ಮಹೀಂದ್ರಾ ಎಕ್ಸ್‌ಯುವಿ300 ಪ್ರತಿಸ್ಪರ್ಧಿ ಹ್ಯುಂಡೈ ಕಾರ್ಲಿನೋ ವಿಶೇಷತೆ ಏನು ಗೊತ್ತಾ?

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟ ವಿಭಾಗದಲ್ಲಿ ಗ್ರಾಹಕರ ಬೇಡಿಕೆ ಹೆಚ್ಚುತ್ತಿದ್ದು, ಮಹೀಂದ್ರಾ ಎಕ್ಸ್‌ಯುವಿ300, ನಿಸ್ಸಾನ್ ಕಿಕ್ಸ್ ಸೇರಿದಂತೆ ಹಲವು ಹೊಸ ಕಾರುಗಳು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ. ಹೀಗಾಗಿ ಹ್ಯುಂಡೈ ಸಂಸ್ಥೆಯು ಸಹ ತನ್ನ ಬಹುನೀರಿಕ್ಷಿತ ಕಾರ್ಲಿನೋ ಕಾರನ್ನು ಪರಿಚಯಿಸುತ್ತಿದ್ದು, ಇದೇ ಮೊದಲ ಬಾರಿಗೆ ಹೊಸ ಕಾರಿನ ಎಂಜಿನ್ ಮಾಹಿತಿ ಹಂಚಿಕೊಂಡಿದೆ.

ಮಹೀಂದ್ರಾ ಎಕ್ಸ್‌ಯುವಿ300 ಪ್ರತಿಸ್ಪರ್ಧಿ ಹ್ಯುಂಡೈ ಕಾರ್ಲಿನೋ ವಿಶೇಷತೆ ಏನು ಗೊತ್ತಾ?

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಮತ್ತು ಮಾರುತಿ ಸುಜುಕಿ ನಡುವೆ ಸಾಕಷ್ಟು ಪೈಪೋಟಿ ಇದ್ದು, ಟಾಪ್ 10ರ ಪಟ್ಟಿಯಲ್ಲಿ ಒಟ್ಟು ಆರು ಕಾರುಗಳು ಮಾರುತಿ ಸುಜುಕಿ ನಿರ್ಮಾಣದ ಕಾರುಗಳಿದ್ದಲ್ಲಿ ಹ್ಯುಂಡೈ ನಿರ್ಮಾಣದ ನಾಲ್ಕು ಕಾರುಗಳು ಸ್ಥಾನ ಪಡೆದಿವೆ. ಹೀಗಾಗಿ ಎರಡು ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ಇದ್ದು, ಇದೀಗ ಬಿಡುಗಡೆಗೆ ಸಜ್ಜಾಗಿರುವ ಹ್ಯುಂಡೈ ಕಾರ್ಲಿನೋ ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಂಡಿರುವ ಕಾರ್ಲಿನೋ ಕಾರು ಈಗಾಗಲೇ ಭಾರತದಲ್ಲಿ ಬಿಡುಗಡೆಯ ಉದ್ದೇಶಕ್ಕಾಗಿ ಹಲವು ಬಾರಿ ಎಂಜಿನ್ ಕಾರ್ಯಕ್ಷಮತೆಯ ಕುರಿತಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯ ಸುಳಿವು ನೀಡಿದೆ.

ಮಹೀಂದ್ರಾ ಎಕ್ಸ್‌ಯುವಿ300 ಪ್ರತಿಸ್ಪರ್ಧಿ ಹ್ಯುಂಡೈ ಕಾರ್ಲಿನೋ ವಿಶೇಷತೆ ಏನು ಗೊತ್ತಾ?

ಹ್ಯುಂಡೈ ಸಂಸ್ಥೆಯು ಕ್ರೆಟಾ ಮತ್ತು ಕೊನಾ ಎಸ್‍‍ಯುವಿ ಕಾರುಗಳ ಭರ್ಜರಿ ಯಶಸ್ವಿ ನಂತರ ಕಾರ್ಲಿನೋ ಕಾರುಗಳ ಬಿಡುಗಡೆಗಾಗಿ ಯೋಜನೆ ರೂಪಿಸುತ್ತಿದ್ದು, ಹಲವು ವಿಶೇಷತೆಗಳಿಗಳಿಗೆ ಕಾರಣವಾಗಿರುವ ಹೊಸ ಕಾರು ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವುದು ಮಧ್ಯಮ ವರ್ಗದ ಕಾರು ಪ್ರಿಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಮಹೀಂದ್ರಾ ಎಕ್ಸ್‌ಯುವಿ300 ಪ್ರತಿಸ್ಪರ್ಧಿ ಹ್ಯುಂಡೈ ಕಾರ್ಲಿನೋ ವಿಶೇಷತೆ ಏನು ಗೊತ್ತಾ?

ಹ್ಯುಂಡೈ ಹೊಸ ಕಂಪ್ಯಾಕ್ಟ್ ಎಸ್‍‍ಯುವಿ ಅರ್ಬನ್ ಕಮ್ಯೂಟರ್ ವಿಭಾಗಕ್ಕಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ಕ್ರಾಸ್‍ ಓವರ್ ವಿನ್ಯಾಸದೊಂದಿಗೆ ಕ್ರೆಟಾ ಹಾಗೂ ಕೊನಾ ಕಾರುಗಳ ಮಧ್ಯದ ಕಾರು ಮಾದರಿಯಾಗಿ ಮಾರಾಟಗೊಳ್ಳಲಿದೆ.

ಮಹೀಂದ್ರಾ ಎಕ್ಸ್‌ಯುವಿ300 ಪ್ರತಿಸ್ಪರ್ಧಿ ಹ್ಯುಂಡೈ ಕಾರ್ಲಿನೋ ವಿಶೇಷತೆ ಏನು ಗೊತ್ತಾ?

ಹೊಸ ಕಾರ್ಲಿನೋ ಉತ್ಪಾದನೆಗಾಗಿ ಪ್ರತ್ಯೇಕವಾದ ಪ್ಲ್ಯಾಟ್‍‍ಫಾರ್ಮ್ ಅನ್ನೇ ಸಿದ್ದಪಡಿಸಲಾಗಿದ್ದು, ಈ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿರುವ ಈ ಕಾರ್ಲಿನೋ ಕಾರುಗಳು ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ಟಾಟಾ ನೆಕ್ಸಾನ್ ಮತ್ತು ಫೋರ್ಡ್ ಇಕೊಸ್ಪೋರ್ಟ್ ಕಾರಿಗಳಿಗೆ ನೇರ ಪ್ರತಿಸ್ಪರ್ಧಿಸಲಾಗಲಿದೆ.

ಪ್ರಸ್ತುತ ಮಾಹಿತಿಗಳ ಪ್ರಕಾರ, ಈ ಹೊಸ ಕಾರು 2019ರ ಮಾರ್ಚ್ ಅಥವಾ ಏಪ್ರಿಲ್ ಆರಂಭದಲ್ಲಿ ಯುಎಸ್ಎ ಮಾರುಕಟ್ಟೆಯಲ್ಲಿ ಮೊದಲು ಬಿಡುಗಡೆಗೊಳ್ಳಲಿದ್ದು, ತದನಂತರವಷ್ಟೇ ಭಾರತ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಇದು ಬಿಡುಗಡೆಗೊಳ್ಳಲಿದೆ.

ಮಹೀಂದ್ರಾ ಎಕ್ಸ್‌ಯುವಿ300 ಪ್ರತಿಸ್ಪರ್ಧಿ ಹ್ಯುಂಡೈ ಕಾರ್ಲಿನೋ ವಿಶೇಷತೆ ಏನು ಗೊತ್ತಾ?

ಕಂಪ್ಯಾಕ್ಟ್ ಎಸ್‍‍ಯುವಿ ವಿನ್ಯಾಸ ಆಧಾರಿತ ಕಾರ್ಲಿನೊ ಪರಿಕಲ್ಪನೆಯನ್ನು ಮೊದಲು ಹ್ಯುಂಡೈ ಸಂಸ್ಥೆಯು 2016ರ ದೆಹಲಿ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶನ ಮಾಡಿತ್ತು. ಆದ್ರೆ ಕಾರಣಾಂತರಗಳಿಂದ ಹೊಸ ಕಾರಿನ ಉತ್ಪಾದನಾ ಪ್ರಕ್ರಿಯೆಯನ್ನು ಮೂಂದುಡಿಕೆ ಮಾಡುತ್ತಾ ಬಂದಿದ್ದ ಹ್ಯುಂಡೈ ಇದೀಗ ಕಾರ್ಲಿನೋ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ಇನ್ನು ಕಾರ್ಲಿನೋ ಕಾರುಗಳು ಮೂರು ಎಂಜಿನ್ ಆಯ್ಕೆ ಹೊಂದಿರಲಿದ್ದು, 1.0 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 1.4 ಲೀಟರ್ ಪೆಟ್ರೋಲ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ.

ಮಹೀಂದ್ರಾ ಎಕ್ಸ್‌ಯುವಿ300 ಪ್ರತಿಸ್ಪರ್ಧಿ ಹ್ಯುಂಡೈ ಕಾರ್ಲಿನೋ ವಿಶೇಷತೆ ಏನು ಗೊತ್ತಾ?

1.4-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಸದ್ಯ ಮಾರುಕಟ್ಟೆಯಲ್ಲಿರುವ ವೆರ್ನಾ ಸೆಡಾನ್ ಮಾದರಿಯಿಂದ ಎರವಲು ಪಡೆಯಲಾಗಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, 4 ಏರ್‌ಬ್ಯಾಗ್ ಮತ್ತು ಲಾರ್ಜ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಯೊಂದಿಗೆ ಹಲವು ಮಾದರಿಯ ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.

ಬಿಡುಗಡೆಯ ಅವಧಿ ಮತ್ತು ಕಾರಿನ ಬೆಲೆಗಳು(ಅಂದಾಜು)

2019ರ ಮಾರ್ಚ್ ಅಥವಾ ಏಪ್ರಿಲ್ ಆರಂಭದಲ್ಲಿ ಯುಎಸ್ಎ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಹೊಸ ಕಾರ್ಲಿನೋ ಕಾರು ತದನಂತರವಷ್ಟೇ ಭಾರತದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.12 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
New Hyundai Compact-SUV Details Revealed — To Rival The Mahindra XUV300. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X