಷಿ ಪಜೆರೊ ಸೇರಿದಂತೆ ಹಲವು ಎಸ್‍‍ಯು‍‍ವಿಗಳನ್ನು ಭಾರತೀಯ ಸೇನೆಯು ಸಂಚಾರಕ್ಕಾಗಿ ಬಳಸುತ್ತಿದೆ.

ಭಾರತೀಯ ಸೇನೆಗೆ ಸೇರ್ಪಡೆಯಾದ ಇ-ವೆರಿಟೊ

ಫೋರ್ಸ್ ಗೂರ್ಖಾ ಹಾಗೂ ಮಿಟ್ಸುಭಿಷಿ ಪಜೆರೊ ವಾಹನಗಳನ್ನು ಸೀಮಿತ ಸಂಖ್ಯೆಯಲ್ಲಿ ಬಳಸಲಾಗುತ್ತಿದೆ. ಆಫ್ ರೋಡ್ ಸಾಮರ್ಥ್ಯ ಹಾಗೂ ಕಠಿಣ ಸನ್ನಿವೇಶಗಳನ್ನು ಹೊಂದಿರುವ ಗಡಿ ಪ್ರದೇಶಗಳಲ್ಲಿ ಮಹೀಂದ್ರಾ ಎಂಎಂ550 ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತಿದೆ.

ಭಾರತೀಯ ಸೇನೆಗೆ ಸೇರ್ಪಡೆಯಾದ ಇ-ವೆರಿಟೊ

ಹಲವಾರು ವರ್ಷಗಳಿಂದ ಮಾರುತಿ ಜಿಪ್ಸಿಯು, ಭಾರತೀಯ ಸೇನೆಯ ಪ್ರಮುಖ ಭೂ ಸಾರಿಗೆ ವಾಹನವಾಗಿದೆ. ಭಾರತೀಯ ಸೇನೆಯು ಮಾರುತಿ ಜಿಪ್ಸಿಯ 31,000ಕ್ಕೂ ಅಧಿಕ ವಾಹನಗಳನ್ನು ಹೊಂದಿದೆ. ಚೀನಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಗಡಿಗಳ ಬಳಿಯಿರುವ ಸೇನಾ ಬೇಸ್‌ಗಳಲ್ಲಿ ಈ ವಾಹನಗಳನ್ನು ಬಳಸಲಾಗುತ್ತಿದೆ. ಯುದ್ದದ ಸಂದರ್ಭಗಳಲ್ಲಿ ಸಶಸ್ತ್ರ ಪಡೆಗಳ ಓಡಾಟಕ್ಕೆ ಈ ವಾಹನಗಳನ್ನು ಬಳಸಲಾಗುತ್ತದೆ. ಇದರ ಜೊತೆಗೆ, ಪ್ರಮುಖ ಮಹಾನಗರಗಳಲ್ಲಿರುವ ತನ್ನ ಅಧಿಕಾರಿಗಳ ಸಂಚಾರಕ್ಕೆ ಸಹ ಈ ವಾಹನಗಳನ್ನು ಬಳಸಲಾಗುತ್ತಿದೆ.

ಭಾರತೀಯ ಸೇನೆಗೆ ಸೇರ್ಪಡೆಯಾದ ಇ-ವೆರಿಟೊ

2017ರ ಮೇನಲ್ಲಿ ಭಾರತೀಯ ಸೇನೆಯು ಜಿಪ್ಸಿ ವಾಹನಕ್ಕೆ ಬದಲಿಗೆ ಟಾಟಾ ಸಫಾರಿ ಸ್ಟಾರ್ಮ್‌ನ 3,193 ವಾಹನಗಳನ್ನು ಖರೀದಿಸಿತು. ಈ ಹೊಸ ಎಸ್‍‍ಯುವಿಗಳನ್ನು ನಗರದೊಳಗಿನ ಅಧಿಕಾರಿಗಳ ಸಂಚಾರಕ್ಕೆ ಬಳಸಬಹುದು ಎಂದು ಊಹಿಸಲಾಗಿತ್ತು. ಆದರೆ ಸೇನೆಯು ಬೇರೆ ಯೋಜನೆಗಳನ್ನು ಹೊಂದಿರುವಂತಿದೆ.

ಭಾರತೀಯ ಸೇನೆಗೆ ಸೇರ್ಪಡೆಯಾದ ಇ-ವೆರಿಟೊ

ಭಾರತೀಯ ಸೇನೆಯು 10 ಮಹಿಂದಾ ಇ-ವೆರಿಟೊ ಎಲೆಕ್ಟ್ರಿಕ್ ವಾಹನಗಳನ್ನು ಸೇರ್ಪಡೆಗೊಳಿಸಿದೆ. ಸಶಸ್ತ್ರ ಪಡೆಗಳಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನವನ್ನು ಬಳಸಲಾಗುತ್ತಿದೆ. ಇದರ ಜೊತೆಗೆ ಭಾರತೀಯ ಸೇನೆಯು ತನ್ನ ಅಧಿಕಾರಿಗಳಿಗೆ ಮೊದಲ ಬಾರಿಗೆ ಅಧಿಕೃತವಾಗಿ ಸೆಡಾನ್ ವಾಹನಗಳನ್ನು ನೀಡುತ್ತಿದೆ.

ಭಾರತೀಯ ಸೇನೆಗೆ ಸೇರ್ಪಡೆಯಾದ ಇ-ವೆರಿಟೊ

ಭಾರತೀಯ ಸೇನೆಯು ಪರಿಸರ ಸ್ನೇಹಿ ವಾಹನಗಳನ್ನು ಬಳಸುವತ್ತ ಹೆಜ್ಜೆ ಇಡುತ್ತಿದೆ. ಮಾಲಿನ್ಯದ ಪ್ರಮಾಣವು ವಿಪರೀತವಾಗಿರುವ ರಾಷ್ಟ್ರ ರಾಜಧಾನಿಯಿಂದಲೇ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಆರಂಭಿಸಿದೆ. ಇದು ಪ್ರಾಯೋಗಿಕ ಯೋಜನೆಯಾಗಿರುವುದರಿಂದ ಸದ್ಯಕ್ಕೆ 10 ಕಾರುಗಳನ್ನು ಸೇರ್ಪಡೆಗೊಳಿಸಲಾಗಿದೆ.

ಭಾರತೀಯ ಸೇನೆಗೆ ಸೇರ್ಪಡೆಯಾದ ಇ-ವೆರಿಟೊ

ಸೇನೆಯು ಶೀಘ್ರದಲ್ಲೇ ಹೆಚ್ಚಿನ ಎಲೆಕ್ಟ್ರಿಕ್ ಕಾರುಗಳನ್ನು ಸೇರ್ಪಡೆಗೊಳಿಸಿ ಕೊಳ್ಳುವ ಸಾಧ್ಯತೆಗಳಿವೆ. ಸೇನೆಯಲ್ಲಿ ಸೇರ್ಪಡೆಯಾಗಿರುವ ಮಹೀಂದ್ರಾ ಇ-ವೆರಿಟೊ ಎಲೆಕ್ಟ್ರಿಕ್ ವಾಹನಗಳು ಇಇಎಸ್ಎಲ್ (ಎನರ್ಜಿ ಎಫಿಷಿಯೆನ್ಸಿ ಸೊಲ್ಯೂಷನ್ಸ್ ಲಿಮಿಟೆಡ್) ಯೋಜನೆಯ ಭಾಗವಾಗಿವೆ.

MOST READ: ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಭಾರತೀಯ ಸೇನೆಗೆ ಸೇರ್ಪಡೆಯಾದ ಇ-ವೆರಿಟೊ

ಇಇಎಸ್ಎಲ್ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ ಜಂಟಿ ಉದ್ಯಮವಾಗಿದೆ. ಪ್ರಧಾನ ಮಂತ್ರಿ ಕಚೇರಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಬಳಸುವ ಬೃಹತ್ ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿದೆ.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಭಾರತೀಯ ಸೇನೆಗೆ ಸೇರ್ಪಡೆಯಾದ ಇ-ವೆರಿಟೊ

ಇಇಎಸ್ಎಲ್ ಯೋಜನೆಯಲ್ಲಿ ಮಹೀಂದ್ರಾ ಇ-ವೆರಿಟೊ ಹಾಗೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ವಾಹನಗಳು ಸೇರಿವೆ. ಭಾರತೀಯ ಸೇನೆಯು ಎಷ್ಟು ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು ಸೇರ್ಪಡೆಗೊಳಿಸಿ ಕೊಳ್ಳಲಿದೆ ಎಂಬುದು ಸ್ಪಷ್ಟವಾಗಿಲ್ಲ. ಎಲೆಕ್ಟ್ರಿಕ್ ವಾಹನಗಳು ಭವಿಷ್ಯದಲ್ಲಿ ಹೆಚ್ಚು ಸದ್ದು ಮಾಡಲಿವೆ.

MOST READ: ಉಚಿತ ತರಬೇತಿಯೊಂದಿಗೆ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿದ ಟೊಯೊಟಾ

ಭಾರತೀಯ ಸೇನೆಗೆ ಸೇರ್ಪಡೆಯಾದ ಇ-ವೆರಿಟೊ

ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತೀಚೆಗಷ್ಟೇ, ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಸರ್ಕಾರವು ಶೇಕಡಾ 12 ರಿಂದ 5 ಕ್ಕೆ ಇಳಿಸಿದ್ದು, ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಲು ಅನುಕೂಲ ಕಲ್ಪಿಸಿದೆ.

ಭಾರತೀಯ ಸೇನೆಗೆ ಸೇರ್ಪಡೆಯಾದ ಇ-ವೆರಿಟೊ

ಕೆಲವು ರಾಜ್ಯ ಸರ್ಕಾರಗಳು ಅಂತರ ನಗರ ಸಂಚಾರಕ್ಕಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಪ್ರಾರಂಭಿಸಿವೆ. ಈಗ ಭಾರತೀಯ ಸೇನೆಯು ಮಹೀಂದ್ರಾ ಇ-ವೆರಿಟೋ ವಾಹನಗಳನ್ನು ಸೇರ್ಪಡೆಗೊಳಿಸುವ ಮೂಲಕ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಮುಂದಾಗಿದೆ. ಭಾರತೀಯ ಸೇನೆಯು ಈ ಹಿಂದೆಯೂ ಅನೇಕ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಂಡಿದೆ. ಎಲೆಕ್ಟ್ರಿಕ್ ವಾಹನಗಳ ಸೇರ್ಪಡೆ ಅವುಗಳಲ್ಲಿ ಒಂದು.

ಭಾರತೀಯ ಸೇನೆಗೆ ಸೇರ್ಪಡೆಯಾದ ಇ-ವೆರಿಟೊ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಸೇನೆಯು ಕಠಿಣ ಪರಿಸ್ಥಿತಿಗಳಲ್ಲಿ ಕಾರ್ಯಚರಿಸುವುದರಿಂದ, ಭಾರತೀಯ ಸೇನೆಯಲ್ಲಿರುವ ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ವಾಹನಗಳನ್ನು ಸಂಪೂರ್ಣವಾಗಿ ಬದಲಿಸಲು ಸಾಧ್ಯವಿಲ್ಲ. ಆದರೆ ಒಂದು ನಗರದಿಂದ ಇನ್ನೊಂದು ನಗರಕ್ಕೆ ಓಡಾಡುವ ಸಲುವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಿಕೊಳ್ಳಲಾಗುವುದು. ದೇಶಿಯ ಮಾರುಕಟ್ಟೆಯಲ್ಲಿ ಇನ್ನೂ ಹಲವು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ಭಾರತೀಯ ಸೇನೆಯು ತನ್ನ ಅಧಿಕಾರಿಗಳ ಓಡಾಟಕ್ಕಾಗಿ ಅವುಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
English summary
Indian Army Adds Mahindra eVerito To Its Official Fleet - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X