ಶುರುವಾಯ್ತು ಮಾರುತಿ ಎಸ್-ಪ್ರೆಸ್ಸೊ ಬುಕ್ಕಿಂಗ್

ಜನಪ್ರಿಯ ಕಂಪನಿಯಾದ ಮಾರುತಿ ಸುಜುಕಿಯ ಹೊಸ ಎಸ್-ಪ್ರೆಸ್ಸೊ ಕಾರಿನ ಬುಕ್ಕಿಂಗ್‍‍ಗಳನ್ನು ಭಾರತದಲ್ಲಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಎಸ್-ಪ್ರೆಸ್ಸೊ ಹ್ಯಾಚ್‍‍ಬ್ಯಾಕ್‍‍ಗಾಗಿ ಆಸಕ್ತ ಗ್ರಾಹಕರು ರೂ.11,000 ಪಾವತಿಸಿ ಎಸ್ಸ್-ಪ್ರೆಸ್ಸೊ ಕಾರನ್ನು ಬುಕ್ಕಿಂಗ್ ಮಾಡಿಕೊಳ್ಳಬಹುದು.

ಶುರುವಾಯ್ತು ಮಾರುತಿ ಎಸ್-ಪ್ರೆಸ್ಸೊ ಬುಕ್ಕಿಂಗ್

ಮಾರುತಿ ಎಸ್-ಪ್ರೆಸ್ಸೊ ಭಾರತದ ಮೂಲದ ಕಾರು ತಯಾರಕ ಕಂಪನಿಯು ಎಂಟ್ರಿ-ಲೆವೆಲ್ ಹ್ಯಾಚ್‌ಬ್ಯಾಕ್ ಸೆಗ್‍‍ಮೆಂಟಿನಲ್ಲಿ ಬಿಡುಗಡೆಗೊಳಿಸುತ್ತಿರುವ ಹೊಸ ಕಾರ್ ಆಗಿದೆ. 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಲಾಗಿದ್ದ ಮೈಕ್ರೊ ಎಸ್‌ಯುವಿ ಫ್ಯೂಚರ್ ಎಸ್ ಕಾನ್ಸೆಪ್ಟ್ ಮಾದರಿಯನ್ನೇ ಇದೀಗ ಎಸ್-ಪ್ರೆಸ್ಸೊ ಹೆಸರಿನೊಂದಿಗೆ ಬಿಡುಗಡೆಗೊಳಿಸಲಾಗುತ್ತಿದೆ.

ಶುರುವಾಯ್ತು ಮಾರುತಿ ಎಸ್-ಪ್ರೆಸ್ಸೊ ಬುಕ್ಕಿಂಗ್

ದೇಶಿಯ ಮಾರುಕಟ್ಟೆಯಲ್ಲಿ ಎಸ್-ಪ್ರೆಸ್ಸೊ ಬಿಡುಗಡೆಯಾದ ಬಳಿಕ ಅಲ್ಟೊ ಕೆ 10 ಸ್ಥಾನವನ್ನು ತುಂಬಲಿದೆ. ಎಸ್-ಪ್ರೆಸ್ಸೊ ಕಾರು ರೆನಾಲ್ಟ್ ಕ್ವಿಡ್ ಹಾಗೂ ಡಸ್ಟನ್ ರೆಡಿ-ಗೊ ಕಾರುಗಳಿಗೆ ಪೈಪೋಟಿ ನೀಡಲಿದೆ.

ಶುರುವಾಯ್ತು ಮಾರುತಿ ಎಸ್-ಪ್ರೆಸ್ಸೊ ಬುಕ್ಕಿಂಗ್

ಮಾರುತಿ ಸುಜುಕಿಯ ಹೊಸ ಎಸ್-ಪ್ರೆಸ್ಸೊ ಹ್ಯಾಚ್‍‍ಬ್ಯಾಕ್‍‍ನ ಇಂಟಿರಿಯರ್‍ ಮತ್ತು ಎಕ್ಸ್ ಟಿರಿಯರ್‍‍ನ ಅಧಿಕೃತ ಚಿತ್ರಗಳನ್ನು ಮಾರುತಿ ಸುಜುಕಿ ಕಂಪನಿಯು ಬಹಿರಂಗಪಡಿಸಿದೆ. ಮಾರುತಿ ಎಸ್-ಪ್ರೆಸ್ಸೊ ಸಂಪೂರ್ಣವಾಗಿ ಹೊಸ ವಿನ್ಯಾಸದೊಂದಿಗೆ ಬರುತ್ತಿದ್ದು, ಇದರ ಜೊತೆಗೆ ಹಲವಾರು ವೈಶಿಷ್ಟ್ಯ ಮತ್ತು ಉಪಕರಣಗಳನ್ನು ಹೊಂದಿದೆ.

ಶುರುವಾಯ್ತು ಮಾರುತಿ ಎಸ್-ಪ್ರೆಸ್ಸೊ ಬುಕ್ಕಿಂಗ್

ಮಾರುತಿ ಎಸ್-ಪ್ರೆಸ್ಸೊ ಹೊರಭಾಗದಲ್ಲಿ ಬಹುತೇಕ ಎಸ್‍‍ಯು‍ವಿ -ಐಎಸ್ಎಚ್ ವಿನ್ಯಾಸವನ್ನು ಹೊಂದಿದೆ. ಸ್ಕ್ವೇರ್ ಅಫ್ ಎಡ್ಜ್, ಹ್ಯಾಚ್‍‍ಬ್ಯಾಕ್‍‍ನಲ್ಲಿ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಕೊಡಿದೆ.

ಶುರುವಾಯ್ತು ಮಾರುತಿ ಎಸ್-ಪ್ರೆಸ್ಸೊ ಬುಕ್ಕಿಂಗ್

ಹ್ಯಾಚ್‌ಬ್ಯಾಕ್ ಮಾದರಿಯಾದರೂ ಕೂಡಾ ಮೈಕ್ರೊ ಎಸ್‌‌ಯುವಿ ಗುಣಲಕ್ಷಣಗಳನ್ನು ಹೊಂದಿರುವ ಎಸ್-ಪ್ರೆಸ್ಸೊ ಕಾರು ಸ್ಕ್ವೆರ್ ಎಡ್ಜ್ ಬ್ಯಾನೆಟ್, ಆಲ್ ಬ್ಲ್ಯಾಕ್ ಕ್ಯಾಬಿನ್, ಟಾಪ್ ಎಂಡ್‌ನಲ್ಲಿ ಆರೆಂಜ್ ಆಸೆಂಟ್, ಸೆಂಟರ್ ಮೌಟೆಂಡ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಪೀಡೋ ಮೀಟರ್ ಮತ್ತು ಟಾಕೊಮೀಟರ್‍‍ಗಳನ್ನು ಅಳವಡಿಸಲಾಗಿದೆ.

ಶುರುವಾಯ್ತು ಮಾರುತಿ ಎಸ್-ಪ್ರೆಸ್ಸೊ ಬುಕ್ಕಿಂಗ್

ಪ್ರೀಮಿಯಂ ಸೌಲಭ್ಯಗಳಾದ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಕ್ಲಸ್ಟರ್, ಸ್ಮಾರ್ಟ್ ಪ್ಲೇ ಸ್ಟುಡಿಯೋ ಸಿಸ್ಟಂ, ಎಸಿ ವೆಂಟ್ಸ್, ಸ್ಟಿರಿಂಗ್ ಮೌಟೆಂಡ್ ಕಂಟ್ರೋಲ್, ಯುಎಸ್‌ಬಿ ಕನೆಕ್ಟ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಕ್ಲಸ್ಟರ್, ಸ್ಮಾರ್ಟ್ ಪ್ಲೇ ಸ್ಟುಡಿಯೋ ಸಿಸ್ಟಂ, ಎಸಿ ವೆಂಟ್ಸ್, ಸ್ಟಿರಿಂಗ್ ಮೌಟೆಂಡ್ ಕಂಟ್ರೋಲ್, ಮ್ಯಾನುವಲ್ ಹೊಂದಾಣಿಕೆಯ ರಿಯರ್ ವ್ಯೂ ಮಿರರ್, 12ವೊಲ್ಟ್ ಚಾರ್ಜಿಂಗ್ ಸ್ಯಾಕೆಟ್ ಹೊಂದಿದೆ. ಇದರೊಂದಿಗೆ ಸುರಕ್ಷತೆಗಾಗಿ ಈ ಕಾರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸ್ಪೀಡ್ ವಾರ್ನಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ನೀಡಲಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಶುರುವಾಯ್ತು ಮಾರುತಿ ಎಸ್-ಪ್ರೆಸ್ಸೊ ಬುಕ್ಕಿಂಗ್

ಕೇಂದ್ರ ಸರ್ಕಾರವು 2020ರ ಏಪ್ರಿಲ್ 1ರಿಂದ ಜಾರಿಗೆ ತರುತ್ತಿರುವ ಬಿಎಸ್-6 ಹೊಸ ನಿಯಮಾವಳಿಗೆ ಅನುಸಾರವಾಗಿ ಈ ಕಾರು ಸಹ ಬಿ‍ಎಸ್ 6 ಎಂಜಿನ್ ಹೊಂದಿದೆ. ಈ ಕಾರಿನಲ್ಲಿರುವ 1.0 ಲೀಟರ್ ಪೆಟ್ರೋಲ್ ಎಂಜಿನ್ 68 ಬಿಎಚ್‍ಪಿ ಪವರ್ ಮತ್ತು 90 ಎನ್‍ಎಂ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5-ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5- ಸ್ಪೀಡಿನ ಎಜಿಎಸ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೀಡಲಾಗುವುದು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಶುರುವಾಯ್ತು ಮಾರುತಿ ಎಸ್-ಪ್ರೆಸ್ಸೊ ಬುಕ್ಕಿಂಗ್

ಮಾರುತಿ ಎಸ್-ಪ್ರೆಸ್ಸೊವನ್ನು ದೇಶಿಯ ಮಾರುಕಟ್ಟೆಯಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಇತ್ತೀಚಿಗೆ ಬಿಡುಗಡೆಯಾದ ಸ್ಪೈ ಚಿತ್ರಗಳಿಂದ ಎಸ್-ಪ್ರೆಸ್ಸೊ ದೇಶದಾದ್ಯಂತವಿರುವ ಡೀಲರ್‍‍ಗಳನ್ನು ತಲುಪಿರುವುದು ಬಹಿರಂಗವಾಗಿದೆ. ಬಿಡುಗಡೆಯ ಸಮಯದಲ್ಲಿಯೇ ಕಾರ್ ಅನ್ನು ವಿತರಿಸುವ ಸಾಧ್ಯತೆಗಳಿವೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಶುರುವಾಯ್ತು ಮಾರುತಿ ಎಸ್-ಪ್ರೆಸ್ಸೊ ಬುಕ್ಕಿಂಗ್

ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಎಸ್-ಪ್ರೆಸ್ಸೊ ಕಾರಿನ ಬುಕ್ಕಿಂಗ್‍‍ಗಳನ್ನು ಆರಂಭಿಸಿದೆ. ಮಾರುತಿ ಸುಜುಕಿ ಎಸ್-ಪ್ರೆಸ್ಸೊ ದೇಶಿಯ ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ರೆನಾಲ್ಟ್ ಕ್ವಿಡ್ ಫೇಸ್‍‍ಲಿಫ್ಟ್ ಕಾರಿಗೆ ಪೈಪೋಟಿಯನ್ನು ನೀಡಲಿದೆ. ಎಸ್ ಪ್ರೆಸ್ಸೊ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.3.5 ಲಕ್ಷಗಳಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Maruti S-Presso Bookings Started: India-Launch Scheduled For 30th September - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X