ಬಿಡುಗಡೆಯಾದ ಫೋಕ್ಸ್‌ವ್ಯಾಗನ್ ನವೀಕೃತ ಕಾರುಗಳು
ಫೋಕ್ಸ್‌ವ್ಯಾಗನ್ ಇಂಡಿಯಾ, ಪೊಲೊ ಹಾಗೂ ವೆಂಟೊದ ನವೀಕೃತ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಫೋಕ್ಸ್‌ವ್ಯಾಗನ್ ಪೊಲೊ ನವೀಕೃತ ಕಾರಿನ ಆರಂಭಿಕ ಬೆಲೆಯು ರೂ.5.82 ಲಕ್ಷಗಳಾದರೆ, ವೆಂಟೊ ನವೀಕೃತ ಕಾರಿನ ಬೆಲೆಯು ರೂ.8.76 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರಗಳಾಗಿವೆ.

ಹೊಸ ಫೋಕ್ಸ್‌ವ್ಯಾಗನ್ ಪೊಲೊ ಹಾಗೂ ವೆಂಟೊ ಫೇಸ್‌ಲಿಫ್ಟ್ ಕಾರುಗಳನ್ನು ಈಗ ಹೊಸ ಜಿಟಿ ಲೈನ್‍ನಲ್ಲಿ ಮಾರಾಟ ಮಾಡಲಾಗುತ್ತಿದ್ದು, ಅವು ಮೊದಲಿಗಿಂತ ಹೆಚ್ಚು ಸ್ಪೋರ್ಟಿ ಹಾಗೂ ಆಕರ್ಷಕವಾಗಿವೆ. ಎರಡೂ ಕಾರುಗಳು ಸನ್ ಸೆಟ್ ರೆಡ್ ಎಂಬ ಹೊಸ ಬಣ್ಣದಲ್ಲಿ ಮಾರಾಟವಾಗಲಿವೆ. ಹೊಸ ಪೊಲೊ ಹಾಗೂ ವೆಂಟೊ ನವೀಕೃತ ಕಾರುಗಳು ಬಾಹ್ಯ ನವೀಕರಣಗಳನ್ನು ಹೊಂದಿವೆ.

ಇದರಲ್ಲಿ ಸ್ಪೋರ್ಟಿಯರ್ ಸೈಡ್ ಸ್ಕರ್ಟ್, ಸ್ಮೋಕ್ಡ್ ಎಲ್‌ಇಡಿ ಹೆಡ್‌ಲ್ಯಾಂಪ್, ಜಿಟಿಐ ಹನಿಕೂಂಬ್ ಫ್ರಂಟ್ ಗ್ರಿಲ್, ಹೊಸ ವಿನ್ಯಾಸದ ಫ್ರಂಟ್ ಹಾಗೂ ರೇರ್ ಬಂಪರ್, ಸ್ಮಾರ್ಟ್ ಲುಕಿಂಗ್ ಎಲ್ಇಡಿ ಟೇಲ್ ಲೈಟ್ ಹಾಗೂ ಹೊಸ ಡಿಫ್ಯೂಸರ್‍ಗಳಿವೆ.

ಹೊಸ ಸ್ಟೈಲಿಂಗ್‌ನ ಹೊರತಾಗಿ, ಪೊಲೊ ಹಾಗೂ ವೆಂಟೊ ನವೀಕೃತ ಕಾರುಗಳು ಕಪ್ಪು ಬಣ್ಣದ ರೂಫ್, ಒಆರ್‌ವಿಎಂ ಹಾಗೂ ರೂಫ್ ಮೌಂಟೆಡ್ ರೇರ್ ಸ್ಪಾಯಿಲರ್‍ಗಳನ್ನು ಹೊಂದಿವೆ. ಕಾರಿನ ಒಳಭಾಗದಲ್ಲಿ ಜರ್ಮನಿ ಮೂಲದ ಕಾರು ತಯಾರಕ ಕಂಪನಿಯು ಹೈಲೈನ್ ಹಾಗೂ ಜಿಟಿ ಲೈನ್ ಮಾದರಿಗಳಲ್ಲಿ ಫೋಕ್ಸ್‌ವ್ಯಾಗನ್ ಕನೆಕ್ಟ್ ಟೆಕ್ನಾಲಜಿಯನ್ನು ಹೊಂದಲಿದೆ.
| ಮಾದರಿ | ಪೆಟ್ರೋಲ್ | ಡೀಸೆಲ್ |
| ಪೊಲೊ | ರೂ.5.82 ಲಕ್ಷ - ರೂ.7.76 ಲಕ್ಷ | ರೂ.7.34 ಲಕ್ಷ - ರೂ. 9.31 ಲಕ್ಷ |
| ಪೊಲೊ ಜಿಟಿ/ಜಿಟಿ ಲೈನ್ | ರೂ.9.76 ಲಕ್ಷ | ರೂ.9.88 ಲಕ್ಷ |
| ವೆಂಟೊ | ರೂ.8.76 ಲಕ್ಷ - 13.17 ಲಕ್ಷ | ರೂ.9.56 ಲಕ್ಷ - ರೂ. 14.49 ಲಕ್ಷ |
| ವೆಂಟೊ ಜಿಟಿ ಲೈನ್ | ರೂ.13.17 ಲಕ್ಷ | ರೂ.14.49 ಲಕ್ಷ |

ಇದರ ಜೊತೆಗೆ ಫೋಕ್ಸ್‌ವ್ಯಾಗನ್ ವಾಲ್ಯೂಮ್ ಸೆಗ್‍ಮೆಂಟಿನಲ್ಲಿರುವ ಎಲ್ಲಾ ಡೀಸೆಲ್ ಮಾದರಿಗಳ ಮೇಲೆ 5 ವರ್ಷಗಳ ವಾರಂಟಿಯನ್ನು ಪ್ರಕಟಿಸಿದೆ. ಇದರಿಂದಾಗಿ ಗ್ರಾಹಕರು ಯಾವುದೇ ಚಿಂತೆಯಿಲ್ಲದೇ, ಕಡಿಮೆ ಖರ್ಚಿನಲ್ಲಿ, ಕಾರುಗಳನ್ನು ಖರೀದಿಸಬಹುದು. ಇದರಿಂದ ಫೋಕ್ಸ್‌ವ್ಯಾಗನ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಪುನಃ ಜನಪ್ರಿಯವಾಗಲು ಸಾಧ್ಯವಾಗಲಿದೆ.

ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಸ್ಟೀಫನ್ ನ್ಯಾಪ್‍ರವರು ಮಾತನಾಡಿ, ನಮ್ಮ ಕಂಪನಿಯ ಹೆಚ್ಚು ಮಾರಾಟವಾದ ಕಾರುಗಳಾದ ಪೊಲೊ ಹಾಗೂ ವೆಂಟೊಗಳನ್ನು ಹೊಸ ಸ್ಪೋರ್ಟಿಯರ್ ಹಾಗೂ ಡೈನಾಮಿಕ್ ಅವತಾರದಲ್ಲಿ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಸೆಗ್‍ಮೆಂಟಿನಲ್ಲಿ ಪುನಃ ಪೈಪೋಟಿ ನೀಡಲಿದ್ದೇವೆ ಎಂದು ಹೇಳಿದರು. ಈ ಇವುಗಳ ಹೊರತಾಗಿ, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ನವೀಕೃತ ಕಾರುಗಳು ಹೆಚ್ಚಿನ ಪ್ರಮಾಣದಲ್ಲಿ ಬದಲಾಗದೆ ಹಾಗೆಯೇ ಉಳಿದಿವೆ.
MOST READ: ಪೆಟ್ರೋಲ್ ಬಂಕ್‍ನಿಂದ ಹೊರಡುವ ಮುನ್ನ ಎಚ್ಚರ..!

ಎರಡೂ ಕಾರುಗಳು ಮಾರುಕಟ್ಟೆಯಲ್ಲಿರುವ, ಟ್ರೆಂಡ್‌ಲೈನ್, ಕಂಫರ್ಟ್‌ಲೈನ್ ಹಾಗೂ ಹೈಲೈನ್ ಪ್ಲಸ್ ಮಾದರಿಗಳನ್ನು ಹೊಂದಿರಲಿವೆ. ಮೊದಲಿನಂತೆಯೇ ಎರಡೂ ಕಾರುಗಳಲ್ಲಿಯೂ ಅದೇ ಎಂಜಿನ್ ಅಳವಡಿಸಲಾಗುವುದು. ಹೊಸ ಪೋಲೊದಲ್ಲಿ 1.0 ಲೀಟರಿನ ಎಂಪಿಐ ಪೆಟ್ರೋಲ್, 1.2 ಲೀಟರಿನ ಟಿಎಸ್ಐ ಪೆಟ್ರೋಲ್ ಹಾಗೂ 1.5 ಲೀಟರಿನ ಟಿಡಿಐ ಡೀಸೆಲ್ ಎಂಜಿನ್ ಇರಲಿವೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಫೋಕ್ಸ್‌ವ್ಯಾಗನ್ ವೆಂಟೊ ಕಾರ್ ಅನ್ನು 1.2 ಲೀಟರಿನ ಟಿಎಸ್ಐ ಪೆಟ್ರೋಲ್, 1.5 ಲೀಟರಿನ ಟಿಡಿಐ ಡೀಸೆಲ್ ಹಾಗೂ 1.6 ಲೀಟರಿನ ಎಂಪಿಐ ಪೆಟ್ರೋಲ್ ಎಂಜಿನ್‍ನಲ್ಲಿ ಮಾರಾಟ ಮಾಡಲಾಗುವುದು. ಪೊಲೊ ಹಾಗೂ ವೆಂಟೊ ನವೀಕೃತ ಕಾರುಗಳಲ್ಲಿ ಎಂಜಿನ್ ಹಾಗೂ ಮಾದರಿಗಳ ಆಧಾರದ ಮೇಲೆ 5 ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 7 ಸ್ಪೀಡಿನ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅಳವಡಿಸಲಾಗುವುದು.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಫೋಕ್ಸ್‌ವ್ಯಾಗನ್ ಕಂಪನಿಯ ಪೊಲೊ ಹಾಗೂ ವೆಂಟೊ ನವೀಕೃತ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಎರಡೂ ಮಾದರಿಗಳು ಹಲವಾರು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿವೆ.

ಹಿಂದಿನ ಮಾದರಿಗಳಿಗಿಂತ ಹೆಚ್ಚು ಆಕರ್ಷಕ ಮತ್ತು ಸ್ಪೋರ್ಟಿಯಾಗಿ ಕಾಣುತ್ತವೆ. ನವೀಕೃತ ಫೋಕ್ಸ್‌ವ್ಯಾಗನ್ ಪೊಲೊ ಹಾಗೂ ವೆಂಟೊ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಕ್ರಮವಾಗಿ ಮಾರುತಿ ಸುಜುಕಿ ಬಲೆನೊ, ಹೋಂಡಾ ಜಾಜ್, ಸ್ಕೋಡಾ ರಾಪಿಡ್, ಮಾರುತಿ ಸುಜುಕಿ ಸಿಯಾಜ್ ಹಾಗೂ ಹ್ಯುಂಡೈ ವೆರ್ನಾ ಕಾರುಗಳಿಗೆ ಪೈಪೋಟಿ ನೀಡುತ್ತವೆ.


Click it and Unblock the Notifications








