ಹೆಕ್ಟರ್, ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಎಸ್‍ಯುವಿ ಕಾರುಗಳ ಕಾಯುವಿಕೆಯ ಅವಧಿ ಪಟ್ಟಿ ಇಲ್ಲಿದೆ ನೋಡಿ

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರು ಸೆಡಾನ್ ಮತ್ತು ಎಂಪಿವಿ ಕಾರುಗಳಿಗಿಂತಲೂ ಹ್ಯಾಚ್‍‍ಬ್ಯಾಕ್ ಮತ್ತು ಎಸ್‍ಯುವಿ ಕಾರುಗಳನ್ನು ಖರೀದಿ ಮಾಡುತ್ತಿರುವ ಬಗ್ಗೆ ಪ್ರತ್ಯೇಕವಾಗಿ ನಾವು ಹೇಳಬೇಕಿಲ್ಲ. ಹೀಗಿರುವಾಗ ಪ್ರತೀ ತಿಂಗಳ ಕಾರು ಮಾರಾಟದಲ್ಲಿ ಹ್ಯಾಚ್‍‍ಬ್ಯಾಕ್ ಮತ್ತು ಎಸ್‍ಯುವಿ ಕಾರುಗಳು ಅಧಿಕ ಸಂಖ್ಯೆಯಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಿದೆ.

ಜನಪ್ರಿಯ ಎಸ್‍ಯುವಿ ಕಾರುಗಳ ಕಾಯುವಿಕೆಯ ಅವಧಿ ಪಟ್ಟಿ ಇಲ್ಲಿದೆ ನೋಡಿ

8 ಸೀಟರ್ ಎಂಪಿವಿ ಮತ್ತು 4 ಸೀಟರ್ ಹ್ಯಾಚ್‍‍ಬ್ಯಾಕ್ ಕಾರುಗಳನ್ನು ಖರೀದಿ ಮಾದುವ ಬದಲಿಗೆ 7 ಸೀಟರ್ ಮತ್ತು 5 ಸೀಟರ್ ಎಸ್‍ಯುವಿ ಕಾರುಗಳನ್ನೆ ಗ್ರಾಹಕರು ಖರೀದಿ ಮಾಡುತ್ತಿದ್ದಾರೆ. ಅದರಲ್ಲಿಯೂ ಟಾಟಾ ಮೋಟಾರ್ಸ್ ಸಂಸ್ಥೆಯು ಬಿಡುಗಡೆ ಮಾಡಿದ ಹ್ಯಾರಿಯರ್ ಎಸ್‍ಯುವಿ ಮತ್ತು ಎಂಜಿ ಮೋಟಾರ್ಸ್ ಸಂಸ್ಥೆಯ ಹೆಕ್ಟರ್ ಎಸ್‍ಯುವಿ ಕಾರುಗಳು ಅಧಿಕ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆಯುತ್ತಿದ್ದು, ಈ ಕಾರುಗಳ ಕಾಯುವಿಕೆಯ ಅವಧಿ ಗ್ರಾಹಕರಿಗೆ ಅವರ ತಾಳ್ಮೆ ಪರಿಶೀಲಿಸುತ್ತಿದೆ.

ಜನಪ್ರಿಯ ಎಸ್‍ಯುವಿ ಕಾರುಗಳ ಕಾಯುವಿಕೆಯ ಅವಧಿ ಪಟ್ಟಿ ಇಲ್ಲಿದೆ ನೋಡಿ

ಏಕೆಂದರೆ ಎಂಜಿ ಮೋಟಾರ್ ಸಂಸ್ಥೆಯು ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾದ ಹೆಕ್ಟರ್ ಎಸ್‍ಯುವಿ ಕಾರು ಇಲ್ಲಿಯವರೆಗು ಸುಮಾರು 28000ಕ್ಕು ಅಧಿಕ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದುಕೊಂಡಿದ್ದು, ಈ ವರ್ಷದ ಬುಕ್ಕಿಂಗ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಜನಪ್ರಿಯ ಎಸ್‍ಯುವಿ ಕಾರುಗಳ ಕಾಯುವಿಕೆಯ ಅವಧಿ ಪಟ್ಟಿ ಇಲ್ಲಿದೆ ನೋಡಿ
Cities MG Hector Jeep Compass Tata Harrier
New Delhi 6 months No waiting 3 months
Bengaluru 6 months No waiting 2 weeks
Mumbai 7 months 2 weeks 2 months
Hyderabad 7 months 2 weeks 10 days
Pune 6 months No waiting 1 month
Chennai 6 months 3 weeks 2 weeks
Jaipur 7 months 2 weeks 45 days
Ahmedabad 6 months 20 days 20 days
Gurugram 6 months 1 week 4 weeks
Lucknow 6 months 1 week 1 month
Kolkata 7 months 2 weeks 1 month
Thane 7 months 2 weeks 2 months
Surat 8 months No waiting 1 month
Ghaziabad 6 months No waiting
Chandigarh 6 months 2 weeks 6 weeks
Patna 6 months 2 weeks No waiting
Coimbatore 6 months 2 weeks 3 weeks
Faridabad 6 months No waiting
Indore 6 months 1 week No waiting
Noida 6 months 15 days
ಜನಪ್ರಿಯ ಎಸ್‍ಯುವಿ ಕಾರುಗಳ ಕಾಯುವಿಕೆಯ ಅವಧಿ ಪಟ್ಟಿ ಇಲ್ಲಿದೆ ನೋಡಿ

ಎಂಜಿ ಹೆಕ್ಟರ್ ಕಾರು ಊಹಿಸಲಾಗದಷ್ಟು ಬುಕ್ಕಿಂಗ್ ಪಡೆದ ಕಾರಣ ಹೆಕ್ಟರ್ ಕಾರನ್ನು ಬುಕ್ಕಿಂಗ್ ಮಾಡಿಕೊಂಡ ಗ್ರಾಹಕರು ಸುಮಾರು 6 ತಿಂಗಳ ವರೆಗೂ ಕಾಯಬೇಕಾಗಿದ್ದು, ಇನ್ನು ಕೆಲವು ರಾಜ್ಯಗಳಲ್ಲಿ ಸುಮಾರು 7 ರಿಂದ 8 ತಿಂಗಳು ಕಾಯಬೇಕಿದೆ. ಇನ್ನು ಟಾಟಾ ಹ್ಯಾರಿಯರ್ ಕಾರುಗಳನ್ನು ಬುಕ್ಕಿಂಗ್ ಮಾಡಿಕೊಂಡ ಗ್ರಾಹಕರು ಸುಮಾರು 2 ತಿಂಗಳು ಕಾಯೇಬೇಕಾಗಿದ್ದು, ಕೆಲವು ರಾಜ್ಯಗಳಲ್ಲಿ ಕಾಯುವಿಕೆಯ ಅವಧಿ ಬೇಕಾಗಿಲ್ಲ ಎಂದು ಕೂಡಾ ಹೇಳಲಾಗುತ್ತಿದೆ.

ಜನಪ್ರಿಯ ಎಸ್‍ಯುವಿ ಕಾರುಗಳ ಕಾಯುವಿಕೆಯ ಅವಧಿ ಪಟ್ಟಿ ಇಲ್ಲಿದೆ ನೋಡಿ

ಇನ್ನು ಕಾಂಪ್ಯಾಕ್ಟ್ ಎಸ್‍ಯುವಿ ಕಾರುಗಳ ಸೆಗ್ಮೆಂಟ್‍ನಲ್ಲಿರುವ ಜೀಪ್ ಕಂಪಾಸ್ ಟ್ರೈಲ್‍‍ಹ್ವಾಕ್ ಕಾರುಗಳಿಗಾಗಿ ಸುಮಾರು 1 ರಿಂದ 2 ತಿಂಗಳು, ಹ್ಯುಂಡೈ ಟಕ್ಸನ್ ಕಾರು ಕೈ ಸೇರಲು ಸುಮಾರು 1 ತಿಂಗಳು, ಮಹೀಂದ್ರಾ ಎಕ್ಸ್‌ಯುವಿ 500 ಕೈ ಸೇರಲು ಸುಮಾರು 1 ತಿಂಗಳು ಮತ್ತು ಟಾಟಾ ಹೆಕ್ಸಾ ಕಾರುಗಳು ಕೈ ಸೇರಲು ಸುಮಾರು 3 ವಾರಗಳ ಸಮಯ ಬೇಕಾಗಬಹುದು.

ಜನಪ್ರಿಯ ಎಸ್‍ಯುವಿ ಕಾರುಗಳ ಕಾಯುವಿಕೆಯ ಅವಧಿ ಪಟ್ಟಿ ಇಲ್ಲಿದೆ ನೋಡಿ

ಎಂಜಿ ಹೆಕ್ಟರ್ ಕಾರಿನ ಬೆಲೆ

ಮಾರುಕಟ್ಟೆಗೆ ಲಗ್ಗೆಯಿಟ್ಟ ಎಂಜಿ ಹೆಕ್ಟರ್ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 12.18 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು ಈ ಕಾರಿನ ಟಾಪ್ ಎಂಡ್ ಮಾದರಿಯು ಎಕ್ಸ್ ಶೋರುಂ ಪ್ರಕಾರ ರೂ. 16.68 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಈ ಕಾರಿನ ಪೆಟ್ರೋಲ್ ಡಿಸಿಟಿ ಮಾಡಲ್‍ಗಳಿಗೆ ಡಿಮ್ಯಾಂಡ್ ಹೆಚ್ಚಿದೆ.

MOST READ:ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಜನಪ್ರಿಯ ಎಸ್‍ಯುವಿ ಕಾರುಗಳ ಕಾಯುವಿಕೆಯ ಅವಧಿ ಪಟ್ಟಿ ಇಲ್ಲಿದೆ ನೋಡಿ

ಎಂಜಿ ಹೆಕ್ಟರ್ ಇಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಪಡೆಯಲು ಪ್ರಮುಖ ಕಾರಣವೆಂದರೆ ಫರ್ಸ್ಟ್ ಕ್ಲಾಸ್ ಫೀಚರ್ಸ್, ಪವರ್‍‍ಫುಲ್ ಎಂಜಿನ್, ಬೈಯ್‌ಬ್ಯಾಕ್ ಗ್ಯಾರೆಂಟಿ, 5 ವರ್ಷದ ವಾರೆಂಟಿ/ಅನಿಯಮಿತ 1 ಲಕ್ಷ ಕಿಲೋಮೀಟರ್‍, 5 ವರ್ಷದ ವರೆಗು ಲೇಬರ್ ಫ್ರೀ ಸರ್ವೀಸ್ ಎಂಬ ಆಕರ್ಷಕ ಕೊಡುಗೆಗಳನ್ನು ಸಹ ನೀಡುತ್ತಿದೆ.

MOST READ: ಎಕ್ಸ್‌ಪ್ರೆಸ್‌ವೇಗಳಲ್ಲಿ ಎದುರಾಗುವ ಅಪಾಯಕಾರಿ ಸಂಗತಿಗಳಿವು..!

ಜನಪ್ರಿಯ ಎಸ್‍ಯುವಿ ಕಾರುಗಳ ಕಾಯುವಿಕೆಯ ಅವಧಿ ಪಟ್ಟಿ ಇಲ್ಲಿದೆ ನೋಡಿ

ಟಾಟಾ ಹ್ಯಾರಿಯರ್ ಬೆಲೆ

ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ ಹ್ಯಾರಿಯರ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರನ್ನು ಜನವರಿ 2019ರಲ್ಲಿ ಬಿಡುಗಡೆ ಮಾಡಲಾಗಿದ್ದು, ಕಳೆದ ತಿಂಗಳು ಮೊದಲ್ ಬಾರಿಗೆ ಬೆಲೆಯಲ್ಲಿ ಏರಿಕೆಯನ್ನು ಕಂಡಿತ್ತು. ಟಾಟಾ ಹ್ಯಾರಿಯರ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಎಕ್ಸ್ ಶೋರುಂ ಪ್ರಕಾರ ರೂ. 13 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

MOST READ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಾಹನಗಳಿಗೆ ಹೊಸ ರೂಲ್ಸ್..!

ಜನಪ್ರಿಯ ಎಸ್‍ಯುವಿ ಕಾರುಗಳ ಕಾಯುವಿಕೆಯ ಅವಧಿ ಪಟ್ಟಿ ಇಲ್ಲಿದೆ ನೋಡಿ

ಎಂಜಿ ಹೆಕ್ಟರ್ ಎಂಜಿನ್ ಸಾಮರ್ಥ್ಯ

ಎಂಜಿನ್ ಸಾಮರ್ಥ್ಯ ಹೆಕ್ಟರ್ ಹೊಸ ಕಾರು ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 143-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮೂಲಕ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಜನಪ್ರಿಯ ಎಸ್‍ಯುವಿ ಕಾರುಗಳ ಕಾಯುವಿಕೆಯ ಅವಧಿ ಪಟ್ಟಿ ಇಲ್ಲಿದೆ ನೋಡಿ

ಇದರಲ್ಲಿ ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈ ಎಂಡ್ ಆವೃತ್ತಿಯಲ್ಲಿ 48ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಜೋಡಿಸಲಾಗಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಹೆಚ್ಚಿನ ಮಟ್ಟದ ಇಂಧನ ಕಾರ್ಯಕ್ಷಮತೆಯನ್ನು ಕಾಯ್ದಕೊಳ್ಳಲು ನೆರವಾಗಲಿದೆ.

ಜನಪ್ರಿಯ ಎಸ್‍ಯುವಿ ಕಾರುಗಳ ಕಾಯುವಿಕೆಯ ಅವಧಿ ಪಟ್ಟಿ ಇಲ್ಲಿದೆ ನೋಡಿ

ಟಾಟಾ ಹ್ಯಾರಿಯರ್ ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

ಜನಪ್ರಿಯ ಎಸ್‍ಯುವಿ ಕಾರುಗಳ ಕಾಯುವಿಕೆಯ ಅವಧಿ ಪಟ್ಟಿ ಇಲ್ಲಿದೆ ನೋಡಿ

ಎಂಜಿ ಹೆಕ್ಟರ್ ಸೇಫ್ಟಿ ಫೀಚರ್ಸ್

ಹೆಕ್ಟರ್ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಆರ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್ ಜೊತೆಗೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಡಿಫಾಗರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ISOFIX ಚೈಲ್ಡ್-ಸೀಟ್ ಮೌಂಟ್ಸ್ ಸೌಲಭ್ಯ ನೀಡಲಾಗಿದೆ.

ಜನಪ್ರಿಯ ಎಸ್‍ಯುವಿ ಕಾರುಗಳ ಕಾಯುವಿಕೆಯ ಅವಧಿ ಪಟ್ಟಿ ಇಲ್ಲಿದೆ ನೋಡಿ

ಟಾಟಾ ಹ್ಯಾರಿಯರ್ ಸೇಫ್ಟಿ ಫೀಚರ್ಸ್

ಟಾಟಾ ಹ್ಯಾರಿಯರ್ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

Source: Cartoq

Most Read Articles

Kannada
English summary
MG Hector Waiting Period Highest Among Competitors India Details. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X