ಹೊಸ ಸುರಕ್ಷಾ ಮಾರ್ಗಸೂಚಿಗೆ ಅನುಗುಣವಾಗಿ ಬಿಡುಗಡೆಯಾದ ಫೋರ್ಸ್ ಗೂರ್ಖಾ
ಫೋರ್ಸ್ ಸಂಸ್ಥೆಯು ತನ್ನ ಜನಪ್ರಿಯ ಆಫ್ ರೋಡ್ ಕಾರು ಮಾದರಿಯಾದ ಗೂರ್ಖಾ ಆವೃತ್ತಿಯನ್ನು ಕೇಂದ್ರ ಸರ್ಕಾರದ ಹೊಸ ಸುರಕ್ಷಾ ನಿಯಮದಡಿ ಉನ್ನತಿಕರಿಸಿದ್ದು, ಎಬಿಎಸ್ ಸೇರಿದಂತೆ ಕೆಲವು ಹೊಸ ಫೀಚರ್ಸ್‌ಗಳನ್ನು ಜೋಡಣೆ ಮಾಡಿ ಮರುಬಿಡುಗಡೆಗೊಳಿಸಿದೆ.

ಸದ್ಯ ಮಾರುಕಟ್ಟೆಯಲ್ಲಿ ಫೋರ್ಸ್ ಗೂರ್ಖಾ ಕಾರುಗಳು ಮೂರು ಪ್ರಮುಖ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್‌ಪ್ಲೊರರ್, ಎಕ್ಸ್‌ಟ್ರಿಮ್ ಮತ್ತು ಎಕ್ಸ್‌ಪ್ಯಾಂಡೆಷನ್ ಆವೃತ್ತಿಗಳು ಖರೀದಿಗೆ ಲಭ್ಯವಿವೆ. ಹೀಗಾಗಿ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಎಕ್ಸ್‌ಪ್ಲೊರರ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ, 11.05 ಲಕ್ಷ, ಎಕ್ಸ್‌ಟ್ರಿಮ್ ಬೆಲೆಯನ್ನು ರೂ.12.55 ಲಕ್ಷಕ್ಕೆ ಮತ್ತು ಎಕ್ಸ್‌ಪ್ಯಾಂಡೆಷನ್ ಬೆಲೆಯನ್ನು ರೂ.13.30 ಲಕ್ಷಕ್ಕೆ ಬೆಲೆ ನಿಗದಿ ಮಾಡಲಾಗಿದೆ.

ಏಪ್ರಿಲ್ 1ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರವು 150 ಸಿಸಿ ಮೇಲ್ಪಪ್ಟ ವಾಹನಗಳಲ್ಲಿ ಎಬಿಎಸ್ ಮತ್ತು 125 ಸಿಸಿ ಮೇಲ್ಪಪ್ಟ ವಾಹನಗಳಲ್ಲಿ ಸಿಬಿಎಸ್ ಬ್ರೇಕಿಂಗ್ ತಂತ್ರಜ್ಞಾನವನ್ನು ಕಡ್ಡಾಯಗೊಳಿಸಿದ್ದು, ಫೋರ್ಸ್ ಕೂಡಾ ಹೊಸ ನಿಯಮದಂತೆ ಗೂರ್ಖಾ ಆವೃತ್ತಿಗಳಲ್ಲಿ ಎಬಿಎಸ್ ಜೋಡಣೆ ಮಾಡಿದೆ.

ಇದರಲ್ಲಿ ಮೂರು ಬಾಗಿಲುವುಳ್ಳ ಎಕ್ಸ್‌ಟ್ರಿಮ್ ಮಾದರಿಯು ಕಳೆದ ಕೆಲ ತಿಂಗಳ ಹಿಂದಷ್ಟೇ ವಿನೂತನ ವಿನ್ಯಾಸಗಳೊಂದಿಗೆ ಬಿಡುಗಡೆಗೊಳಿಸಿದ್ದು, ಫರ್ಪಾಮೆನ್ಸ್ ಪ್ರಿಯರ ಆಕರ್ಷಣೆಗೆ ಕಾರಣವಾಗಿರುವ ಹೊಸ ಎಕ್ಸ್‌ಟ್ರಿಮ್ ಕಾರು ಮಹೀಂದ್ರಾ ಥಾರ್‌ಗೆ ಭಾರೀ ಪೈಪೋಟಿ ನೀಡುತ್ತಿದೆ.

ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮರ್ಸಿಡಿಸ್-ಬೆಂಝ್ ಒಎಮ್611 ಡೀಸೆಲ್ ಎಂಜಿನ್ ಸಹಾಯದಿಂದ 138-ಬಿಹೆಚ್‍ಪಿ ಮತ್ತು 321-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಈ ಹಿಂದೆ ಬಳಸಲಾದ 2.2 ಲೀಟರ್ ಡೀಸೆಲ್ ಎಂಜಿನ್ ಇಲ್ಲೂ ಕೂಡಾ ಬಳಕೆ ಮಾಡಲಾಗಿದೆ.

ಸ್ಟ್ಯಾಂಡರ್ಡ್ ವೆರಿಯೆಂಟ್ ಕಾರಿಗೆ ಹೋಲಿಕೆ ಮಾಡಿದ್ದಲ್ಲಿ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಕಾರು ಮರುವಿನ್ಯಾಸಗೊಳಿಸಲಾದ ಸಸ್ಪೆಂಷನ್ ಸಹಾಯದಿಂದ ಡಿಪಾರ್ಚುರ್ ಮತ್ತು ರ್‍ಯಾಂಪ್ ಬ್ರೇಕ್ ಓವರ್ ಆ್ಯಂಗಲ್ ಅನ್ನು ಸುಧಾರಿಸುತ್ತದೆ. ಈ ಮೂಲಕ ಆಫ್ ರೋಡ್ ಪ್ರದರ್ಶನಗಳಲ್ಲಿ ಇದು ಸಾಕಷ್ಟು ಸಹಕಾರಿಯಾಗುತ್ತೆ.
MOST READ: ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಜೀಪ್ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ!

ಇನ್ನು ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಆಫ್ ರೋಡಿಂಗ್‌ನಲ್ಲಿ ಉತ್ತಮವಾಗಿದ್ದು, 205ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಹಾಗೆಯೇ 550ಎಂಎಂ ವಾಟರ್ ವೇಡಿಂಗ್ ಡೆಪ್ತ್ ಅನ್ನು ಪಡೆದುಕೊಂಡಿದ್ದು, ಜೊತೆಗೆ 2,500 ಕೆಜಿ ತೂಕದೊಂದಿಗೆ 63.5 ಲಟರ್ ಇಂಧನ ಟ್ಯಾಂಕ್ ಸಾಮರ್ಥ್ಯ ಹೊಂದಿದೆ.

ಬಿಡುಗಡೆಗೊಂಡ ಹೊಸ ಫೋರ್ಸ್ ಗೂರ್ಖಾ ಕಾರುಗಳು ಖರೀದಿಗಾಗಿ ಡೀಲರ್‍ಗಳು ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಆಸಕ್ತ ಗ್ರಾಹಕರು ಸಮೀಪದಲ್ಲಿನ ಅಧಿಕೃತ ಫೋರ್ಸ್ ಡೀಲರ್‍ಗಳ ಬಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.
MOST READ: ನಿಶ್ಚಿಂತೆಯಿಂದ ಸಂಚರಿಸಿ; ಇಲ್ಲಿವೆ ರೂ.10 ಲಕ್ಷದೊಳಗಿನ ಟಾಪ್ 5 ಸುರಕ್ಷಿತ ಕಾರುಗಳು..!

ಹಾಗೆಯೇ ಹೊಸ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಕಾರು ಎಂಜಿನ್ ಕಾರ್ಯಕ್ಷಮತೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಎಬಿಎಸ್ ಪ್ರೇರಣೆ ಹೊಂದಿರುವ ಗೂರ್ಖಾ ಕಾರುಗಳು ಮಹೀಂದ್ರಾ ಥಾರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿವೆ.


Click it and Unblock the Notifications








