TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಕಾರು ಖರೀದಿದಾರರಿಗೆ ಮತ್ತಷ್ಟು ಹೊಸತನ ನೀಡಿದ ಮಾರುತಿ ಸುಜುಕಿ ಅರೆನಾ
ಭಾರತದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ನಮೂನೆಯ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಕಾರು ಖರೀದಿದಾರರನ್ನು ಸೆಳೆಯಲು ಹೊಸ ಯೋಜನೆ ರೂಪಿಸಿರುವ ಮಾರುತಿ ಸುಜುಕಿಯು ತನ್ನ ಅರೆನಾ ಕಾರು ಡೀಲರ್ಸ್‌ಗಳನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಉನ್ನತಿಕರಿಸುವ ಮೂಲಕ ಮತ್ತಷ್ಟು ಗ್ರಾಹಕ ಸ್ನೇಹಿ ವಾತಾವರಣವನ್ನು ನಿರ್ಮಿಸುತ್ತಿದೆ.
ಹೌದು, ಮಾರುತಿ ಸುಜುಕಿ ಸಂಸ್ಥೆಯು ಎರಡು ಮಾದರಿಯಲ್ಲಿ ಕಾರು ಮಾರಾಟ ಸೌಲಭ್ಯವನ್ನು ಹೊಂದಿದ್ದು, ಪ್ರೀಯಯಂ ಕಾರುಗಳ ಮಾರಾಟಕ್ಕಾಗಿ ನೆಕ್ಸಾ ಮತ್ತು ಸಾಮಾನ್ಯ ಮಾದರಿಯ ಕಾರು ಮಾರಾಟಕ್ಕೆ ಅರೆನಾ ಡೀಲರ್ಸ್ ಮೂಲಕ ಮಾರಾಟ ಮಾಡುತ್ತಿದೆ. ಇದರಲ್ಲಿ ನೆಕ್ಸಾ ಶೋರೂಂಗಳು ಈಗಾಗಲೇ ಉನ್ನತ ಮಟ್ಟದ ತಾಂತ್ರಿಕ ಸೌಲಭ್ಯಗಳೊಂದಿಗೆ ಕಾರು ಮಾರಾಟ ಮಾಡುತ್ತಿದ್ದು, ಅರೆನಾ ಮಾರಾಟ ಮಳಿಗೆಗಳು ಸಹ ಇದೀಗ ಹೊಸ ಮಾದರಿಯ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಮತ್ತಷ್ಟು ಉನ್ನತಿಕರಣ ಹೊಂದುತ್ತಿವೆ.
ಹೀಗಾಗಿ ಮಾರುತಿ ಸುಜುಕಿ ಅರೆನಾ ಡೀಲರ್ಸ್‌ಗಳಿಗೆ ಭೇಟಿ ನೀಡುವ ಗ್ರಾಹಕರಿಗೆ ಹಿಂದೆಂದಿಗಿಂತಲೂ ಹೊಸ ಅನುಭವದೊಂದಿಗೆ ಕಾರು ಖರೀದಿ ಮಾಡಬಹುದಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಯಾವ ಕಾರು ಖರೀದಿ ಮಾಡಿದರೆ ಸೂಕ್ತ ಎನ್ನುವುದನ್ನು ತಿಳಿಯವುದು ಇದೀಗ ಮತ್ತಷ್ಟು ಸುಲಭವಾಗಿಸಲಿದೆ.
ಇದಕ್ಕಾಗಿಯೇ ತರಬೇತಿಗೊಳಿಸಿದ ನುರಿತ ಉದ್ಯೋಗಿಗಳನ್ನು ನೇಮಕಗೊಳಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಗ್ರಾಹಕರ ಬೇಡಿಕೆ ಏನು? ಬೇಡಿಕೆಗೆ ಅನುಗುಣವಾಗಿ ಯಾವ ಕಾರು ಖರೀದಿ ಮಾಡಿದರೆ ಸೂಕ್ತ ಎನ್ನುವಂತಹ ಗ್ರಾಹಕರ ಗೊಂದಲಗಳನ್ನು ಕೆಲವೇ ನಿಮಿಷಗಳಲ್ಲಿ ಪರಿಹರಿಸುತ್ತಾರೆ.
ಹಾಗಾದ್ರೆ ಮಾರುತಿ ಸುಜುಕಿ ಅರೆನಾದಲ್ಲಿ ಏನೆಲ್ಲಾ ಹೊಸತನದಿಂದ ಕೂಡಿದೆ? ಮೊದಲಿನ ಅರೆನಾ ಡೀಲರ್ಸ್‌ಗೂ ಮತ್ತು ಹೊಸದಾಗಿ ಬದಲಾವಣೆಗೊಂಡಿರುವ ಅರೆನಾ ಡೀಲರ್ಸ್ ಇರುವ ವ್ಯತ್ಯಾಸ ಏನು? ಇಂತಹ ನಿಮ್ಮ ಕುತೂಹಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
ನೆವಿಗೆಷನಲ್ ಪೋರ್ಟಲ್
ಕಾರು ಖರೀದಿಗೂ ಮೊದಲು ಬಹುತೇಕ ಗ್ರಾಹಕರು ಇಂಟರ್‌ನೆಟ್ ಮೂಲಕ ಒಂದೇ ಸೂರಿನಡಿ ಎಲ್ಲಾ ಮಾಹಿತಿಗಳನ್ನು ಪಡೆಯಲು ಯತ್ನಿಸುತ್ತಾರೆ. ಆದ್ರೆ ಇದು ಕೆಲವೊಮ್ಮೆಕೆಲವು ಗ್ರಾಹಕರಿಗೆ ಅರ್ಥೈಸಿಕೊಳ್ಳಲು ಕಷ್ಟವಾಗಬಹುದು. ಈ ವೇಳೆ ನೀವು ಅರೆನಾ ಡೀಲರ್ಸ್ ಭೇಟಿ ನೀಡಿದ್ದಲ್ಲಿ ಗ್ರಾಹಕರ ಮನಸ್ಸಿನಲ್ಲಿರುವ ಎಲ್ಲಾ ಪ್ರಶ್ನೆಗಳಿಗೂ ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಮಾಹಿತಿ ನೀಡಲಿದ್ದಾರೆ.
ಫ್ರೆಶ್ ಆಗಿ ಕಾಫಿ ಕುಡಿಯುತ್ತಾ!
ದಣಿದ ಮನಸ್ಸಿಗೆ ಒಂದು ಕಪ್ ಫ್ರೆಶ್ ಕಾಫಿ ಹೊಸ ಉಲ್ಲಾಸ ನೀಡದೇ ಇರಲಾರದು. ಮನಸ್ಸು ಫ್ರೆಶ್ ಆಗಿದ್ದರೆ ಯೋಚನೆಗಳು ಕೂಡ ಫ್ರೆಶ್ ಆಗಿರುತ್ತದೆ. ಕಾಫಿಯಿಂದ ವೈಜ್ಞಾನಿಕವಾಗಿಯೂ ಪ್ರಯೋಜನಗಳಿದ್ದು, ಮನಸ್ಸಿಗೆ ಬೋರ್ ಆಗುವುದನ್ನು ತಪ್ಪಿಸಲು ಅರೆನಾ ಡೀಲರ್ಸ್‌ಗಳಲ್ಲಿ ಗ್ರಾಹಕರಿಗೆ ಬಿಸಿ ಬಿಸಿ ಕಾಫಿ ಆಫರ್ ಮಾಡುತ್ತಿದೆ.
ಬೆರಳ ತುದಿಯಲ್ಲಿ ಮಾಹಿತಿ
ಅರೆನಾ ಡೀಲರ್ಸ್‌ಗಳಿಗೆ ಭೇಟಿ ನೀಡುವ ಗ್ರಾಹಕರು ಒಂದೇ ಸೂರಿನಡಿ ಎಲ್ಲಾ ಮಾಹಿತಿಗಳನ್ನು ಪಡೆಯುವಂತೆ ಹೊಸ ಸ್ಕೀನ್ ಅಳವಡಿಸಲಾಗಿದ್ದು, ಅಗತ್ಯ ಕಾರಿನ ಮಾಹಿತಿ, ಬೆಲೆ, ಬಣ್ಣ, ಎಂಜಿನ್ ಮಾಹಿತಿ, ಲೋನ್ ಲಭ್ಯತೆ ಮತ್ತು ಆಫರ್‌ಗಳ ಕುರಿತು ಸ್ಕೀನ್‌ಗಳಲ್ಲಿ ತಿಳಿದುಕೊಳ್ಳಬಹುದು.
ಜೊತೆಗೆ ಕಾರು ಖರೀದಿಗೆ ನೀವು ಒಪ್ಪಿಗೆ ಸೂಚಿಸಿದ್ದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಅಗತ್ಯ ದಾಖಲೆಗಳ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅರೆನಾ ಡೀಲರ್ಸ್ ಸಿಬ್ಬಂದಿಯು ಗ್ರಾಹಕರಿಗೆ ಸರಳ ರೀತಿಯಲ್ಲಿ ಮಾಹಿತಿ ನೀಡುವುದಲ್ಲದೇ ಕಸ್ಟಮರ್ ಸರ್ವೀಸ್ ವಿಚಾರವಾಗಿ ಸಾಕಷ್ಟು ಕಾಳಜಿ ವಹಿಸುತ್ತಾರೆ ಎನ್ನಬಹುದು. ಒಟ್ಟಿನಲ್ಲಿ ಅರೆನಾ ಡೀಲರ್ಸ್‌ಗಳಲ್ಲಿ ಗ್ರಾಹಕರ ಆದ್ಯತೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದರಿಂದ ಕಾರು ಖರೀದಿ ಮತ್ತಷ್ಟು ಸುಲಭವಾಗಿರುವುದಲ್ಲದೇ ಅರೆನಾದಲ್ಲಿ ಹೊಸ ತಂತ್ರಜ್ಞಾನಗಳ ಮತ್ತು ಗ್ರಾಹಕರ ಅಥಿತ್ಯ ಹೊಸ ಅನುಭವ ಆಗಲಿದೆ.