ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯಲಿದೆ ಫೋರ್ಡ್ ಕೂಗಾ..!

ಭಾರತೀಯ ಮಾರುಕಟ್ಟೆಯಲ್ಲಿ ಫೋರ್ಡ್ ನಿರ್ಮಾಣದ ಕಾರುಗಳಿಗೆ ವಿಶೇಷ ಬೇಡಿಕೆಯಿದ್ದು, ಸೆಡಾನ್, ಹ್ಯಾಚ್‌ಬ್ಯಾಕ್ ಮತ್ತು ಎಸ್‌ಯುವಿ ವಿಭಾಗದಲ್ಲಿ ತನ್ನದೇ ಆದ ಮಾರಾಟ ದಾಖಲೆಯನ್ನು ಹೊಂದಿದೆ. ಈ ಹಿನ್ನೆಲೆ ದೇಶಿಯ ಮಾರುಕಟ್ಟೆಯ ಗ್ರಾಹಕರ ಬೇಡಿಕೆಯನ್ನು ಆಧರಿಸಿ ಇದೀಗ ಹೊಸ ಕಾರು ಉತ್ಪನ್ನ ಒಂದನ್ನು ಪರಿಚಯಿಸುವ ಇರಾದೆಯಲ್ಲಿದೆ.

ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯಲಿದೆ ಫೋರ್ಡ್ ಕೂಗಾ..!

ಸದ್ಯ ಎಸ್‌ಯುವಿ ವಿಭಾಗದಲ್ಲಿ ಇಕೋಸ್ಪೋರ್ಟ್ ಮತ್ತು ಎಂಡೀವರ್ ಕಾರು ಆವೃತ್ತಿಗಳು ಫೋರ್ಡ್ ಕಾರು ಮಾರಾಟದಲ್ಲಿ ಅಗ್ರಸ್ಥಾನ ಹೊಂದಿದ್ದು, ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ಯುರೋಪ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೂಗಾ ಎಸ್‌ಯುವಿ ಕಾರನ್ನು ಭಾರತಕ್ಕೂ ಪರಿಚಯಿಸುವ ಸುಳಿವು ನೀಡಿದೆ. ಯಾಕೆಂದ್ರೆ ದೇಶಿಯ ಮಾರುಕಟ್ಟೆಯಲ್ಲಿ ಕಾರುಗಳ ಅಭಿವೃದ್ದಿಗಾಗಿ ಮಹೀಂದ್ರಾ ಹೊಸ ಒಪ್ಪಂದ ಮಾಡಿಕೊಂಡಿದ್ದು, ಯುರೋಪ್ ಮಾರುಕಟ್ಟೆಯಲ್ಲಿರುವ ಕೆಲವು ಜನಪ್ರಿಯ ಆವೃತ್ತಿಗಳನ್ನು ಭಾರತದಲ್ಲೂ ಬಿಡುಗಡೆಗೊಳಿಸುವುದು ಬಹುತೇಕ ಖಚಿತವಾಗಿದೆ.

ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯಲಿದೆ ಫೋರ್ಡ್ ಕೂಗಾ..!

ಈ ಮೂಲಕ ಭಾರತದಲ್ಲಿ ಜನಪ್ರಿಯಗೊಳ್ಳುತ್ತಿರುವ ಮಧ್ಯಮ ಗಾತ್ರದ ಜೀಪ್ ಕಂಪಾಸ್ ಮಾದರಿಗಳನ್ನು ಹಿಂದಿಕ್ಕುವ ಉದ್ದೇಶ ಹೊಂದಿದ್ದು, ಇಕೋ ಸ್ಪೋರ್ಟ್‌ಗಿಂತ ತುಸು ಹೆಚ್ಚಿನ ಮಟ್ಟದ ಬಲಿಷ್ಠತೆ ಮತ್ತು ಎಂಡೀವರ್‌ಗಿಂತ ಕೆಳ ದರ್ಜೆಯ ಕಾರು ಮಾದರಿಯಾಗಿ ಇದು ಮಾರಾಟಗೊಳ್ಳಲಿದೆ.

ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯಲಿದೆ ಫೋರ್ಡ್ ಕೂಗಾ..!

ಎಂಜಿನ್ ವೈಶಿಷ್ಟ್ಯತೆ

ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಕೂಗಾ ಆವೃತ್ತಿಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಲಭ್ಯವಿವೆ. ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗಲಿರುವ ಕೂಗಾ ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆಗೆ ಟರ್ಬೋ ಚಾರ್ಜ್ಡ್ ಸೌಲಭ್ಯ ಪಡೆಯಲಿದೆ.

ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯಲಿದೆ ಫೋರ್ಡ್ ಕೂಗಾ..!

ಕೂಗಾ ಕಾರು 5 ಸೀಟರ್ ಸೌಲಭ್ಯದ ಅತ್ಯುತ್ತಮ ಎಸ್‌ಯುವಿ ಮಾದರಿಯಾಗಿದ್ದು, ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂ ಮತ್ತು ರಿಯರ್ ವೀಲ್ಹ್ ಡ್ರೈವ್ ಸಿಸ್ಟಂ ಅಳವಡಿಕೆ ಹೊಂದಿರುವುದು ಆಫ್ ರೋಡಿಂಗ್ ಪ್ರಿಯರನ್ನು ಸೆಳೆಯದೆ ಇರಲಾರದು. ಇನ್ನು ಕೆಲವು ಮಾಹಿತಿಗಳ ಪ್ರಕಾರ, ನ್ಯೂ ಜನರೇಷನ್ ಕೂಗಾ ಮಾದರಿಯಲ್ಲಿ 5 ಸೀಟರ್ ಮತ್ತು7 ಸೀಟರ್ ಮಾದರಿಯಲ್ಲಿ ಅಭಿವೃದ್ದಿಗೊಳ್ಳಲಿದ್ದು, ಯುರೋಪ್ ಮಾರುಕಟ್ಟೆಯಲ್ಲಿರುವ ಎಡ್ಜ್ ಎಸ್‌ಯುವಿ ಸ್ಥಗಿತಗೊಳಿಸಿ ಕೂಗಾ 7 ಸೀಟರ್ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯಲಿದೆ ಫೋರ್ಡ್ ಕೂಗಾ..!

ಇದಲ್ಲದೇ ವಿಶ್ವಾದ್ಯಂತ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದು, ಫೋರ್ಡ್ ಸಂಸ್ಥೆಯು ಸಹ ಇದೇ ನಿಟ್ಟಿನಲ್ಲಿ ತನ್ನ ಪ್ರಮುಖ ಕಾರುಗಳಲ್ಲಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಎಂಜಿನ್‌ ಜೋಡಣಾ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯಲಿದೆ ಫೋರ್ಡ್ ಕೂಗಾ..!

ಹೀಗಾಗಿ ಹೊಸ ಕೂಗಾ ಪ್ಲಗ್ ಇನ್ ಹೈಬ್ರಿಡ್ ಸೌಲಭ್ಯವನ್ನು ಸಹ ಹೊಂದಬಹುದು ಎನ್ನಲಾಗಿದ್ದು, ಇದೇ ತಿಂಗಳು ಯುರೋಪ್ ಮಾರುಕಟ್ಟೆಗಳಲ್ಲಿ ನಡೆಯಲಿರುವ ಅನಾವರಣ ಕಾರ್ಯಕ್ರಮದಲ್ಲಿ ಹೊಸ ಕಾರಿನ ಮತ್ತಷ್ಟು ಮಾಹಿತಿಗಳು ಬಹಿರಂಗಗೊಳ್ಳಲಿವೆ.

MOST READ: 7 ಸಾವಿರ ಕೋಟಿ ವೆಚ್ಚದಲ್ಲಿ ತಲೆಎತ್ತಿದ ಕಿಯಾ ಮೋಟಾರ್ಸ್ ಮೊದಲ ಕಾರು ಉತ್ಪಾದನಾ ಘಟಕ

ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯಲಿದೆ ಫೋರ್ಡ್ ಕೂಗಾ..!

ಬಿಡುಗಡೆ ಯಾವಾಗ?

ಕೂಗಾ ಪ್ರೀಮಿಯಂ ಎಸ್‌ಯುವಿ ಮಾದರಿಯು ಮೊದಲು ಮುಂದಿನ ಕೆಲವೇ ದಿನಗಳಲ್ಲಿ ಯುರೋಪ್ ಮತ್ತು ಅಮೆರಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಇದೇ ವರ್ಷ ಅಕ್ಟೋಬರ್ ಅಥವಾ ನವೆಂಬರ್ ಅಂತ್ಯಕ್ಕೆ ಭಾರತದಲ್ಲೂ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇದರಿಂದ ಕಡಿಮೆ ಬೆಲೆಯಲ್ಲಿ ಉತ್ತಮ ಕಾರು ನೀರಿಕ್ಷೆ ಮಾಡುವ ಭಾರತೀಯ ಗ್ರಾಹಕರಿಗೆ ಇಂದೊಂದು ಅತ್ಯತ್ತಮ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯಲಿದೆ ಫೋರ್ಡ್ ಕೂಗಾ..!

ಪ್ರತಿಸ್ಪರ್ಧಿ ಕಾರುಗಳು ಮತ್ತು ಬೆಲೆ (ಅಂದಾಜು)

ಕೂಗಾ ಕಾರಿನ ಬೆಲೆಗಳ ಬಗ್ಗೆ ನಿಖರ ಮಾಹಿತಿ ಇಲ್ಲವಾದ್ರೂ ಭಾರತೀಯ ಗ್ರಾಹಕರನ್ನು ಸೆಳೆಯಲು ಬರುತ್ತಿರುವ ಹೊಸ ಕಾರು ಜೀಪ್ ಕಂಪಾಸ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಟಾಟಾ ಹ್ಯಾರಿಯರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15 ಲಕ್ಷದಿಂದ ರೂ.18 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ನೋ ಪಾರ್ಕಿಂಗ್‌ನಲ್ಲಿದ್ದ ಹೋಂಡಾ ಡಿಯೋ ಸ್ಕೂಟರ್ ಪೀಸ್ ಪೀಸ್ ಮಾಡಿದ ಪೊಲೀಸ್..!

ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯಲಿದೆ ಫೋರ್ಡ್ ಕೂಗಾ..!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿ ಫೋರ್ಡ್ ನಿರ್ಮಾಣದ ಕಾರುಗಳು ಉತ್ತಮ ಜನಾಭಿಪ್ರಾಯ ಹೊಂದಿದ್ದು, ಇಂಧನ ಕಾರ್ಯಕ್ಷಮತೆಯಲ್ಲೂ ಗ್ರಾಹಕರ ನಂಬಿಕೆ ಗಳಿಸಿವೆ. ಇದೇ ಕಾರಣಕ್ಕೆ ಎಸ್‌ಯುವಿ ಪ್ರಿಯರನ್ನು ಸೆಳೆಯಲು ಮುಂದಾಗಿರುವ ಫೋರ್ಡ್ ವಿದೇಶಿ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗಿರುವ ಕೂಗಾ ಮುಂದುವರಿದ ಆವೃತ್ತಿಯನ್ನು ಭಾರತಕ್ಕೂ ಪರಿಚಯಿಸುತ್ತಿದೆ.

Article Published On: Wednesday, April 3, 2019, 8:30 [IST]
English summary
New Ford Kuga SUV Unveil In April — India-Bound SUV To Rival The Jeep Compass. Read in kannada.
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+