Just In
- 18 hrs ago
ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಭರ್ಜರಿ ಸಿದ್ದತೆ- 100 ಹೊಸ ಮಾರಾಟ ಮಳಿಗೆಗಳನ್ನು ತೆರೆಯಲಿದೆ ಟಾಟಾ
- 1 day ago
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- 1 day ago
ಗ್ರಾಹಕರ ಕೈಸೇರಲು ಸಿದ್ದವಾದ ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0
- 1 day ago
ಆಟೋ ಮಾರುಕಟ್ಟೆ ಕುಸಿತದ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ
Don't Miss!
- Sports
ಏಕದಿನ ಸರಣಿ; ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿದ ವಿಂಡೀಸ್
- News
ಪೌರತ್ವ ಕಾಯ್ದೆ ಬಗ್ಗೆ ಮಾತಾಡಲ್ಲ, ಸಿದ್ದಾಂತವೇ ಬೇರೆ, ಸರ್ಕಾರವೇ ಬೇರೆ
- Finance
ಶಬರಿಮಲೆ ಅಯ್ಯಪ್ಪ ದೇವಳದಲ್ಲಿ 28 ದಿನದಲ್ಲಿ 104 ಕೋಟಿ ರು. ಸಂಗ್ರಹ
- Movies
ವಂಚನೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ 'ಲವ್ ಗುರು' ನಿರ್ದೇಶಕ
- Technology
ಆನ್ಲೈನ್ ಜಾಹೀರಾತುಗಳಿಂದ ಬೇಸರವಾಗಿದ್ದೀರಾ..? ಇಲ್ಲಿದೆ ಪರಿಹಾರ..!
- Lifestyle
ವಾರ ಭವಿಷ್ಯ- ಡಿಸೆಂಬರ್ 15ರಿಂದ ಡಿಸೆಂಬರ್ 21ರ ತನಕ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ನವೆಂಬರ್ 17ರಂದು ಬಿಡುಗಡೆಯಾಗಲಿದೆ ಮಸ್ಟಾಂಗ್ ಮಾಚ್ ಇ ಕಾರು
ಫೋರ್ಡ್ ತನ್ನ ಟೆಸ್ಲಾ ಮಾಡೆಲ್ ವೈ ಕಾರಿನ ಪ್ರತಿಸ್ಪರ್ಧಿಯಾದ ಮಸ್ಟಾಂಗ್ ಮಾಚ್-ಇ ಕಾರಿನ ಅನಾವರಣವು ನವೆಂಬರ್ 17 ರಂದು ನಡೆಯಲಿದೆ ಎಂದು ಅಧಿಕೃತವಾಗಿ ದೃಢಪಡಿಸಿದೆ. ಈ ಮೊದಲು ಈ ಎಲೆಕ್ಟ್ರಿಕ್ ಕಾರ್ ಅನ್ನು ಮಸ್ಟಾಂಗ್ ಪ್ರೇರಿತ ಎಲೆಕ್ಟ್ರಿಕ್ ಎಸ್‌ಯುವಿ ಎಂದು ಕರೆಯಲಾಗುತ್ತಿತ್ತು.

ಮಸ್ಟಾಂಗ್ ಮಾಚ್ ಇ ಯ ಹೊಸ ಚಿತ್ರಗಳನ್ನು ಕಂಪನಿಯ ವೆಬ್‍ಸೈಟಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಮಸ್ಟಾಂಗ್, ಕಾರುಗಳ ಇತಿಹಾಸದಲ್ಲಿರುವ ಅತ್ಯಂತ ಪ್ರಸಿದ್ಧವಾದ ಹಾಗೂ ಜನಪ್ರಿಯವಾದ ಹೆಸರುಗಳಲ್ಲಿ ಒಂದಾಗಿದೆ.

ಕಂಪನಿಯು ಈಗ ಮಾಚ್-ಇಯನ್ನು ಬಿಡುಗಡೆಗೊಳಿಸುವುದರೊಂದಿಗೆ ಮತ್ತಷ್ಟು ಜನಪ್ರಿಯವಾಗಲು ಬಯಸಿದೆ. ಮುಂಚಿನ, ಮಸ್ಟಾಂಗ್ ಹೆಸರಿನ ವಿರುದ್ಧ ಸಾರ್ವಜನಿಕರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.

ಎಲೆಕ್ಟ್ರಿಕ್ ವಾಹನಕ್ಕೆ ಸೂಕ್ತವೆಂಬ ಕಾರಣಕ್ಕೆ ಈ ಕಾರಿಗೆ ಮಾಚ್ 1 ಎಂಬ ಹೆಸರಿಡಲಾಗಿದೆ. ಕಂಪನಿಯು, ಸಾರ್ವಜನಿಕರ ವಿರೋಧಗಳ ನಡುವೆಯೂ ಮಾಚ್ - ಇ ಎಂಬ ಹೆಸರಿನೊಂದಿಗೆ ಹೋಗಲು ನಿರ್ಧರಿಸಿದೆ.

ಹೊರಭಾಗದಲ್ಲಿ, ಫೋರ್ಡ್ ಮಸ್ಟಾಂಗ್ ಮಾಚ್-ಇ ಮಾರುಕಟ್ಟೆಯಲ್ಲಿರುವ ಮಸ್ಟಾಂಗ್‍ನಿಂದ ಕೆಲವು ವಿನ್ಯಾಸಗಳನ್ನು ತೆಗೆದುಕೊಂಡಿರುವಂತೆ ತೋರುತ್ತದೆ. ಮಾಚ್-ಇ ಕಾರು ಉದ್ದನೆಯ ಹುಡ್ ಹಾಗೂ ವಿಶಾಲ ಹಿಂಭಾಗದ ಹಾಂಚ್‌ಗಳನ್ನು ಹೊಂದಿದೆ.

ಮುಂಭಾಗದಲ್ಲಿ, ಹೊಸ ಕ್ಲೋಸ್ಡ್-ಆಫ್ ಮುಖ್ಯ ಗ್ರಿಲ್ ಅನ್ನು ಹೊಂದಿದೆ. ಇದು ಫ್ಯೂಚರಿಸ್ಟಿಕ್ ಲುಕಿಂಗ್ ಎಲ್ಇಡಿ ಡಿಆರ್‍ಎಲ್‍ಗಳನ್ನು ಒಳಗೊಂಡ ನಯವಾದ ಸ್ವೀಪ್-ಬ್ಯಾಕ್ ಹೆಡ್‍ಲ್ಯಾಂಪ್‍ಗಳಿಂದ ಸುತ್ತುವರೆದಿದೆ.

ಒಟ್ಟಾರೆಯಾಗಿ ಇದು ಕ್ರಾಸ್ಒವರ್ ತರಹದ ವಿನ್ಯಾಸವನ್ನು ಹೊಂದಿದೆ. ದ್ರವರೂಪದ ಹಾಗೂ ಸ್ಮೂತ್ ಡಿಸೈನಿನ ರೇಖೆಗಳು ಈ ಕಾರಿಗೆ ಆಕರ್ಷಕ ನೋಟವನ್ನು ನೀಡುತ್ತವೆ. ವೆಬ್‌ಸೈಟ್‍ಗಳಲ್ಲಿರುವ ಚಿತ್ರಗಳಲ್ಲಿ ಕಂಡುಬಂದಂತೆ, ಫೋರ್ಡ್ ಮಸ್ಟಾಂಗ್ ಮಾಚ್-ಇ ಎಲೆಕ್ಟ್ರಿಕ್ ಎಸ್‌ಯುವಿ ಒಳಭಾಗದಲ್ಲಿ ಕಡಿಮೆ ವಿನ್ಯಾಸವನ್ನು ಹೊಂದಿದೆ.
MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ವರ್ಟಿಕಲ್ ಆಗಿ ಜೋಡಿಸಲಾದ ದೊಡ್ಡದಾದ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ಡ್ಯಾಶ್‌ಬೋರ್ಡ್‌ನ ಮಧ್ಯಭಾಗದಲ್ಲಿಡಲಾಗಿದೆ. ಇದರ ಜೊತೆಗೆ ಆಕರ್ಷಕವಾಗಿ ಕಾಣುವ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಆಧುನಿಕವಾಗಿ ಕಾಣುವ ಇಂಟಿರಿಯರ್ ಸ್ಪೇಸ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ.
MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಈ ತಿಂಗಳ 17ರಂದು ಹೊಸ ಕಾರಿನ ಬುಕ್ಕಿಂಗ್‍ಗಳು ಅಮೇರಿಕಾ ಹಾಗೂ ಯುರೋಪ್‍ನಲ್ಲಿ ಆರಂಭವಾಗಲಿದೆಯೆಂದು ಕಂಪನಿಯು ಹೇಳಿದೆ. ಚೀನಾದ ಮಾರುಕಟ್ಟೆಯಲ್ಲಿ ಈ ಕಾರಿನ ಬಿಡುಗಡೆಯು ಇನ್ನೂ ತಡವಾಗಲಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಡಬ್ಲ್ಯುಎಲ್‌ಟಿಪಿ ಪ್ರಮಾಣಪತ್ರದಂತೆ ಮಸ್ಟಾಂಗ್ ಮಾಚ್-ಇ ಕಾರ್ ಅನ್ನು ಒಂದು ಬಾರಿಗೆ ಚಾರ್ಜ್ ಮಾಡಿದರೆ 595 ಕಿ.ಮೀ ದೂರ ಚಲಿಸುತ್ತದೆ. ಟೆಕ್ನಿಕಲ್ ವಿಶೇಷತೆ ಹಾಗೂ ಇತರ ಮಾಹಿತಿಗಳನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಹೊಸ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ.