ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್6 ಆಧಾರಿತ 1.5 ಲೀಟರ್ ಪೆಟ್ರೋಲ್ ಎರ್ಟಿಗಾ ಕಾರು

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಕಳೆದ ನವೆಂಬರ್ ತಿಂಗಳಿನಲ್ಲಿ ತಮ್ಮ ಎರಡನೆಯ ತಲೆಮಾರಿನ ಎರ್ಟಿಗಾ ಎಂಪಿವಿ ಕಾರನ್ನು ಬಿಡುಗಡೆ ಮಾಡಲಾಗಿದ್ದು, ಮಾರಾಟದ ಪರವಾಗಿ ಉತ್ತಮ ಪ್ರದರ್ಷನವನ್ನು ಪಡೆದುಕೊಳ್ಳುತ್ತಿದೆ. ಹಾಗೆಯೆ ಬಿಎಸ್-6 ಎಮಿಷನ್ ನಿಯಮಾವಳಿ ಪ್ರಕಾರ ಸಂಸ್ಥೆಯು ಏಪ್ರಿಲ್ ಕೊನೆಯಲ್ಲಿ ತಮ್ಮ 1.5 ಲೀಟರ್ ಡೀಸೆಲ್ ಆಧಾರಿತ ಎರ್ಟಿಗಾ ಕಾರನ್ನು ಬಿಡುಗಡೆ ಮಾಡಲಾಗಿತ್ತು.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 1.5 ಲೀಟರ್ ಪೆಟ್ರೋಲ್ ಎರ್ಟಿಗಾ ಕಾರು

ಇದೀಗ ಗಾಡಿವಾಡಿ ವರದಿ ಪ್ರಕಾರ ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 1.5 ಲೀಟರ್ ಪೆಟ್ರೋಲ್ ಎಂಜಿನ್ ಆಧಾರಿತ ಎರ್ಟಿಗಾ ಕಾರನ್ನು ಶೀಘ್ರವೇ ಬಿಡುಗಡೆ ಮಾಡಲಿದ್ದು, ಸಧ್ಯಕ್ಕೆ ಎಂಜಿನ್ ಕಾರ್ಯಕ್ಷಮೆತನ್ನು ಪರೀಕ್ಷಿಸಲು ಸ್ಪಾಟ್ ಟೆಸ್ಟಿಂಗ್ ಅನ್ನು ನಡೆಸುತ್ತಿದೆ. ಸಿಯಾಜ್ ಫೇಸ್‍ಲಿಫ್ಟ್ ಕಾರಿನಲ್ಲಿ ನೀಡಲಗಿರುವ 1.5 ಲೀಟರ್ ಕೆ15ಬಿ 4 ಸಿಲೆಂಡರ್ ಎಂಜಿನ್ ಹಾಗು ಎಸ್‍ಹೆಚ್‍ವಿಎಸ್ ಟೆಕ್ನಾಲಜಿ ಆಧಾರಿತ ಎಂಜಿನ್ ಅನ್ನು ಈ ಕಾರಿಗೂ ನೀಡಲಾಗಿದೆ ಎಂದು ಹೇಳಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 1.5 ಲೀಟರ್ ಪೆಟ್ರೋಲ್ ಎರ್ಟಿಗಾ ಕಾರು

ಎಂಜಿನ್ ಸಾಮರ್ಥ್ಯ

ಬಿಎಸ್-6 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊತ್ತು ಬರಲಿರುವ ಎರ್ಟಿಗಾ ಎಂಪಿವಿ ಕಾರು 104.7 ಬಿಹೆಚ್‍ಪಿ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿರಲಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಜೋಡಿಸಲಾಗಿದೆ. ಹಾಗೆಯೆ ಈ ಎಂಜಿನ್ ಹೊತ್ತು ಬಂದರೆ ಒಂದು ಲೀಟರ್ ಪೆಟ್ರೋಲ್‍‍ಗೆ ಸುಮಾರು 19.34 ಕಕಿಲೋಮೀಟರ್‍‍ನ ಮೈಲೇಜ್ ನೀಡಬಲ್ಲದು.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 1.5 ಲೀಟರ್ ಪೆಟ್ರೋಲ್ ಎರ್ಟಿಗಾ ಕಾರು

ಹೊಸ ಎಂಜಿನ್ ಅನ್ನು ಹೊತ್ತ ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ ಕೇವಲ ಎಂಜಿನ್ ಮಾತ್ರವೇ ಹೊರತು ಬೇರಾವ ಬದಲಾವಣೆಗಳನ್ನು ಪಡೆದಿರುವುದಿಲ್ಲ. ಹೀಗಾಲಿ ಸಧ್ಯ ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಮರಾಜೊ ಮತ್ತು ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿ ಕಾರುಗಳಿಗೆ ಮಾರುತಿ ಸುಜುಕಿ ಎರ್ಟಿಗಾ ಕಾರುಗಳು ಪೈಪೋಟಿ ನೀಡುತ್ತಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 1.5 ಲೀಟರ್ ಪೆಟ್ರೋಲ್ ಎರ್ಟಿಗಾ ಕಾರು

ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಕಾರು ವಿಶ್ವದರ್ಜೆ ಕಾರು ಉತ್ಪಾದನಾ ಮಾದರಿಯಾದ 'ಹಾರ್ಟ್‍ಟೆಕ್ಟ್' ಪ್ಲಾಟ್‍‍ಫಾರ್ಮ್‍ನ ಅಡಿಯಲ್ಲಿ ವಿನ್ಯಾಸ ಮಾಡಲಾಗಿದ್ದು, ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರ ಆಸನ ವಿನ್ಯಾಸವನ್ನು ಈ ಬಾರಿ ತುಸು ವಿಸ್ತರಿಸಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 1.5 ಲೀಟರ್ ಪೆಟ್ರೋಲ್ ಎರ್ಟಿಗಾ ಕಾರು

ನೆಕ್ಸ್ಟ್ ಜನರೇಷನ್ ಎರ್ಟಿಗಾ ಎಂ‍ಪಿವಿ ಕಾರಿನ ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್‍‍ನೊಂದಿಗೆ ಜೋಡಿಸಲಾದ ಹೊಸ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿದ್ದು, ಹಾಗೆಯೇ ಕಾರಿನ ಸೈಡ್‍‍ನಲ್ಲಿ ಫ್ಲೋಟಿಂಗ್ ರೂಫ್ ವಿನ್ಯಾಸ, 15-ಇಂಚಿನ ಅಲಾಯ್ ಚಕ್ರಗಳು ಮತ್ತು ಕಾರಿನ ಹಿಂಭಾಗದಲ್ಲಿ 'ಎಲ್' ಆಕಾರದ ಟೈಲ್ ಲೈಟ್ ಅನ್ನು ಪಡೆದಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 1.5 ಲೀಟರ್ ಪೆಟ್ರೋಲ್ ಎರ್ಟಿಗಾ ಕಾರು

ತಾಂತ್ರಿಕ ವೈಶಿಷ್ಟ್ಯತೆಗಳು

ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿರುವ 7-ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಸ ಎರ್ಟಿಗಾದಲ್ಲೂ ಬಳಕೆ ಮಾಡಲಾಗಿದ್ದು, ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ ಮತ್ತು ಬ್ಲೂಟೂಥ್ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೇ ಕಪ್ ಹೋಲ್ಡರ್ಸ್ ಅನ್ನೂ ಕೂಡಾ ನೀಡಲಾಗುತ್ತಿದ್ದು, ಇನ್ಫೋಟೈನ್ಮೆಂಟ್ ಸಿಸ್ಟಮ್‍‍‍ಗೆ ಸಹಾಯವಾಗುವ ಹಲವಾರು ಬಟನ್‍‍ಗಳೊಂದಿಗೆ ಲೆದರ್‍ ಹೊದಿಕೆಯಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್ ಜೋಡಿಸಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 1.5 ಲೀಟರ್ ಪೆಟ್ರೋಲ್ ಎರ್ಟಿಗಾ ಕಾರು

ಸುರಕ್ಷಾ ವೈಶಿಷ್ಟ್ಯತೆಗಳು

ಹೊಸ ಎರ್ಟಿಗಾ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಬಿಡಿ, ಡ್ಯುಯಲ್ ಏರ್‌ಬ್ಯಾಗ್, ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಕಾರಿನ ಎಲ್ಲಾ ಮಾದರಿಗಳಲ್ಲಿ ನೀಡಲಾಗಿದೆ. ಇದಲ್ಲದೆ ಹೈ ಎಂಡ್ ಮಾದರಿಗಳಲ್ಲಿ ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಒದಗಿಸಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 1.5 ಲೀಟರ್ ಪೆಟ್ರೋಲ್ ಎರ್ಟಿಗಾ ಕಾರು

ಲಭ್ಯವಿರುವ ಬಣ್ಣಗಳು

ಹೊಸ ಎರ್ಟಿಗಾ ಕಾರುಗಳು ಒಟ್ಟು ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಪರ್ಲ್ ಮೆಟಾಲಿಕ್ ಔಬರ್ನ್ ರೆಡ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮೆಟಾಲಿಕ್ ಆಕ್ಸ್ಫಾರ್ಡ್ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್ ಮತ್ತು ಮೆಟಾಲಿಕ್ ಸಿಲ್ಕಿ ಗ್ರೇ ಬಣ್ಣಗಳನ್ನು ಆಯ್ಕೆ ಮಾಡಬಹುದು.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 1.5 ಲೀಟರ್ ಪೆಟ್ರೋಲ್ ಎರ್ಟಿಗಾ ಕಾರು

ಒಟ್ಟಿನಲ್ಲಿ 7-ಸೀಟರ್ ಮಾದರಿಗಳಲ್ಲಿ ವಿಶೇಷ ಎನ್ನಿಸುವ ಹೊಸ ಎರ್ಟಿಗಾ ಕಾರು 209-ಲೀಟರ್‌ನಷ್ಟು ಬೂಟ್ ಸ್ಪೆಸ್ ಸೌಲಭ್ಯ ಪಡೆದಿದ್ದು, ದೇಶದಲ್ಲಿ ಉತ್ತಮ ಇಂಧನ ದಕ್ಷತೆ ಹೊಂದಿರುವ ಎಂಪಿವಿ ಕಾರುಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಟೊಯೊಟಾ ಇನೋವಾ, ಮಹೀಂದ್ರಾ ಬಲೆರೋ ಮತ್ತು ಮಹೀಂದ್ರಾ ಮರಾಜೊ ಕಾರುಗಳಿಗೆ ಸಾಕಷ್ಟು ಪೈಪೋಟಿ ನೀಡುತ್ತಿದೆ.

Most Read Articles

Kannada
English summary
New Maruti Suzuki Ertiga Spotted On Testing With Bs6 Petrol Engine. Read In Kannada
Story first published: Friday, May 10, 2019, 11:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X