ಸೆಪ್ಟೆಂಬರ್‍ನಲ್ಲಿ ಬಿಡುಗಡೆಯಾಗಲಿರುವ ಕಾರುಗಳಿವು
ಭಾರತದ ಆಟೋ ಮೊಬೈಲ್ ಉದ್ಯಮವು ನಿರಂತರವಾಗಿ ಕುಸಿತವನ್ನು ಕಾಣುತ್ತಿದೆ. ಕಾರು ತಯಾರಕ ಕಂಪನಿಗಳು ತಮ್ಮ ಹೊಸ ವಾಹನಗಳನ್ನು ಕೈಗೆಟಕುವ ದರದಲ್ಲಿ ಮಾರಾಟ ಮಾಡುತ್ತಿವೆ. ಹಳೆಯ ವಾಹನಗಳ ಮೇಲೆ ಭಾರೀ ಪ್ರಮಾಣದ ರಿಯಾಯಿತಿಯನ್ನು ನೀಡುತ್ತಿವೆ. ಹಬ್ಬಗಳ ಈ ಸಮಯದಲ್ಲಿ ಹಲವು ಕಂಪನಿಗಳು ವಿಶೇಷ ರಿಯಾಯಿತಿಯನ್ನು ನೀಡುತ್ತಿವೆ.

ಈ ತಿಂಗಳು ಹ್ಯುಂಡೈ ಗ್ರಾಂಡ್ ಐ10 ನಿಯೊಸ್, ಮಾರುತಿ ಸುಜುಕಿ ಎಕ್ಸ್ ಎಲ್ 6, ಕಿಯಾ ಸೆಲ್ಟೋಸ್, ಬಿಎಂಡಬ್ಲ್ಯು 3 ಸೀರಿಸ್ ಸೇರಿದಂತೆ ಹಲವಾರು ಕಾರುಗಳನ್ನು ಬಿಡುಗಡೆಗೊಳಿಸಲಾಯಿತು. ಕಾರುಗಳ ಮಾರುಕಟ್ಟೆಯು ಕುಸಿತ ಕಾಣುತ್ತಿರುವ ನಡುವೆಯು ಕಂಪನಿಗಳು ತಮ್ಮ ಹೊಸ ಕಾರುಗಳಿಗೆ ಗಣನೀಯ ಪ್ರಮಾಣದ ಬುಕ್ಕಿಂಗ್‍ಗಳನ್ನು ಪಡೆದಿವೆ. ಸೆಪ್ಟೆಂಬರ್‍ನಲ್ಲಿಯೂ ಸಹ ಆಡಿ, ಹ್ಯುಂಡೈ, ಮಾರುತಿ ಸುಜುಕಿ, ರೆನಾಲ್ಟ್ ಹಾಗೂ ಟಾಟಾ ಕಂಪನಿಗಳು ತಮ್ಮ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿವೆ. ಮುಂದಿನ ತಿಂಗಳು ಯಾವ ಕಂಪನಿಗಳು ಯಾವ ಕಾರುಗಳನ್ನು ಬಿಡುಗಡೆಗೊಳಿಸಲಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಆಡಿ
ಆಡಿ ಎ6 ಕಾರಿನ ಎಂಟನೇ ತಲೆಮಾರಿನ ಕಾರ್ ಅನ್ನು ಈ ವರ್ಷ ಜಿನಿವಾದಲ್ಲಿ ನಡೆದ ಮೋಟಾರ್ ಶೋದಲ್ಲಿ ಪ್ರದರ್ಶಿಸಲಾಗಿತ್ತು. ಈ ಕಾರು ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಈ ಕಾರ್ ಅನ್ನು ಈಗಾಗಲೇ ಹಲವು ಬಾರಿ ಭಾರತದ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಹೊಸ ಆಡಿ ಎ6 ಕಾರಿನಲ್ಲಿ ಮೈಲ್ಡ್ ಹೈಬ್ರಿಡ್ ಎಂಜಿನ್ ಸಿಸ್ಟಂ ಅಳವಡಿಸಲಾಗಿದೆ.

ಈ ಸೆಡಾನ್ ಕಾರ್ ಅನ್ನು ಮೂರು ವಿ6 ಎಂಜಿನ್‍ಗಳಲ್ಲಿ ಮಾರಾಟ ಮಾಡಲಾಗುವುದು. ಹೊಸ ಆಡಿ ಎ6 ಕಾರಿನಲ್ಲಿ, ಪೂರ್ಣ ಸರಣಿಯ ನ್ಯಾವಿಗೇಶನ್, ಎರಡು 8.6 ಇಂಚಿನ ಇನ್ಫೋಟೇನ್ ಮೆಂಟ್ ಸ್ಕ್ರೀನ್, ಆಡಿ ಕನೆಕ್ಟ್, ವಾಯ್ಸ್ ಕಂಟ್ರೋಲ್, ಟಾಪ್ ಮಾದರಿಯ ಕಾರುಗಳಲ್ಲಿ ಬ್ಯಾಂಗ್ ಹಾಗೂ ಆಲ್ಫ್ ಸೆನ್ ಅಡ್ವಾನ್ಸ್ಡ್ ಸೌಂಡ್ ಸೇರಿದಂತೆ ಹಲವಾರು ಫೀಚರ್‍ಗಳಿರಲಿವೆ.

ಹ್ಯುಂಡೈ
ಹ್ಯುಂಡೈ ಎಲಾಂಟ್ರಾ ಕಾರಿನ ನವೀಕೃತ ಆವೃತ್ತಿಯನ್ನು ಈಗಾಗಲೇ ಹಲವಾರು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಈ ಕಾರು ಸಹ ಸೆಪ್ಟೆಂಬರ್‍ನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಕಾರಿನಲ್ಲಿ ಬಿಎಸ್ 6 ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳುವಂತಹ 1.6 ಲೀಟರ್ ಹಾಗೂ 2.0 ಲೀಟರ್‍ನ ಪೆಟ್ರೋಲ್ ಎಂಜಿನ್‍ಗಳಿರಲಿವೆ.

2019ರ ಹೊಸ ಹ್ಯುಂಡೈ ಎಲಾಂಟ್ರಾ ಕಾರಿನಲ್ಲಿ 8 ಇಂಚಿನ ಟಚ್‍ಸ್ಕ್ರೀನ್ ಇನ್‍ಫೋಟೇನ್ ಮೆಂಟ್ ಸಿಸ್ಟಂ, ವೈರ್‍ಲೆಸ್ ಚಾರ್ಜಿಂಗ್, ಅಟನಾಮಸ್ ಬ್ರೇಕಿಂಗ್, ಲೇನ್ ಡಿಪಾರ್ಚರ್ ವಾರ್ನಿಂಗ್ ಸಿಸ್ಟಂ ಹಾಗೂ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಂಗಳಿರಲಿವೆ.

ಮಾರುತಿ ಸುಜುಕಿ
ಮಾರುತಿ ಸುಜುಕಿ ಕಂಪನಿಯು ಈ ವರ್ಷದ ತನ್ನ ಬಹು ದೊಡ್ಡ ಬಿಡುಗಡೆಯಾಗಿ ಹೊಸ ಎಸ್ ಪ್ರೆಸ್ಸೊ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಕಾನ್ಸೆಪ್ಟ್ ಫ್ಯೂಚರ್ ಎಸ್‍ನ ಆಧಾರದ ಮೇಲೆ ನಿರ್ಮಾಣವಾಗಿರುವ ಈ ಮೈಕ್ರೊ ಎಸ್‍ಯುವಿಯು ಹೊಸ ಡಿಸೈನ್ ಲ್ಯಾಂಗ್ವೇಜ್, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ಟಾಲ್ ಪಿಲ್ಲರ್‍ಗಳನ್ನು ಹೊಂದಿದೆ.
MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಎಸ್ ಪ್ರೆಸ್ಸೊ, ಮಾರುತಿ ಸುಜುಕಿ ಕಂಪನಿಯ ಮೊದಲ ಬಿಎಸ್ 6 ಎಂಜಿನ್ ಹೊಂದಿರುವ ಕಾರ್ ಆಗಿರಲಿದೆ. ಈ ಕಾರಿನಲ್ಲಿ ಬಿಎಸ್ 6ನ 1.0 ಲೀಟರಿನ ಎಂಜಿನ್ ಅಳವಡಿಸಲಾಗಿದೆ. ಈ ಕಾರಿನಲ್ಲಿ ಡ್ಯೂಯಲ್ ಏರ್‍ಬ್ಯಾಗ್, ಎಬಿಎಸ್, ಇಬಿಡಿ, ರೇರ್ ಪಾರ್ಕಿಂಗ್ ಸೆನ್ಸಾರ್ ಹಾಗೂ ಸ್ಪೀಡಿಂಗ್ ಅಲಾರಂಗಳಿರಲಿವೆ. ಈ ಕಾರ್ ಅನ್ನು ಸೆಪ್ಟೆಂಬರ್ 30ರಂದು ಬಿಡುಗಡೆಗೊಳಿಸಲಾಗುವುದು.
MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ರೆನಾಲ್ಟ್
ಕಳೆದ ಬಾರಿ ಬಿಡುಗಡೆಯಾಗಿದ್ದ ರೆನಾಲ್ಟ್ ಕಂಪನಿಯ ಕಾರುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿರಲಿಲ್ಲ. ಆದ ಕಾರಣ ಕಂಪನಿಯು ಈ ಬಾರಿ ಹೆಚ್ಚಿನ ಪ್ರಮಾಣದ ಮಾರಾಟಕ್ಕೆ ಒತ್ತು ನೀಡುತ್ತಿದೆ. ರೆನಾಲ್ಟ್ ಕಂಪನಿಯು ಈ ಬಾರಿ ಕ್ವಿಡ್ ಕಾರಿನ ನವೀಕೃತ ಕಾರ್ ಅನ್ನು ಬಿಡುಗಡೆಗೊಳಿಸುತ್ತಿದೆ.
MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಈ ಕಾರ್ ಅನ್ನು ಬಿಎಸ್ 6 ಆಧಾರಿತವಾದ 0.8 ಲೀಟರ್ ಹಾಗೂ 1.0 ಲೀಟರಿನ ಪೆಟ್ರೋಲ್ ಎಂಜಿನ್‍ಗಳಲ್ಲಿ ಮಾರಾಟ ಮಾಡಲಾಗುವುದು. ಹೊಸ ರೆನಾಲ್ಟ್ ಕ್ವಿಡ್ ಕಾರಿನ ಮುಂಭಾಗದಲ್ಲಿ ಕೆ ಝಡ್‍ಇ ಕಾನ್ಸೆಪ್ಟ್ ವಾಹನದಲ್ಲಿದ್ದಂತಹ ಫಾಸ್ಕಿಯಾ ಅಳವಡಿಸಲಾಗುವುದು. ಹೊಸ ಕಾರಿನ ಇಂಟಿರಿಯರ್‍ನಲ್ಲಿ ಹಲವು ನವೀಕೃತ ವಿನ್ಯಾಸಗಳಿರಲಿದ್ದು, ಆರಾಮದಾಯಕ ಅನುಭವವನ್ನು ನೀಡಲಿದೆ.

ಟಾಟಾ
ಟಾಟಾ ಹ್ಯಾರಿಯರ್‍ನ ಡಾರ್ಕ್ ಎಡಿಷನ್ ಕಾರ್ ಅನ್ನು ಸಹ ಸೆಪ್ಟೆಂಬರ್‍ನಲ್ಲಿ ಬಿಡುಗಡೆಗೊಳಿಸಲಾಗುವುದು. ಹೊಸ ಕಪ್ಪು ಬಣ್ಣದಿಂದಾಗಿ ಟಾಟಾ ಹ್ಯಾರಿಯರ್ ಹೆಚ್ಚು ಆಕರ್ಷಕವಾಗಿ ಕಾಣುತ್ತಿದೆ. ಈ ಹೊಸ ಕಾರ್ ಅನ್ನು ಎಕ್ಸ್ ಟಿ ಹಾಗೂ ಎಕ್ಸ್ ಝಡ್ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಹ್ಯಾರಿಯರ್ ಡಾರ್ಕ್ ಎಡಿಷನ್ ಕಾರಿನಲ್ಲಿ ಅಳವಡಿಸಲಾಗಿರುವ 2.0 ಲೀಟರಿನ ಕೈರೊಟೆಕ್ ಎಂಜಿನ್ 170 ಬಿಹೆಚ್‍ಪಿ ಪವರ್ ಹಾಗೂ 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿರುವ ಪ್ರತಿಯೊಂದು ಬಿಡಿಭಾಗಗಳು ಕಪ್ಪು ಬಣ್ಣವನ್ನು ಹೊಂದಿವೆ. ಆದರೆ ಡ್ಯಾಶ್‍ಬೋರ್ಡ್ ಮೇಲಿರುವ ಫಾಕ್ಸ್ ವುಡ್ ಪ್ಯಾನೆಲ್ ಡಾರ್ಕ್ ಗ್ರೇ ಬಣ್ಣವನ್ನು ಹೊಂದಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ನಿರಂತರ ಕುಸಿತವನ್ನು ಕಾಣುತ್ತಿರುವ ಆಟೋಮೊಬೈಲ್ ಉದ್ಯಮಕ್ಕೆ ಒಂದೇ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿರುವ ಐದು ಹೊಸ ಕಾರುಗಳು ಹೊಸ ಚೈತನ್ಯವನ್ನು ನೀಡುವ ಸಾಧ್ಯತೆಗಳಿವೆ. ಹಬ್ಬದ ವೇಳೆಗೆ ಅಕ್ಟೋಬರ್‍ನಲ್ಲಿ ಇನ್ನೂ ಹಲವಾರು ಹೊಸ ಕಾರುಗಳು ಬಿಡುಗಡೆಯಾಗುವ ನಿರೀಕ್ಷೆಗಳಿವೆ.


Click it and Unblock the Notifications