ಅನಾವರಣಗೊಂಡ 2020ರ ಬೆಂಝ್ ಜಿ‍ಎಲ್ಎ ಎಸ್‍‍ಯುವಿ

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ತನ್ನ 2020ರ ಜಿಎಲ್‍‍ಎ ಎಸ್‍‍ಯು‍ವಿಯನ್ನು ಅನಾವರಣಗೊಳಿಸಿದೆ. ಹೊಸ ಬೆಂಝ್ ಜಿಎಲ್‍ಎ ಎಸ್‍‍ಯುವಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಅನಾವರಣಗೊಂಡ 2020ರ ಬೆಂಝ್ ಜಿ‍ಎಲ್ಎ ಎಸ್‍‍ಯುವಿ

ಎಂಟ್ರಿ ಲೆವೆಲ್ ಜಿಎಲ್‍ಎ ಎಸ್‍‍ಯುವಿಯು ಹೊಸ ಎಮ್‍ಎಫ್‍ಎ-2 ಪ್ಲಾಟ್‍‍‍‍ಫಾರಂ ಅನ್ನು ಆಧರಿಸಿದೆ. ಮರ್ಸಿಡಿಸ್‍ನ ಇತರ ಕಾಂಪ್ಯಾಕ್ಟ್ ಮಾದರಿಗಳಾದ ಹೊಸ ಎ-ಕ್ಲಾಸ್, ಸಿಎಲ್‍ಎ ಮತ್ತು ಜಿ‍ಎಲ್‍‍ಬಿ ಎಸ್‍‍ಯುವಿಗಳು ಕೂಡ ಇದೇ ಪ್ಲಾಟ್‍‍ಫಾರ್ಮ್ ಆಧರಿಸಿ ತಯಾರಾಗಿವೆ. ಹೊಸ ಜಿಎಲ್‍ಎ ಎಸ್‍‍ಯುವಿ, ಕ್ರಾಸ್‌ಒವರ್ ಮಾದರಿಯ ವಿನ್ಯಾಸವನ್ನು ಹೊಂದಿದೆ.

ಅನಾವರಣಗೊಂಡ 2020ರ ಬೆಂಝ್ ಜಿ‍ಎಲ್ಎ ಎಸ್‍‍ಯುವಿ

ಹೊಸ ತಲೆಮಾರಿನ ಬೆಂಝ್ ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಾರಿಗಿಂತ 100 ಎಂಎಂ ಎತ್ತರ, 20 ಎಂಎಂ ಉದ್ದವನ್ನು ಕಡಿಮೆ ಹೊಂದಿದೆ. 30 ಎಂಎಂ ಹೆಚ್ಚು ವ್ಹೀಲ್‍‍ಬೇಸ್ ಹೊಂದಿದೆ.

ಅನಾವರಣಗೊಂಡ 2020ರ ಬೆಂಝ್ ಜಿ‍ಎಲ್ಎ ಎಸ್‍‍ಯುವಿ

ಕ್ಯಾಬಿನ್ ಒಳಗೆ ಹೆಚ್ಚಿನ ಸ್ಪೇಸ್ ಅನ್ನು ನೀಡಲಾಗಿದೆ. ಹೊಸ ಮರ್ಸಿಡಿಸ್ ಜಿ‍ಎಲ್‍ಇ, ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹಾಗೂ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍‍ಗಳಿಗಾಗಿ ಪ್ರತ್ಯೇಕ ಎರಡು ಸ್ಕ್ರೀನ್‍‍ಗಳನ್ನು ಹೊಂದಿರಲಿದೆ. ಸೆಂಟರ್ ಕಂಸೋಲ್‍‍ನಲ್ಲಿ ಟಚ್‍‍ಪ್ಯಾಡ್ ಹಾಗೂ ಇಂಟಿಗ್ರೇಟೆಡ್ ಗ್ರಾಬ್ ಹ್ಯಾಂಡಲ್‍‍ಗಳಿರಲಿವೆ. ಹೊಸ ಎಸ್‍ಯುವಿಯ ಕ್ಯಾಬಿನ್‍‍‍ಗೆ ಪ್ರೀಮಿಯಂ ಅನುಭವವನ್ನು ನೀಡುವುದಕ್ಕಾಗಿ ಇಂಟಿರಿಯರ್‍‍ನಲ್ಲಿ ಕ್ಲೈಮೇಟ್ ಕಂಟ್ರೋಲ್, ಎಸಿ ವೆಂಟ್‍‍ಗಳಿವೆ.

ಅನಾವರಣಗೊಂಡ 2020ರ ಬೆಂಝ್ ಜಿ‍ಎಲ್ಎ ಎಸ್‍‍ಯುವಿ

ಮರ್ಸಿಡಿಸ್ ಕಂಪನಿಯು ಹೊಸ ತಲೆಮಾರಿನ ಜಿ‍ಎಲ್‍ಇಯನ್ನು ಭಾರತದಲ್ಲಿ ಬಿಎಸ್ 6 ಎಂಜಿನ್‍‍‍ನೊಂದಿಗೆ ಬಿಡುಗಡೆಗೊಳಿಸಲಿದೆ. ಹೊಸ ಎಸ್‍ಯುವಿನಲ್ಲಿ ಲೆದರ್ ಸೀಟ್‍‍ಗಳಿರಲಿದ್ದು, ಈ ಸೀಟ್‍ಗಳನ್ನು ಅಡ್ಜಸ್ಟ್ ಮಾಡಬಹುದಾಗಿದೆ.

ಅನಾವರಣಗೊಂಡ 2020ರ ಬೆಂಝ್ ಜಿ‍ಎಲ್ಎ ಎಸ್‍‍ಯುವಿ

ಹೊಸ ಬೆಂಝ್ ಜಿಎಲ್ಎ ಎಸ್‍‍ಯುವಿಯನ್ನು ನಾಲ್ಕು ಮಾದರಿಯ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುವುದು. ಇದರಲ್ಲಿ 1.3 ಲೀಟರ್ ಪೆಟ್ರೋಲ್ ಎಂಜಿನ್ 165 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸಿದರೆ, 2.0 ಲೀಟರ್ ಪೆಟ್ರೋಲ್ ಎಂಜಿನ್ 228 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಅನಾವರಣಗೊಂಡ 2020ರ ಬೆಂಝ್ ಜಿ‍ಎಲ್ಎ ಎಸ್‍‍ಯುವಿ

ಡೀಸೆಲ್ ಮಾದರಿಯ 1.5 ಲೀಟರ್ ಎಂಜಿನ್ 115 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸಿದರೆ, 2.0 ಎಂಜಿನ್ ಟ್ಯೂನ್‍‍‍ಗೆ ಅನುಗುಣವಾಗಿ 150 ಬಿ‍‍ಹೆಚ್‍‍ಪಿ ಪವರ್ ಮತ್ತು 190 ಬಿ‍ಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಅನಾವರಣಗೊಂಡ 2020ರ ಬೆಂಝ್ ಜಿ‍ಎಲ್ಎ ಎಸ್‍‍ಯುವಿ

ಮುಂದಿನ ವರ್ಷ ಪೆಟ್ರೋಲ್ ಪ್ಲಗ್ ಇನ್ ಹೈಬ್ರಿಡ್ 1.3 ಎಂಜಿನ್ ಅನ್ನು ಅಳವಡಿಸಲಿದ್ದು, ಈ ಎಂಜಿನ್ 218 ಬಿ‍ಹೆಚ್‍ಪಿ ಪವರ್ ಉತ್ಪಾದಿಸುತ್ತದೆ. ಹೊಸ ಎ-ಕ್ಲಾಸ್‍‍ನಂತೆಯೇ 15.6 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸುವ ಸಾಧ್ಯತೆಗಳಿವೆ. ಇದು 60 ಕ್ಕೂ ಹೆಚ್ಚು ಕಿ.ಮೀ ದೂರ ಚಲಿಸುತ್ತದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಅನಾವರಣಗೊಂಡ 2020ರ ಬೆಂಝ್ ಜಿ‍ಎಲ್ಎ ಎಸ್‍‍ಯುವಿ

ಇನ್ನು ಗೇರ್‍‍ಬಾಕ್ಸ್ ಗಳಲ್ಲಿ 6 ಸ್ಪೀಡ್ ಮ್ಯಾನುವಲ್, 7 ಸ್ಪೀಡ್ ಆಟೋಮ್ಯಾಟಿಕ್ ಮತ್ತು 8 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋ‍ವನ್ನು ಅಳವಡಿಸಲಾಗಿದೆ. ಹೊಸ ಬೆಂಝ್ ಜಿಎ‍ಲ್ಇ ಎಸ್‍‍ಯು‍ವಿಯು ಆಕರ್ಷಕ ಲುಕ್ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಅನಾವರಣಗೊಂಡ 2020ರ ಬೆಂಝ್ ಜಿ‍ಎಲ್ಎ ಎಸ್‍‍ಯುವಿ

2020ರ ಜಿಎಲ್ಇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೊಸ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್ 1, ಲ್ಯಾಂಡ್ ರೋವರ್ ಡಿಸ್ಕವರಿ, ಆಡಿ ಕ್ಯೂ 7 ಮತ್ತು ವೋಲ್ವೋ ಎಕ್ಸ್‌ಸಿ 40 ಕಾರುಗಳಿಗೆ ಪೈಪೋಟಿ ನೀಡಲಿದೆ.

Article Published On: Thursday, December 12, 2019, 16:34 [IST]
English summary
2020 Mercedes-Benz GLA revealed - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+