Just In
- 10 hrs ago
ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ
- 10 hrs ago
ಸ್ಪಾಟ್ ಟೆಸ್ಟ್ನಲ್ಲಿ ಕಂಡು ಬಂದ ಬಿಎಸ್-6 ಹೀರೋ ಗ್ಲ್ಯಾಮರ್ ಬೈಕ್
- 11 hrs ago
ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- 11 hrs ago
ಅಂಬಾನಿಗೆ ಭದ್ರತೆ ನೀಡುತ್ತಿರುವ ಕಾರುಗಳ ಬೆಲೆ ಎಷ್ಟು ಗೊತ್ತಾ?
Don't Miss!
- Lifestyle
ಶುಕ್ರವಾರವಾದ ದಿನ ಭವಿಷ್ಯ 6-12-2019
- News
ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಟೀಕೆ
- Movies
ಈ ಷರತ್ತಿಗೆ ಓಕೆ ಅಂದ್ರೆ 'ಅರ್ಜುನ್ ರೆಡ್ಡಿ' ನಿರ್ದೇಶಕನ ಜೊತೆ ರಣ್ಬೀರ್ ಚಿತ್ರ!
- Sports
ರನ್ ಬೆನ್ನತ್ತುವ ಪರೀಕ್ಷೆಗೆ ಭಾರತ ಸಿದ್ದ: ವಿರಾಟ್ ಕೊಹ್ಲಿ
- Finance
ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು
- Technology
ಗೂಗಲ್ ಫೋಟೋಸ್ ನಲ್ಲಿ ಇದೀಗ ಚಾಟ್ ಫೀಚರ್- ಇದರಲ್ಲಿ ನೀವೇನು ಮಾಡಬಹುದು?
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
- Travel
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
26 ವರ್ಷಗಳ ಬಳಿಕ ಸ್ವಂತ ಕಾರು ಖರೀದಿಸಿದ ಮಹೀಂದ್ರಾ ಎಂಡಿ
ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಎಂಡಿ ಪವನ್ ಗೋಯೆಂಕಾರವರು ಸ್ವಂತ ಕಾರ್ ಅನ್ನು ಖರೀದಿಸಿದ್ದು, ಹೊಸ ಕಾರಿನ ಚಿತ್ರಗಳನ್ನು ಟ್ವಿಟರ್‍ನಲ್ಲಿ ಶೇರ್ ಮಾಡಿದ್ದಾರೆ. ಪವನ್‍ರವರು ಖರೀದಿಸಿರುವ ಹೊಸ ಕಾರು ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ 300 ಆಗಿದ್ದು, ತಮ್ಮ ಸಂತಸವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

ಈ ಚಿತ್ರಗಳಲ್ಲಿ ಪವನ್ ಗೋಯೆಂಕಾ ಹಾಗೂ ಅವರ ಕುಟುಂಬವು ಅಪಾರ್ಟ್‍ಮೆಂಟ್‍ನಲ್ಲಿ ಡೆಲಿವರಿ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು. ಇದರಲ್ಲಿ ಏನು ವಿಶೇಷ ಅಂತೀರಾ? ಪವನ್ ಗೋಯೆಂಕಾ ಅವರ ಪ್ರಕಾರ, ಈ ಹೊಸ ಕಾರು 26 ವರ್ಷಗಳ ನಂತರ ಅವರ ಕುಟುಂಬವು ಹೊಂದುತ್ತಿರುವ ಮೊದಲ ಸ್ವಂತ ಕಾರ್ ಆಗಿದೆ. 26 ವರ್ಷಗಳ ಈ ಸುದೀರ್ಘ ಅವಧಿಯಲ್ಲಿ ಭಾರತದ ಆಟೋಮೊಬೈಲ್ ಉದ್ಯಮವು ನಿರೀಕ್ಷೆಗಳನ್ನು ಮೀರಿ ಬೆಳೆದಿದೆ.

ಅದರ ಜೊತೆಗೆ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯೂ ಕೂಡ ಬೆಳೆದಿದೆ. ಕಂಪನಿಯು ತನ್ನ ವಾಹನಗಳ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಕಂಪನಿಯ ಎಂಡಿ ಆಗಿರುವ ಪವನ್ ಗೋಯೆಂಕಾರವರಿಗೆ ಮಹೀಂದ್ರಾ ಕಂಪನಿಯು ತಯಾರಿಸಿರುವ ಪ್ರತಿಯೊಂದು ಕಾರುಗಳ ಸರಿ ತಪ್ಪುಗಳ ಬಗ್ಗೆ ತಿಳಿದಿದೆ.

ಗೋಯೆಂಕಾರವರು ಲಕ್ಷಾಂತರ ರೂಪಾಯಿಗಳನ್ನು ನೀಡಿ ಹೊಸ ಎಕ್ಸ್‌ಯುವಿ 300 ಕಾರು ಖರೀದಿಸಿದ್ದಾರೆ. ಇದು ಈ ವಾಹನದ ಬಗ್ಗೆ ಅವರಿಗಿರುವ ವಿಶ್ವಾಸವನ್ನು ತೋರಿಸುತ್ತದೆ. ಕಂಪನಿಯ ಎಂಡಿಯಾಗಿರುವ ಕಾರಣಕ್ಕೆ ಪವನ್ ಗೋಯೆಂಕಾರವರು ಕಂಪನಿಯ ಕಾರುಗಳಲ್ಲಿ ಓಡಾಡುವಂತಹ ಸೌಲಭ್ಯಗಳನ್ನು ಹೊಂದಿದ್ದಾರೆ.

ಈ ಕಾರಣಕ್ಕಾಗಿಯೇ ಅವರು ಕಳೆದ 26 ವರ್ಷಗಳಿಂದ ಸ್ವಂತ ಕಾರ್ ಅನ್ನು ಹೊಂದಿರಲಿಲ್ಲ. ಸ್ವಂತ ಕಾರು ಖರೀದಿಸುವ ಸಮಯ ಬಂದಾಗ, ತಮ್ಮದೇ ಕಂಪನಿಯ ಎಕ್ಸ್‌ಯುವಿ 300 ಕಾರಿನ ಬಗ್ಗೆ ಒಲವನ್ನು ತೋರಿದ್ದಾರೆ. ಈ ಕಾಂಪ್ಯಾಕ್ಟ್ ಎಸ್‌ಯುವಿ ಸದ್ಯಕ್ಕೆ ಮಹೀಂದ್ರಾ ಕಂಪನಿಯ ಹೆಚ್ಚು ಮಾರಾಟವಾಗುತ್ತಿರುವ ವಾಹನವಾಗಿದೆ.

ಮಹೀಂದ್ರಾ ಎಕ್ಸ್‌ಯುವಿ 300 ಅನ್ನು ಫೆಬ್ರವರಿ 2019 ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಯ ನಂತರ ಈ ಎಕ್ಸ್‌ಯುವಿ ಬಹುಜನರ ನೆಚ್ಚಿನ ಕಾರ್ ಆಗಿತ್ತು. ಈ ಎಕ್ಸ್‌ಯುವಿ ಎಷ್ಟು ಜನಪ್ರಿಯವಾಯಿತೆಂದರೆ ಬಿಡುಗಡೆಯಾದ ಕೇವಲ ಒಂದೇ ತಿಂಗಳಿನಲ್ಲಿ ಈ ಸೆಗ್‍ಮೆಂಟಿನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಎರಡನೇ ಸ್ಥಾನಕ್ಕೇರಿತು.
|
ಈ ಎಕ್ಸ್‌ಯುವಿ ಆಧುನಿಕ ವಿನ್ಯಾಸದ ಜೊತೆಗೆ ಹಲವಾರು ಫೀಚರ್‍ಗಳನ್ನು ಹೊಂದಿದೆ. ಟ್ವೀಟ್‌ಗೆ ನೀಡಿರುವ ಉತ್ತರದಲ್ಲಿ ಪವನ್ ಗೋಯೆಂಕಾರವರು ಅವರ ಎಕ್ಸ್‌ಯುವಿ 300 ಎಎಂಟಿ, ಡ್ಯುಯಲ್ ಟೋನ್ ಕಲರ್, 17 ಇಂಚಿನ ವ್ಹೀಲ್, ಸನ್‌ರೂಫ್ ಹಾಗೂ ಲೆಥೆರೆಟ್ ಸೀಟುಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಈ ಎಕ್ಸ್ ಯುವಿ ಟಾಪ್ ಮಾದರಿಯ ಡಬ್ಲ್ಯು 8 (ಒ) ಆಟೋಶಿಫ್ಟ್ ಮಾದರಿಯಾಗಿದೆ. ಈ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.12.69 ಲಕ್ಷಗಳಾಗಿದೆ. ಕಾರಿನಲ್ಲಿರುವ ಡ್ಯುಯಲ್ ಟೋನ್ ರೆಡ್ ರೇಜ್ ಶೇಡ್ ಹೆಚ್ಚುವರಿ ಆಯ್ಕೆಯಾಗಿದ್ದು ಅದರ ಬೆಲೆ ರೂ.15,000ಗಳಾಗುತ್ತದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಈ ಎಕ್ಸ್‌ಯುವಿ ಈ ಸೆಗ್‍ಮೆಂಟಿನಲ್ಲಿಯೇ ಮೊದಲು ಎನ್ನಲಾದ ಹಲವಾರು ಫೀಚರ್‍ಗಳನ್ನು ಹೊಂದಿದೆ. ಆ ಫೀಚರ್‍ಗಳೆಂದರೆ ಒಆರ್‍ವಿಎಂ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಸ್ಟೀಯರಿಂಗ್ ಮೋಡ್, ಡ್ಯೂಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್. ಮಹೀಂದ್ರಾ ಎಕ್ಸ್‌ಯುವಿ 300ನಲ್ಲಿ ಹಲವಾರು ಸುರಕ್ಷಾ ಫೀಚರ್‍ಗಳನ್ನೂ ಸಹ ಅಳವಡಿಸಲಾಗಿದೆ.
MOST READ: ಕಾರ್ ಕದ್ದಿದ್ದು ಆಯ್ತು, ಈಗ ಖದೀಮರ ಕಣ್ಣು ಲೊಗೊ ಮೇಲೆ..!

ಈ ಎಕ್ಸ್‌ಯುವಿ ಏಳು ಏರ್‌ಬ್ಯಾಗ್, ಎಲ್ಲಾ ಕಾರ್ನರ್‍ಗಳಲ್ಲಿಯೂ ಡಿಸ್ಕ್ ಬ್ರೇಕ್, ಇಬಿಡಿ ಹೊಂದಿರುವ ಎಬಿಎಸ್, ಕ್ರೂಸ್ ಕಂಟ್ರೋಲ್, ಐಎಸ್‌ಒಎಫ್‍ಐಎಕ್ಸ್ ಚೈಲ್ಡ್ ಸೀಟ್ ಆಂಕರ್, ರೋಲ್ ಓವರ್ ಮಿಟಿಗೇಷನ್ ಹೊಂದಿರುವ ಇಎಸ್‌ಪಿ, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕಿಂಗ್‍ಗಳನ್ನು ಹೊಂದಿದೆ.

ಇನ್ಫೋಟೇನ್‌ಮೆಂಟ್‍ಗಾಗಿ 7 ಇಂಚಿನ ಟಚ್‌ಸ್ಕ್ರೀನ್ ಸಿಸ್ಟಂ ಅಳವಡಿಸಲಾಗಿದ್ದು, ಅದರಲ್ಲಿ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇಗಳಿವೆ. ಈ ಎಕ್ಸ್‌ಯುವಿಯಲ್ಲಿ ಡೈಮಂಡ್ ಕಟ್ ಅಲಾಯ್ ವ್ಹೀಲ್, ಸನ್‌ರೂಫ್, ಎಲ್‌ಇಡಿ ಡಿಆರ್‌ಎಲ್ ಇತ್ಯಾದಿಗಳನ್ನು ಸಹ ಅಳವಡಿಸಲಾಗಿದೆ. ಎಂಜಿನ್ ಬಗ್ಗೆ ಹೇಳುವುದಾದರೆ, ಈ ಎಕ್ಸ್‌ಯುವಿಯಲ್ಲಿ ಡಬ್ಲ್ಯು 8 (ಒ) ಆಟೋಶಿಫ್ಟ್ 1.5 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 115 ಬಿಹೆಚ್‍ಪಿ ಪವರ್ ಹಾಗೂ 300ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಟಾರ್ಕ್ ಉತ್ಪಾದನೆಯ ಅಂಕಿ ಅಂಶವು ಈ ಸೆಗ್‍ಮೆಂಟಿನಲ್ಲಿಯೇ ಅತ್ಯುತ್ತಮವಾದುದಾಗಿದೆ. 6 ಸ್ಪೀಡಿನ ಎಎಂಟಿ ಗೇರ್ ಬಾಕ್ಸ್ ಮುಂಭಾಗದ ವ್ಹೀಲ್‍ಗಳನ್ನು ಚಲಾಯಿಸುತ್ತದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಮಹೀಂದ್ರಾ ಕಾರುಗಳು ಭಾರಿ ಸುಧಾರಣೆಯನ್ನು ಕಾಣುತ್ತಾ ಬಂದಿವೆ. ಇದನ್ನು ಎಕ್ಸ್‌ಯುವಿ 300 ಸೇರಿದಂತೆ ಹಲವು ವಾಹನಗಳಲ್ಲಿ ಕಾಣಬಹುದಾಗಿದೆ. ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಮ್ಮ ಸಂಪಾದನೆಯ ಹಣವನ್ನು ಬಳಸಿ ತಮ್ಮದೇ ಕಂಪನಿಯ ಕಾರ್ ಅನ್ನು ಖರೀದಿಸುವುದು ಆ ವಾಹನದ ಮೇಲೆ ಗ್ರಾಹಕರಿಗೆ ನಂಬಿಕೆ ಬರುವಂತೆ ಮಾಡುತ್ತದೆ. ಪವನ್ ಗೋಯೆಂಕಾರವರು ಸಹ ಅದನ್ನೇ ಮಾಡಿದ್ದಾರೆ.

ಮಹೀಂದ್ರಾ ಕಂಪನಿಯ ಉನ್ನತ ಅಧಿಕಾರಿಗಳು, ಕಂಪನಿಯು ಉತ್ಪಾದಿಸುವ ಕಾರುಗಳನ್ನೇ ಹೊಂದಿದ್ದಾರೆ. ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ಸಹ ಮಹೀಂದ್ರಾ ಅಲ್ತುರಾಸ್ ಜಿ 4, ಟಿಯುವಿ 300, ಬೊಲೆರೊ ಇನ್ವೇಡರ್, ವಿಶೇಷ ಬಣ್ಣವನ್ನು ಹೊಂದಿರುವ ಟಿಯುವಿ 300 ಪ್ಲಸ್ ಹಾಗೂ ಸ್ಕಾರ್ಪಿಯೋ ಹೊಂದಿದ್ದಾರೆ. ತಮ್ಮದೇ ಕಂಪನಿಯ ವಾಹನಗಳನ್ನು ತಾವೇ ಖರೀದಿಸುವುದಕ್ಕಿಂತ ಬೇರೆ ಮಾರ್ಕೆಟಿಂಗ್ ತಂತ್ರವಿಲ್ಲ.